ಒಟ್ಟು 25 ಕಡೆಗಳಲ್ಲಿ , 16 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಲೋಕಕೆ ಎನ್ನ ಎಳತಂದೆ ಹರಿಯೇ ದೇವಕೀ ಕಂದ ಗೋಪಾಲ ನಾನರಿಯೇ ಪ ನಳಧರ್ಮನೃಪ ಹರಿಶ್ಚಂದ್ರಾದಿಗಳು ಜನಿಸಿ ಖಳರನ್ನು ದಂಡಿಸೇ ಶಿಷ್ಟರನು ಹರಿಯೇ ಸಲಹ ಸುಜನರಿಗೆಲ್ಲ ಮಾನವಂ ಕೊಟ್ಟು ತಾ ವಿಳೆಯ ಸತ್ಯದೊಳಾಳಿದಾ ರಾಜ್ಯವಲ್ಲಾ 1 ಹಿಂದೆ ದುರ್ಜನರನ್ನು ತರಿಯಲೋಸುಗ ನೀನು ಅಂದದಿಂದೊಂಬತ್ತು ಅವತಾರವೆತ್ತಿ ಬಂದು ಸುಜನರ ಪೊರೆದು ಧರ್ಮವನು ನೆಲೆಗೊಳಿಸಿ ಚಂದದಿಂ ರಕ್ಷಿಸಿದ ಲೋಕವಿದು ಅಲ್ಲಾ 2 ಮನ್ನಿಸದೆ ಧರ್ಮವನು ನಿತ್ಯಕರ್ಮವ ಬಿಟ್ಟು ಹೀನ ಪಥಗಳ ಪಿಡಿದು ಬಂಜೆಯನು ಆಸೀ ಚನ್ನಕೇಶವ ನಿಮ್ಮ ನಾಮ ಸಂಕೀರ್ತನೆಯ ದೈನ್ಯದಿಂ ಗೈಯದ ರಾಜ್ಯವಿದು ಹರಿಯೇ 3
--------------
ಕರ್ಕಿ ಕೇಶವದಾಸ
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ಪ ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಅ. ಪ. ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ ಸರ್ಪಭೂಷಣ ಮೃತ್ಯು ನಿವಾರಣ ವಾಕು 1 ಸದ್ಯೋಜಾತ ಭೂತನಾಥ ಭಕುತರದಾತ ಖದ್ಯೋತ ಲಾವಣ್ಯ ಸುರಜ್ಯೇಷ್ಠನ ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ2 ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ ಜನಿಸಿ ಕಾಡುವ ರೋಗ ಕಳೆಯೊ ಬೇಗ ಅನುಪಮ ವಿಜಯವಿಠ್ಠಲನ ನಾಮಾಮೃತವ ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ 3
--------------
ವಿಜಯದಾಸ
ವ್ಯಾಸಕೂಟ ದಾಸಕೂಟ ಎನ್ನದಿರೊ ಹೀನಮಾನವ ಪ ಈಶ ಹೊರತು ಮಿಕ್ಕ ಜನರು ದಾಸರೇ ಸರಿ ಅ.ಪ. ವೇದವ್ಯಾಸದೇವ ದೇವ ಸರ್ವರಿಗೆ ಈಶ ಕಾಣಿರೋ ಮೋದಮುನಿಯು ಆತನಿಗೆ ಮುಖ್ಯದಾಸ ಶಾಸ್ತ್ರಸಿದ್ದವೋ ಎಂದಮೇಲೆ ನೀನು ಯಾರು ಸಾಕ್ಷಿಕೇಳಿ ಬೇಗ ನುಡಿಯಲೋ ಛಂದ ಭಜಿಸಿ ಜ್ಞಾನ ಘಳಿಸಿ ದಾಸನೆಂದು ಹರಿಯ ಭಜಿಸೆಲೋ 1 ಧರ್ಮಶಾಸ್ತ್ರ ಮರ್ಮಬಿಟ್ಟು ಓದಿ ಓದಿ ಏನು ಫಲವೊ ನಿತ್ಯ ತೃಪ್ತ ನಿರ್ಜರೇಶ ನೊಲಿಮೆ ಮುಖ್ಯವೋ ಕಮಲೆಯರಸ ಕಲ್ಪವೃಕ್ಷ ಹೃಸ್ಥದೊರೆಯ ಕಾಣಬೇಕೆಲೋ ಕರ್ಮಬಿಡದೆ ಆಶೆತೊರೆದು ಕರ್ಮಪತಿಯ ಶರಣು ಪೊಗೆಲೋ 2 ವೇದಶಾಸ್ತ್ರ ಸ್ಮøತಿಗಳಲ್ಲಿ ಪೇಳಿರುವ ತತ್ವಗಳನ್ನು ನಡತೆಯಿಂದ ನಡಿಸಿ ನಡಿಸುತ ಇಂದಿರೇಶನ ದಾಸಜನರು ಪದಗಳಿಂದ ಪಾಡಿ ಪಾಡುವ ಖೇದವಳಿದು ಸಾಧು ಜನಕೆ ನಂದ ಸೂರೆಗೈದು ನಲಿವರೋ 3 ವೇಷದಿಂದ ಭಾಷೆಯಿಂದ ಶ್ರೀಶನೊಲಿಮೆ ಕಾಣಲಾಗದೋ ದಾಸನೆಂದು ದೈನ್ಯದಿಂದ ದ್ವೇಷ ತ್ಯಜಿಸಿ ಕೂಗಬೇಕೆಲೋ ಕುಣಿದು ಕುಣಿಯಲೊ 4 ಶಕ್ತಿಜರಿದ್ವಿರಕ್ತಿಬೇಡಿ ಭಕ್ತಿಯಿಂದ ಭಜಿಸಿ ಭಜಿಸೆಲೊ ಶಕ್ತ ವಿಜಯಸೂತ ಶ್ರೀ ವಾಯುಹೃಸ್ಥ “ಕೃಷ್ಣವಿಠಲ” ಯುಕ್ತಿಯಿಂದ ಬಂಧಬಿಡಸಿ ನಿತ್ಯಸುಖವ ನಿತ್ತು ಕಾಯ್ವನೊ ಭಕ್ತಿಯಿಂದ ಶಕ್ಯನಾದ ಜ್ಞಾನ ಘಳಿಸಿ ಕೊಲ್ಲು ಸಂಶಯ 5
--------------
ಕೃಷ್ಣವಿಠಲದಾಸರು
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ
ಸಖಿಯೆ ಲಾಲಿಸು ಎನ್ನ ಸಖನ ವರ್ಣಿಪೆ ಮುನ್ನ ಸುಖದಾತ ಸುಂದರನ ಪ್ರಾಣಸಖನ ಕಡುದೈನ್ಯದಿಂದೆರೆಯಲೊಡನೆ ಬಂದು ವೇದಗಳ್ಳನು ಪೋದ ಹಾದಿಯನೆ ತಾ ಪಿಡಿದು ವಾರ್ಧಿಯೊಳ್ಮುಳುಗಿ ಸಮ್ಮೋದದಿಂದ ಕ್ರೋಧಿರಕ್ಕಸನುರವ ಛೇದಿಸುತೆ ವೇದವ ನ್ನಾದರಿಸಿ ತಂದೀಯುತ ಜಗಕೆನಲವಿಂ ನಿರ್ಮಾಣ ಕಾರ್ಯದೋಳ್ ನಿಯಮಿಸಿದನಾ ಸ್ವರ್ಣಗರ್ಭನನಂತು ಮೀನನಾಗಿ ಅರ್ಣವದಿ ನೆಲೆಯಾಗಿ ನಿಂತ ಸುಗುಣ
--------------
ನಂಜನಗೂಡು ತಿರುಮಲಾಂಬಾ
ಸತತ ನಿನ್ನ ಭಜನೆಯಲ್ಲಿ ಹಿತವ ಪೊಂದಿಸೊ ದೇವ ಪ ಅತುಲ ಮಹಿಮೆಗಳಲ್ಲಿ ಎನ್ನ ಮತಿಯ ಸೇರಿಸೊ ಶ್ರೀಪತೆ ಅ.ಪ ಕಾಲ ಕಳೆಯಿತೊ ದೇವ ನಾಳೆ ನಾಳೆಯೆಂದು ನಿನ್ನ ಪೊಗಳಲಿಲ್ಲವೊ ದೇವ 1 ಯೋಚಿಸದೆಲೆ ನಿನ್ನ ದೈನ್ಯದಿ ನೀಚ ಜನರಲಿ ನಾನು ಕರವ ಯಾಚಿಸುತ್ತ ಶೋಚನೀಯನಾದೆನೊ 2 ಸ್ಥೈರ್ಯದಿಂದ ಮನವು ನಿನ್ನೊಳು ಸೇರದಿರುವುದೋ ದೇವ ಮಾರ ಜನಕನೆ 3 ಕಾಮಕ್ರೋಧದಿಂದ ವಿಷಯ ಪ್ರೇಮಗಳಲಿ ನಾ ನಿನ್ನ ನಾಮ ಮರೆತು ಬಳಲಿದೆನೊ ಕಾಮಿತಪ್ರದ 4 ಸಣ್ಣ ಜನರ ನಡೆನುಡಿಗಳಿಂ ಖಿನ್ನನಾದೆನೊ ದೇವ ಎನ್ನಮೇಲೆ ಕರುಣದಿಂದ ಪ್ರಸನ್ನನಾಗೆಲೊ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ಸೋಜಿಗದಲಿ ಜೀವಿಸುವರು ಸುಜನರು ಪ ಈ ಜಗದಲಿ ದುಷ್ಟ ಗೋಜಿಗೆ ಸಿಲುಕದೆ ಅ.ಪ ಪರರ ವಿಭವಗಳಿಗೆ ಕರಗಲರಿಯರಿವರು ಕೊರೆಯುವ ಬಡತನಕುರಿಯಲರಿಯರು ಹರಿ ಕರುಣದಿ ತಮಗೆ ಸಿರಿಯು ಬಂದೊದಗಲು ಪರಿಪರಿ ವಿಧದಲಿ ಮೆರೆಯದೆ ದೈನ್ಯದಿ 1 ಕೆಡುಕುತನಗಳನು ಅರಿಯರು ಈ ಜನ ಬಡವರ ಸೌಖ್ಯಕೆ ದುಡಿವರು ಮುದದಲಿ ಕಡುದುರುಳರು ನಿಂದೆ ನುಡಿಗಳಾಡುವರೆಂದು ದುಡುಕದೆ ಅವರಲಿ ಕ್ಷಮೆಯ ತೋರುತ ಸದಾ 2 ಪರರಿಗುಪಕೃತಿಯಲರಿಯರು ಮಿತಿಯನು ಪರರಿಗುಪಕೃತಿಗೆ ಜರಿಯರು ಮತಿಯನು ಶರಣ ಪ್ರಸನ್ನನ ಕರುಣವ ಪೊಂದಲು ವರನೀತಿಗಳಲಿ ನಿರತರಾಗುತ ಸದಾ 3
--------------
ವಿದ್ಯಾಪ್ರಸನ್ನತೀರ್ಥರು
ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು
ಒಲಿಯಯ್ಯಾ ರಂಗ ಒಲಿಯಯ್ಯಾನೆಲೆಗಾಣದಭವಜಲದೊಳು ಮುಳುಗುವೆಪ.ಮಾಯದ ಕೈಯಲಿ ಮೇಲೆ ಮೇಲೆ ಸುತ್ತಿಆಯಾಸಬಡುತಿದೆ ಪ್ರಾಣದಾತಬಾಯೆತ್ತಿ ಗೋವಿಂದ ಹರಿಯೆನ್ನಲೀಸದುಕಾಯೊ ದಯಾಳು ಕರಿವರದ ಕೃಷ್ಣ 1ಮನ ನೀರಾನೆಯ ಕಟ್ಟಿನೊಳಗೆ ಸಿಕ್ಕಿಕ್ಷಣ ಕ್ಷಣ ದೈನ್ಯದಿ ಒರಲುತಿದೆತನತನಗೆಳೆದು ದಣಿಸುವ ಇಂದ್ರಿಯ ಜಂತುಮುನಿಸೇವ್ಯ ನಿನ್ನೂಳಿಗಕ್ಕೆ ದೂರಾದೆ ಕೃಷ್ಣ 2ಬುದ್ಧಿ ತಪ್ಪಿದವಗೆ ಅಬದ್ಧ ನಡೆವವಗೆಶುದ್ಧ ಕಾರಣ ದಿವ್ಯನಾಮವಲ್ಲವೆಉದ್ಧರಿಸು ಬೇಗ ಪ್ರಸನ್ವ್ವೆಂಕಟ ಕೃಷ್ಣತಿದ್ದಿಟ್ಟುಕೊಳ್ಳೊ ನಿನ್ನವಗೆ ನಿರ್ಣಯ ನೀನೆ 3
--------------
ಪ್ರಸನ್ನವೆಂಕಟದಾಸರು
ಕೇಳೆಗೋಪಿಗೋಪಾಲ ಮಾಡಿದ ಬಲು |ದಾಳಿಯ ಗೋಕುಲದಿ ಪತಾಳೆಲಾರೆವೆ ತವಕದಲಿ ಕಂದಗೆ ಬುದ್ಧಿ |ಹೇಳೆ ಕೃಷ್ಣವ ಕರೆದು ಅ.ಪಸರಿರಾತ್ರಿಯೊಳು ಸರಸರನೆ ಮನೆಗೆ ಬಂದು |ಸುರಿದು ಪಾಲ್ಪೆಣ್ಣೆಗಳ ||ಉರೋಜಗಳಿಗೆಕರಸರಿಸಿ ಕಣ್ಗಳನು |ತೆರೆದು ನೋಡುವನೆ ನಮ್ಮ 1ಗಂಡನು ಮನೆಯೊಳಗಿರಲು ಬಂದು ಕೃಷ್ಣ |ಭಂಡ ಮಾತುಗಳ ಬಹು ||ತುಂಟತನದಲಾಡಿಉದ್ದಂಡಕಠಿಣಕಾಯ |ದುಂಡುಕುಚವ ಪಿಡಿದ 2_______ವದ ಮೇಲಿರಲು ತಾ |ಸೀರೆಯ ಸೆಳೆವ ನೋಡೆ ||ಆರಿವರೆಂದು ವಿಚಾರಿಸಿ ನೋಡಲು |ಮೋರೆಯ ಬಾಗಿದನೆ 3ಕೇರಿಯೊಳಗೆದಧಿಮಾರುತಿರಲು ಕೃಷ್ಣ |ಸಾರಿ ಬಂದು ಮೊಸರ ||ಸೂರೆಗೊಂಡು ಪರನಾರಿಯರ ನೆರೆದು ತಾ |ಘೋರರೂಪದಿ ಮೆರೆದ 4ಆಡಲೇತಕೆ ನಮ್ಮ ಬಾಗಿಲಂಗಳದೊಳು |ಬೇಡುವ ಜಲ ದೈನ್ಯದಿ ||ನೀಡುವೆ ಜಲ ಜಲಜಾಕ್ಷ ಬಾಬಾ ಎನೆ |ಮಾಡುವರತಿಎಂಬನೆ5ಹುಡುಗನೆಂದು ಕೈಯ ಪಿಡಿಯ ಪೋಗಲು ನಮ್ಮ |ಉಡೆಮುಡಿ ಪಿಡಿದ ನೋಡೆ ||ಪಡೆದವಳಿಗೆ ಪೇಳುವೆ ನಡೆ ಎನೆ ಮಚ್ಚ |ಕೊಡಲಿ ತೋರುವನೆಗೋಪಿ6ಮಡದಿಯರೆಲ್ಲರು ಮಿಯುತಲಿರೆ ಮೈ |ಉಡುಗೆಯ ತೆಗೆದುಕೊಂಡು ||ಸಡಗರದಲಿ ಬೇಡಿಕೊಳ್ಳೆ ವಸ್ತ್ರಗಳನು |ಕೊಡದೆ ಅಡವಿಗೆ ನಡೆದ 7ಬೆಣ್ಣೆಯ ತಿಂದು ತಮ್ಮಣ್ಣಗೆ ತಾ ಕೊಟ್ಟು |ಚಿಣ್ಣರ ಬಡಿವ ನೋಡೆ ||ಬಣ್ಣಿಸಿ ನಮ್ಮ ಬಾಯಿಗೆ ಬೆಣ್ಣೆ ತೊಡೆಯುತ |ಬೆಣ್ಣೆಯ ತಿಂದಿರೆಂಬ 8ಏಣಲೋಚನೆ ಸರ್ಪವೇಣಿ ನಮ್ಮ ಮನೆ |ಓಣಿಯೊಳಗೆ ಪೋಗುತ ||ಕಾಣದಂತೆ ಚಕ್ರಪಾಣಿ ನಮ್ಮೊಳು ತನ್ನ |ತ್ರಾಣವ ತೋರಿದನೆ 9ಪದುಮನಾಭನು ಪುರದ ಚದುರಿಯರಿಗೆ ತಾನು |ಮದನಶಾಸ್ತ್ರವ ಪೇಳುತ ||ಮುದದೊಳಗಿರಲವರೊಡೆಯ ಬರಲು ಕೃಷ್ಣ |ಕುದುರೆಯ ನೇರಿದನೆ 10ಎಷ್ಟುಪದ್ರವ ಕೊಟ್ಟರು ಗೋಕುಲದೊಳು |ಬಿಟ್ಟವನಿರಲಾರೆವೆ ||ಸೃಷ್ಠಿಯೊಳಗೆ ಸರ್ವಾಭಿಷ್ಟದ ಪುರಂದರ-|ವಿಠಲ ಸಲಹುವನೆ 11
--------------
ಪುರಂದರದಾಸರು