17ವಾಯುದೇವರನ್ನು, ವಾಯುದೇವರ ಮಟ್ಟತಾಳ
ಭಾರತೀಶ ತ್ರಾಹಿ
ಉರಗ ಗರುಡಾದಿ ಪೂಜ್ಯ ಚರಣ ಭಾಸಾ
ಧೂರಿಕೃತ ಭಯಾಜ್ಞಾನ ಲೇಶ
ಪರಮೋತ್ತಮ ಜ್ಞಾನ ವಿಲಾಸ
ಸರಸಿಜಾಂಡಾಂತ ಬಹಿರ್ವಾಸ
ಹರಿ ಪೂಜಾದಿ ಗುಣಭರಿತ ಪ್ರಾಣೇಶ 1
ತಾಳ
ಅಂಜನಿಗರ್ಭ ಸುಧಾಂಬುಧಿ ಸಂಜಾತ
ಮಂಜುಳ ಭಾಷಣ ಕಂಜನೇತ್ರ ಶ್ರೀರಾಮದÀೂತ
ವಜ್ರಮುಷ್ಟಿ ಪ್ರಹಾರೇಣ ಹತ ರಾಕ್ಷಸ
ಸಂಜೀವ ಪರ್ವತ
ಉಜ್ಜೀವಿತ ಕಪಿನುತ ಪುಂಗವ
ಭರ್ಜಿತ ರಾವಣ ಮದ ಗರ್ವ ಹೇ ಹನುಮನ್ 2
ತಿಶ್ರಗತಿ ತಾಳ
ಇಂದು ಮೌಳಿ ಪಾದದ್ವಂದಾರಾಧಕ ಜರಾ -
ಸಂಧಾದಿ ಸುರ ವೈರ ವರ್ಗ ಮಾತಂಗ ವೈರಿ
ಇಂದುಮುಖಿ ಯುಗ್ಮಭೈಷ್ಮೀಸತ್ಯ
ಕಂದರ್ಪ ಶೃಂಗಾರ ಗುಣ
ಸಿಂಧು ಶ್ರೀ ಕೃಷ್ಣದಾಸ ಭೀಮ 3
ಝಂಪೆತಾಳ
ಧರ್ಮರತ ಮೌನಿಜ ನಿರ್ಮಮಾದಿ ಗುಣಪೂರ್ಣ
ದುರ್ಮತಿ ವಾದಿ ವಾಗ್ಯುದ್ಧ ಕೋಲಾಹಲ ಅ-
ಧರ್ಮ ರಚಿತ ದುಶ್ಯಾಸ್ತ್ರ
ನಿರ್ಮೂಲೀಕೃತ ಯತಿರಾಜ
ಭರ್ಮವರ್ಣ ವಿಜಯ
ರಾಮಚಂದ್ರವಿಠಲ ಭಕ್ತ ಆನಂದಮುನೇ 4