ಒಟ್ಟು 20 ಕಡೆಗಳಲ್ಲಿ , 10 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿಕೇತನ ಪಾಲಯ ಮಾಂ ಪ ಜ್ಞಾನಗಮ್ಯ ಕರುಣಾನಿಧೆ ನಿನ್ನಡಿ ಗಾನಮಿಸುವೆ ಪೊರೆ ದೀನ ದಯಾಳೊ ಅ ಜ್ಞಾನ ಮಾನದ ಶರಣರ ಸುರಧೇನು ಸರ್ವದಾ ನೀನೆಂದರಿದು ಸದಾನುರಾಗದಲಿ ಧೇನಿಪೆ ಮನದನುಮಾನವ ಕಳೆಯೋ 1 ಪರಾಕು ಅಚ್ಯುತ ಶೋಕನಾಶನ ವಿಶೋಕ ಸುಲಭ ಹೃದ್ ವ್ಯಾಕುಲ ಕಳೆ ಏಕ ಪ್ರಕಾರದಿ ಒಲಿದು 2 ಪನ್ನಗಾಚಲ ನಿವಾಸ ಪ್ರಪನ್ನ ವತ್ಸಲಾ ಬಿನ್ನಪ ಕೇಳು ಜಗನ್ನಾಥ ವಿಠ್ಠಲ ಧನ್ಯನಮಾಡು ಶÀರಣ್ಯ ಶರಣನ 3
--------------
ಜಗನ್ನಾಥದಾಸರು
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಶ್ರೀನಿವಾಸನೆ ಗಾನಲೋಲನೆ ಸಾನುರಾಗದೊಳೀಕ್ಷಿಸೈ ಜ್ಞಾನಪೂರ್ಣನೆ ಸೂನುವೆಂಬಭಿಮಾನದಿಂ ಪರಿಪಾಲಿಸೈ ಪ. ದೀನಪಾಲಕ ದಾನವಾಂತಕ ದೈನ್ಯದಿಂ ಮೊರೆಹೊಕ್ಕೆನೈ ಜ್ಞಾನಗಮ್ಯನೆ ಭಾನುತೇಜನೆ ನೀನೇ ಗತಿಯೆಂದೆಂಬೆವೈ ಅ.ಪ. ಸಾರಸಾಕ್ಷನೆ ಶ್ರೀರಮೇಶನೆ ಸಾರಿ ಬಾ ಭವದೂರನೇ ಗಾರುಗೊಂಡೆವು ಪಾರುಗಾಣಿಸು ನೀರಜೋದ್ಭವ ಜನಕನೆ ಕಾರ್ಯಕಾರಣ ಕರ್ತೃ ನೀನಹುದಾರಯಲ್ ಜಗದೀಶನೆ ಬೇರೆ ಕಾಣೆವದಾರ ನಿನ್ನನೆÉೀ ಸಾರೆ ಬೇಡುವೆ ದೇವನೆ 1 ಸಾರ ಸಂಗ್ರಹ ಮಾಡುತೆ ಆರ್ಯಕೀರ್ತಿಯ ಸಾರಿಪಾಡುತೆ ವೀರನಾದವ ಗೈಯುತೆ ಭೂರಿ ವೈಭವವೆಲ್ಲವಂ ಧೈರ್ಯದಿಂ ನಲವೇರೆ ಕೀರ್ತಿಸಿ ಕಾರ್ಯಸಿದ್ಧಿಯ ಪೊಂದುವೋಲ್2 ನಿರ್ಗುಣಾತ್ಮನೆ ನಿರ್ವಿಕಲ್ಪನೆ ನಿತ್ಯನಿರ್ಮಲಚರಿತನೆ ಮಾರ್ಗದರ್ಶಕನಾಗಿ ನಮ್ಮೊಳಗಾವಗಂ ಕೃಪೆ ಗೈವನೇ ಸಾರ್ವಭೌಮನೆ ಸರ್ವಶಕ್ತನೆ ಶೇಷಶೈಲ ನಿವಾಸನೇ ಸಾರ್ವಕಾಲದೊಳೋವುದೆಮ್ಮನು ಪಾರ್ವತೀಪತಿ ಮಿತ್ರನೆ 3
--------------
ನಂಜನಗೂಡು ತಿರುಮಲಾಂಬಾ
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ವೆಂಕಟ ವಿಠಲ ನಿನ್ನಂಕಿತದವನ ಕ-ಳಂಕ ನೋಡದೆ ಪಾಲಿಸೋ ||ಶಂಖಾರಿ ಗದಾ ಪದ್ಮಅಂಕವಿಪಾಹಿಪಶಂಕರವಿನುತಪಾದಹೇ ಶ್ರೀದ ಪಜೆÕೀಯ ಜ್ಞಾನಗಮ್ಯಧ್ಯೇಯನೀಲಾಂಬುದಕಾಯಗರುತ್ಮಾಂಸಗಾ ||ಆಯುರಾರೋಗ್ಯ ವಿದ್ಯಾ ಯಮ ನಿಯಮವಿ-ತ್ತೀಯವನಿಯೊಳ್ ಯಶಸ್ಸು- ಪಸರಿಸು 1ಮರೆ ಹೊಕ್ಕವರ ಮನದರಿಕೆ ಪೂರೈಸುವನೆಂಬಬಿರಿದೊಂದೆರಡೆನ್ನಲೇ ||ಕರಿ, ನಾರಿ,ನೃಪಪ್ರಮುಖರಗಣಿತರನು ನೀಪೊರೆದುದು ಸ್ವಲ್ಪವೇನು - ಮಹಾಣು 2ಕಿಟಿನೀನೇ ಒಲಿದರೆ ಘಟಣವೇ ಘಟಣವೋವಟಪತ್ರ ಪರ್ಯಂಕನೆ ||ತಟಿದಾನಂತಾಭ ನಿಷ್ಕುಟಿಲ ಶ್ರೀ ಪ್ರಾಣೇಶವಿಠಲಭವಾಬ್ಧಿಪೋತ-ಸುಚರಿತ3
--------------
ಪ್ರಾಣೇಶದಾಸರು