ಒಟ್ಟು 38 ಕಡೆಗಳಲ್ಲಿ , 12 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುಖವನು ಸರ್ವದ ಬಯಸಲದೇನೆಂದು ನೀ ತಿಳಿದಿಹೆಯಣ್ಣಾ ಪ ಸುಖ ಬೇಕಾದರದರ ಗೂಢದ ನೆಲೆಯ ನೀ ಕಂಡ್ಹಿಡಿಯಣ್ಣಾ ಅ.ಪ. ಸಕ್ಕರೆ ತುಪ್ಪ ಹಾಲ್ಮೊಸರಿನೂಟವು ಸುಖವಹುದೇನಣ್ಣ ಬೊಕ್ಕಸ ಬರಿದಾಗದಲೆ ಸದಾ ರೊಕ್ಕ ತುಂಬಿಹುದೇನಣ್ಣ ಅಕ್ಕಪಕ್ಕದ ರೂಪವತಿಯರ ಕಣ್ಣೋಟದೊಳೇನಿದೆಯಣ್ಣ ಚಿಕ್ಕತನದ ಚಲ್ಲಾಟಗಳೋ ನಿರತನಾಗಿಹುದೇನಣ್ಣ 1 ಚರ ಸ್ಥಿರ ಸ್ವತ್ತುಗಳ ನೀ ಗಳಿಸಿ ಧನಿಕನೆನಿಸುವುದೇನಣ್ಣ ದೊರೆತನ ಬಯಸಿ ನೀ ದರ್ಪವ ತೋರುತ ಬಾಳುವುದೇನಣ್ಣ ಪರಿಪರಿ ಬಣ್ಣದ ಪಾವುಡ ಧರಿಸಿ ನೀ ಮೆರೆಯುವುದೇನಣ್ಣ ಕರಿ ತುರಗ ರಥ ಪಲ್ಲಕ್ಕಿಯಲಿ ಕುಳಿತು ಚರಿಸುವುದೇನಣ್ಣ 2 ಪರಿ ಸುಖಗಳೆಲ್ಲವು ತಪ್ಪಲು ನೀನಳುವಿಯೇತಕ್ಕಣ್ಣ ತಾಪತ್ರಯಂಗಳಂಕುರಿಸಲಿಕವೆಲ್ಲವು ಬೀಜಗಳೆ ಅಣ್ಣ ಪಾಪ ರಾಸಿ ಬೆಳೆಯಲಿವೆ ಮೂಲ ಕಾರಣವೆಂದರಿಯಣ್ಣ ಆಪತ್ತುಗಳು ಬಿಡದೆ ಬಂದಡರಿ ಬಹುತಾಪಗೊಳಿಪವಣ್ಣ3 ಈ ಸುಖಗಳೆಲ್ಲವು ಬಹುಕಾಲವಿರವು ಶಾಶ್ವತವಲ್ಲಣ್ಣ ಆಸೆಯ ತೋರಿಸಿ ನಿನ್ನನು ಬಹುಮೋಸಗೊಳಿಪವು ಕೇಳಣ್ಣ ಹೇಸಿಕೆಗಿಂತವು ಕಡೆಯಾಗಿಹವೆಂದು ದೃಢದಿ ನಂಬಿರಣ್ಣ ಸಾಸಿರ ನಾಮದ ರಮೇಶನ ಸ್ಮರಿಸಲು ಬೇಸರ ಬೇಡಣ್ಣ 4 ಕಟ್ಟಿಕೊಂಡ್ಹೋದ ಬುತ್ತಿಯು ತಾನೆಷ್ಟು ದಿನವಿದ್ದೀತಣ್ಣ ಎಷ್ಟು ಹೇಳಿದರೇನಿ ಫಲವು ನಿನ್ನಲಿ ನೀನೆ ತಿಳಿಯಣ್ಣ ಗುಟ್ಟಿನಲಿ ಮನಮುಟ್ಟಿ ಯೋಚಿಸಲದುವೆ ಬಯಲಾಗುವುದಣ್ಣ ದಿಟ್ಟ ರಂಗೇಶವಿಠಲನ ನಾಮವೊಂದೇ ನಿಜ ಸುಖವಣ್ಣ 5
--------------
ರಂಗೇಶವಿಠಲದಾಸರು
ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ ಸೋತುಹೋಗಣ್ಣ ಮಾತುಬಂದಲ್ಲಿ ಪ ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ ಘಾತಕತನದ್ವಿಧಿಯು ಬಂದು ಆತುಕೊಂಡು ಕೂತುಕೊಳ್ವುದು ಅ.ಪ ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ 1 ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ ನೀ ತೊಡರಿಕೊಂಡರೆ ತಪ್ಪದು ಕಡೆಯತನಕ 2 ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು ಸೋತಜನರಭಿಮಾನಿ ಶ್ರೀರಾಮ 3
--------------
ರಾಮದಾಸರು
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಕಣ್ಣೆತ್ತಿ ನೋಡಲುಬೇಡ - ಅವಳಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.ಕಣ್ಣಿಟ್ಟ ಕೀಚಕ ಕೆಟ್ಟ -ಪರಹೆಣ್ಣಿಗಾಗಿ ರಾವಣ ತಲೆಕೊಟ್ಟಏನು ಮಾಡಿದಳಣ್ಣ ನಷ್ಟ -ಪರಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1ದೂರದಲ್ಲಿಯ ಸುಖದಣ್ಣ - ಅವಳಚಾರು ಕಂಚುಕದೊಳಗಿನ ಕುಚವಣ್ಣಸೀರೆಯ ಬಿಗಿದುಟ್ಟ ಹೆಣ್ಣ - ಅವಳಓರೆನೋಟ ನೋಡಿ ಹಾರಬೇಡಣ್ಣ 2ಹಸಿವು ಇಲ್ಲರ ಸವಿಯೂಟ - ತನ್ನವಶಕೆ ಬಾರದ ಪರಹಸ್ವಿನ ಕೂಟದೆಸೆದೆಸೆಗಪಕೀರ್ತಿಯಾಟ - ನಮ್ಮವಸುಧೀಶ ಪುರಂದರವಿಠಲನೊಳ್ನೋಟ 3
--------------
ಪುರಂದರದಾಸರು
ತಾಸು ಬಾರಿಸುತಿದೆಕೇಳಿ - ಹರಿದಾಸರೆಲ್ಲ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಾಸು ಬಾರಿಸುತಿದೆಕೇಳಿಪ.ಹಾಸುಮಂತ ಸುಪ್ಪತ್ತಿಗೆಯಲಿ - ಹಗಲು ಇರುಳು |ಹೇಸರಗತ್ತೆಯಂತೆ ಹೊರಳಿ - ಸ್ತ್ರೀಯರಗೂಡ |ಬೇಸರದೆ ನಿತ್ಯವು ಉರುಳಿ ||ಈಪರಿ ಕಾಲವ ಕಳೆದೆಯೊಕಾಲ ಸ |ಮೀಪವಾಯಿತು ಎಂದೀಗಲೆ 1ವೃಧ್ಧ ಯಾವನ ಬಾಲಕಾಲ - ವಿವೇಕವಿಲ್ಲದ |ಬುದ್ಧಿ ಮಾಂದ್ಯವು ಹಲವುಕಾಲ - ಆಹಾರಸಂಗ |ನಿದ್ರೆಯಿಂದಲಿ ಅತಿಲೋಲ ||ಈಶನ ಭಜಕರ ಭಜಿಸದೆ ಮಾನುಷಾ |ಯುಷ್ಯವೆಲ್ಲವು ವ್ಯರ್ಥವಾಯಿತಾಯಿತೆಂದು 2ಕಂಡ ವಿಷಯವ ಕಾಮಿಸಿ - ಕಷ್ಟಪಡದೆ |ತಾಂಡವ ಕೃಷ್ಟನ ಭೇಸಿ - ಪುಂಡನೆನಿಸದೆಭಂಡಧಾವತಿಯನು ತ್ಯಜಿಸಿ ||ಪುಂಡರೀಕಾಕ್ಷ ಪುರಂದರವಿಠಲನ |ಕೊಂಡು ಭಜಿಸಿರೈಯ ಢಂ ಢಂ ಢಂ ಡಣ್ಣೆಂದು 3
--------------
ಪುರಂದರದಾಸರು
ಶಿವಸುಖ ದಾರಿಯ ನೋಡಣ್ಣಾ |ಅದು ಕೂದಲ ಎಳೆಕಿಂತ ಬಲು ಸಣ್ಣಾಪಭವದಲಿ ಮುಳುಗಿಹ ಪ್ರಾಣಿಯ ಕಾಣದೆ |ಘವ ಘವಿಸುವ ಚಿನ್ನದ ಬಣ್ಣಾಅ.ಪ.<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸಾಸಿವೆ ಕಾಳಿಗೆ ಸಾಸಿರ ಭಾಗಕೆ ಮೀರಿ ಉಳಿದಿಹುದಣ್ಣಾ ||ಘೋಷ ಸುಶಬ್ದದ ದಶಮದ್ವಾರದಿ |ಭಾಸುರಪರಮಣು ದ್ವಾರಣ್ಣಾ1ಸೂಜಿಯ ಮೊನೆಕಿಂತ ಸೂಕ್ಷಕೆ ಅತೀತನು |ಶೂನ್ಯಕೆ ಬೆಳಗುತ್ತಿಹುದಣ್ಣಾ || ಈ ಜಗವೆಲ್ಲವುಮೃಗಜಲದಂದದಿ | ಸಚ್ಚಿತ್ಸೂರ್ಯನ ಕಿರಣಣ್ಣಾ2ಅನುಭವ ಯೋಗಿಗೆ ಅನುಕೂಲವಾಗಿಹುದನಿಮಿಷ ದೃಷ್ಟಿಲಿಬಗೆಯಣ್ಣಾ || ಘನಗುರು ಶಂಕರ ತನ್ಮಯನಾಗಿಹ |ಚಿನುಮಯ ಗುರುತವೆ ನಿಜವಣ್ಣಾ3
--------------
ಜಕ್ಕಪ್ಪಯ್ಯನವರು