ಒಟ್ಟು 26 ಕಡೆಗಳಲ್ಲಿ , 12 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗುರುವೇ ನೀ ತೋರಿಸೋ ದಯದಿಂದ ಲೆನಗೆ | ಬೇಗದಿ ಬಂದೆನ್ನ ದೇವನೀಗ ಪ ತೈಲ ಯಂತ್ರ ದೊಳಿಪ ಪಶುವಿನಂದದಿ ಜೀಯಾ | ಹಲವು ಜನ್ಮವ ತಾಳಿದೆನಯ್ಯಾ 1 ನಿನ್ನ ಸ್ಮರಣೆ ಮರೆದು ನಾನಾ ಉಪಾಸನೆ ವಿಡಿದು | ಬನ್ನ ಬಟ್ಟೆನೋ ಯಚ್ಚರ ಜರಿದು2 ಭವ ಬಂಧನ ಹರಿವಾ | ಸೂರೆಗೊಳಲಿಲ್ಲಾ ಭಕ್ತಿ ಸುಖವಾ3 ಸರ್ವಾಪರಾಧವಾ ಕ್ಷಮಿಸಿ ಯನ್ನುದ್ಧಾರವಾ | ಉರ್ವಿಲಿ ಮಾಡು ಪಿಡಿದು ಕರವಾ 4 ಇಹಪರ ಸಹಕಾರ ಕರುಣಾಬ್ದಿ ಪಾರಾವಾರಾ | ಮಹಿಪತಿ ಸುತ ಪ್ರಭು ಉದಾರಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ರಾಘವೇಂದ್ರರು ಇಂಥಾ ಗುರುಗಳ ಕಾಣಿನಾ | ಭೂತಳದೊಳು ಇಂಥಾ ಯತಿಗಳ ಕಾಣಿನಾ ಪ ಕಾಣಿ \ ಮಂತ್ರ ಮಂದಿರದಲ್ಲಿ ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ ಅ.ಪ ದೇವಸ್ವಭಾವನೀತನು | ಸತತ ಪವನ ದೇವನಾವೇಶಯುಕ್ತನು || ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ ಭಾವ ಭಕ್ತಿಯಲಿ | ಸೇವಿಪರಿಗೆ ಭವ ನೋವು ಕಳೆದು ಸುರ | ಗೋವಿನ ತೆರ ವರ ವೀವನು ಕರುಣದಿ | ಕಾಮನು ಪರಮ ಪಾವನ ಚರಿತನು | ಕೋವಿದರೊಡೆಯನು 1 ವರಹಜ ತಟದಲ್ಲಿರುವ ಭಕ್ತರು ಕೂಗಿ ಕರೆದಲ್ಲಿಗೋಡಿ ಬರುವ | ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ ಪೊರೆದನು ಪರಮತ ಮುರಿದನು ಜಗದೋಳ್ ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ ಪ್ರತಿದಿನ ಗುರು ಸುಯಮೀಂದ್ರರ | ಕರದಿಂಗೊಂಬರು 2 ಮಂದಹಾಸನ ಶ್ರೀ ಶಾಮಸುಂದರ ರಂಘ್ರಿ ಸೇವಕ | ಕೇಸರಿ ಎನಿಸಿ ಗಂಧವಾಹನ ಮತ | ಸಿಂಧುವಿಗೆ ಶಶಿ ಯಂದದಿ ರಾಜಿಸಿ ವೃಂದಾವನವನು ಒಂದೆ ಮನದಲಿ ವಂದಿಸಿ ನಮಿಸುವ ವಂದ್ಯಾಂಧಕರಿಗೆ | ಕಂದರಕ್ಷಿಗಳ ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ 3
--------------
ಶಾಮಸುಂದರ ವಿಠಲ
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿನ್ನ ಭಕುತಿಯನು ಬೀರೊ ಎನ್ನಮನ್ನಿಸಿ ಸಲಹುವರಾರೋ ಪಸನ್ನುತಸನ್ಮಾರ್ಗ ತೋರೋ ಆಪನ್ನರಕ್ಷಕ ಬೇಗ ಬಾರೋ ಅ.ಪಪನ್ನಗಶಯನ ಲಕ್ಷ್ಮೀಶಾ ವೇದಸನ್ನುತಪಾದಸರ್ವೇಶಾಇನ್ನು ಬಿಡಿಸು ಭವಪಾಶಾ ಪ್ರಸನ್ನ ರಕ್ಷಿಸೊ ಶ್ರೀನಿವಾಸಾ 1ನಾರದ ಗಾನವಿಲೋಲಾ ಸ್ವಾಮಿಭೂರಿಭಕ್ತರ ಪರಿಪಾಲಾಶ್ರೀ ರಮಣಕರುಣಾಲವಾಲ- ದೇವನೀರದಶ್ಯಾಮ ಗೋಪಾಲಾ2ಕರಿರಾಜವರದ ಪ್ರಮೇಯಾ ಎನ್ನನರಿತು ನಡೆಸೊ ಯೋಗಿಧ್ಯೇಯ ||ಸುರಮುನಿ ಹೃದಯನಿಕಾಯ-ನಮ್ಮಪುರಂದರವಿಠಲರಾಯಾ3
--------------
ಪುರಂದರದಾಸರು
ನೀನೇಗತಿಮಾಧವಾ ದೇವರದೇವನೀನೇ ಗತಿಯು ನಮ್ಮ ಮಾನಾಭಿಮಾನವಹಾನಿಗೊಳಿಸದನುಮಾನವಿಲ್ಲದೆ ಕಾಯೋ ಪಸಾಕಾರ ಸೌಭಾಗ್ಯವೂ ಸರ್ವವೂ ಸರ್ವಶೋಕಕ್ಕೆ ಕಾರಣವೂಬೇಕಾದ ಕಡುರಸ ಶಾಕಪಾಕದ ರೂಪಿಶ್ರೀಕೃಷ್ಣ ನಿನ್ನಯ ನಾಮದಿಂದಧಿಕನೆ 1ಸಕಲ ಸಂಭ್ರಮವು ನೀನೇ ನಿನ್ನನು ಎನ್ನಸಖನೆಂದು ನಂಬಿದೆನುಸಕಲ ಚರಾಚರ ಪ್ರಾಣಿಗಳಿಗೆ ಸರ್ವಸುಖದುಃಖವುಣಿಸುವ ಸಕಲ ತಂತ್ರನೇ 2ಆದಿಮೂರುತಿಯು ನೀನೇ ಧರ್ಮಾಧರ್ಮಶೋಧಿಸುವವನು ನೀನೇವೇದಗಮ್ಯನೆ ಯೆನ್ನ ಖೇದಮೋದವ ನಿನ್ನಲ್ಲಿಪಾದಕರ್ಪಿಸಿದೆ ಗೋವಿಂದದಾಸನೆ ಕಾಯೊ 3
--------------
ಗೋವಿಂದದಾಸ
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು
ವೆಂಕಟರಮಣ ವೇದಾಂತಕೋಟಿವಂದ್ಯಶಂಕರಪ್ರಿಯಪತಿಏಳೆನ್ನುತಪ.ಪಂಕಜಮುಖಿಪದ್ಮಾವತಿ ಸರ್ವಾ-ಲಂಕಾರದ ನಿದ್ದೆ ಸಾಕೆನ್ನುತ ಅ.ಪ.ಮಂಗಲಚರಿತ ಭುಜಂಗಶಯನ ನಿ-ನ್ನಂಗದಾಯಾಸವ ಪರಿಹರಿಸಿಪೊಂಗಲಶದಿ ಉಷ್ಣೋದಕ ಗಂಧ ತೈಲಾ-ಭ್ಯಂಗಮಾಡುವರೇಳು ಶೃಂಗಾರದ ಮೂರ್ತಿ 1ದಧಿಯ ಪೃಥುಕದಲಿ ಹದಗೈದು ಮಧುರದಿಮಧುಸೂದನ ನಿನ್ನ ಪದದ ಮುಂದೆಸದ್ ಹೃದಯರು ತಂದಿಹರು ಸಮರ್ಪಿಸೆಮದಜನಕ ನಿನ್ನ ಓಲೈಸುವರಯ್ಯ 2ಸಣ್ಣಕ್ಕಿಯನು ದಿವ್ಯಾನ್ನ ಪಾಕವ ಮಾಡಿಚೆನ್ನಾದ ಗೋಕ್ಷೀರವನ್ನು ತಂದುಉನ್ನತ ಮಹಿಮನೆ ಉಣ್ಣೆಂದು ಲಲಿತ ಸು-ವರ್ಣಪಾತ್ರೆಯೊಳು ತಂದಿಹರು ಶ್ರೀಹರಿಯೇ 3ವಿಧವಿಧ ಷಡುರಸಭರಿತ ಮನೋಹರಸುಧೆಗೆಯಿಮ್ಮಡಿ ಮಧುರತ್ವದಲಿಮೃದುವಾದ ಉದ್ದಿನ ದೋಸೆಯ ಸವಿಯೆಂದುಪದುಮನಾಭನೆ ನಿನ್ನ ಹಾರೈಸುವರಯ್ಯ 4ಸಕ್ಕರೆಕದಳಿಉತ್ತಮ ಫಲಗಳ ತಂದುರಕ್ಕಸವೈರಿಯೆ ನಿನ್ನ ಮುಂದೆಚೊಕ್ಕಟವಾಗಿಡೆ ಲೆಕ್ಕ ಲೇಖನಗಳಒಕ್ಕಣಿಪರುವಾಸುದೇವನೀನೇಳಯ್ಯ5ಸಾರಹೃದಯ ಗೌಡಸಾರಸ್ವತವಿಪ್ರಭೂರಿವೇದಾದಿ ಮಂತ್ರದ ಘೋಷದಿಶ್ರೀರಮಣನೆ ದಯೆದೋರೆಂದು ಕರ್ಪೂರ-ದಾರತಿಯನು ಪಿಡಿದಿಹರು ಶ್ರೀಹರಿಯೇ 6ಭಾಗವತರು ಬಂದು ಬಾಗಿಲೊಳಗೆನಿಂದುಭೋಗಿಶಯನಶರಣಾದೆನೆಂದುಜಾಗರದಲಿ ಮದ್ದಳ ತಾಳರಭಸದಿರೇಗುಪ್ತಿರಾಗ ಸಂಗೀತ ಪಾಡುವರಯ್ಯ 7ಕರುಣಾಸಾಗರ ನಿನ್ನ ಚರಣದ ಸೇವೆಯಕರುಣಿಸೆಂದೆನುತಾಶ್ರಿತ ಜನರುಕರವಮುಗಿದು ಕಮಲಾಕ್ಷ ನಿನ್ನಯ ಪಾದ-ಸ್ಮರಣೆಗೈಯುತ ನೋಳ್ಪಾತುರದಿಂದ ಹರುಷದಿ 8ನಾನಾ ಜನರು ಬಂದುಕಾಣಿಕೆಕಪ್ಪವಶ್ರೀನಿವಾಸನೆ ನಿನ್ನ ಪದಕೆ ಒಪ್ಪಿದಾನವಾಂತಕ ನಿನ್ನ ದಯವೊಂದೆ ಸಾಕೆಂದುಧ್ಯಾನಮಾಳ್ಪರು ದಯಮಾಡೆಂದು ಹರಿಯೇ 9ನೀನೆ ಗತಿಯೆಂದು ನಿನ್ನ ನಂಬಿಹರು ಲ-ಕ್ಷ್ಮೀನಾರಾಯಣ ಪುರುಷೋತ್ತಮನೆಮಾನದಿ ಭಕ್ತರ ಸಲಹಯ್ಯ ಸಂತತಶ್ರೀನಿವಾಸನೆ ಬೇಗ ಏಳು ಶ್ರೀಹರಿಯೆ 10
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ