ಮೀನಾಕ್ಷಿದೇವಿ ಮಾಮಮ ಮಧುರ ಪ
ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ
ಬಹು ಜನ್ಮದಿಂದ ಮಾಡಿದ ಪುಣ್ಯ
ವಿಹಿತ ಫಲದಿಂದ ತವಪದ ಪಂಕೇ
ರುಹವ ಕಂಡೆನು ಇಂದಿಗಹಹ ಧನ್ಯನು ನಾನು 1
ಕಲುಷವಿರಹಿತೆ ಕರಪಿಡಿದೀ
ಜಲಜಾಕ್ಷನಡಿದಾವರೆಗಳ ತೋರಮ್ಮ 2
ದಾಸರ ದಾಸ್ಯವನು ಕರುಣಿಸಿ
ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ 3
ಹಿರಿಯರಿಗೆಲ್ಲಾ ವರಗಳ ಕೊಟ್ಟು
ಪೊರೆದುದನೆಲ್ಲ ಕೇಳಿ ನಿನ್ನ
ಚರಣವ ನಂಬಿದೆ ಸ್ಥಿರ ಮನವನು ಕೊಡೆ 4
ತಾಮಸನರನು ಬಾಲಕನೆಂದು
ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ5