ಒಟ್ಟು 23 ಕಡೆಗಳಲ್ಲಿ , 16 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ನೀನೇ ದಯಾಳು ನಿರ್ಮಲಚಿತ್ತ ಗೋವಿಂದನಿಗಮಗೋಚರ ಮುಕುಂದಪಜ್ಞಾನಿಗಳರಸು ನೀನಲ್ಲದೆ ಜಗಕಿನ್ನುಮಾನದಿಂದಲಿಕಾವದೊರೆಗಳ ನಾ ಕಾಣೆಅ.ಪಬಗೆಬಗೆಯಲಿ ನಿನ್ನ ಸ್ತುತಿಪೆನೊನಗಧರಖಗಪತಿವಾಹನನೆ ||ಮಗುವಿನ ಮಾತೆಂದು ನಗುತ ಕೇಳುತ ನೀನುಬೇಗದಿಂದಲಿ ಕಾಯೋ ಸಾಗರಶಯನನೆ 1ದಾನವಾಂತಕ ದೀನ ಜನ ಮಂದಾರನೆಧ್ಯಾನಿಪರ ಮನದೊಳು ಸಂಚರನೆ ||ಮೌನನಾದೆನು ನಿನ್ನ ಧ್ಯಾನಾನಂದದಿ ಈಗಸಾನುರಾಗದಿ ಕಾಯೊ ಸನಕಾದಿ ವಂದ್ಯನೆ 2ಮಂದರೋದ್ಧರ ಅರವಿಂದ ಲೋಚನ ನಿನ್ನ ||ಕಂದನೆಂದೆನಿಸೂ ಎನ್ನ ||ಸಂದೇಹವೇತಕೆ ಸ್ವಾಮಿ ಮುಕುಂದನೆಬಂದೆನ್ನ ಕಾಯೊ ಶ್ರೀಪುರಂದರವಿಠಲನೆ3
--------------
ಪುರಂದರದಾಸರು
ಪರಿಪರಿಯಲಿ ವರ್ಣಿಸುವೆ ಕಳಾನಿಧಿಯಾನರಜನರು ಅರಿತವನ ಸ್ಮರಿಸಿರಯ್ಯಾ ಪಕಾಲುಗಳು ಹದಿನೆಂಟು ತೋಳುಗಳುಹತ್ತು ಕಣ್ಣಾಲಿಗಳು ಇಪ್ಪತ್ತ ಒಂದುಸಾಲಾಗಿ ರಂಜಿಸುವ ಶಿರಸಂಗಳೀರೈದುಮೇಲಾದ ಫಣಿಂಗಳಾರ ಹನ್ನೆರಡುನೀಳವಾಗಿಯೆ ಹೊಳೆವ ಕೋರೆದಾಡೆಗಳೆರಡುಗಾಳಿಯನು ಭೇದಿಸುವ ಬಾಲ ನಾಲ್ಕುಪೇಳಲೇನಿದನು ಕೇಳ್ ನಾಲಿಗೆಗಳ್ಹನ್ನೊಂದುಮೂರ್ಲೋಕದೊಡೆಯನ ಪೀಠದಲಿರಂಜಿಸುವ ದೇಹವೇಳು 1ಧರಣಿಯೊಳಗಿನ ಪರಿವಾರದವರಿಗೆಲ್ಲಪರಸ್ಪರನೆ ವೈರತ್ವ ಬೆಳೆಸಿಕೊಂಡಿಹುದೂಉರಗಮೂಷಕನಿಂಗೆ ಕರಿಮುಖಗೆ ಕೇಸರಿಗೆಗಿರಿಜೆ ಭಾಗೀರಥಿಗೆ ಉರಿನಯನ ಚಂದ್ರನಿಗೆಎತ್ತು ವ್ಯಾಘ್ರನ ತೊಗಲಗೆ ಮರೆಯ ಹೊಕ್ಕರೆ ಕಾಯ್ವನರಕೇಸರಿಯ ತೆರದಿ ಕರುಣಾಳು ಭಕ್ತವತ್ಸಲ ದೇವನಾ 2ಬಲಿದಾಗ್ನಿಸಖಸರ್ವ ನಿಳಯದೀವಿಗೆವೈರಿಹಲವು ನಾಸಿಕದ ಸಂಚಾರಿಯಾ ಹಾರದಲಿಬೆಳೆದ ದೇಹದ ಮೇಲೆ ಮಲಗಿ ನಿದ್ರೆಯಗೈವನಳಿನನಿಳಯಳ ರಮಣ ಜಲಜಾಕ್ಷಗೋವಿಂದನನುಜೆಯರಸ ಹಲವುಮಾತೇನು ಕೇಳ್ ತಲೆ ಮೇಲೊಂದುಕೊಂಬಿನ ಋಷಿಯ ಪಿತನ ಚರಣಕೆಕೆೈಂiÀ್ಯು ಮುಗಿದು ತಲೆಬಾಗಿ 3
--------------
ಗೋವಿಂದದಾಸ
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
--------------
ಪುರಂದರದಾಸರು
ವರುಣಗೂ ನಾರಾಯಣಗು ನೆಂಟತನ ಮಾಡುವದಕೆ |ಸರಿಯೆ ಸಂದೇಹವೇನು ಸಮ್ಮೀಸಿ ನೋಡಿರಿ ಪಹೆಂಡಾರು ಬಹು ಮಂದಿ ಜಾರಾ ಪುತ್ರನು ಒಬ್ಬ |ಪಂಡೀತ ಮಗನೊಬ್ಬ ಸಮನೆಲ್ಲಿ ನೋಡಿ1ವಂಶಾ ವಂದೆ ಇಬ್ಬರದು ಛಲದಿಂದ ಕೊಲ್ಲುವಂಥಾ |ಕೂಸು ಪಾಲಿಸಿದಾರು ಸಮನೆಲ್ಲಿ ನೋಡಿ 2ಸ್ಥೂಲಾ ವಿಗ್ರಹದವರು ಜಡ ಚೇತನಗಳಿಗೆ |ಆಲಯವಾಗಿಹರು ಸಮನೆಲ್ಲಿ ನೋಡಿ 3ಕನಕಾ ಭೂಮಿ ವಜ್ರದಾಹಾರ ಒಬ್ಬಾಗೊಬ್ಬಾಗೆ |ವನಮಾಲಿವೈಜಯಂತಿಸಮನೆಲ್ಲಿ ನೋಡಿ 4ತುಳಿಸೀಕೊಂಡೂ ಕೋಪಿಸದೆಲೆವೇ ಹಿಗ್ಗಿದಾರು |ಕಲುಷಾ ವಿದೂರರೂಪಸಮನೆಲ್ಲಿ ನೋಡಿ 5ದ್ವಾರಕ ಪಟ್ಟಣವ ಪ್ರೀತಿಂದ ಪಾಲೀಸೀ |ಹಾರಾವ ಮಾಡಿದಾರು ಸಮನೆಲ್ಲಿ ನೋಡಿ 6ವೃದ್ಧಿ ಹ್ರಾಸಗಳಿಲ್ಲಾ ಅನ್ನಾದಾಪೇಕ್ಷವಿಲ್ಲ |ನಿದ್ರಾ ಶೂನ್ಯರಾಗಿಹರು ಸಮನೆಲ್ಲಿ ನೋಡಿ 7ಸರಸೀಜಾರೂಪಉಳ್ಳವರು ಪೂರ್ತಿ ಮಾಡಿದಾರು |ಸುರರಾ ಮನೋಭೀಷ್ಟಿಯಾ ಸಮನೆಲ್ಲಿ ನೋಡಿ 8ವಿಧಿಯಿಂದ ಜನಿಸಿದಾರು ಜನರೀಗಸಹ್ಯವಾಗಿ |ಒದರುವರು ಇದರಿಂದ ಸಮನೆಲ್ಲಿ ನೋಡಿ 9ನೂತನ ಯಜೊÕೀಪವೀತಾವ ಧರಿಸುವರು ಪ್ರ- |ಖ್ಯಾತಿ ವಸ್ತು ಕೊಟ್ಟಾರು ಸಮನೆಲ್ಲಿ ನೋಡಿ 10ದಾರಿ ತೋರಿದಾರು ವಾನರಾಗಳಿಗೆ ಗುಂಜಿ |ಹಾರಾಯೀಸೂವರಿದು ಸಮನೆಲ್ಲಿ ನೋಡಿ11ವಾಸಾವಿವರ್ಜಿತಾರು ದ್ವೇಷಿಗಳ ಶರೀರ |ನಾಶಾಗೈಸಿದರಿದು ಸಮವೆಲ್ಲಿ ನೋಡಿ12ಶೋಧಿಸೀ ನೋಡಿದಾರೆ ಕರ್ದಾಮ ಜಾಲಯಳ |ಭ್ಯೋದಯಕ್ಕೆ ಕಾರಣರು ಸಮವೆಲ್ಲಿ ನೋಡಿ13ಧರಿಗಾನಂದಾವಿತ್ತಾರಾಲಂಕಾರವಾಗಿ ಖಳರಾ |ತರಿದು ಭಾರವ ಕಳದು ಸಮವೆಲ್ಲಿ ನೋಡಿ 14ಶ್ರೀನಿವಾಸಾಗೆ ಮಾವನೀತಾ ನೀತಾಗು ಹಾಗೆ |ಪ್ರಾಣೇಶ ವಿಠ್ಠಲನು ಸಮವೆಲ್ಲಿ ನೋಡಿ 15
--------------
ಪ್ರಾಣೇಶದಾಸರು
ವಿಧಿನಿಷೇಧವು ನಿನ್ನವರಿಗೆಂತೊ ಹರಿಯೇ ಪವಿಧಿನಿನ್ನ ಸ್ಮರಣೆಯು ನಿಷೇಧ ವಿಸ್ಮøತಿಯೆಂಬವಿಧಿಯನೊಂದನೆ ಬಲ್ಲರಲ್ಲದೇ ಮತ್ತೊಂದು ಅ.ಪಮಿಂದದ್ದೆ ಗಂಗಾದಿ ಪುಣ್ಯತೀರ್ಥಂಗಳುಬಂದದ್ದೆ ಪುಣ್ಯಕಾಲ ಸಾಧುಜನರು ||ನಿಂದದ್ದೆ ಗಯೆ ವಾರಣಾಸಿ ಕುರುಕ್ಷೇತ್ರಸಂದೇಹವೇಕೆ ಮದದಾನೆ ಪೋದುದೆ ಬೀದಿ 1ಕಂಡಕಂಡಲ್ಲಿ ವಿಶ್ವಾದಿ ಮೂರುತಿಯು ಭೂಮಂಡಲದಿ ಶಯನವೆ ನಮಸ್ಕಾರವು ||ತಂಡತಂಡದ ಕ್ರಿಯೆಗಳೆಲ್ಲ ನಿನ್ನಯ ಪೂಜೆಮಂಡೆಬಾಗಿಸಿ ನಮಿಪಭಾಗವತಜನಕೆ 2ನಡೆದ ನಡಿಗೆಯು ಎಲ್ಲ ಲಕ್ಷ ಪ್ರದಕ್ಷಿಣೆಯುನುಡಿವ ನುಡಿಗಳು ಎಲ್ಲ ಗಾಯತ್ರಿ ಮಂತ್ರ ||ಕೊಡುವುದೆಲ್ಲವು ಅಗ್ನಿಮುಖದಲ್ಲಿ ಆಹುತಿದೃಢಭಕ್ತರೇನ ಮಾಡಿದರದೇ ಮರ್ಯಾದೆ 3ನಷ್ಟವಾದುದು ಎಲ್ಲ ಸಂಚಿತದ ಕರ್ಮವುಮುಟ್ಟಲಂಜುವುವೆಲ್ಲ ಆಗಾಮಿಕರ್ಮ ||ಸ್ಪಷ್ಟವಾಗಿರುವ ಪ್ರಾರಬ್ಧ ಕರ್ಮವ ಮೀರಿಸೆಟ್ಟಿಮೆಟ್ಟಿದ್ದೆ ಪಟ್ಟಣವೆಂಬುದೇ ನಿಜವು 4
--------------
ಪುರಂದರದಾಸರು
ಶಿವನಾದ ಮೇಲೆ ಶಿವತಾನೆಂಬರಿವು ಇರಬೇಕುಪಕಂಗಳ ಮುಟ್ಟಿ ತೆರೆಯಲು ಬೇಕುಕಂಗಳೊಳು ಆನಂದವಿರಬೇಕುಸಂಗಹರನಾಗಿ ಇರಬೇಕು1ದೇಹವೆ ತೂಗುತಲಿರುತಿರಬೇಕುದೇಹವೇ ತಾನೆಂದರಿತಿರಬೇಕುದೇಹವ ಮರೆತಿರಬೇಕು2ಜಗವಿದು ಎನ್ನಲಿ ಜನನವೆನಬೇಕುಜಗವಿದು ಎನ್ನಲಿ ಲಯವೆನಬೇಕುಜಗಕೆ ತಾ ಸಾಕ್ಷಿಯಿರಬೇಕು3ನೀತಿಯ ಶಮೆದಮೆ ಶಾಂತಿಯು ಇರಬೇಕುಪಾತಕವೆಲ್ಲವ ಹರಿದಿರಬೇಕುಮಾತು ಮಾತಿಗೆ ಗುರುವೆನಬೇಕು4ಸುಧೆಶರದಿಯ ಸುಖ ತುಳುಕಲಿ ಬೇಕುವಿಧವಿಧ ಗುಣಗಳ ಬಿಟ್ಟಿರಬೇಕುಚಿದಾನಂದಗುರುತಾನೆನಬೇಕು5
--------------
ಚಿದಾನಂದ ಅವಧೂತರು