ಒಟ್ಟು 26 ಕಡೆಗಳಲ್ಲಿ , 16 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು
ಸರಸಿಜನಾಭ ಪ. ಉಡುಪಿಯ ಕೃಷ್ಣನೇ ಅ.ಪ. ಏನು ಕಾರಣವನ್ನು ತೋರಿದ್ಪೊ ಶ್ರೀನಿವಾಸನೆ ನಿನ್ನ ಮಹಿಮೆಯ ಪೊಗಳಲು ನಾ ಶಕ್ತಳಲ್ಲಾ ಭಕ್ತವತ್ಸಲಾ 1 ನಿನ್ನ ನೋಡಿ ಧನ್ಯಳಾದೆನೊ ಸನ್ನುತಾಂಗನೇ ಎನ್ನ ಮೇಲೆ ಕರುಣವ ತೋರಿ ನಿನ್ನ ದರುಶನವಿತ್ಯೋ ದೇವಾ 2 ಮಾಡಿಸೊ ಧ್ವಂದ್ವಕಾರ್ಯ ನಿನ್ನದೆಂಬ ಸೊಲ್ಲ ಪಾಲಿಸು 3 ನಿನ್ನ ನಾಮದ ಸ್ಮರಣೆಯನ್ನು ಮರಿಯದೆ ನುಡಿಸೆನೆಗೆ ಕರುಣಾನಿಧಿಯೇ4 ನಿನ್ನ ಪಾದದ ಧ್ಯಾನವು ನಿರಂತರವಿರಲೆನೆಗೆ ನಿನ್ನ ಕಡೆಯಾಕಣ್ಣಲಿ ನೋಡೊ ರಮಾವಲ್ಲಭವಿಠಲನೆ ಕರುಣದಿ5
--------------
ಸರಸಾಬಾಯಿ
ಹರಿ ಕೈಪಿಡಿಯೋ ಕೃಪಾವಿರಿಸೋ ದಾಸನಲಿ ಪ ಸ್ಮರಿಸುವೆನನುದಿನ ಪರತರ ಪರಶಕ್ತಿ ಸುರವರನೀನಲ್ಲವಿರುವರೆ ಪೊರೆವರು 1 ಶಿರಿಧರೆ ಸುರನರ ನೆರೆ ಓಲೈಸುತ ಪರಮಪುರುಷ ನಿನ್ನ ಸ್ಮರಿಪರು ನಿರುತದಿ 2 ಹನುಮ ಭೀಮ ಮಧ್ವ ಮನಮುಟ್ಟಿ ಭಜಿಸುತ ಘನನೀಲ ದೇವನೆ ನೆನೆವರ ಮನದಲಿ 3 ಹರಿ ನಿನ್ನ ಧ್ಯಾನವು ಹರಿವುದು ದುರಿತವ ನÀರಸಿಂಹ ದೊರೆ ನಿನ್ನ ಮರೆವೆನೆ 4
--------------
ನರಸಿಂಹವಿಠಲರು
ಹರಿಭಜನೆ ಮಾಡುವಗೆ ಅನಂತಫಲವೂ ಹರಿ ಭಜನೆ ಇಲ್ಲದವಗೆ ಅತಿಘೋರ ತಮವೂ ಪ ಭವರೋಗ ಸಂಚಿತವು ಪರಿ ಪರಿಯ ನರಕಾದಿ ಬಂಧಕವು ಬಿಡದು 1 ಆ ರಾಮನಂಘ್ರಿಗಳ ಅರ್ತಿಯಲಿ ಅರ್ಚಿಸುವರಿ ಗಾರಾಮವಾದಂಥ ಸುಖಸೌಖ್ಯವು ಹೇರಾಮ ಎನದವಗೆ ಅತಿ ದು:ಖದಾರಿದ್ರ್ಯ ತೋರುವುದು ಅನುಗಾಲ ತಗಲಿ ಬಿಡದವೆಯಿನ್ನು 2 ವಿತರಣಾದಿ ಶ್ರೀ ಹೆನ್ನೆವಿಠ್ಠಲನ ಹೃದಯದಲಿ ಸತತಧ್ಯಾನವು ಮಾಡುವ ಸಾಧು ಜನರಾ ಪತಿತ ಪಾವನನಾದ ಪರಮಾತ್ಮ ಪಾಲಿಸೆ ಗತಿಯು ತೋರುವ ಇನ್ನು ಕರುಣದಲಿ ಹರಿಯು 3
--------------
ಹೆನ್ನೆರಂಗದಾಸರು
ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ. ಹಿರಿದು ಜನ್ಮಗಳಲಿ ಹರಿಯನಾರಾಧಿಪ ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ. ಸ್ನಾನಸಂಧ್ಯಾನವು ಮೊದಲಾದ ಕರ್ಮ ನ್ಯೂನದ ಪಾಪಂಗಳು ದೀನತ್ವದಿಂದ ತುಚ್ಛರಕೈಯ ಹಿಡಿದ ದು ರ್ದಾನದ ಪಾಪಂಗಳು ಭಾನುಬಿಂಬವ ಕಂಡ ಹಿಮದಂತೆ ಚಿದಾನಂದವಾದ ವ್ರತಕೆ ಸರಿ ಬಾರದು 1 ಪರಸತಿಯರ ನೋಡಿ ಮನವಿಟ್ಟ ಪಾಪವು ಪರದೂಷಣೆಯ ಪಾಪವು ಪರಮಾತ್ಮನ ಹೊಗಳುವ ನಾಲಗೆಯಲ್ಲಿ ನರರ ಹೊಗಳುವ ಪಾಪವು ಪರ ವಸ್ತುಗಳನಪ- ಹರಿಸುವ ಪಾಪಂಗಳು ಕರಿ ಓಡುವಂತೆ ದುರಿತ ಕೋಟಿಗಳನು ಪರಿಹರಿಸುವ ಶ್ರೀ 2 ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು ಓಡುವುದಘಸಂಘ ಉತ್ತಮವಾಗಿಹ3 ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ ಹರಿಯ ಸನ್ನಿಧಿಗೆ ದಾರಿಯನೀವ 4 ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು ಜಾಗರ ಮಾಡಿ ವ್ರತವಾಚರಿಸುವ 5 ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ 6 ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವÀ ಮುದದಿ ಮಾಡಿದರೇನು ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು ಶ್ರೀಹಯವದನನ್ನ ದಿನಕೆ ಸರಿಬಾರದು 7
--------------
ವಾದಿರಾಜ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು
ಮಾನಾಭಿಮಾನವಿಲ್ಲವೇ | ಮಹಲಕ್ಷ್ಮೀ ನಿನಗೆ ಪಹೀನ ಜನಂಗಳ ಬೇಡುತ ನಿರುತವುಹೀನ ವೃತ್ತಿಯಿಂದೋಡುತ ತಿರುಗುವೆ 1ದೀನಾವನ ಬಿರುದೇನಾಯಿತೋ ಶ್ರೀದಾನಿ ನಿನ ನಂಬಿದ ದಾಸನ ವಿಷಯದಿ 2ಜಾನಕಿ ಶ್ರೀ ರಘುನಾಯಕಿ ತವಪದಧ್ಯಾನವು ನನಗೆ ನಿಧಾನವು ಲಕುಮೀ 3ಹೇಮಕುಧರ ಧಾಮೇಶ್ವರಿ ತುಲಸಿರಾಮದಾಸನ ಸಂರಕ್ಷಣೆ ಮಾಡುವ 4
--------------
ತುಳಸೀರಾಮದಾಸರು
ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಪ.ಇಂದ್ರಿಯಂಗಳೆಲ್ಲ ಕೂಡಿಬಂದು ತನುವ ಮುಸುಕಲುಸಿಂಧು ಸುತೆಯ ಪತಿಯಧ್ಯಾನಎಂದಿಗಲ್ಲಿ ದೊರೆಯದೊ 1ಭರದಿ ಯಮನ ಭಟರಾಗಲೆಹೊರಡು ಎಂದು ಮೆಟ್ಟಿ ತುಳಿಯೆಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ ದೊರೆಯದೊ 2ದೋಷಕ್ಲೇಶ - ದುಃಖವೆಂಬಶ್ಲೇಷ್ಮದಲ್ಲಿ ಸಿಕ್ಕಿ ಇರಲುವಾಸುದೇವ ಕೃಷ್ಣನೆಂಬುದಾಸಮಯಕ್ಕೆ ದೊರೆಯದೊ 3ಸಿಂಗಾರವಾದ ದೇಹವೆಲ್ಲಅಂಗವಳಿದು ಮುರಿದು ಬೀಳೆ ||ಅಂಗಳಿಗಾತ್ಮ ಸೇರಿದಾಗರಂಗನ ಧ್ಯಾನವು ದೊರೆಯದೊ 4ಕೆಟ್ಟ ಕೆಟ್ಟರಲ್ಲೊ ಬರಿದೆಕಟ್ಟ ಕಡೆಯಲ್ಲಿಕಾಯಬಿಟ್ಟು ಹೋಗುವಾಗಪುರಂದರವಿಠಲ ಧ್ಯಾನ ದೊರೆಯದೊ 5
--------------
ಪುರಂದರದಾಸರು
ಶ್ರವಣಮನನ ನಿಧಿ ಧ್ಯಾನವು ಯೋಗಕ್ಕೆಸಮನಿಸೆ ಸಾಧಕಂಗೇತಕೆ ಈ ಮೂರುಪನಿತ್ಯಗುರುಮುಖದಿಂದ ನಿಜವೇದಾಂತ ಸಾರವ-ನಿತ್ಯಕಾಲದಲ್ಲಿ ಕೇಳುತಲಿ ಇದ್ದುನಿತ್ಯಜೀವರಪರಮನಿಲುಗಡೆಗಳ ತಿಳಿದುಸತ್ಯತಾನೆಂದು ಕಂಡು ನಿಶ್ಚೈಸಿದುದೆ ಶ್ರವಣ1ವಾಸನೆಹರವಾಗಿ ಬಲಿದು ಆತ್ಮಾನಂದಕೆಸೂಸದೆ ಮನವನು ನಿಲ್ಲಿಸುತದೇಶಿಕೋತ್ತಮನಿಂದ ತನಗಾವ ಉಪದೇಶಬೇಸರಿಸದೆ ಮತ್ತೆ ಮತ್ತೆ ನೆನೆವುದೆ ಮನನ2ದಧಿಮಥನವ ಮಾಡೆನವನೀತತೇಲುವೊಲುಉದಧಿಮಥಿಸೆ ಅಮೃತ ತಾ ಬಂದಂತೆಮಥಿಸೆ ಕಾಷ್ಟಕ್ಕೆಕಾಷ್ಠಅಗ್ನಿ ತಾ ಪುಟಿದಂತೆವಿಧಿಸೆ ಈ ತೆರದಲಿ ತಾನದುವೆ ನಿಧಿಧ್ಯಾಸ3ಈ ಮೂರು ಸಾಧನಗಳಿರಬೇಕು ಯೋಗಕ್ಕೆಈ ಮೂರು ಸಾಧಿಸಲು ರಾಜಯೋಗಿ ತಾನುಇವರೊಳು ಒಂದು ಕಡಿಮೆಯಾದರು ಯೋಗಿಯಾಗನುಇಂತಿಲ್ಲದಿರೆ ನಿಜಮುಕ್ತಿ ದೊರಕದು4ಶ್ರವಣವೆಂಬುದು ಅದು ಸರ್ವಸಾಧನವಯ್ಯಶ್ರವಣ ಮನನವಾಗೆ ಶ್ರಮ ಪರಿಹಾರವುಶ್ರವಣ ಮನನ ನಿಧಿಧ್ಯಾಸ ಮೂರಾಗೆಶಿವನೆ ಆತನು ಚಿದಾನಂದ ದೇವನವನು5
--------------
ಚಿದಾನಂದ ಅವಧೂತರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು