ಒಟ್ಟು 23 ಕಡೆಗಳಲ್ಲಿ , 11 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ | ಶೋಭಾನವೆನ್ನಿ ಶುಭವೆನ್ನಿ ಪ ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು | ಭರದಿಂದ ಇಳಿದು ಸತ್ಯಲೋಕ || ಭರದಿಂದ ಇಳಿದು ಸತ್ಯಲೋಕಕೆ ಬಂದ | ವಿರಜೆಗಾರುತಿಯ ಬೆಳಗಿರೇ 1 ಸರಸಿಜಾಸನ ನಮ್ಮ ಹರಿಪಾದ ತೊಳಿಯಲು | ಸರಸ ಸದ್ಗುಣ ಸುರಲೋಕ | ಸರಸ ಸದ್ಗುಣದಿ ಸುರಲೋಕಕೈದಿದಾ | ಸ್ವರ್ಣೆಗಾರುತಿಯ ಬೆಳಗಿರೇ 2 ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು | ಚಂದದಿಂದಲಿ ಮೇರುಗಿರಿಗೆ | ಚಂದದಿಂದಲಿ ಮೇರುಗಿರಿಗೆ ಬಂದಾ | ಸಿಂಧುವಿಗಾರುತಿಯ ಬೆಳಗಿರೇ 3 ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು | ಚತುರ್ಭಾಗವಾಗಿ ಕರೆಸಿದ | ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ | ವತಿಗಾರುತಿಯ ಬೆಳಗಿರೇ4 ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು | ಚಂದ್ರ ಯಮ ದಿಕ್ಕಿಗೆ ಭದ್ರದೇವಿ | ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ | ನಂದಿನಿಗಾರುತಿಯ ಬೆಳಗಿರೇ 5 ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ | ಹಿಂಗದೆ ಪುಟಿದು ವಾರಿನಿಧಿಯ | ಹಿಂಗದೆ ಪುಟಿದು ವಾರಿನಿಧಿಯ ನೆರದ | ಗಂಗೆಗಾರುತಿಯ ಬೆಳಗಿರೇ 6 ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು | ಪರಿದಂಬುಧಿಯ ಕೂಡಿ ಮೆರದು | ಪರಿದಂಬುಧಿಯ ಕೂಡಿ ಮೆರದಾ | ತ್ರಿದಶೇಶ್ವರಿಗಾರುತಿ ಬೆಳಗಿರೇ7 ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ | ವನಧಿ | ವನಧಿ ಕೂಡಿದಾ | ಸುಮತಿಗಾರುತಿಯ ಬೆಳಗಿರೇ 8 ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ | ಮೀರಿ ಹಿಮಗಿರಿಗೆ ಹಾರಿ ಬದರಿಗೆ | ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ | ನಾರಿಗಾರುತಿಯ ಬೆಳಗಿರೇ 9 ಕ್ಷಿತಿಪ ಭಗೀರಥನಂದು ತಪವ ಒಲಿದು| ಅತಿಶಯವಾಗಿ ಧರೆಗಿಳಿದು | ಅತಿಶಯವಾಗಿ ಧರೆಗಳಿದು ಬಂದಾ | ಭಾಗೀರಥಿಗಾರುತಿಯ ಬೆಳಗಿರೇ10 ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ | ಜನನಿ ಜಾನ್ಹವಿ ಎನಿಸಿದಾ| ಜನನಿ ಜಾನ್ಹವಿ ಎನಿಸಿದಾ ಮೂಜಗದ | ಜನನಿಗಾರುತಿಯ ಬೆಳಗಿರೇ 11 ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು | ಇಷ್ಟಾರ್ಥ ನಮಗೆ ಕೊಡುವಳು ಸತತ | ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ | ತುಷ್ಟಿಗಾರುತಿಯ ಬೆಳಗಿರೇ 12 ಕ್ರಮದಿಂದ ಬಂದು ನಲಿವುತ ಸರಸ್ವತಿ | ಯಮುನೇರ ನೆರೆದು ತ್ರಿವೇಣಿ | ಯಮುನೇರ ನೆರೆದು ತ್ರಿವೇಣಿ ಎನಿಸಿದಾ | ವಿಮಲೆಗಾರುತಿ ಬೆಳಗಿರೇ13 ತ್ರಿವಿಧ ಜೀವರು ಬರಲು | ಅತ್ಯಂತವಾಗಿ ಅವರವರ | ಅತ್ಯಂತವಾಗಿ ಅವರವರ ಗತಿ ಕೊಡುವ | ಮಿತ್ರೆಗಾರುತಿ ಬೆಳಗಿರೇ 14 ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ | ಸತಿಯಲ್ಲಿ ವೇಣಿಕೊಡಲಾಗಿ | ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ | ಪ್ರತಿಗಾರುತಿ ಬೆಳಗಿರೇ 15 ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು | ಪಡಿಗಾಣೆ | ಪಡಿಗಾಣೆ ಸುಖವೀವ | ಕಲ್ಯಾಣಿಗಾರುತಿಯ ಬೆಳಗಿರೇ 16 ಒಂದು ಜನ್ಮದಲಿ ವೇಣಿಯಿತ್ತವಳಿಗೆ | ಎಂದೆಂದು ಬಿಡದೆ ಐದೆತನವ | ಎಂದೆಂದು ಬಿಡದೆ ಐದೆತನವೀವ ಸುಖ | ಸಾಂದ್ರೆಗಾರುತಿಯ ಬೆಳಗಿರೇ 17 ವಾಚಾಮಗೋಚರೆ ವರುಣನರ್ಧಾಂಗಿನಿ | ಪ್ರಾಚೀನ ಕರ್ಮಾವಳಿ ಹಾರಿ | ಮಕರ | ವಾಚಳಿಗಾರುತಿಯ ಬೆಳಗಿರೇ 18 ಅಂತರ ಬಾಹಿರ ಪಾಪ ಅನೇಕವಾಗಿರೆ | ಸಂತೋಷದಿಂದಲಿ ಭಜಿಸಲು | ಸಂತೋಷದಿಂದಲಿ ಭಜಿಸಲು ಪೊರೆವ ಮಹಾ | ಕಾಂತೆಗಾರುತಿಯ ಬೆಳಗಿರೇ 19 ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು | ಹರಿ ಪರನೆಂದು ಪೊಗಳುವರ | ಹರಿ ಪರನೆಂದು ಪೊಗಳುವರ ಪೊರೆವ | ಕರುಣಿಗಾರುತಿಯ ಬೆಳಗಿರೇ20 ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು | ಬಗೆ ಬಗೆ ಶುಭವ ಕೊಡುವಳು | ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ | ಮಗಳಿಗಾರುತಿಯ ಬೆಳಗಿರೇ ಶೋಭಾನೆ 21
--------------
ವಿಜಯದಾಸ
ಸ್ಮರಿಸಿ ತೀರ್ಥಕ್ಷೇತ್ರ ಸಜ್ಜನರು ನಿತ್ಯದಲಿ ಅರಣೋದಯದಲೆದ್ದು ಭಕ್ತಿಪೂರ್ವಕವಾಗಿ ಕಠಿಣಶ್ರಮದಿ ಮಾಳ್ಪ ಪಾಪರಾಶಿಗಳ ಪರಿಹರಿಸುತ್ತ ಸಂತ್ಯೆಸುವಾ ಪ ಭಾಗೀರಥಿ ಸರಸ್ವತಿ ಯಮುನಾ ವಾರಾಣಾ ಶ್ರೀ ಗೋದ ಫಲ್ಗುಣಿ ಶೋಣಭದ್ರಾ ನರ್ಮ ದಾ ಗಂಡಕಿ ಭಿಮರಥಿ ತುಂಗಭದ್ರೆ ಪ್ರಯಾಗ ತ್ರಿವೇಣಿ ಹೇಮಾ ವೇಗವತಿ ಗಾಯತ್ರೀ ಕಾಶಿಮಣಿಕರ್ಣಿ ಕಾ ಗೌತಮಿ ವಿಯದ್ಗಂಗಾ ಕುಮುದ್ವತೀ ಸಿಂಧು ಪಾಪಾಘನಾಶಿನೀ 1 ಸರಯು ಜಯಮಂಗಳ ಜಮದಗ್ನಿ ವರತಾಮ್ರ ಪರಣಿ ಯೋಗಾನಂದ ಕೃತಮಾಲಕುಹು ಮಹೇ ಧುನಾಶಿ ಗರುಡ ಮದಿರಾ ಮರುದ್ವತಿ ಸ್ವರ್ಣಮುಖರಿ ವರ ಝರತಾಪಿನಿ ಕಾಳಿ ಸೌ ಪರಣಿ ದಕ್ಷಿಣೋತ್ತರಪಿನಾಕಿ ಕಪಿಲ ಶೀತಳ ಕಾನಂದ ಕುರಮುಖಿ ಪ್ರಣವಸಿದ್ಧ 2 ಕಾವೇರಿ ಸಿಧು ಮಾಲತಿ ಗಾರ್ಗಿಣಿ ಹರಿ ಕುಂದ ಕುಂದಿನಿ ಶೈವ ದೇವವತಿ ಪಾತಾಳ ಗಂಗಾ ಪುನಹ ನೀರಾ ಕುಮಾರಧಾರಾ ಸಾವಿತ್ರಿ ದಾನ್ಯಮಾಲಾ ಪುಷ್ಪವತಿ ಲೋಕ ಸಿಂಧು ಧರ್ಮಕು ಭವ ನಾಶಿನಿ ವರದಾ ಮಲಾಪಹಾರಿ 3 ಸ್ವಾಮಿ ಪುಷ್ಕರಣಿ ಮಾನಸ ಚಂದ್ರ ಪುಷ್ಕರಣಿ ಭೂಮಂಡಲದೊಳುತ್ತಮೋತ್ತಮ ತ್ರಿಪುಷ್ಕರಣಿ ನಿತ್ಯ ಪದ್ಮಸರ ಚಂದ್ರಭಾಗತೀರ್ಥ ವಾಮನ ಮಯೂರ ಪಂಪಾಸರೋವರ ಪುಣ್ಯ ಧಾಮ ವ್ಯಾಸ ಸಮುದ್ರ ಧವಳಗಂಗಾ ಸುಸಾ ರೋಮಹರ್ಷತೀರ್ಥ 4 ದ್ವಾರಕಾನಗರ ಸಾಲಗ್ರಾಮ ಟರರ ಬದರಿ ಕೇ ದಾರ ನರನಾರಾಯಣ ಶ್ರೀ ಮಜ್ಜಗನ್ನಾಥ ಶ್ರೀ ಮುಷ್ಣ ಮಂದರ ಮೈನಾಕ ಕೈಲಾಸ ಕಂಚಿ ಶ್ರೀರಂಗನಾಥ ನೈಮಿಷ ದ್ವೈತವನ ಚಂಪ ಕಾರುಣ್ಯ ಕಾಶಿ ಪಂಪಾವಂತಿಕಾ ಪುರಿ ಹರಿದ್ವಾರ ಛಾಯಾಪಿಪ್ಪಲ 5 ಕೇದಾರ ಸಾಗರ ಮಂದಾಕಿನಿ ಕುಸುಮವತಿ ಆದಿಸುಬ್ರಹ್ಮಣ್ಯ ಕೋಟೇಶ್ವರ ನಂದಿ ವೇದಪಾದ ಯಯಾತಿ ಗಿರಿ ಕಾಲಹಸ್ತಿ ಕೌ ಮೋದಕೀ ಪಾಡುರಂಗ ಕ್ಷೇತ್ರ ಶ್ರೀ ವಿಷ್ಣು ಪಾಟಲೀ ಮಂತ್ರಾಲಯ6 ಮಂದರ ಮಲಯ ಕೈವಲ್ಯನಾಥ ಕಾಶೀರ ಜಾಂಬವತಿ ವೃಂ ಶ್ರೀ ವಿರೂಪಾಕ್ಷ ಕುಂದರ ನಂದಪುರಿ ಮಾಯಾ ಶ್ರೀವತ್ಸ ಗಂಧಮಾದನ ಚಿತ್ರಕೂಟ ದ್ವಾ ನರಾಚಲಾಸೌಭದ್ರಿ ಆದಿನಾಥ 7 ಈ ಮಹಿಮಂಡಲದೊಳಿಪ್ಪ ತೀರ್ಥಕ್ಷೇತ್ರ ನಾಮಗಳ ಕಾಲತ್ರಯದಲ್ಲಿ ಸರಿಸುತಿಹ ಧೀಮಂತರಿಗೆ ಸಂಚಿತಾಪ ಪರಿಹರದಾನಂತರದಲಿ ಸೋಮಾರ್ಕರುಳನಕ ಸಕಲ ಭೋಗಗಳ ಸು ತ್ರಾಮಲೊಕದ ಲುಣಿಸಿ ಕರುಣಾಳು ಪ್ರಾತ್ಯಕೆ ಸ್ವ ಅಹುದೆಂದು ಸೂತ ಶೌನಕಣೆ ಪೇಳ್ದ8 ಈ ಭರತ ಖಂಡದೊಳಗುಳ್ಳ ತೀರ್ಥಕ್ಷೇತ್ರ ವೈಭವಾಬ್ಜ ಭವಾಂಡ ಪಾರನದೊಳಗೆ ಹರಿ ಪರಮಕಾರುಣ ದಿಂದ ಸ್ತ್ರೀಬಾಲ ಗೋವಿಪ್ರಮಾತ ಪಿತೃಗಳ ಧನ ಲೋಭದಿಂದಲಿಕೊಂದ ಪಾತಕವ ಪರಿಹರಿಸಿ ಬೇಡಿದಿಷ್ಟಾರ್ಥಗಳನು 9
--------------
ಜಗನ್ನಾಥದಾಸರು
ವಾಸವನೆ ಮಾಡಿರೋ ಕಾಶಿಯಲಿ ಪವಾಸವನೆ ಮಾಡಿ ಕಾಶಿಯಲಿ ವಸುಧೆಯ ಜನರು |ಏಸುಜನ್ಮದ ಪಾಪವನೆ ಕಳೆದು ಯಮಪುರಿಯ ||ಹೇಸಿಕೆಯ ರಾಶಿಗಳ ಒದೆದು ಹೆಚ್ಚಳವಾದ |ಮೀಸಲಳಿಯದಪದವಿಸಾರಿರಯ್ಯಅಪಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |ಜೀವಿಗಳ ಸ್ಥಿತಿಯ ನೋಡುತ ಬರಲು ಮರುಗಿ ಆ |ದೇವಿ ಬಿನ್ನಹ ಮಾಡಲಾಗ ಕರುಣಾಕರನು |ಭಾವಿಸಿದನೀ ಕೃತಿಯನು |ದೇವತ್ರಿಧಾಮನವ ದಿವ್ಯ ವೈಕುಂಠದೊಳು |ಪಾವನಸ್ಥಳವಿದೆಂದೊರೆದ ಧರೆಯೊಳು ಕಾಶಿ |ಶ್ರೀ ವಾರಣಾಸಿ ಪಂಚಕ್ರೋಶಮಿತಿಯಲ್ಲಿಆ ವಿಪುಳ ಮಣಿಕರಣಿಕೆ 1ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ |ನೆಲನಳೆಯ ಈರಡಿಗೆ ಸಾಲದಿರೆ ಬ್ರಹ್ಮಾಂಡ |ಬಲಪದದ ನಖದಿ ಸೀಳಲ್ಕೆ ಬಹಿರಾವರಣ |ಜಲಸುರಿಯೆ ಅಂಗುಟದಲಿ ||ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ |ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ - |ತಲೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ |ದಿಳಿದಿಹಳು ಕಾಶಿಯಲ್ಲಿ 2ಪರಮನಿರ್ಮಲ ಶುಭ್ರತರದ ಭಾಗೀರಥಿಯನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ |ಸ್ವರವರ್ಣದಿಂದಲ್ಲಿ ಗುಪ್ತಗಾಮಿನಿಯಾದ |ಸರಸತಿಯ ಸಂಗಮದಲಿ ||ಮೆರೆಯುವ ತ್ರಿವೇಣಿಯೆನಿಸುವ ತೀರದಲ್ಲಿ ವಟ - |ತರುಛಾಯೆಯಲ್ಲಿಹುದು ದೇವ ಋಷಿ - ಮೌನೀಗಣ 3
--------------
ಪುರಂದರದಾಸರು