ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ
ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ
ಥಳಥಳಿಸುವ ಗುಣ ಹೊಳವು ಸುಳವು ಪಾವನ 1
ದೇವಾಧಿದೇವ ದೇವ ಭುವನತ್ರಯಕೆ ಜೀವ
ಭಾವಿಕರಿಗೆ ಕಾವ ಭವನಾಶಗೈಸುವ 2
ಅಜ ಸುರವರ ಮುನೀಂದ್ರ
ನಿಜಘನಸುಖಮುದ್ರ ರಾಜ ರಾಜರಾಜೇಂದ್ರ 3
ಮುನಿಜನರ ಪ್ರಾಣಪದಕ ಅನುಭವದ ನಿಜಸುಖ
ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ 4
ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ
ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ 5