ಶ್ರೀನಿವಾಸನ ಸೇವೆ ಗೈಯುವ ಜಾಣರೆಲ್ಲರು ಬನ್ನಿರೈ ಪ
ಧ್ಯಾನಲಭ್ಯನ ಕಾಣಲಿಚ್ಛಿಪ ಮಾನಿಪರ ಕರತನ್ನಿರೈಅ.ಪ.
ಪರಮಪದ ದೊಳಗಿರದೆ- ವೆಂಕಟಗಿರಿಯೊಳಿದರ್Àನು ಪೂರ್ವದಿ
ಭರದಿ ವಿಪ್ರಗೆ ವರವನಿತ್ತೀ ಗಿರಿಗೆ ಬಂದನು ಪ್ರೇಮದಿ 1
ದೂರವಲ್ಲ ವಿಚಾರಿಸಲು ಹರಿಣಾರಿ ಭೂಧರಮಿಲ್ಲಿಗೆ
ಚಾರುಮೂರ್ತಿಯ ಚರಣಸೇವೆಗೆ ಸಾರುವೆವು ನಾವಲ್ಲಿಗೇ 2
ಚರಣ ಸೇವಕರನ್ನು ಮರೆಯದೆ ಪೊರೆಯು ವನು ಮೋದದಿ
ಪರಮ ಪುಲಿಗಿರಿವಾಸ ವೆಂಕಟ ವರದವಿಠಲನೆಲೋಕದಿ 3