ಸಿಂಧು ಶಯನ ಬಾರೆಲೋ - ಮಂದರೋದ್ಧಾರೀಇಂದಿರೆಯರಸ ಮುಕುಂದನೇ ಪ
ಮಾಧವ ಹೇ ದಯಾಂಬುಧೆ - ವಂದಿಸುವೆ ತ್ವತ್ಪಾದ ದ್ವಂದ್ವಕೇ ಅ.ಪ.
ಹೃದಯ ಮಧ್ಯದಿ ಮಂಟಪಾ - ಬುಧ ಜನ ವಂದ್ಯಸಿದ್ಧವಾಗಿಹುವು - ಮಾಧವಾ |ಸಿದ್ಧ ಸಾಧನ ಪವನ - ಉದಾನಾದಿಗಳೆಲ್ಲಹೆದ್ವಾರಗಳ ಕಾದಿಹರೋ ||ಮಧು ವಿರೋಧಿಯೆ ನಿನ್ನ ಪದ - ಸದ್ವನಜ ಕೀರುತಿ ಸುಧೆಯ ಸವಿಯುವಮುದವ ಕರುಣಿಸು ಶ್ರೀದ ನರಹರಿ - ಹೃದಯ ಸದನಕೆ ವದಗಿ ಬೇಗ 1
ಚಿತ್ತ ಸಿಂಹಾಸನವೂ - ಚಿತ್ತ ಜನಯ್ಯಾಸ್ತೋತ್ರ ರತುನ ಖಚಿತವೂ ||ಉತ್ತಮ ಮತಿ ಸುದತೇರೂ - ಛತ್ರಿ ಚಾಮರಗಳಎತ್ತಿ ಬೀಸುತಲಿಹರೋ ||ಕೃತ್ತಿವಾಸನ ಸಖನೆ ಪರಮ ಸು - ಹೃತ್ತಮೋತ್ತಮ ಚಿತ್ಸುಖ ಪ್ರದಚಿತ್ತವಿಸು ಚಿತ್ತಾಖ್ಯ ಪೀಠಕೆ - ಸತ್ಯಕಾಮ ಶರಣ್ಯ ಶಾಶ್ವತ 2
ಭವ ಪಿತ ತೋಯ ಜಾಕ್ಷನೆ -ದಾಯ ನಿನ್ನದು ಎನ್ನ ಗತಿಗೇ ಪ್ರೇರ್ಯ ಪ್ರೇರಕ ಶ್ರೀಗುರು - ಗೋವಿಂದ ವಿಠಲನೆ ಕಾಯೊ ಬೇಗ 3