ಏನು ಮಾಡಿದರೇನು ಹೀನಮಾನವನು
ಧಿನದಯಾಸಿಂಧು ಹರಿ ನೀನೊಲಿಯದಿರಲು ಪ
ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ
ಮೌನ ಮಾಡಿದರೇನು ನಯನಗಳು ಮುಚ್ಚಿ
ದಾನ ಮಾಡಿದರೇನು ಧ್ಯಾನ ಮಾಡಿದರೇನು
ಧ್ಯಾನದಾಯಕ ನಿನ್ನ ದಯವಾಗದಿರಲು 1
ಜಪವ ಮಾಡಿದರೇನು ಅಪರೂಪ ಮಡಿಯುಟ್ಟು
ತಪವ ಮಾಡಿದರೇನು ವಿಪಿನವನು ಸೇರಿ
ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು
ಸುಫಲದಾಯಕ ನಿನ್ನ ಕೃಪೆಯಾಗದಿರಲು 2
ತತ್ವವನು ವಿಂಗಡಿಸಿ ಅರ್ಥಮಾಡಿದರೇನು
ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು
ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು
ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3
ಯೋಗವನು ಕಲಿತು ಬಲುಯೋಗ ಮಾಡಿದರೇನು
ಭಾಗವತವೋದಿ ಬಲು ಯಾಗ ಮಾಡಿದರೇನು
ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು
ನಾಗಶಯನನೆ ನಿನ್ನ ನಿಗ ಬೀಳದಿರಲು 4
ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು
ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ
ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ
ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5