ಒಟ್ಟು 21 ಕಡೆಗಳಲ್ಲಿ , 14 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುರುಡು ನಿನಗೆ ಥರವೇನೊ ಸ್ವಾಮಿ ಗರುಡವಾಹನ ಸುರಧೇನು ಪ. ಕುರುಡ ಕಾಣದೆ ಕೂಪದಲಿ ಬಿದ್ದರೆತ್ತದೆ ಮೊರಡುತನದಿ ಮುಖ ನೋಡುತ ನಗುವಂಥ ಅ.ಪ. ಜ್ಞಾನಮಾರ್ಗವ ಕಾಣದಿರುವ ದೀನ ಮಾನವನಿಗೆ ಮೋಹಭರವ ತಾನೆ ಕಲ್ಪಿಸಿ ತತ್ವದಿರುವ ಮುಚ್ಚಿ ನಾನಾ ಯೋಗಿಗಳಲ್ಲಿ ತರುವ ಮಾನವು ಸರಿಯೆ ಮಹಾನುಭಾವ ನಿನ್ನ ದೀನ ಬಂಧುತ್ವಕೆ ಹಾನಿ ಬಾರದೆ ಕೃಷ್ಣ 1 ಇಂದ್ರಿಯಾರ್ಥ ಸನ್ನಕರ್ಷವೆಂಬ ಬಂಧನದಲ್ಲಿ ಸಿಕ್ಕಿ ಬೀಳ್ವ ನಾನಾ ತಂದ್ರ ಸಾಗರ ಮುನಿಗಳ ಬಹು ಮಂಜನು ಮಾಯೆಯ ಗೆಲ್ವ ಹೊಂದಿಕೆಯನು ಸುಖ ಸಾಂದ್ರ ನೀನರಿಯೆಯ ಇಂದ್ರಾದಿಗಳನು ಎಂದೆಂದಿಗೂ ಸಲಹುವಿ 2 ಅದರಿಂದ ಸರ್ವಕಾಲದಲಿ ನೀನೆ ಒದಗಿ ಪೊಳೆವುತ್ತ ಮನದಲಿ ಪದಯುಗವಿರಿಸಿ ಶಿರದಲಿ ದಾಸಪದವ ಪಾಲಿಸು ಕರುಣದಲಿ ಭವ ವಂದ್ಯ ವೆಂಕಟಗಿರಿನಾಯಕ ಪದುಮಾಲಯೆ ಕೂಡಿ ಸದನದಿ ನೆಲೆಯಾಗು 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಶೋದೆ ನಿನ್ನ ಮಗಗಿದು ಥರವೇವಸುಧೆಯೊಳಗಿಂಥ ಶಿಶುವಿಲ್ಲವೇ ಪಪೆಟ್ಟಿಗೆಯೊಳುತುಂಬಿರೊಟ್ಟಿಯ ದೇವರು |ಇಟ್ಟನೆ ಕಚ್ಚಿನ ಚಟ್ಟಿಗೆಯೊಳು 1ಸಡಗರದಿಂದ ಬೆಣ್ಣೆ ಗಡಿಗೆ ಕಾಯಲಿಟ್ಟರೆ |ಬಡಧಾನ ಕೇದಿಗೆ ಪಡಿಯೊಳಗೆ2ಆ ಸಣ್ಣ ಕರು ತೊಟ್ಟಿಲ ಹಾಸಿಕೆಯೊಳಗಿಟ್ಟು |ಕೂಸು ಸೋರಿಯೊಳಿಟ್ಟುಘಾಸಿಮಾಳ್ಪ 3ಚಿನ್ನಗುಣಲಿಟ್ಟರೆ ಅನ್ನದೊಳಗಿಟ್ಟನೆ |ಸುಣ್ಣದಕಲ್ಲು ಏನ್ಮಣ್ಣು ಹೇಳಲಿ 4ನಿದ್ರೆಯೊಳಿರೆ ಸೀರೆ ಒದ್ದಲ್ಲಿ ಬೆಣ್ಣೆಯ |ಮುದ್ದೀನಿಡುವನಿದು ಮುದ್ದುಯೇನೆ 5ಬೆಕ್ಕಾನಲ್ಲಿಗೆಹಚ್ಚಿಇಕ್ಕಿಸಿ ಚಪ್ಪಾಳೆ |ಇಕ್ಕಿಸುವನೆಹಿಂಡುಚಿಕ್ಕವರನ್ನಾ 6ನನ್ನ ಪ್ರಾಣೇಶ ವಿಠಲನ್ನಾಟ ಈ ಊರೊಳು |ಘನ್ನವಾಯಿತು ಬಿಡಿಸಿನ್ನು ಮಾತ್ರ 7
--------------
ಪ್ರಾಣೇಶದಾಸರು