ವರದವಿಠಲ ದೇವನ
ಪೊರೆಯವುದಾನರನ ಪ
ಬಂದ ವಿಭೀಷಣನ
ಚಂದದಿ ಸಲಹಿದನು 1
ಅಜಮಿಳಗೊಲಿದನ ಕುಜನರ ತರಿದನ
ಸುಜನರನಾಳಿದನ
ವಿಜಯನ ರಥಸೂತನ 2
ಗಂಗೆಯ ಪಡೆದವನ
ರಥಾಂಗವ ಪಿಡಿದವನ 3
ಖ್ಯಾತ ಪಾದಾಂಬುಜನ
ಸೇತುವಿಧಾತನ 4
ರಾಮನ ಜಗದಭಿರಾಮನ ದೈತ್ಯ ವಿ
ರಾಮನ ಭಜಕನಾ
ರಾಮನ ದಶರಥ ರಾಮನ ಸೀತಾ
ರಾಮನ ಗುಣಧಾಮನ 5
ಪಂಕಜನೇತ್ರನ ಪರಮ ಪವಿತ್ರನ ಶಂಕರ ನುತಿ ಪಾತ್ರನ
ವೆಂಕಟರಮಣನ ಕಿಂಕರ ಶರಣನ ಸಂಕಟಹರ ನಾಮನ6