ಒಟ್ಟು 23 ಕಡೆಗಳಲ್ಲಿ , 10 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರದೇವರು ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1 ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2 ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3 ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
--------------
ಗುರುತಂದೆವರದಗೋಪಾಲವಿಠಲರು
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಶ್ರೀಹರಿ ಸ್ತೋತ್ರ ಪಾಲಿಸೆನ್ನನು ಶ್ರೀ ಹರಿಯೆ ಸಿರಿದೇವಿ ಧೊರೆಯೇ | ಸರಸಿಜಾಸನ ಪಿತನೇ|| ಪ ಪಾರ್ಥಸೂತ ಪನ್ನಗಗಿರಿ ನಿಲಯ ಪವಮಾನ ವಂದ್ಯ | ಶ್ರೀ ಭೂರಮಣನೇ ಸೃಷ್ಟಿಗೊಡೆಯನೆ | ಕ್ಲೇಶ ಕಳೆಯುವ ಕೈಟಭಾರಿ ಕರುಣ ಶರಧಿಯೆ ಅ.ಪ ಬ್ರಹ್ಮಾದಿ ಮನುಜಾಂತ ಶ್ರವಣ ಮನನ ಧ್ಯಾನ ದಿಂದಲೇ ಕಾಂಬೋರು ನಿನ್ನ ರೂಪ ಯೋಗ್ಯತಾನುಸಾರ | ನಿಯಮ ಭಂದ ಮೋಕ್ಷ ಕರ್ತನೆ | ಶಾಂತಿ ಕೈತಿ ಜಯಾ ರಮಣನೀನೇ ಮೋಕ್ಷದಾಯಕ ಮಾಯಾಪತಿಯೇ ಸರ್ವ ಆಶ್ರಯ ಲಕ್ಷ್ಮೀ ರಮಣನೇ ಸಮರು ಅಧಿಕರು ಇಲ್ಲದಂಥಾ | ಸಾರ್ವಭೌಮನೇ ಆದಿಮೂಲನೆ ಅಪ್ರಮೇಯನೆ ಅನಿರುದ್ಧ ಮಾರುತಿ | ಎನ್ನ ಅಪವಳಿಗಳನೆ ತಂದು ಚÉನ್ನವಾಗಿ ನಿನ್ನ ತೋರಿಸಿದ 1 ಸದೋಷಿ ನಾನಹುದೋ ಸಂಕರ್ಷಣ ಮದ್ದೋಷ ಪರಿಹರಿಸೋ ನಿಗಮ ವೇದ್ಯನೆ ನಿನ್ನಧೀನವು ಎಲ್ಲಾ | ವಿಶ್ವ ತೇಜಸ ಪ್ರಾಜ್ಞರೂಪನೇ ಮೂರು ಸ್ಥಿತಿಯಲ್ಲಿ ಮುಖ್ಯ ಪ್ರವರ್ತಕ | ಅಂಡ ಪಿಂಡ ಬ್ರಹ್ಮಾಂಡದಲ್ಲಿ ಒಳ ಹೊರಗೆ ವ್ಯಾಪ್ತನೆ ವಿಶ್ವತೋಮುಖ ವಿಧಿಭವ ನುತ ವಿಚಿತ್ರ ಮಹಿಮ ವಿಭೂತಿರೂಪನೇ ವಾಸುದೇವನೇ ವಾರಿಜಾಸನ ವಂದ್ಯ ವರಾಹನೆ ಇರುವ ತಾ¥ಟಿÀ ಹರಿದು 2 ನಿರ್ಗುಣ ಗುಣ ಭರಿತಾ ನಿನ್ನ ಪರೋಕ್ಷ ಬೇಡುವೆ ಬಹುವಿಧದಿ ಭವದ ಕ್ಲೇಶಗಳ ಬಿಡಿಸೋ ಭಕ್ತವತ್ಸಲ | ಪತಿ ಸನ್ನುತ | ಪರಮ ಹಂಸೋಪಸ್ಯ ತುರ್ಯನೆ ಆತ್ಮ ಅಂತರಾತ್ಮ | ಪರಮ ಆತ್ಮ ಜ್ಞಾನಾತ್ಮ ನೀನೆ | ಕೂರ್ಮ ಕ್ರೋಢ ನರಹರಿ ಮಾಣವಕ | ಮೋದ ಕೊಡುವ ಮುದ್ದು ಬುದ್ಧನೆ | ಕಠಿಣ ಖಳರ ಕಡಿವ ಕಲ್ಕಿಯೆ ಅನಂತ ಗುಣ ಕ್ರಿಯಾ ರೂಪದಲಿ ನೀ ಸ್ವಗತ ಭೇದ ವಿವರ್ಜಿತಾತ್ಮನೇ | ನಿರಂಜನ ನಾರಾಯಣನೇ | ಪತಿ ಪ್ರಭಂಜನ ಪ್ರಿಯ ರಾಗರಹಿತ ರಾಘವೇಂದ್ರ ಸಂಸೇವ್ಯ ನರಹರಿಯೆ | ಅಜನ ತಾತ ಪ್ರಸನ್ನ ಶ್ರೀನಿವಾಸ ಲಕ್ಷ್ಮೀ ಈಶ ಹರಿಯೆ | ಪ್ರಣತಾರ್ತಿಹರ ಪ್ರಮೋದಿ ನೀನೇ 3
--------------
ಪ್ರಸನ್ನ ಶ್ರೀನಿವಾಸದಾಸರು
ಹರಿಯೇ ಧೊರೆಯೇ ಪ ಕಂದನ ನುಡಿಕೇಳಿ ಕಂಬದಿಂದ ಬಂದೆ ಅಂದು ಅಹಲ್ಯೆಯ | ಬಂಧನ ಬಿಡಿಸಿದೆ ಕರಿಮೊರೆಯಿಡಲಾಕ್ಷಣ ಬಂದು ನೀ ನಕ್ರನ್ನ ಸೀಳಿದ ಚಕ್ರಧರನೆ ನೀನು 1 ತರಳ ಧೃವನ್ನಾ ತೊಡೆಯಿಂದ ನೂಕಲು ಕಡುಭಯದಿಂದ ವನದಲ್ಲಿ ಚರಿಸುತ್ತ ಘನತಪಗೈಯಲು ಧೃಡ ಭಕುತಿಗೆ ಮೆಚ್ಚಿ ಒಡನೆ ಓಡಿ ಬಂದು ಘನತರ ಸಂಪದವತ್ತೆ 2 ಪರಮ ಪುರುಷೋತ್ತಮ ನೀನಲ್ಲವೆ ಮೊರೆಹೊಕ್ಕೆನು ನಿನ್ನ ಕರುಣಿಗಳರಸನ್ನ ತ್ವರಿತದಿಂದಲಿ ಕಾಯೊ ವೆಂಕಟವಿಠಲಾ 3
--------------
ರಾಧಾಬಾಯಿ