ಒಟ್ಟು 22 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುನಿಯ ನೋಡಿರೊ ವಂದನಿಯ ಮಾಡಿರೊ ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ ತೊಳೆದ ಜಲವು ಬೀಳಲಾಕ್ಷಣ ಹಲುಬಿಕೊಳುತಲಳಿದು ಪೋಗೋವು 1 ಹಿಂದೆ ವ್ಯಾಸ ಮುನಿಗಳಿಂದ ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ ವಿಂದ ಒಡೆಯನೀತ 2 ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ ಮುದದಿ ತಿಳಿದು ಮಾಯಿ ಶಾಸ್ತ್ರ ವೊದೆದು ಕಳೆದ ನಿಜ ಸದಮಲ ಸಮರ್ಥ 3 ಮಧ್ವಮತಾಂಬುಧಿಯೊಳು ಪುಟ್ಟಿ ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ ಊಧ್ರ್ವ ಲೋಕದಲ್ಲಿ ಮೆರೆದ4 ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ ವೇಲೂರ ಪುರಪಯೋನಿಧಿವಾಸ ಜಗದ ದೊರೆ ವಿಜಯವಿಠ್ಠಲನ್ನದಾಸ5
--------------
ವಿಜಯದಾಸ
ವೇಶ ನಿಜ ವಿಲಾಸ ಪ. ಭಾಸುರ ಮಣಿಗಣಭೂಷಣ ದಿತಿಸುತ- ಭೀಷಣ ಸಜ್ಜನಪೋಷಣ ಕಪಿವರ ಅ.ಪ. ಕಂಜಸಖೋಪಮ ಕಮಲಾನನಾನತ ಸಂಜೀವನ ಹನುಮಾ ಮಂಜುಳ ವಜ್ರಶರೀರ ವೀರ ಹರಿ- ರಂಜನಾಂಜನಾಸುತ ಸದ್ಗುಣಯುತ 1 ನಿಗಮಾಗಮ ಪಾರಂಗತ ರಾಮಾ- ನುಗ ಪಾವನರೂಪ ಭಗವಜ್ಜನ ಭಾಗ್ಯೋದಯ ಭಾರತಿ ದೃಗುಚಕೋರಚಂದ್ರಮ ತ್ರಿಗುಣಾತ್ಮಕ 2 ಅಜಪದನಿಯತ ಭೂಭುಜಪತಿ ಪಾಂಡುತ- ನುಜ ಸುರವ್ರಜವಿನುತ ಕುಜನಧ್ವಾಂತನೀರಜಸಖ ಗರುಡ- ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ 3 ವರಕಾರ್ಕಳಪುರ ಗುರು ವೆಂಕಟಪತಿ ಚರಣಾಗ್ರೇ ವಿರಾಜ ಶರಣಭರಣಯುತ ಕರುಣಾಕರ 4
--------------
ತುಪಾಕಿ ವೆಂಕಟರಮಣಾಚಾರ್ಯ
ಸಾರತರದ ಮುರಳಿದನಿಯ ಕೇಳಿದೆ ಏನೆ ಪ ನಾರಿಮಣಿಯರುಲಿವದನಿಯ ಕೇಳಿದೆ ಏನೆ ಅ.ಪ ನಲಿದು ಕುಣಿವ ಲಲನೆಯರನು ನೋಡಿದೆ ಏನೆ ಝಣ ಝಣ ಝಣ ಕಿಣಿ ಕಿಣಿ [ಭರ್ತಾ] ರವವು ಕೇಳ್ವುದೇನೆ1 ಬಡನಡುವಿನ ಮಡದಿಯವನ ಅಡಿಯ ಪಿಡಿವೆ ಏನೆ ಕಡುಬೆಡಗಿನ ಹುಡುಗಿಯವನ ಅಡಿಯ ಪಿಡಿವೆ ಏನೆ ಸಡಗರದಲಿ ನಡೆದು ಮನವ ರಂಗಗೀವೆ ಏನೆ 2 ಮನದ ಕಲುಷವಳಿದು ಮುದವ ತಳೆದಿಹೆಯೇನೆ ಇನಿದುವಚನ ಕನಸು ನೆನಸ ತಳೆದಿಹೆಯೇನೆ ತನುಮನಧನ ಮಾಂಗಿರೀಶಗೊಪ್ಪಿಪೆಯೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ಪ ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ ತಿಳಿದ್ಹಾಗೆ ನಡೆವಳ ಅ.ಪ. ಉದಯದಲೆದ್ದತಿ ಸಜಮಲಳಾಗಿ ತಾ ಮುದದಿ ಪತಿಗೆ ನಮಿಸದವಳಿಗೆ ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ ಮಾಧವನ ಭಕ್ತಿಲಿ ಸ್ತುತಿಸದವಳಿಗೆ ಪದುಮನಾಭನೇ ಸರ್ವಪರನೆಂದು ಅರಿಯದೆ ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1 ಹರಿದಿನದಲಿ ಉಂಡು ಹರಿಯನ್ನದಲೇ ಊರ ತಿರುಗಿ ಹೊತ್ತು ಕಳೆವಳಿಗೆ ಸರಸದಿ ನರಹರಿ ನಾಮ ಸಂಕೀರ್ತನೇ ಇರುಳು ಜ್ಯಾಗರ ಮಾಡದವಳಿಗೆ ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ ಪತಿ ಹೊರಗ್ಹಾಕ್ವಳ 3 ಗುರು ಹಿರಿಯರ ಅತ್ತೆಮಾವರ ಜರಿದು ತಾ ಹಿರಿಯಳು ಮನಿಗೆ ನಾನೆನುತಿರ್ಪಳು ಪರರ ನಿಂದಿಸಿ ಭೂಸುರರು ಬಂದರೆ ಅನ್ನ ದೊರಕದೆನುತ ಹೇಳಿ ಕಳಹುವಳ ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3 ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ ಪತಿಯ ಸೇವೆ ಮಾಡದಿರುವಳಿಗೆ ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ ಪತಿ ನೋಡ್ವಳಿಗೆ ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4 ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ ಐವರ ಕೂಡ ಧಾರೆಯರೆಸಿಕೊಂಡಾ ಪರಮ ಪಾವನಳಾದ ಭಾರತೀ ದೇವೇರ ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5 ವನವಾಸದಲಿ ಪಾಂಡು ತನಯರ ಕೂಡ ತಾ ಧನ ಸುಖ ಬೇಡದೆÀ ಪೋದವಳು ಘನ ಹಸಿವುತೃಷೆಯಿಂದ ಅನ್ನ ಬೇಡಿದ ದುರ್ವಾಸಾದಿಗಳನು ಆದರಿಸಿದವಳಾ ಆಜನನಿ ದೃಪವ ನಂದನಿಯ ಕೃತ್ಯಗಳನ್ನು ನೆನೆದು ತನ್ನಯ ಮನವನ್ನು ತೊಳೆಯದವಳು 6 ಮರುತಂತರ್ಗತ ಸ್ವಾಮಿ ಸಲಹೆನ್ನದೇ ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ ಕರ್ಮ ಮಾಡ್ವಳಿಗೆ ಪರಮ ಪಾವನನಾದ ಹನುಮೇಶವಿಠಲನ ನೆರೆ ನಂಬದಲೇ ದೇಹ ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7
--------------
ಹನುಮೇಶವಿಠಲ
ಶ್ರೀ ಸೀತಾಪತಿದಾಸವರ್ಯ ಜೀ-ವೇಶ ನಿಜ ವಿಲಾಸ ಪ.ಭಾಸುರಮಣಿಗಣಭೂಷಣ ದಿತಿಸುತ-ಭೀಷಣ ಸಜ್ಜನಪೋಷಣ ಕಪಿವರ ಅ.ಪ.ಕಂಜಸಖೋಪಮ ಕಮಲಾನನಾನತಸಂಜೀವನ ಹನುಮಾಮಂಜುಳ ವಜ್ರಶರೀರ ವೀರ ಹರಿ-ರಂಜನಾಂಜನಾಸುತ ಸದ್ಗುಣಯುತ 1ನಿಗಮಾಗಮ ಪಾರಂಗತ ರಾಮಾ-ನುಗ ಪಾವನರೂಪಭಗವಜ್ಜನ ಭಾಗ್ಯೋದಯಭಾರತಿದೃಗುಚಕೋರಚಂದ್ರಮ ತ್ರಿಗುಣಾತ್ಮಕ 2ಅಜಪದನಿಯತ ಭೂಭುಜಪತಿ ಪಾಂಡುತ-ನುಜ ಸುರವ್ರಜವಿನುತಕುಜನಧ್ವಾಂತನೀರಜಸಖ ಗರುಡ-ಧ್ವಜಶರಣ್ಯ ಶಾಶ್ವತ ತ್ರಿಜಗನ್ಮಯ 3ವರಕಾರ್ಕಳಪುರಗುರುವೆಂಕಟಪತಿಚರಣಾಗ್ರೇ ವಿರಾಜಹರಿಲಕ್ಷ್ಮೀನಾರಾಯಣ ನಿಜಪದಶರಣಭರಣಯುತ ಕರುಣಾಕರ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ