ಒಟ್ಟು 18 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರೊ ನೀ ಚಿನ್ನ ದಾರೊಕಾರು ರಾತ್ರಿಯೊಳೆಮ್ಮಾಗಾರಕೆ ಬಂದೆ ಪ.ಇಕ್ಕಿದ ಕದಗಳಿಕ್ಕ್ಯಾವೊ ನಿದ್ರೆಉಕ್ಕೇರಿ ಕಣ್ಣು ಮುಚ್ಚ್ಯಾವೊ ನಮ್ಮತಕ್ಕೈಸಿ ಕೊಂಬುವೆ ನೀ ಕಳ್ಳ ಚಿಕ್ಕಮಕ್ಕಳಾಟವಿದಲ್ಲೊ ಚೆಲುವ 1ಆಗ ಗೋಪಾಲನಂತಿದ್ದೆ ನೀಬೇಗಚಟುಲರೂಪನಾದೆ ಮತ್ತೀಗೆಮ್ಮ ನಲ್ಲರಂತೈದೆ ಕೋಟಿಪೂಗಣೇರ ಹೋಲುತೈದೆ ನೀ ಹೌದೆ 2ಸಪ್ಪಳಿಲ್ಲದೆ ಕೂಡು ಕಾಣೊಕೇಳಿಬಪ್ಪರಿನ್ನಾರಾರು ಕಾಣೊ ಪ್ರಾಣಕಪ್ಪವ ನಿನಗಿತ್ತೆ ಇನ್ನು ಕಾಯೊಶ್ರೀಪ್ರಸನ್ವೆಂಕಟ ಜಾಣ ಪ್ರವೀಣ 3
--------------
ಪ್ರಸನ್ನವೆಂಕಟದಾಸರು
ಬಾಲನ ಮೇಲೆ ನಿನ್ನ ಮೋಹವಮ್ಮ ನಾವುಹೇಳಿದ ಮಾತು ನೀ ಕೇಳೆಯಮ್ಮ ಪ.ಚಿಣ್ಣಗಿಣ್ಣನೆಂಬುವÀ ಬಣ್ಣ ಬ್ಯಾಡೆ ನಮ್ಮಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆಸಣ್ಣಗಿಣ್ಣವನಿವನಾದರೆ ಪರರ ಚೆಲುವಹೆಣ್ಣಿನೊಳಗಾಡುವನೆ ಕುವರ 1ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮರಟ್ಟು ಮಾಡುವ ಜನರೊಳು ನೋಡೆಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮಬಟ್ಟ ಕುಚವಿಡಿವ ದಿಟ್ಟನಮ್ಮ 2ಚಿಕ್ಕಗಿಕ್ಕವನೆಂಬುದುರೂಢಿಕಾಣೆ ನಮ್ಮಪಕ್ಕವ ಬಿಡನು ಬಾಲಕಾರ್ಯವೇನೆಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮಠÀಕ್ಕಿಸೆದ್ದೋಡುವ ಸಿಕ್ಕುವನಲ್ಲ 3ಕಕ್ಕುಲಾತಿತೋರೆ ನಮ್ಮ ಮನೆಗಳ ಪೊಕ್ಕು ಸಣ್ಣಮಕ್ಕಳಾಟವಾಡದೆಮ್ಮ ನೋಡಿ ನಕ್ಕುತಕ್ಕೈಸಿ ಓಡುವ ಮಹಾಮಾಯಗಾರನಮ್ಮದಕ್ಕಲೀಸ ಪತಿವ್ರತಧರ್ಮಜಾರಕೃಷ್ಣ4ಕೂಸುಗೀಸು ಇನ್ನೆನ್ನಬಾರದವಗೆಭವಘಾಸಿಯ ತಪ್ಪಿಸುವ ಎಂದಿಗೆಮಗೆಬೇಸರ ಗೀಸರದೆ ನೆನೆವರ ಒಡೆಯಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ 5
--------------
ಪ್ರಸನ್ನವೆಂಕಟದಾಸರು
ಮರೆಯದಿರೆಲೆ ಮನವಿಲ್ಲಿ - ಯಮಪುರಿಗೆ ಒಯ್ದು ಬಾಧಿಸುತಿಹರಲ್ಲಿ ಪ.ಪರನಾರಿಯರ ಸಂಗವಿಲ್ಲಿ - ಉಕ್ಕುಎರೆದ ಸತಿಯರ ತಕ್ಕೈಸುವರಿಲ್ಲಿಗುರು - ಹಿರಿಯರ ನಿಂದೆಯಿಲ್ಲಿ - ಬಾಯೊಳೆರದು ಸೀಸವ ಕಾಸಿ ಹೊಯಿಸುವರಿಲ್ಲಿ 1ಉಂಡ ಮನೆಯ ಕೊಂಬುದಿಲ್ಲಿ - ಎದೆಗುಂಡಿಗೆಯನು ಸೀಳಿ ಕೊಲುತಿಹರಲ್ಲಿಗಂಡನ ದಣಿಸುವುದಿಲ್ಲಿ - ಯಮಕುಂಡದೊಳಗೆ ಹಾಕಿ ಕುದಿಸುವರಲ್ಲಿ 2ಚಾಡಿಯ ಹೇಳುಸುದಿಲ್ಲಿ - ನುಡಿದಾಡುವ ನಾಲಿಗೆ ಕೇಳುವರಲ್ಲಿಬೇಡಿದರಿಗೆ ಧರ್ಮವಿಲ್ಲಿ - ಇದನೀಡದಿರಲು ಒದ್ದು ನೂಕುವರಲ್ಲಿ 3ಪುಸಿ - ಠಕ್ಕು - ಠವುಳಿಗಳಲ್ಲಿ -ಕಟ್ಟಿಎಸೆದು ಕೊಲ್ಲುವರೊ ನಿನ್ನವರು ಕೇಳಿಲ್ಲಿಅಶನಪ್ರಭದಿಗಳಲ್ಲಿ - ಮಾಡೆಬಿಸಿಯ ಕೆಂಡವ ತಂದು ತಿನಿಸುವರಲ್ಲಿ 4ಸಿರಿಮದದೊಳಗಿಹುದಿಲ್ಲಿ - ಸೊಕ್ಕಮುರಿದು ಹಲ್ಲುಗಳ ಕಳಚುವರಲ್ಲಿಪುರಂದರವಿಠಲನ ಇಲ್ಲಿ - ನೆನೆಯಸ್ಥಿರವಾದ ಮುಕುತಿ ಪಡಕೊಂಬುವರಲ್ಲಿ 5
--------------
ಪುರಂದರದಾಸರು