ಯೋಗಿ ವಲ್ಲಭನ ಅನುರಾಗವನು ಪಡೆದವಗೆ
ಲಾಗವೆಲ್ಲವು ದೊಡ್ಡ ಯೋಗವಾಗುವುದು ಪ
ಹೋಗಿ ಗಂಗೆಯ ತೀರದಲಿ ಬಾವಿ ತೋಡಿದರೂ
ಬೇಗ ಸಿಗುವುದು ದಿವÀ್ಯ ಬಲಮುರಿಯ ಶಂಖವು ಅ.ಪ
ಮಾಧವನ ಪರಮ ಕರುಣವ ಪಡೆದ ಮನುಜನಿಗೆ
ಹೋದ ಕಡೆಗಳಲಿ ದೊರೆಕುವುದಾದರೆ
ಮೂದಲಿಸುವರ ಮನವು ಕಾದ ಬೆಣ್ಣೆಯು ಕರಗಿ
ಹೋದ ತೆರದಲಿ ಕ್ಷಣದಿ ಸಾಧುವಾಗುವುದು 1
ವೇದಾಂತ ರಾಜ್ಯದಲಿ ಜ್ಞಾನಭಕುತಿಗಳಿಂದ
ಮೋದ ಪಡಿಸುವನು
ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ
ಸಾಧಿಸುವ ಬೇಧಿಸುವ ವಿಘ್ನರಾಶಿಗಳನ್ನು 2
ಕುರುಡ ನೋಡುವನೆಲ್ಲ ಕಿವುಡ ಕೇಳುವನೆಲ್ಲ
ಗುರುವರ ಪ್ರಸನ್ನ ನೀ ಮರುಕ ತೋರಿದರೆ
ಕರಡಿ ಕೈ ಗೊಂಬೆಯಾಗುವುದು ಕೈಗೊಂಬೆಯು
ತ್ವರಿತದಲಿ ಕಲ್ಪತರುವಾಗಿ ಕೊಡುವುದು ಫಲವ 3