ಯದು ಕುಲಾಂಬುನಿಧಿ ಪೀಯೂಷಕ್ಷಕರ
ಪಂಚಸಾಯಕಾನಂತ ಕಮನೀಯ ರೂಪಾ
ಕಮಲಾಯತಾಕ್ಷನೆ ಬ್ರಹ್ಮ, ವಾಯು, ಸುರಮುನಿ
ಮುಖ್ಯಧ್ಯೇಯ ವಿಷ್ಣೋ ಪ
ಗೋತ್ರಾರಿ ಪುತ್ರನಿಜಮಿತ್ರ ಸುಪವಿತ್ರ ಚಾ
ಕಳತ್ರ ಶುಭಗಾತ್ರಗತಿ
ಸತ್ರತ್ರಿನೇತ್ರನುತ ಸಕಲಜಗ
ಸೂತ್ರ ನೋಟಕ ತೋತ್ರವೇತ್ರ ಪಾಣೆ 1
ಭವ ಭವ ಭಂಗ ವರಗೋಪಾಂಗನಾ ಅಂಗ
ಸಂಗಲೀಲಾರತ ಭುಜಂಗ ಪರಿಯಂಕ ಸುರ
ತುಂಗ ಗಂಗಾಜನಕ ಸರ್ವಾಂತರಂಗ ಹರಿ
ಮಂಗಳಾತ್ಮಕ ತಿರುವೆಂಗಳೇಶಾ 2
ನಂದಕಂದ ಶ್ರೀ ಮುಕುಂದ ದುರಿತಾಂಧ ಅರ
ವಿಂದಭಾಂಧವ ದಿತಿ- ಜವೃಂದ ವ್ಯಾಳಖಗೇಂದ್ರ
ತಂದೆ ಮಹಿಪತಿ ನಂದನ ಪ್ರಿಯ ಗೋವಿಂದ ಆ
ನಂದ ಕಂದನೆ ಸಿಂಧುಶಯನ ದೇವಾ3