ಒಟ್ಟು 24 ಕಡೆಗಳಲ್ಲಿ , 14 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನರಜನ್ಮವನು ಕೊಟ್ಟು ಸಲಹಿದೆ ಯೆನ್ನನು ಕೊರತೆಯೇನಿಲ್ಲವೋ ಗೋವಿಂದಾ ಪ ಉರುತರ ಜನ್ಮವ ಸುರುಚಿರಾಂಗಗಳನ್ನು ಅರಿವು ಇಂದ್ರಿಯಗಳ ಸ್ಮರಣೆಯಿಂ ಕೂಡಿದ ಅ.ಪ ನಿನ್ನಧ್ಯಾನವ ಗೈವವೊಲೆನ್ನ ಈ ರಸನೆಯು ನಿನ್ನ ಮೂರ್ತಿಯ ನೋಡಲಿ ಈ ನೇತ್ರಾ ನಿನ್ನ ಪೂಜಿಸೆ ಹಸ್ತ ನಿನ್ನ ಚರಿತೆಗೆ ತರ್ಕಾ ನಿನ್ನ ನಮಿಸಲು ಶಿರವು ನಿನ್ನಾಲಯಕೆ ಕಾಲು 1 ನಿನ್ನ ಪಾದದ ತುಳಸಿಯನ್ನು ಘ್ರಾಣಿಸ ಇನ್ನೇನು ಬೇಡವಯ್ಯ ಸನ್ನುತಾಂಗ ಗೋಪಾಲ 2 ಧನಕನಕಾಂಬರ [ವಸ]ನದ ಧರ್ಮ ಮೋಕ್ಷದೊ ಳಿನಿತಾಸೆಯೆನಗಿಲ್ಲ ಕೇಳಯ್ಯ ಜನುಮ ಜನುಮದೆ ನಿನ್ನ ಘನಪುಣ್ಯ ನಾಮವ ನೆನೆವ ಭಕ್ತಿಯು ಮಾತ್ರ ಮನದೆ ನೆಲೆಗೊಳಿಸಯ್ಯ 3 ದೇವದೇವನೆ ನಿನ್ನ ಸೇವಕರಿಗೆ ಯೆನ್ನ ಸೇವಕನೆನಿಸದೆ ಬಿಡಬೇಡಾ ದಾಸರಸೇವಿಸಲೆನ್ನ ಜೀವ ತುಡಿಯುವುದೊ ವಿಸಲೆ ದಾಸರದಾಸ ಶ್ರೀ ಮಾಂಗಿರಿಯರಸ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
--------------
ವೆಂಕಟವರದಾರ್ಯರು
ನೀರಜಾಕ್ಷನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ತೊಳಲುವೆ ದಾರಿಯ ಕಾಣದೆ ಅ.ಪ. ಜನ್ಮಾಂತರಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧವಿ ಕರ್ಮದ ಬಳ್ಳಿಯು ಬಿಂಮನೆ ಬಿಗಿವಡೆದು ಲಮ್ಮಗೊಡವುಹರಿ 1 ಮೀರಿಬರಲುಘನ ಚೋರರು ಕಾದಿಹರಾರುಮಂದಿ ಮುಳಿದು ಸಾರಿ ಬಾಯಾರಿಸುತಿರ್ಪವು 2 ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ಪೋಲುತ ನಮ್ಮನು ಬಾಧಿಸುತಿರುವರು3 ಕ್ಷುದ್ರವಿಷಯಗಳು ಛಿದ್ರವಹುಡುಕುವ ವಧ್ರುಗದೇಹದೊಳು? ಕದ್ರುಸುತರವೋಲುಪದ್ರವಗೈವವಭದ್ರದ ಭೀತಿಗಳೂ ಜರೆಯೆಂಬುದ್ರಿಕ್ತಾಂಗನೆ4 ನರಿಗಳ ಪರಿಯಲಿ ನರಳುವರೆಲ್ಲರು ನರಕಗಳನುಭವಿಸಿ ವರದ ವಿಠಲನಿಜ ಚರಣವೆ ನಂಬಿದೆ 5
--------------
ಸರಗೂರು ವೆಂಕಟವರದಾರ್ಯರು
ಪುರಂದರದಾಸರು ಜಿಪುಣರೈ ನೀವೆಂದು ಹೇಳಿದುದು ಸುಳ್ಳಲ್ಲ ಪ ಪುರಂದರ ದಾಸಮಲ್ಲ ಅ.ಪ. ಘನತರದ ವೈರಾಗ್ಯ ತಳೆದು ದ್ವಿಜರಿಗೆಲ್ಲಧನಕನಕ ಸಂಪತ್ತು ದಾನ ಮಾಡಿದರೆಲ್ಲವನಜನಾಭನ ಸ್ತುತಿಗೆ ಶಬ್ದ ಸಂಪತ್ತೆಲ್ಲಒಸೆದು ನೀವೇ ಬಳಸಿ ನನಗೇನು ಕೊಡಲಿಲ್ಲ 1 ಖಂಜೂತನದ ಕಥೆಯನು ಹೇಳಲಾಸಲ್ಲಕಂಜನಾಭನ ಮಹಿಮೆ ಬಣ್ಣಿಸುವ ನೆವದಲ್ಲಿರಂಜನೆಯ ಶಬ್ದಗಳ ಸವಿದುಂಡೆಯಲ್ಲಿಎಂಜಲವನುಳಿದೆನಗೆ ಕಿಂಚಿತ್ತು ಬಿಡಲಿಲ್ಲ 2 ಕೃಪೆಮಾಡಿ ಕ್ಷಮಿಸುವುದು ವಿಪುಲ ಭಕ್ತಿಗಳಿಂದಜಪತಪದಿ ಕನ್ನಡದ ನಿಮ್ಮ ಭಾರತಮಲ್ಲ ಕೃಪಣವತ್ಸಲ ಗದುಗು ವೀರನಾರಾಯಣನ ಸಫಿಲ ಜ್ಞಾನವ ಗಳಿಸಿ ನಮಗೇನು ಕೊಡಲಿಲ್ಲ 3
--------------
ವೀರನಾರಾಯಣ
ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು
ಮಾನವ ಸಿರಿಯು ನಾಕಪತಿ ಮೊದಲಾದವರಿಗಸ್ಥಿರವು ಪ ಧನಕನಕ ವಸ್ತುವಾಹನವೊಂದು ಸ್ಥಿರವಲ್ಲ ಕನಸಿನಂದದಿ ಭಾಳ್ವೆ ಅಭ್ರಮಿಂಚು ತನುವಿನಲಿ ಹರಿಯ ಸೆರೆವಿಡಿದು ಕೊಂಬುದೆ ರೊಕ್ಕ ಚಿನುಮಯನ ಪಾಡುವುದೆ ಸಕಲ ಬದುಕು 1 ಇಂದು ನೀನರಿದು ಜ್ಞಾನದಿ ನಡೆವುದೆ ಮೋಕ್ಷ ಸಿಂಧು ಶಯನನ ನಾಮ ವೈಕುಂಠವೋ ಕಂದರ್ಪನುಪಟಳವ ಕಟ್ಟುವುದೆ ಕೈಲಾಸ ಮಂದರ ಧರನ ನೆನೆವುದೆ ಸಕಲವಸ್ತು 2 ಭಕ್ತವತ್ಸಲನ ನೆನವುದೆ ಸಕಲ ಸಂಪತ್ತು ಚಿತ್ತ ಶುದ್ಧಿಯಾಗುವುದೆ ಸಕಲ ಭಾಗ್ಯ ಉತ್ತರಿಸಿದರೆ ಭವದಸಕಲಪದವಿ3
--------------
ಕವಿ ಪರಮದೇವದಾಸರು
ಯಾರಿಗೆ ಯಾರಿಹರೋ ಜಗದಲಿ ನಾರಾಯಣ ನೀನಲ್ಲದೆ ಬಾಂಧವ ಪ ಜನನಿ ಜನಕ ಸತಿಸುತ ಸಹಜರುಗಳು ಮನೆ ಮಠ ಧನಕನಕಾಧಿಗಳೆಲ್ಲವು ಅನಿಮಿತ್ತ ಬಾಂಧವ ನೀನಲ್ಲದೆ ಹೊಣೆ 1 ದೇಹಬಿಟ್ಟು ಪರದೇಹವ ಸೇರಲು ಬಾಹರೇ ಲೋಕದ ಬಂಧುಗಳು ದೇಹ ದೇಹದಲೂ ಕ್ಷಣವಗಲದೆ ಎಂದು ಸಾಹಚರ್ಯ ಜಗಮೋಹನಗಲ್ಲದೆ 2 ಸಂತೆಗೆ ಸೇರುವ ಗಂಟುಕಳ್ಳರುಗಳ ತಂಟೆಯು ಬೇಡೆಂದು ಲೌಕಿಕಕೆ ಅಂಟದಿದ್ದರೆ ದೊಡ್ಡ ಗಂಟನು ಹೊರಿಸುವ ನಂಟನು ಭಕ್ತ ಪ್ರಸನ್ನ ತಾನಲ್ಲದೆ 3
--------------
ವಿದ್ಯಾಪ್ರಸನ್ನತೀರ್ಥರು
ಸರಸ್ವತಿ ನಲಿಯೆ ನೀ ಜಿಹ್ವೆಯಲಿ ಚತುರಾನನ ಪ್ರಿಯ ರಾಣಿ ನಾನಾ ಧನಕನಕಾದಿ ವಿಭವಗಳು ಹಿರಿದುಕ್ಕುತಲಿರಲು ಪ ನೀನೊಲಿಯದಿರಲು ಮಾನವನಿಗೆ ಸ ನ್ಮಾನವೆಂತು ಬರುವುದು ಜಗದೊಳಗೆ ಅ.ಪ ಕರ ಧೃತ ವೀಣಾಪಾಣಿ ಉನ್ನತ ಮಹಿಮ ಪ್ರಸನ್ನ ಹರಿಗೆ ಸತಿ 1
--------------
ವಿದ್ಯಾಪ್ರಸನ್ನತೀರ್ಥರು
ಸೇರಿದರೇನು ಫಲ ಪ ಅಕ್ಕರೆಯಿಲ್ಲದ ರಕ್ಕಸಿ ಯುದರದಿ ಮಕ್ಕಳು ಜನಿಸಿದರೇನು ಫಲ ದುಃಖಿಪಜನರನು ಲೆಕ್ಕಿಸದಾತನ ಒಕ್ಕಲುತನದಿಂದೇನು ಫಲ 1 ಜನಿಸಿದ ಮಕ್ಕಳುಜೀವಿಸದಿದ್ದರೆ ಜನನೀಜನಕರಿಗೇನು ಫಲ ಕನಸಿಲಿ ಕಾಣುವ ಧನಕನಕಂಗಳ ನಂಬಿದ ಜನರಿಗೇನು ಫಲ 2 ಅರಿಯದೆಕೊಂಡವಗೇನು ಫಲ ಹಿರಿಯವನಾಗಿರಲೇನು ಫಲ 3 ಗಂಡನ ದೂರುತ ಮಿಂಡನ ಸೇರುವ ಹೆಂಡತಿಯಿರಲೇನು ಫಲ ಹೆಂಡಿರ ಮಕ್ಕಳ ದಂಡಿಸದಾತನ ಗಂಡಸುತನದಿಂದೇನು ಫಲ 4 ಸಿಂಗರಿಸಿದರೇನು ಫಲ ಪುಣ್ಯದಿಂದೇನು ಫಲ5
--------------
ಸರಗೂರು ವೆಂಕಟವರದಾರ್ಯರು