ಏನು ಮಾಡಲಿಯನ್ನ ಮನಸಿನಟ್ಟುಳಿ ಘನ |
ನೀನೆ ನಿಲಿಸೋ ಹರಿಯೇ ದೊರೆಯೆ ಪ
ಪರಮ ಪಾವನ ನಿನ್ನ ಚರಿತವ ಕೇಳದು |
ಬರಡ ಮಾತಿಗೆ ಪ್ರೇಮಾ ನೇಮಾ 1
ಸಿರಿವರ ಮೂರ್ತಿಯನು ನೋಡಲೊಲ್ಲದು |
ಸತಿಯರ ರೂಪಕೆಳಸುವದು ಹರಿದು 2
ಸಂತರ ಚರಣಕೆರಗಿ ಬಿಗಿದಪ್ಪದು |
ಭ್ರಾಂತ ಜನರೊಳಗೆ ಸಂಗಾ 3
ಹರಿಯಂದೊದರಲು ನಾಲಿಗೆ ಬಾರದು |
ಪರನಿಂದೆ ಜಪಿಸುವದು ಸರಿದು 4
ಸಿರಿ ಚರಣಾರ್ಪಿತ ತುಲಸಿಯ ಸೇರದು |
ಪರಿಮಳದಲಿ ಬೋಗಿಲಿ ಸಾಗಿ 5
ಗುರು ಮಹಿಪತಿ ಪ್ರಭು ನಿನ್ನೆಚ್ಚರಿದಿ ಮನ |
ವಿರಿಸಿಯನ್ನನುಳಹೋ ಸಲಹೋ 6