ಕಾಪಾಡು ಕಾಪಾಡು | ಕಾಪಾಡು ಗುರುವೇ ಪ
ಶ್ರೀ ಪತಿಯ ಪರಮಾತ್ಮ | ಅಪದ್ಹರ ಗುರುವೇ ಅ.ಪ.
ಕೃಪಣ ವತ್ಸಲ ಗುರುವೆ | ಕೋಪಸಲ್ಲದು ನಿಮಗೆಕಾಪಥವ ನೈದುವನು | ತವಕೃಪೆ ವಿಹೀನಾ ||ಅಪರಾಧ ವೆಣಿಸದಲೆ | ಕೃಪೆಮಾಡಿ ಕೈ ಪಿಡಿದುಸುಪಥದಲ್ಲಿರಿಸುತ್ತ | ಆಪವರ್ಗದನ ತೋರೊ 1
ತಂದೆ ತಾಯಿಯು ನೀವೆ | ಬಂಧು ಬಳಗವು ನೀವೆಎಂದೆಂದಿಗೂ ಎನಗೆ ಗುರುವು ನೀವೆ ||ಕಂದ ಮಾಡಿದ ತಪ್ಪ | ತಂದೆಯೆಣಿಸುವರೇನೊಪೊಂದಿ ಭಜಿಸುವೆ ಕಾಯೊ | ತಂದೆ ಕೃಪ ಸಾಂದ್ರಾ 2
ತಂದೆ ಮುದ್ದು ಮೋಹನ್ನ | ವಂದಿಸುವೆ ನಿಮ್ಮಡಿಗೆಇಂದು ತವ ದರ್ಶನವ | ಸಂಧಿಸಲಿ ಬೇಕೋ ||ಇಂದಿರಾಪತಿ ಗುರು | ಗೋವಿಂದ ವಿಠ್ಠಲನಛಂದಾಗಿ ಭಜಿಸುವ | ತಂದೆ ಕೈ ಪಿಡಿಯೋ3