ಒಟ್ಟು 25 ಕಡೆಗಳಲ್ಲಿ , 19 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವ ಸಾಗರಕೆ ಸ್ವಲ್ಪ ಪ ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ 1 ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ2
--------------
ವಿಜಯದಾಸ
ಭಾವದಲ್ಲಿಯೆ ಪೊರೆಯೊ ದೇವ ದೇವ ಪ ಜೀವೋತ್ತಮರಸ ದೇವ ಗೋಪಾಲಕ ಅ.ಪ ಸಂದೇಹ ಭೀತಿಯೊಳ್ ನೊಂದೆನೊ ಬಹುಕಾಲ ಗಂಧವಾಹನ ವಂದ್ಯ ಸರ್ವ ಬಂಧೊ ಭವ ಬೊಮ್ಮ ಸುರರಿಗೆ ಒಂದಿಷ್ಟು ವಶವಲ್ಲವೆಂದು ದಯ ಸಲ್ಲಿಸೊ 1 ಒಳಗಿನಾ ಅಘಮೂಲವಳಿಯದೆ ಇಷ್ಟಾರ್ಥ ಮಳೆಗರೆದರೇನೊ ಗುಣವ ಹೊಂದೆ ಹಲುಬಿ ಬೇಡುವುದೊಂದು ಒಲಿದು ಕೊಡುವುದೊಂದು ಫಲ ಬೇಧವಾದರೆ ಮನ ನಂಬಿಸುವುದೆಂತೊ 2 ಹರಿ ನಿನ್ನ ಇಚ್ಛೆಗೆ ಎದುರಿಲ್ಲವಾದರೆ ಶರಣ ಸುರಧೇನು ಖರೆಯಾದರೆ ನೆರೆ ನಂಬಿದೆ ನಿನ್ನ ಜಯೇಶವಿಠಲ ಸುರರು ಜಯವೆಂಬಂತೆ ಹರಿಕೆಯ ಸಲಿಸೊ 3
--------------
ಜಯೇಶವಿಠಲ
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಸಿಟ್ಟು ಮಾಡುವುದೆಂದಿಗು ಸಲ್ಲ ಪೂರ್ಣ ಸಿರಿನಲ್ಲ ಪ. ಮೋಹ ಪಾಶ ಮಿಕ್ಕು ಬಿಗಿದಿಹುದು ರಿಪು ವ್ಯೂಹ ಸುತ್ತಮುತ್ತ ನೆಗದಿಹುದು ದೇಹದಿ ದಿನದಿನ ಬಲಕುಂದಿ ಬಂತು ಚಿ- ದ್ದೇಹ ನೀನೊಲಿವ ಸನ್ನಹಗೊಳ್ವದೆಂತೊ 1 ಒಂದು ಸತ್ಕರ್ಮ ಸಾಧಿಸುವಲ್ಲಿ ಬೇಗ ಪಾತಕ ಝಲ್ಲಿ ಮಂದರಧರ ಮಧುಸೂದನ ಮನದಿ ನೀ ನಿಂದು ಸಾರ್ಥಕ ಮಾಳ್ಪ ತೆರವೆಲ್ಲ ಬಲ್ಲಿ 2 ಹಿಂದೆ ಮುಂದಿನ ಸರ್ವ ಕರ್ಮಫಲ ಎನ್ನ ತಂದೆ ಸ್ವೀಕರಿಸಿ ಮಾಡಿಸು ನಿರ್ಮಲ ಇಂದಿರೇಶ ವೆಂಕಟೇಶನೆ ತ್ವಚ್ಚರ- ಣೆಂದೀವರ ನೆರಳಿರಿಸನುಗಾಲ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹುಚ್ಚುಗೊಳಿಸುವರೆ ಮರುಳೆ ತರುಳಾರ ಅಚ್ಚುತ ಪರಮ ಗಂಭೀರ ಪುರುಷನೆ ಪ ಎಲ್ಲವು ಬಯಸುವ ಹಟದಿ ಶಿಸುವಿಗೆ ಬೆಲ್ಲವ ತೋರಿಸಿ ನಿಲುದಿಪ್ಪೋದು1 ಮಿನುಗುವ ಮಣಿತೋರೆ ತನು ಬೆವರೆ ಪೋಗೆ ಕನಡಿಭಾನಿಂದುದಕ ಕೆಳಗೊಳಿಸುವರೆ 2 ಕಪ್ಪು ವಸ್ತ್ರವ ಕಂಡು ನಡುಗುವಂಗೆ ಕಪ್ಪ ಕಲ್ಪಿಸೆ ಅಪ್ಪಾ ಎನ್ನೆ ಅಪ್ಪಿ ನಗಿಸುವರೆ 3 ನಗುವ ಕೂಸಿನ ಅಳಿಸಿ ಮುದ್ದಾಡಿ ನಗುಸುವೀ ನೀನು ಬಗೆ ಬಗೆಯಿಂದ 4 ಪರಿ ಮಾಡದಿದ್ದರೆ ವಾಸು ಕಾಲ ಕಳೆವದೆಂತೊ 5
--------------
ವ್ಯಾಸತತ್ವಜ್ಞದಾಸರು
ಹ್ಯಾಗೆ ಕಾಂಬೆನು ಹಂಸಯೋಗಗಮ್ಯನೆ ನಿನ್ನ ವಾಗೀಶಪಿತ ದಯವಾಗೋ ಮೋಹನ ಪ. ಮನವು ನಿನ್ನಯ ಸೇವೆಗನುವಾಗಿ ನಿಲದು ಸ- ಜ್ಜನ ಸಂಗ ಸಲ್ಲಾಪವನು ಮಾಡಗೊಡದು ಘನಮೋಹಕೊಳಗಾದ ತನುವ ಪಿಡಿವುದು ಶ್ರೀ- ವನಿತೆಯರಸ ನಿನ್ನ ನೆನವೆಂತು ಬಹುದೊ 1 ಹಂಚಿ ದುರ್ವಿಷಯಕ್ಕೆ ವಂಚನೆಗೊಳಿಸಿ ಪ್ರಪಂಚದೋಳಿರಿಸಿ ಪಂಚಬಾಣನ ಶುಕಚುಂಚುವೇದದಿ ತ್ವಂಚ ಹಂಚಗೊಳಿಸಿ ಮೋಹ ಮಿಂಚಿಕೊಂಡಿಹುದೊ 2 ದೀರ್ಘಾದಿ ಸಹಿತಾದಿ ವರ್ಗಗಳನು ಗೆಲುವ ಮಾರ್ಗ ಕಾಣದೆ ದುಸ್ಸಂಸರ್ಗದಿ ಸಿಲುಕಿ ಭರ್ಗ ವಂದ್ಯನೆ ಗುಣಸರ್ಗದ ಬಲೆಯಿಂದ ನಿರ್ಗಮಗೊಂಡಪವರ್ಗವೆಂತಹುದೊ 3 ದಿನದಿನದೊಳಗಾಹತನುವ ನೋಡಲು ಮುಂದಿ ನನುಭವವನು ಕಾಂಬದನು ನಾನೇನರಿಯೆ ಜನರ ರಕ್ಷಾದಿಕರ್ತನೆ ನೀನೆ ಬಲ್ಲಿ ಮುಂ- ದಿನ ಕಾರ್ಯವಹದೆಂತೊ ವನಜಲೋಚನನೆ 4 ಸತಿ ಸುತಾದಿಗಳೆಲ್ಲ ಹಿತರೆಂದು ಗ್ರಹಿಸುವ ಮತಿಹೀನ ಜನಕೆ ದುರ್ಗತಿಯು ತಪ್ಪುವದೆ ಅತುಳ ಮಹಿಮ ಭಕ್ತಹಿತನಾದ ವೆಂಕಟ ಪತಿ ನೀನೆ ಎನಗೆ ಸದ್ಗತಿ ತೋರೊ ಹರಿಯೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸತ್ಸಂಗವಿಡಿದು ಸರ್ವೋತ್ತಮನೆ ಗತಿಯೆಂದುನೆಚ್ಚಿ ಅರ್ಚಿಸು ಗಡ ಮನುಜ ಪ.ವಿರಹ ಶಬ್ದಗಳ ಮೈಯ್ಯೊಲಿದೊಲಿದುಕೇಳಿಸತಿಯರ ಧ್ವನಿಗೆ ಮಗುಳೆ ಮೋಹಿಸುತಹರಿಣ ಘಂಟಾರವಕೆ ಬಲೆ ಬೀಳುವಂತಾಗದಿರುಹರಿಕಥೆಯಕೇಳಿಬಾಳು1ಅರಿಯದರ್ಭಕನು ಕೆಂಡವ ಮುಟ್ಟಿ ಅಳುವಂತೆಪರಸ್ತ್ರೀಯ ಸರಸಕೊಳಗಾಗಿನರಕದೊಳು ಬೀಳ್ವ ಪಾಮರನೆ ಹರಿಚರಣಾಬ್ಜಸ್ಪರುಶ ದೊರಕುವುದೆಂತೊ ನಿನಗೆ 2ದೀಪ ಕಾಶಕೆ ಪತಂಗವು ಕೆಡೆವ ಪರಿಯು ಸಲ್ಲಾಪವು ಪರಸತಿಯರೊಡನೆಶ್ರೀಪತಿಯ ಮೂರುತಿಯ ಕಂಡೆರಗು ಮೂಢಮತಿಪಾಪ ಬುದ್ಧಿಗಳನ್ನುಜರಿದು3ಶಸ್ತ್ರ್ತಧಾರೆಯ ಮಧುವ ಬಯಸುವಂತನ್ಯೋತ್ತಮ ಸ್ತ್ರೀಯರಧರಸುಧೆಬಯಸಿಚಿತ್ತವ್ಯಸ್ತವ ಮಾಣದೊಮ್ಮೆಗಾದರೆಹರಿಭಕ್ತಿರಸವೀಂಟಿ ಸುಖಿಯಾಗು 4ವನಜವನವಂ ಬಿಟ್ಟು ಅಳಿವೃಂದ ಚಂಪಕದನನೆಗೈದಿ ಪ್ರಾಣ ಬಿಡುವಂತೆವನಿತೆಯರ ವಾಸನೆಯೆ ನಿರಯದೌತಣವೆಂದುವನಜಾಕ್ಷ ನಿರ್ಮಾಲ್ಯ ಸೂಡು 5ಇಂತೆಂಬ ಪಂಚಭೌತಿಕದೇಹದಾಸೆಯೊಳುಸಂತತದಿಲಂಪಟನೀನಾಗಿಅಂತ್ಯದೊಳುಜರೆಕಾಡುವಾಗ ಕಫ ವಾತವೆಮುಂತಾದ ವ್ಯಥೆ ಬೆನ್ನ ಬಿಡವು 6ಭಸ್ಮಕ್ರಿಮಿಕೀಟವಾಗಿ ಪೋಪ ಕಾಯಕೆ ನಂಬಿವಿಸ್ಮರಣೆ ಬೇಡ ಹರಿಪದಕೆಕಶ್ಮಲಾನ್ವಿತವಾದ ಯೋನಿಗಳ ಬರವರಿತುವಿಸ್ಮರಣೆ ಬೇಡ ಹರಿಪದಕೆ 7ಬಲ್ಲಿದರ ಸಿರಿಯ ಸೈರಿಸಲಾರೆನೆಂದೆಂಬಕ್ಷುಲ್ಲಕರ ನುಡಿಯನಾಡದಿರುಎಲ್ಲಿ ಭಾಗವತರ ನಿಕೇತನಾಜೆÕಯ ಕೇಳೆಅಲ್ಲಿ ಮಧುಕರವೃತ್ತಿತಾಳು8ಹರಿದಾಸರ ವಿಲಾಸವೆ ಎನ್ನ ಸಿರಿಯೆಂದುಹರಿದಾಸರಡಿಗೆ ಮಗುಳೆರಗಿಹರಿದಾಡುವ ಮನಕೆ ಸೆರಯಿಕ್ಕಿ ಹರಿಯನೆ ನೆನೆದುಹರುಷ ಪುಳಕಿತನಾಗಿ ಬಾಳು 9ದಶಇಂದ್ರಿಯಂಗಳಿಗೆ ವಶವಾಗದಿರು ಏಕಾದಶಿ ವ್ರತಕೆ ವಿಮುಖವಾಗದಿರುದಶಶಿರಾರಿಯ ನಾಮದಶನವೆಭುಂಜಿಸುದಿಶೆಯರಿತೂ ಕಾಣನಾಗದಿರು 10ಪದ್ಮನಾಭನ ಪಾದಪದ್ಮವೆ ಗತಿಯೆಂದುಪದ್ಮಜನ ಪದಕೆ ಪೋಗುವನಪದ್ಧತಿಯವಿಡಿದುವರಪದ್ಮಪತಿ ವಾಸ ತ್ರೈಸದ್ಮನಿಗೆ ಉದ್ಯೋಗಮಾಡು11ಕಡು ಬಂಧುಬಳಗ ಸತಿಸುತರುಂಟು ವೃತ್ತಿಯೊಳುಕಡಿಮಿಲ್ಲವೆಂಬ ಪಾಶವನುಕಡಿದು ಕಡಲೊಡೆಯನೆ ಸಲಹೆಂದು ಗರ್ಜಿಸಲುಕಡೆಹಾಯಿಸಬಲ್ಲದಿದು ನಿನಗೆ 12ಆವಾಗೆ ಜಗಕೆ ಸರ್ವೋತ್ತಮನೆ ಹರಿಯೆಂದುಜೀವೋತ್ತಮನೆ ವಾಯುವೆಂದುಭಾವಶುದ್ಧಿಗಳಿಂದ ಬಯಲುಡಂಬಕಬಿಟ್ಟುಜೀವಿಸಲು ಸ್ವರೂಪ ಸುಖವಾಹುದು 13ವರಊಧ್ರ್ವಪುಂಡ್ರಹರಿಮುದ್ರೆಯನಲಂಕರಿಸುಶಿರಿ ತುಲಸಿ ಪದ್ಮಸರ ಧರಿಸುಸ್ಮರನ ಶರಕಂಜದರಿಯಾರುವರ್ಗವನೊದೆದುಹರಿದು ಬಹ ದುರಿತಗಳ ಸದೆದು 14ಏಸುಜನ್ಮದಿ ಬಂದು ನೊಂದೆ ಭವಾಟವಿಯೊಳುಮೋಸ ಹೋಗದಿರಿನ್ನು ತಿಳಿದುಬೇಸರದೆ ಉರಗಾದ್ರಿವರದ ಪ್ರಸನ್ವೆಂಕಟೇಶನಂಘ್ರಿಯ ಬಿಡದೆ ಭಜಿಸು 15
--------------
ಪ್ರಸನ್ನವೆಂಕಟದಾಸರು