ಒಟ್ಟು 34 ಕಡೆಗಳಲ್ಲಿ , 16 ದಾಸರು , 34 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವೆ ಶ್ರೀನಾರಾಯಣನನು ಸ್ಮರಿಸದೆ ಮಾಯಾಪಾಶಕೆ ಸಿಲುಕುವರೇ ಪ. ವನಜನಾಭನ ಪದ ವನರುಹಯುಗ್ಮವ ಅನುದಿನ ನೆನೆಯದೆ ಒಣಗುವರೇ ವನಿತಾಲಂಪಟನಾಗುತ ಸಂತತ ಮನಸಿಜಯಂತ್ರಕೆ ಮನಮರಗುವರೇ ಅ.ಪ. ತುಂಡು ಸೂಳೆಯರ ದುಂಡುಕುಚವ ಪಿಡಿದು ಗಂಡಸುತನವನು ಕೆಡಿಸುವರೆ ದಂಡಧರನ ಬಾಧೆ ಹೆಂಡತಿಯನು ಪಡ ಕೊಂಡು ವೇದನೆಯನು ತಾಳುವರೆ ಕಂಡು ಕಂಡು ನೀ ಗುಂಡಿಗೆ ಬಾಳ್ವರೆ ಹೆಂಡಿರ ಸುಖರಸ ಉಂಡರು ಸಾಲದೆ 1 ಬಂದ ಸುಖಕೆ ನೀ ಮುಂದುವರೆಯುತಲಿ ಮಂದ ಅಸಮ ದುಃಖ ತಾಳುವರೇ ಬಂದುದೆನ್ನ ಕಣ್ಣ ಮುಂದೆಯನುಭವಿಪೆ ಎಂದಿಗೆನ್ನಾಜ್ಞೆಯು ಬಂದಪುದೋ ನಿಜ 2 ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ ಪಟ್ಟ ಭಾಗ್ಯವನೆಲ್ಲ ತೋರೊ ನೀನು ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ- ನಷ್ಟು ಸುಖವನ್ನು ಕಾಣೆನಿನ್ನು ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3 ವಿಷಯ ಪಳಂಚಿತನಾಗುವ ಸಂತತ ಪಂಚಡಕೀರನು ಆಗುವರೇ ಕರ್ಮ ಸಾಲದೆಂದೆನುತಲಿ ಸಂಚಿತ ಪಾಪವ ಸಂಗ್ರಹಿಸುವರೇ ಚಂಚಲಾಕ್ಷಿಯರ ಚಪಲದ ಮಾತನು ವಂಚನೆ ಎಂಬುದು ತಿಳಿಯದೆ ಇರುವರೆ 4 ಸಾರಿಸಾರಿ ಕೈ ಮುಗಿದು ಬೇಡುವೆನು ವಿ- ಕಾರ ದುರ್ಬುದ್ಧಿಯ ಬಿಡು ಎಂದು ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ ನಾರಾಯಣ ನೀನೇ ಗತಿಯೆಂದು ಪಾರಮಾರ್ಥಿಕ ವಿಚಾರವ ಮಾಡುತ ಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮರೆಯದೆ ಶ್ರೀಹರಿಯಮನದಲಿ ಸ್ಮರಿಸೊ ಗುರುಹಿರಿಯರ ಅನುಗ್ರಹವನು ಗಳಿಸೊ ಪ ಇಂದಿರೆ ರಮಣನ ಅನುದಿನ ಮಂದರ ಧರನಾ 1 ಬಗೆ ಬಗೆಯಲಿ ಶ್ರೀ ಭಗವಂತನ ಪಾದ ಯುಗವನು ನೆರೆನಂಬಿಯಿ-----ಎಂದೆಂದೂ 2 ಪರಿಪರಿ ನವವಿಧ ಭಕ್ತಿಯು ಸಾಧಿಸಿ ಪರ ಬ್ರಹ್ಮ ಪರಮಾನಂದನ 3 ಶರಧಿಶಯನನ ಶಾಂತ ನಿಧಾನನ ಅರವಿಂದ ನಯನನ ಹರಿಗೋವಿಂದನಾ 4 ದಿನಕರ ಕೋಟಿತೇಜ ವಿಲಾಸನ ಮಾನವ ರಕ್ಷಕನಾ 5 ಚಿತ್ತವು ಚಲಿಸದೆ ಚಿನ್ಮಯ ರೂಪನ ನಿತ್ಯಾನಂದನ ನಿಗಮಗೋಚರನಾ 6 ಭಾವಜನಯ್ಯನ ----- ಭಾವನಕೊಲಿದ ಜನ ಹೃದಯದಿ ಕುಣಿದಾಡುವ ನಾ7 ಜ್ಞಾನಾನಂದನ ಜ್ಞಾನಿಗಳರಸನ ಧೇನು ಪಾಲಕ ಜಗದೀಶನ ಮುಕುಂದನ 8 ಮಾಧವ ಮುನಿ ಗೋವಂದ್ಯನ ಶರಣರ ಪೊರೆವಾ ಬಿರುದಿರುವ ದೇವನಾ 9 ಇನಕುಲ ಭೂಷಣನ ವಿಶ್ವಲೋಕೇಶನ ದನುಜಾಂತಕ ಶ್ರೀ ದಾಮೋದರನಾ 10 ಪಾಂಡವ ಪಕ್ಷಕನ ಪರಮಾಣು ರೂಪ ಬ್ರಹ್ಮಾಂಡನಾಯಕ ಕೋದಂಡಧರನ ಇಂದೂ 11 ವಾರಿಧಿ ಬಂಧನ ವೈದೇಹಿ ತಂದನ ಮೀರಿದ ರಕ್ಕಸರ ಮದಿಸಿದವನಾ 12 ಪನ್ನಗ ಶಯನ `ಹೆನ್ನ ವಿಠ್ಠಲನ ' ಉನ್ನತ ಚರಿತನ ಇನ್ನು ಹರುಷದಲಿ 13
--------------
ಹೆನ್ನೆರಂಗದಾಸರು
ಯಾರಿಗೆ ಹೋಲುವೆ ನಿನ್ನ ಯಾರಲ್ಲಿ ಸಲ್ಲಾಪಿಸಲಿ ಮಾರನೋ ಮದನನ ಪಡೆದ ಕೇಶವನೋ ಪ ಸಾರಸವದನನು ವಾರಿಧಿಶಯನನು ಅ.ಪ ಆಹವ ಭೀಮನೋ | ಸಾಹಸ ಮಲ್ಲನೋ ಬಹು ಸುದೀರ್ಘನು ಮೋಹಮಂದಿರನು ಮಹಿಜೆಯರಸನೋ ಅಹಿಯ ಶಯನನೋ ಬಹುಗುಣಾನ್ವಿತ ವೆಂಕಟೇಶನೋ ಮಹಿತ ಮಹಿಮನು ಸಾಹಸ ಶೀಲನು ಪಾಹಿರಘು ಕುಲಪತಿ ಚೆನ್ನ ಚೆಲುವನು 1 ಉರಗ ಭೂಷಣನೋ | ಸರಸಿಜ ಭವನೋ ಧರಣಿಯ ಅಳೆದ ಪರಮಪುರುಷನೋ ಗರುಡಗಮನನೋ | ಕರುಣ ಭಜಿಪನೋ ನರಪಸುತ ಕೋದಂಡಧರನೋ ಮೆರೆವ ಕಾಂಚೀಪುರದ ವರದನೋ ನಿರುತ ವಂದಿತ ಮಾಂಗಿರೀಶನೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮಂ ಭಜರೇ | ಭಜಮಾನಸ ರಘು ಪ ಭುವನಾಭಿರಾಮಂ ಗುಣರತ್ನಧಾಮಂ ಅ.ಪ ರಾಮೇತಿ ದೀನಪಾಲ ಲಲಾಮೇತಿ ಶುಭಕರ ನಾಮಂ | ಕೋದಂಡಧರರಿಪು ದೋರ್ದಂಡ ಸದ್ಗುಣಂ | ತಾರಕನಾಮ ರಾಮಂ ಧಾಮಂ ಜಾನಕಿರಾಮಂ | ಸನ್ನುತ ರಾಮಂ | ನೀಲಾಂಬುಜಾತರಾಮಂ ಪಟ್ಟಾಭಿರಾಮಂ | ಶೃಂಗಾರಪೂರ್ಣ ಶುಭಾಂಗ ಮಾಂಗಿರಿವಾಸ ರಂಗಂ | ಸತ್ಕರುಣಾಂತರಂಗಂ ದಾನವಕುಲ ಭಂಗಂ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಮ ರಮಣಾರಘು ಪ ಸುಂದರವದನಾಸುರಮನಿ ಪಾಲಕ ಮಾಧವ ಕೃಷ್ಣ ಹರಿ 1 ಕುಂಡಲೀಶ ಶಯನ ಕೋದಂಡಧರ ಘನ ಮಂಡಲಾಧಿಪತಿ ಮಹಾಮಹಿಮ ರಘುಪತಿ 2 ಶ್ರೀ ಜಗನ್ನಾಯ್ಕನೆ ಶ್ರೀತಜನಪೋಷಕ ರಾಜಾಧಿರಾಜ ಮತ್ರ್ಯರಾಜನೆನಿಸಿಹ 3 ವೆಂಕಟರಮಣ ಅಕಳಂಕ ಮಹಿಮ ಪಂಕಜೋದ್ಭವನಯ್ಯಾ ಪರಮಭಕ್ತರ ಪ್ರಿಯ 4 'ಹೆನ್ನೆರಂಗ ' ಬಿಲವಾಸ ಹೆನ್ನ ಚಿನ್ಮಯ ರೂಪ ಶ್ರೀ ಚಿತ್ತಜನಯ್ಯ ಭೂಪ 5
--------------
ಹೆನ್ನೆರಂಗದಾಸರು
ರಾಮಾ ರಕ್ಷಿಸೋ ಎನ್ನ ಪ್ರೇಮಾ ಸಂಪೂರ್ಣಕಾಮಾ ಪ ಸ್ವಾಮಿ ಜಗನ್ನಾಥ ಸರ್ವಾಂತರ್ಯಾಮಿ ರಾಮಿಯ ರಮಣ ಶ್ರೀ ರಘುಕುಲಭೂಷಣ ಅ.ಪ ಅಂಗಜ ಜನಕಯ್ಯ ಮೋಹನಾಂಗ ಜಗದಂತರಂಗ ಶೃಂಗಾರ ಪರಿಮಳ ಭೂಷಿತಾಂಗಾ ಒಪ್ಪಿರುವೊ ರಂಗಾ ಗಂಗೆಯ ಜನಕ ತುರಂಗನೇರಿದಾ ಮಂಗಳ ಮಹಿಮ ಕುರಂಗಲೋಚನಾ ಅಂಗನೆಯರೆಡಬಲ ಸಂಗಡದಲಿ ಮೋಹಂಗಳ ಮಾಡುತ ಶೃಂಗಾರದಲಿ ರಂಗ ಮಂಟಪ ಮಧ್ಯರಂಗಲಿರುವ ರಾಮಂಗಾರ --- ಹೆನ್ನರಂಗನಾಯಕ 1 ಚಂದದಿಂದಾದಿ ವೇಣು -----ನಂದದಿ ಮೋದ ಮಂದಾರಧರ ಮಾಧವನಾದ ಗೋವಿಂದ ನಿ ನೋಡಾ ಸಿಂಧು ಶಯನ ಮುನಿ ವಂದಿತ ಚರಣಾರವಿಂದ ಭಜಿಸುವ ಕಂದನ ತೋರದಯ ದಿಂದ ಪಾಲಿಸುವ ತಂದೆಯು ನೀನೆ ಎಂದು ತಿಳಿದು ಈ ಪಾದ ಹೊಂದಿ ಭಜಿಸುವೆನು 2 ಚಂಡಶಾಸನ ಬಿರುದಿನಾ ದೇವಾದಿದೇವ ಮಂಡಲಾಧಿಪ ಮಹಾನುಭಾವ ಭಕ್ತರ ಕಾಯುವ ಪುಂಡರೀಕ ವರದಂಡ-----ಕುಂಡಲಿಶಯನ ಕೋ ದಂಡಧರ ಬಲೋದ್ದಂಡ ವಾನರದಂಡನೆ ಕೂಡಿಸಿ ಪುಂಡ ರಕ್ಕಸರ ಹಿಂಡನೆ ಹಿಡಿದು ಮಂಡಿಗಳನು ಬಿಡದೆ ಚಂಡಿಸಿದಂಥಾ ಗಂಡರಗಂಡ `ಶ್ರೀ ಹೆನ್ನೆವಿಠ್ಠಲಾ ' 3
--------------
ಹೆನ್ನೆರಂಗದಾಸರು
ರುದ್ರದೇವರು ಸಾಂಬ ಸದಾಶಿವ | ಸಾಂಬ ಶಿವ ಪ ಶಂಭೋಶಂಕರ | ಶಶಾಂಕಶೇಖರ | ಸಾಂಬ ಶಿವ ಅ. ಪ. ಗಂಗಾಧರ ವರ | ಅಂಗಜ ಮದಹರ | ಸಾಂಬ ಶಿವ || ಸಂಗರಹಿತನೇ ಭು| ಜಗಭೂಷ ವರ | ಸಾಂಬ ಶಿವ 1 ವ್ಯೋಮಕೇಶಭವ | ಭಕ್ತಪರಾಯಣ | ಸಾಂಬ ಶಿವ || ವಾಮದೇವ ಪ್ರಮ | ಥಾಧಿಪ ಶಂಕರ | ಸಾಂಬ ಶಿವ2 ಖಂಡ ಪರಶು ಮಾ | ರ್ತಾಂಡಸಮಪ್ರಭ | ಸಾಂಬ ಶಿವ || ದಂಡಧರ ಹರ | ಮೃತ್ಯುಂಜಯ ಭೂ | ಸಾಂಬ ಶಿವ3 ಜಟಾ ಮಕುಟ ಸುರ | ತಟನೀ ಧರ ವರ | ಸಾಂಬ ಶಿವ || ಸ್ಫಟಿಕಸನ್ನಿಭ | ಖಲತ್ರಿಪುರಾಂತಕ | ಮೃಡ ಸಾಂಬ ಶಿವ 4 ನಕ್ತಂಚರ ಹರ | ಶತ್ರುಭಯಂಕರ | ಸಾಂಬ ಶಿವ || ಭಕ್ತವಶಂಕರ | ಭಜಕಸುಖಂಕರ | ಸಾಂಬ ಶಿವ 5
--------------
ವೆಂಕಟ್‍ರಾವ್
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ಶ್ರೀ ಜಗದೀಶ ಮುರಾರಿ ಶ್ರೀತಜನ ರಕ್ಷಕನೆ ಪೂಜಿತ ಸರ್ವತ್ರ ಪೂರ್ಣ ಪ್ರಭಾವನೆ ಪುರುಷೋತ್ತಮಹರಿಯೆ ಪ ರಾಜಾಧಿರಾಜ ಶ್ರೀ ರಘು ಕುಲೋತ್ತಮ ನೀರಜದಳನಯನಾ ಈ ಜಗತ್ರಯಗಳ ಇಷ್ಟದಿ ಸಲಹುವ ವೆಂಕಟಗಿರಿ ರಮಣ ಭೋಜ ಭಾನುಕೋಟಿತೇಜ ಪ್ರಕಾಶನೆ ಪಾಂಡವ ಪಕ್ಷಕನೆ ಸದ್ಗುಣ ಭೂಷಿತನೆ 1 ಪುಂಡರೀಕವರದ ಪುರಾಣಪುರುಷ ಕೋದಂಡಧರ ಪ್ರಿಯಾ ಅಂಡಜವಾಹನ ಅಖಿಲಲೋಕಕರ್ತ ಆನಂದ ನಿಲಯಾ ಮಾಧವ ಗೋವಿಂದ ಕೃಪೆಯ ಮಾಡುಯೆಂದಾ 2 ಮಹಾನುಭಾವಾ ಗಂಗಾಪಿತ ಶ್ರೀಗೌರಿಪತಿ ಪ್ರಿಯಾ ಕರುಣಾಸಾಗರ ದೇವಾ ಶೃಂಗಾರಾಂಗನೆ ಶ್ರೀ ಲಕುಮಿಯ ಉರಸೂಸುತಲಿರುವಂಥಾ ರಕ್ಷಿಸೊ ಭಗವಂತಾ
--------------
ಹೆನ್ನೆರಂಗದಾಸರು
ಶ್ರೀಹರಿ ಸಂಕೀರ್ತನೆ ಈಶ ಬಂದನೊ ಸರ್ವೇಶ ಬಂದನೊ ಈಶ ಬಂದ ನೋಡಿ ಪಿಕನಾಶಿನೊಳಗೆ ಸುಳಿದಾಡುತ ವಾಸುದೇವನಾದ ಮೂರ್ತಿ ಶ್ರೀಶ ಭಕ್ತ ವಿಲಾಸರಾಮಾ ಪ ಅಂಡಜವಾಹನ ಭೂಮಂಡಲೇಂದ್ರರು ನುತಿಸುವಂಥ ಪುಂಡಲೀಕವರದ ಕೋದಂಡಧರ ದಶರಥ ನಂದನ ಎಸೆವ ಮುತ್ತಿನ ಹಾರ 1 ಎಸೆವ ಮುತ್ತಿನಹಾರ ಕೊರಳಾ ಹಸಿರು ಉಂಗುರಬೆರಳ ತುದಿಬೆರಳಿನಿಂದ ತೋರಿಕರೆವ ಸುರುತಿ ಪಾಲಕನಾದ 2 ಮುಗುಳು ನಗುವು ನಗುತ ನೀನು ಬಗೆ ಬಗೆಯ ಭಾಗ್ಯಗಳಾ ತೋರುತ ಸರರಾತ್ರಿಯ ಒಳಗೆ ಒಳ್ಳೆ ಸೊಗಸುವುಳ್ಳ ರೂಪದಿಂದಾ 3 ತಂದೆ ತಾಯಿ ತಾನೇ ಆಗಿ ಬಂಧು ಬಳಗಾ ಭಾಗ್ಯವಾಗಿ ಹರಿ ಗೋವಿಂದಾ 4 'ಹೊನ್ನವಿಠ್ಠಲ' ರಾಯಾ ಇಂದು ಮುಕುಂದಾ 5
--------------
ಹೆನ್ನೆರಂಗದಾಸರು
ಸರ್ವಮಂಗಳಸಾರ ಜಯ ಜಯ ಭವ್ಯ ಸಚ್ಚಿದಾನಂದ ಜಯ ಜಯ ಶ್ರೀರಾಮ 1 ಬೋಧನೈಕ ಸುಖ ಜಯ ಜಯ ವಾದ ದೂರವರ ಜಯ ಜಯ ಶ್ರೀರಾಮ 2 ನಿತ್ಯ ನಿರಂಜನ ಜಯ ಜಯ ತತ್ತ್ವ ತಾರಕ ಮಂತ್ರ ಜಯ ಜಯ ಶ್ರೀರಾಮ 3 ವಿಶ್ವರೂಪ ಜಯ ಜಯ ವಾಸುದೇವ ಜಯ ಜಯ ಶ್ರೀರಾಮ 4 ಚಂಡಕೋದಂಡಧರ ಜಯ ಜಯ ಚಂಡಕಿರಣ ಕುಲತಿಲಕ ಜಯ ಜಯ ಶ್ರೀರಾಮ 5 ಮುಕ್ತಿದಾಯಕ ರಾಮ ಜಯ ಜಯ ಪಾಲನ ಲೋಲ ಜಯ ಜಯ ಶ್ರೀರಾಮ 6 ಕಾಮಿತ ಫಲದಾತ ಜಯ ಜಯ ಸೋಮವಂಶಜ ದೇವ ಜಯ ಜಯ ಶ್ರೀರಾಮ 7 ಕೂರ್ಮ ವರಾಹ ಮತ್ರ್ಯಸಿಂಹ ವಾಮನ ಜಯ ಜಯ ಶಕ್ತ ಭಾರ್ಗವ ಕಲ್ಕಿ ಜಯ ಜಯ ಶ್ರೀರಾಮ 8 ಮೌನಿಮಂಡಲ ಮಧ್ಯಗ ಜಯ ಜಯ ಧೇನುಪುರಾವನಶೀಲ ಜಯ ಜಯ ಶ್ರೀರಾಮ 9
--------------
ಬೇಟೆರಾಯ ದೀಕ್ಷಿತರು
ಎನ್ನ ಪಾಲಿಸಯ್ಯಾ ಪನ್ನಗಾಭೂಷಣ |ನಿನ್ನ ನಂಬಿದೇನೋ | ನೀಲಕಂಧರನೇ ಪಕಂಡೆ ನಿನ್ನನೀಗ | ರುಂಡಮಾಲಧಾರಿ |ದಂಡಧರನ ಮುರಿದ | ಮಾರ್ಕಂಡೇಯಪಾಲ 1ಮಾರವೈರಿ ನೀನೆ | ಪಾರ್ವತೀಯ ವರನೇಸಾರಿ ನುತಿಪೆ ನಿನ್ನ ತ್ರಿಪುರಾರಿ ದೇವಾ 2ಚಂದ್ರಶೇಖರನೇ | ಗೋವಿಂದನ ಸಖನೆ |ನಂದಿವಾಹನ£É |ಬಂದು ಮುಖವ ತೋರಿ 3
--------------
ಗೋವಿಂದದಾಸ
ಜಯ ಶಂಕರ ಪರಮೇಶ ದಿಗಂಬರಜಯ ಗಿರಿಜೆಯವರ|ಸಾಂಬನಮೋಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಯಕಿಂಕರಪರಿಪಾಲಪರಾತ್ಪರಜಯ ಭವಭಯಹರ ಶಂಭು ನಮೋ1ವಾಸವಸುತ ಫಣಿಭೂಷಣ ನತಜನ-ಕ್ಲೇಶನಾಶ ಜಗದೀಶ ನಮೋ |ಕೇಶವ ಹಿತಭೂತೇಶಜಯತು ಕೈ-ಲಾಸ ವಾಸ ಅಘನಾಶ ನಮೋ2ದಂಡಧರನ ಶಿರಖಂಡನಶಶಿಧರರುಂಡಮಾಲ ಪ್ರಚಂಡ ನಮೋ |ಖಂಡ ಪರಶುಬ್ರಹ್ಮಾಂಡದೊಡೆಯ ಗೋ-ವಿಂದವಿನುತಚಂಡೇಶ ನಮೋ3
--------------
ಗೋವಿಂದದಾಸ
ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿಪಾಲಿಸು ವಾರಿಧಿüಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ಪ.ವೇದೋದ್ಧಾರ ದಯಾಳು ಭೂಧರಧರ ದಯಾಳುಮೇದಿನಿಅಂತರ್ಮಾಲಾದಂಡಶುಭಕುಠಾರಧಾರಿಯೆ ದಯಾಳುಕೋದಂಡಧರ ದಯಾಳುಸ್ವಾದವೇಣುಧರ ದಯಾಳು ಸಮಾಧಿ ವ್ರತಧರ ಧರ್ಮಾಧರ ವಿಶ್ವಾಧರಮಾಧವನಿತ್ಯದÀಯಾಳು1ಪಂಚಜನನವೈರಿವಂಚಕಾಸುರವೈರಿಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿಪಂಚದ್ವಯಾಸ್ಯನವೈರಿಪಂಚಪಾರ್ಥಾರಿತವೈರಿಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆವೈರಿ2ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರಸಿರಿಅಹೋಬಲ ನೃಪಾಗರ ತ್ರಿಜಗನಿವಾಸಸರಯೂತೀರ ನಿವಾಸ ಶರಧಿಮಂದಿರವಾಸಸುರವಿರೋಧಿಸದನಪರಮಶಂಬಲವಾಸ ಪರಸನ್ನವೆಂಕಟವಾಸ3
--------------
ಪ್ರಸನ್ನವೆಂಕಟದಾಸರು
ಪಾಲಿಸೈ ಪರಮೇಶ್ವರ | ಕ-|ಪಾಲ ಲೋಚನ ಶಂಕರಾ ||ನೀಲಕಂಧರಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ 1ದಂಡಧರ ಶಿರಖಂಡನಾ | ಬ್ರ -|ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶುಪ್ರಚಂಡನಾ | ಈಗ |ಕಂಡೆ ನಾ ರುಂಡಮಾಲನಾ 2ಉರಗಕುಂಡಲಧಾರನೇ |ಭವ|ದುರಿತಘೋರವಿಹಾರನೇ ||ಶರಧಿಸಮ ಗಂಭೀರನೇ | ನಿನ -|ಗೆರಗುವೆನು ಪರಮೇಶನೇ 3ದೂತನಾಥ ತ್ರಿಲೋಚನಾ | ಪುರು - |ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು |ಪ್ರೀತಿಯೊಳು ನಂಬಿರ್ದೆನಾ 4ಚಂದ್ರಕೋಟಿ ಪ್ರಕಾಶನೇ | ಪೂ -|ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- |ವಿಂದ ದಾಸನಪೋಷನೇ ||ಪಾಲಿಸೈ| | 5
--------------
ಗೋವಿಂದದಾಸ