ಒಟ್ಟು 22 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಮಣ ಸರ್ವೇಶ ತ್ವಚ್ಚರ- ಣಾರವಿಂದವ ನಂಬಿರುವನಲಿ ಘೋರ ಭಾವವ ತಾಳ್ದ ಹೂಣನ ದೂರ ಓಡಿಸುವ ಭಾರ ನಿನ್ನದು ಪರಮ ಕರುಣಾ ವಾರುಧಿಯೆ ನೀನಲ್ಲದೆನಗೆ- ಸಾರಥಿ 1 ಸುಗುಣ ಸಜ್ಜನ ಶಿರೋಮಣಿ ಮಗುವು ಪ್ರಹ್ಲಾದನ ಪದಾಂಬುಜ ಯುಗವ ನೆನೆವುದನರಿತು ತತ್ಪಿತನೆಂದು ರೋಷದಲಿ ನೆಗೆದು ಬಂಡೆಯ ಝಳಪಿಸುತ ಬರೆ ಧಗಧಗಿಸಿ ಕಂಬದಲಿ ತೋರುತ ಬಗೆದಿ ದೈತ್ಯನ ಕರುಳ ಜಯ ಜಯ ವಿಜಯಸಾರಥಿ 2 ದೋಷಿ ದೈತ್ಯಾವೇಷದಿಂದಲಿ ವಾಸವಾದಿ ಸಮಸ್ತ ದಿವಿಜರ ಘಾಸಿಗೊಳಿಸಿದ ದಶಶಿರನ ತದ್ವಂಶಜರ ಸಹಿತ ನಾಶಗೈದು ನಿರಾಪರಾಧಿ ವಿ- ಭೀಷಣಗೆ ಸಾಮ್ರಾಜ್ಯವಿತ್ತ ಪ- ರೇಶ ಸೀತಾಕಾಂತ ಜಯ ಜಯ ವಿಜಯಸಾರಥಿ 3 ಪೂತನಾ ಬಕ ಶಕಟ ಧೇನುಕ ಪಾತಕಿ ಶಾರಿಷ್ಠ ಕೇಶಿಕಿ- ರಾತ ಕಂಸಾಂಬಷ್ಟ ಮುಷ್ಟಿಕ ಮಲ್ಲ ಚಾಣೂರ ಕಾತರದ ಶಿಶುಪಾಲ ಮುಖ್ಯರ ಘಾತಿಸಿದ ಗರುಡಧ್ವಜನೆ ಪುರು- ಹೂತ ಸುತನನು ಕಾಯ್ದೆ ಜಯ ಜಯ ವಿಜಯಸಾರಥಿ 4 ಅತ್ಯಧಿಕ ಕೋಪದಲಿ ಪ್ರಜ್ವಲಿ ಕಮಲ ಜೌಸ್ತ್ರವ ನುತ್ತರೆಯ ಗರ್ಭದಲಿ ಬಿಡದೆ ಸುತ್ತಿಕೊಂಡಿರಲು ಸತ್ಯಭಾಮಾಕಾಂತ ಕರುಣದಿ ತೆತ್ತಿಯನು ಕಾಪಾಡಿದಖಿಳೋ- ತ್ಪತ್ತಿರಕ್ಷಣಕಾರಿ ಜಯ ಜಯ ವಿಜಯಸಾರಥಿ 5 ಇರುವೆ ಮೊದಲು ಬ್ರಹ್ಮಾಂತರಾಗಿಹ ಸುರನರಾಸುರ ಮುಖ ಪ್ರಪಂಚ ದೊ- ಳಿರುವೆ ಸರ್ವೇಂದ್ರ್ರಿಯ ನಿಯಾಮಕ ಸರಿವ ಕೃತ್ಯವನು ಅರಿತು ಮಾಡಿಸಿ ನೋಡಿ ನಗುತಿಹ ಪರಮ ಮಂಗಳ ಚರಿತ ನೀ ಯನ- ಗಿರಲು ಭಯವ್ಯಾಕಿನ್ನು ಜಯ ಜಯ ವಿಜಯಸಾರಥಿ 6 ಆದರೀ ತೆರದಿಂದ ನಿನ್ನಯ ಪಾದ ಪಂಕಜಗಳನು ಪೊಗಳಿದ- ರಾದುದೊಂದಾಶ್ಚರ್ಯ ನೋಡಲಿ ಸುಜನರಾದವರು ಮೋದ ಭೋದಿ ದಯಾಬ್ಧಿ ವೆಂಕಟ ಭೂಧರೇಶನೆ ಸತತ ನಮ್ಮನು ಕಾದಿರುವೆ ಕಮಲೇಶ ಜಯ ಜಯ ವಿಜಯಸಾರಥಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಶ ಬ್ರಹ್ಮ ಸದಾಶಿವಾದಿ ಸುರಾರ್ಚಿತ ದಾಶರಥಿ ತವ ದಾಸರೊಳಗಿಟ್ಟು ನೀ ಸಲಹೊ ವಿಷಯಾಶೆಗಳ ಬಿಡಿಸಿ ಪ ಲೋಕನೀಯ ವಿಶೋಕ ಭಕ್ತರ ಶೋಕ ಮೋಹವ ನೀ ಕಳೆದು ಸುಖ ವೇ ಕರುಣಿಸು ಕೃಪಕಟಾಕ್ಷದಿ ಅಕೂತಿತನಯ ವಾಕುಮನ್ನಿಸನೇಕ ಮಹಿಮ ವಿ ವೇಕ ಬುದ್ದಿಯ ನೀ ಕೊಡೆನೆಗೆ ಪಿ ನಾಕಿಸುತ ಪರಲೋಕದಾಯಕ ಲೌಕಿಕವ ಬಿಡಿಸೊ1 ವೈರಿವರ್ಗಗಳಾರು ಇಂದ್ರಿಯ ದ್ವಾರದೊಳು ಪೊಕ್ಕು ಚಾರುಧರ್ಮದ ದಾರಿ ಮನಸಿಗೆ ತೋರ ಗೊಡದಲೆ ನಾರಿ ಧರಣಿ ಧನಾ ಹಾರಯಿಸುತಿದ್ದು ಘೋರಿಸುತಿವೆ ಮುರಾರಿ ತವಚರ ಣಾರವಿಂದವ ತೋರಿ ಮನದಿ ಸಂ ಸಾರ ಶರಧಿಯ ತಾರಿಸನುದಿನ2 ತರಣಿ ನವ ಪೋತ ಕಾಲವ ಭೀತಿ ಬಿಡಿಸು ಪುರು ಹೂತನ ಪ್ರಿಯ ಮಾತುಳಾಂತಕ ಮಾತುಗಳನೆ ಮನ್ನಿಸಿ ಶ್ವೇತವಾಹನ ಸೂತಸುಖಮಯ ವಾತಪಿತ ಜಗನ್ನಾಥವಿಠ್ಠಲ ಪಾತಕಾರಣ್ಯ ವೀತಿಹೋತ್ರ ನಾ ತುತಿಪೆನೆ ನಿನ್ನಾ 3
--------------
ಜಗನ್ನಾಥದಾಸರು
ಸಲಹಿಕೊಂಬವರಿಲ್ಲವೋ ವೆಂಕಟರಾಯ ಗೆಲುವ ಪರಿಯ ಕಾಣೆನು ಪ ಛಲವೇಕೋ ನಿನಗಿಷ್ಟು ಹೊಲಬುದಪ್ಪಿದ ಮೇಲೆ ಫಲವಿತ್ತು ಕರುಣದಿ ಕುಲವೃಕ್ಷವನು ಕಾಯೋ ಅ.ಪ ಅರಳಿಯ ವೃಕ್ಷದೊಳು ಆನೆಯ ತಂದು ಸ್ಥಿರವಾಗಿ ಕಟ್ಟಿದಂತೆ ದುರುಳರು ಬಂದೆನ್ನ ಕೊರಳು ಕೊಯ್ದೀಗ ಪರಿ ಇರವ ಕಾಣುತ ಮುಂದೆ 1 ಮಾಡಿದ ಉಪಕಾರವ ಮರೆತು ಮುಂದೆ ಕೇಡನು ನೆನೆವರಿಗೆ ನೋಡಿದೆ ಯಾತಕೆ ಮಾಡದೆ ಶಿಕ್ಷೆಯ ಆಡಿದೆ ನಿನ್ನೊಳು ಬೇಡ ಇನ್ನವರೊಳು 2 ವಾರಿಧಿ ತೀರದಲಿ ನೆಲ್ಲನು ತಂದು ಹಾರಿಸಿ ಬಿತ್ತಿದಂತೆ ಭವ ಘೋರ ಕಾನನದೊಳು ಸೂರೆವೋದೆನು ನಿನ್ನ ಮಾರಿಹೋದೆನು ಎನ್ನ 3 ಒದಗಿದ ನ್ಯಾಯದಲಿ ಇದಿರು ಬಂದು ಕದನವ ಕಟ್ಟುತಲೆ ಬೆದರುಗೊಳಿಸಿ ಎನ್ನ ಸದನಕ್ಕೆ ಮುನಿವುದ ಅದನೆಲ್ಲ ಚರಣದ ಪದುಮಕ್ಕೆ ಅರುಹುವೆ 4 ನೊಂದೆನು ಬಹಳವಾಗಿ ಈ ಭವದ ಸಿಂಧುವ ದಾಟಿ ಹೋಗಿ ಚಂದದಿ ನಿನ್ನಯ ಚರಣಾರವಿಂದವ ಎಂದಿಗೆ ತೋರ್ಪೆಯೊ ವರಾಹತಿಮ್ಮಪ್ಪ 5
--------------
ವರಹತಿಮ್ಮಪ್ಪ
ಕೆಟ್ಟೆನಲ್ಲೊ ಹರಿಯೆ |ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
--------------
ಪುರಂದರದಾಸರು
ಮನವೆ ಶ್ರೀನಾರಾಯಣನನು ಸ್ಮರಿಸದೆಮಾಯಾಪಾಶಕೆ ಸಿಲುಕುವರೇ ಪ.ವನಜನಾಭನ ಪದ ವನರುಹಯುಗ್ಮವಅನುದಿನನೆನೆಯದೆ ಒಣಗುವರೇವನಿತಾಲಂಪಟನಾಗುತ ಸಂತತಮನಸಿಜಯಂತ್ರಕೆ ಮನಮರಗುವರೇ ಅ.ಪ.ತುಂಡು ಸೂಳೆಯರ ದುಂಡುಕುಚವ ಪಿಡಿದುಗಂಡಸುತನವನು ಕೆಡಿಸುವರೆದಂಡಧರನ ಬಾಧೆ ಹೆಂಡತಿಯನು ಪಡಕೊಂಡು ವೇದನೆಯನು ತಾಳುವರೆಕಂಡು ಕಂಡು ನೀ ಗುಂಡಿಗೆ ಬಾಳ್ವರೆಹೆಂಡಿರ ಸುಖರಸ ಉಂಡರು ಸಾಲದೆ 1ಬಂದ ಸುಖಕೆ ನೀ ಮುಂದುವರೆಯುತಲಿಮಂದಅಸಮ ದುಃಖ ತಾಳುವರೇಬಂದುದೆನ್ನ ಕಣ್ಣ ಮುಂದೆಯನುಭವಿಪೆಎಂದಿಗೆನ್ನಾಜೆÕಯು ಬಂದಪುದೋ ನಿಜ 2ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹಪಟ್ಟ ಭಾಗ್ಯವನೆಲ್ಲ ತೋರೊ ನೀನುಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ-ನಷ್ಟು ಸುಖವನ್ನು ಕಾಣೆನಿನ್ನುಇಷ್ಟಾರ್ಥಗಳೆಲ್ಲ ದೊರೆಕುವುದೈಪರಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3ವಿಷಯ ಪಳಂಚಿತನಾಗುವ ಸಂತತಪಂಚಡಕೀರನು ಆಗುವರೇಮುಂಚೆ ಮಾಡಿದಕರ್ಮಸಾಲದೆಂದೆನುತಲಿಸಂಚಿತಪಾಪವ ಸಂಗ್ರಹಿಸುವರೇಚಂಚಲಾಕ್ಷಿಯರ ಚಪಲದ ಮಾತನುವಂಚನೆ ಎಂಬುದು ತಿಳಿಯದೆ ಇರುವರೆ 4ಸಾರಿಸಾರಿ ಕೈ ಮುಗಿದು ಬೇಡುವೆನು ವಿ-ಕಾರ ದುರ್ಬುದ್ಧಿಯ ಬಿಡು ಎಂದುಭಾರಿ ತಪ್ಪುಗಳ ಕ್ಷಮಿಸಿಕಾವಲಕ್ಷ್ಮೀನಾರಾಯಣ ನೀನೇ ಗತಿಯೆಂದುಪಾರಮಾರ್ಥಿಕ ವಿಚಾರವ ಮಾಡುತಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ರಮಾಧವಾ ನಮಿಸುವೆ ದೇವಾ ಪವಾರಿಜೋದ್ಭವನುತಸಾರಸಗುಣಯುತಸಾರಿ ನುತಿಪೆ ದಯದೋರಿ ಸಲಹು ಹರೀಅ.ಪತೋರುವಾ ಸುಂದರ ಶಾಂತಾಕಾರವಾ ಸ್ಥೂಲಸೂಕ್ಷ್ಮ ಶರೀರವಾ ತಪಯೋಗಿ ಹೃದಯಸುಮಾ ಸಾರವಾ ನೀ ಮೆರೆವಾ ಸಾರಸಾಂಘ್ರಿಯುಗವಾಶಂಕವಾ ಉದಿದತಿ ಭಕ್ತಕಳಂಕವಾ ಮುರಿದತಿದುರುಳರ ಬಿಂಕವಾ ಭಕ್ತಜನರ ಸದೃಶಾಂಕವಾಸೇರುವಾ ಪಂಕಜಾಸನ ಪಿತನೇ ಪಾಲಿಸು ಶಂಕರಗತಿಹಿತನೇ ಭವಭಯ ಬಿಂಕವ ಬಿಡಿಸೈ ಪಂಕಜ-ಕರಯುತ ವೆಂಕಟೇಶ ಸರ್ವಾಂಕಿತ ರೂಪನೆ2ಸುಂದರಾ ವನಮಾಲ ಶೋಭಾ ಕಂದರಾಮುಖಪದ್ಮಾಕಾರ ಚಂದಿರಾ ಸದ್ಧರ್ಮಶಾಸ್ತ್ರಸ್ಮøತಿಮಂದಿರಾ ವೇದೋದ್ಧಾರಾ ಚಂದ್ರಸೂರ್ಯನಯನಾ ಕರುಣಾನಂದ ವಿಮಲಚರಣಾಮುನಿಜನವೃಂದ ವಂದ್ಯ ಚರಣಾರವಿಂದವನುಬಂದು ತೋರಿಸಿ ಗೋವಿಂದದಾಸನಪೊರೆ3xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
--------------
ಗೋವಿಂದದಾಸ
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು