ಒಟ್ಟು 20 ಕಡೆಗಳಲ್ಲಿ , 11 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸತತ ಹರಿಯ ನಾಮವನ್ನು ಯತುನದಿಂದ ನುಡಿವ ನರನು ಪ ಅತಿತ್ವರೆಯಲಿ ಸರ್ವಕಾರ್ಯ ಸಿದ್ಧಿಪೊಂದುವ ಅ.ಪ ದುರ್ಗಮಾರ್ಗ ಪಿಡಿದು ಕುರುಕ್ಷೇತ್ರ ಪಯಣವೇಕೆ ಜಿಹ್ವ ಯಗ್ರದಲ್ಲಿ ಹರಿಯನಾಮವಿರುವ ನರನಿಗೆ 1 ಮೂರು ಲೋಕಗಳಲಿ ಇರುವ ಹೇರು ಪುಣ್ಯಲಾಭ ಒಂದು ಸಾರಿ ಹರಿಯನಾಮದಿಂದ ಸಾಧ್ಯವಿರುವುದು 2 ಉಚ್ಚರಿಸಲು ಹರಿ ಎಂದೆರಡು ಅಕ್ಷರಗಳ ನರನು ಕ್ಷಣದಿ ಮೋಕ್ಷ ಪಾಥೇಯವನ್ನು ಸಿದ್ಧಗೊಳಿಸುವ 3 ಹರಿಯನಾಮ ಒಂದೇ ಎನಗೆ ಸರ್ವವಿಧದ ಜೀವನವು ಹರಿಯನಾಮ ಹೊರತು ಕಲಿಯೊಳರಿಯೆ ಗತಿಯನು 4 ಹರಿಯೇ ಗಂಗಾ ಹರಿಯೇ ಗಯಾ ಹರಿಯೇ ಕಾಶಿ ಸೇತು ಪುಷ್ಕರ ಹರಿಯ ನಾಮ ಜಿಹ್ವೆಯಲ್ಲಿ ಇರುವ ನರನಿಗೆ 5 ನೂಕಿ ಕಾಮಕ್ರೋಧಗಳನು ಏಕವಾರ ಹರಿಯೆಂದೆನಲು ನಾಕುವೇದಗಳನು ಓದಲೇಕೆ ಮನುಜನು 6 ಅಶ್ವಮೇಧ ಪುರುಷಮೇಧ ಯಜ್ಞಫಲವು ಲಬ್ಧವಿಹುದು ವಿಶ್ವಾಸದಿ ಹರಿಯನಾಮ ನುಡಿದ ನರನಿಗೆ 7 ಕೋಟಿ ಶತ ಗೋದಾನ ಕನ್ಯಾಭೂಮಿ ದಶಶತಕಗಳ ದಾನ ಸಾಟಿ ಹರಿಯನಾಮ ನುಡಿಯು ಭಕ್ತಜನರಿಗೆ 8 ಸಪ್ತ ಕೋಟಿ ಮಹಾಮಂತ್ರ ಚಿತ್ತ ವಿಭ್ರಮ ಕಾರಕಗಳು ಯುಕ್ತಿಯೊಂದೇ ಹರಿಯನಾಮದಕ್ಷರದ್ವಯ 9 ಮುನ್ನ ವರ ಪ್ರಹ್ಲಾದ ನುಡಿದ ಘನ್ನನಾಮ ಪಠನದಿಂದ ಪ್ರ ಸನ್ನ ಹರಿಯು ತನ್ನ ಪದವನೀವ ಮುದದಲಿ 10
--------------
ವಿದ್ಯಾಪ್ರಸನ್ನತೀರ್ಥರು
ದೂತೆ ಕೇಳ ದ್ರೌಪತಿಯ ಖ್ಯಾತಿ ಕೇಳಿದ ಮನುಜರಿಗೆಪಾತಕದೂರಾಗೊದೆಂಬೋ ಮಾತು ನಿಜವಮ್ಮಪ.ಉಮಾಶಚಿ ಶಾಮಲಾ ಉಷೆ ತಮ್ಮ ಪತಿಗಳ ಬೆರೆದು ರಮಿಸೆಬೊಮ್ಮಕಂಡುಕೋಪಿಸಿ ಶಾಪ ಝಮ್ಮನೆ ಕೊಟ್ಟಾನು1ಪರಮಮದದ ಬಾಲೆಯರಿವರುಪರಪುರುಷನ ಬೆರೆಯಲ್ಯಾ ್ಹಂಗೆನರದೇಹ ಬರಲೆಂದು ಬೊಮ್ಮಗೆ ನಾಲ್ವರು ನುಡಿದರು 2ಚಂದಾಗಿ ನಾಲ್ವರ ದೇಹ ಒಂದೇ ಮಾಡಿ ತೋರೆ ಬೊಮ್ಮಗಬಂದವು ಮೂರು ನರದೇಹಗಳ ಲೊಂದಾಗಿರಲೆಂದು 3ತಪ್ಪು ನಮ್ಮದೆಂದು ಶಾಪ ಒಪ್ಪಿಕೊಂಡು ನಾಲ್ವರುಜಪಿಸಿ ಸಾವಿರ ವರುಷ ಗೌಪ್ಯದಿ ಭಾರತಿಯ 4ಬಂದು ಮೊರೆಯ ಪೊಕ್ಕವರ ಚಂದಾಗಿ ದೇಹದಲ್ಲಿಟ್ಟುಅನಂದದಿಂದ ವಿಪ್ರಕನ್ಯೆ ಎಂದು ಜನಿಸಿದಳು 5ಎಲ್ಲರಕರ್ಮಒಂದಾಗಿ ಎಲ್ಲೆಲ್ಲೆ ಭಿನ್ನ ತೋರದ್ಹಾಂಗೆಫುಲ್ಲನಾಭನ ದಯವ ಪಡೆದಳು ಅಲ್ಲೆ ಆ ಬಾಲೆ 6ಮುದ್ಗಲ ನೆಂತೆಂಬೊ ಋಷಿಯು ಬಿದ್ದು ನಕ್ಕ ಬ್ರಹ್ಮನ ಕಂಡುಮುದ್ದು ಮಗಳ ರಮಿಸಿದಾತಗೆ ಬುದ್ಧಿಯಿಲ್ಲವೆಂದು 7ತ್ವರೆಯಿಂದಬೊಮ್ಮಮುನಿಗೆ ಬೆರಿಯೆ ಭಾರತಿಯ ಕಂಡುಕರವಮುಗಿದು ಎರಗಿ ಮುನಿಯು ಮೊರೆಯ ಹೊಕ್ಕಾನು8ಮಾರುತನ ದೇಹದಲ್ಲೆ ಭಾರತಿಯು ರಮಿಸುವಾಗಹಾರಿತಯ್ಯ ಸ್ಮøತಿಯು ಸುಖವು ತೋರದು ನಮಗಿನ್ನು 9ಮಂದಗಮನೆಯರಿಂದಭಾರತಿಇಂದ್ರ ಸೇನಳಾಗಿ ಜನಿಸೆಬಂದ ಮರುತ ದೇಹದ ಮುನಿಯು ಚಂದದಿ ಮದುವ್ಯಾದ 10ಮರುತ ಅಕೆÉಯಿಂದ ರಮಿಸ ಮಾರುತದೇಹದ ಮುನಿಯು ಏನುಗುರುತು ಇಲ್ಲಧಾಂಗೆ ಆತ ಇರುತಲಿದ್ದನು 11ಬಾಲೆಯ ಸಂತೋಷ ಪಡಿಸಿ ಮೂಲರೂಪಕಂಡುವಾಯುಮ್ಯಾಲ ವನಕೆ ನಡೆದ ಮುನಿಯು ಆ ಕಾಲದಲೆಚ್ಚತ್ತು12ಇಂದ್ರಸೇನ ಬಂದು ಆಗ ಇಂದಿರೇಶನದಯವ ಪಡೆಯೆನಂದಿವಾಹನ ನಮ್ಮ ಪತಿಯ ವಂದಿಸೆಂದಾರು 13ಪತಿಯ ಬಯಸಿದ ಬಾಲೆಯರಿಗೆ ಚತುರ್ವಾಹ ನುಡಿದನು ಶಿವನುಅತಿಶಯ ರೋದನವ ಮಾಡೆ ಮಿತಿ ಇಲ್ಲದಲೆ ಅಂಜಿ 14ಮಂದಗಮನೆಯ ಧ್ವನಿಯಕೇಳಿ ಬಂದ ಇಂದ್ರ ಬಹಳದಯದಿಬಂದಿತೆನಗೆ ಇಂಥಕ್ಲೇಶಎಂದು ನುಡಿದಳು15ಬಂದು ವರವ ಬೇಡಿ ಪತಿಗಳ ಹೊಂದಿರೆಂದು ನಾಲ್ಕುಬಾರಿಬಂದಿತೆಮಗೆ ಇಂಥಕ್ಲೇಶಎಂದು ನುಡಿದಳು16ಇಂಥ ಅನ್ಯಾಯ ಯಾಕೆಂದು ನಿಂತ ಒಟುಗೆ ನುಡಿದ ಇಂದ್ರಭ್ರಾಂತ ನರನ ನಿಂದೆ ಶಚಿಯ ಕಾಂತೆಗೆ ಶಿವನು 17ನಾನು ಸೃಷ್ಟಿ ಮಾಡಿದವನು ನೀನು ಏನು ನುಡಿದ ಶಿವನುಮಾನವನಾಗೊ ಬೊಮ್ಮಗ ತಾನು ಆತಗೆ 18ಉಮಾ ಮೊದಲಾದವರಿಗೆಲ್ಲ ತಮ್ಮ ಪತಿಗಳ ಹೊಂದಿರೆಂದಉಮಾ ನಿಮ್ಮ ಬೆರಿಯ ಬ್ಯಾಡ ಸುಮ್ಮನೆ ಹೋಗೆಂದ 19ಎತ್ತು ಗಿರಿಯ ಕೆಳಗ ಇದ್ದ ಮತ್ತÀ ನಾಲ್ವರ ನೋಡೆಸತ್ತ ಎಂದು ತಿಳಿಯೋ ನಿನ್ನ ಚಿತ್ತಕತಾ ಎಂದು 20ಕೇಳಿದ ಬೊಮ್ಮನ ನುಡಿಯು ತಾಳಿದ ಬಾಲಿಯರು ಬೆರೆದುಬಹಳ ಪ್ರೇಮದಿಂದಭಾರತಿಇಳಿದಳು ಬಂದು21ರಾಮೇಶನಕ್ಲುಪ್ತತಿಳಿದು ಭೀಮಸೇನನಾದ ವಾಯುಕಾಮಿನಿಯರ ಸಹಿತ ದ್ರೌಪತಿ ಪ್ರೇಮದಿ ಜನಿಸಿದಳು 22
--------------
ಗಲಗಲಿಅವ್ವನವರು
ನಿಂದ್ಯನಾಡಲಿಕ್ಕೆ ನೀನು ಬಂದೆಯೇನಯ್ಯ ಕೃಷ್ಣವಂದಿಸಿ ಭಕ್ತರು ಕರೆದರೂ ನೀನು ಹಿಂದಕ್ಕೆ ಹೋಗುವಿ ಪ.ಅಂದು ಅಹÀಲ್ಯಾದೇವಿ ಬಿಟ್ಟು ಒಂದೆರಡು ದಿವಸÀ ಕೃಷ್ಣಬಂದವನಲ್ಲೋ ತ್ವರೆಯಛಂದಾಗಿ ಹೇಳಯ್ಯ ನಮಗೆ 1ಒಂದಾರು ತಿಂಗಳದಿವಸ ಕಂದ ದಣಿಯೆ ಕರುಣಿಸಬಾರದೆಬಂದದ್ದೇನು ಇಂಥ ತ್ವರೆಯಚಂದಾಗಿ ಹೇಳಯ್ಯ ನಮಗೆ 2ಹಣ್ಣು ಹಸಿರು ಎಲೆ ತಿಂದು ಸಣ್ಣ ಮಾಡಿ ಶರೀರವನುಬಣ್ಣಿಸಿ ಭಕ್ತರು ಕರೆದರೆನೀನು ಕಣ್ಣಿಲೆ ನೋಡೆಲೋಅವರ3ಆನೆ ಜನ್ಮ ಬಂದು ರಾಯ ನಾನಾ ದುಃಖ ಬಡಲು ತಾನುನೀನು ಮುಂದೆ ನೋಡಿದೆ ಸಾವಿರ ವರುಷ ಇನ್ನೇನುದಯವಯ್ಯ ಅವನಿಗಿನ್ನೇನು ದಯವಯ್ಯ 4ತಂದೆ ರಾಮೇಶನ ಮನೆಗೆ ಬಂದಿದ್ದರೆ ಬಹಳ ದಯವುಒಂದು ನೆಗಳಿ ಸಾವಿರ ವರುಷಹಿಂದಕ್ಕೆ ದಣಿದೆಲ್ಲೊ ಕೃಷ್ಣ 5
--------------
ಗಲಗಲಿಅವ್ವನವರು