ಒಟ್ಟು 20 ಕಡೆಗಳಲ್ಲಿ , 12 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ 1 ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ2 ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು ದಾರಿ ತೋರೋ ತುಲಶೀರಾಮ ದಾಸದಾಸನೂ 3
--------------
ಚನ್ನಪಟ್ಟಣದ ಅಹೋಬಲದಾಸರು
ಸೋದಾಕ್ಷೇತ್ರವೆ ದಿವ್ಯ ಕ್ಷೇತ್ರ ಬಂದ ಜನರಿಗಿಷ್ಟವನೀವ ಕ್ಷೇತ್ರ ವೀರಶೈವರ ಗೆದ್ದ ಕ್ಷೇತ್ರ ಪ ಒಂದು ಭಾಗದಿ ರೂಪ್ಯಪೀಠ ಮ- ತ್ತೊಂದು ಭಾಗದಿ ಸೋದಾಕ್ಷೇತ್ರ ಕುಂದು ಎಳ್ಳಷ್ಟಿಲ್ಲದೆ ತೋರ್ಪು ದೆಂದು ಹರಿಭಕ್ತರಾದರಿಸುವರು 1 ವೈಕುಂಠನಂತಾಸನಗಳು ಚೆಂದವೇನೆಂದು ಪೇಳಲಿ ಮನವೆ 2 ರಾಜೇಶ ಹಯಮುಖ ಚರಣ ಕಂಜ ಮಧುಪನಂತಿರುವ ಶ್ರೀಭಾವಿ- ಕಂಜಜಾತನ ಪದಕರುಹ ವಾದಿರಾಜರಾಯರ ದಿವ್ಯ ಕ್ಷೇತ್ರ 3
--------------
ವಿಶ್ವೇಂದ್ರತೀರ್ಥ
ಚೆಂದವ ನೋಡಿರೆ-ಗೋಕುಲಾ-|ನಂದನ ಮೂರುತಿಯ ಪಅಂದುಗೆಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲ ಅರಳೆಲೆತಿಯು |ಮಿರು-ಮಿರುಗುತ ಮೆರೆವ ಕೃಷ್ಣನ 1ಉಡೆಯ ಗಂಟೆ ಘಣಘಣೆನುತ |ನುಡಿಯೆ ಮೆಲ್ಲನೆ ಪಿಡಿದುಕೊಂಡು ||ನಡೆದಾಡುತ ಸಡಗರದಲಿ |ಬೆಡಗ ಮಾಡಿ ಆಡುವ ರಂಗನ 2ಬಲುಬಲು ಆಶ್ಚರ್ಯದಿಂದ |ನಲಿವ ಪುರಂದರವಿಠಲರಾಯ ||ಹಲವು ಸುಖವ ನಮಗೆ ಇತ್ತ |ಜಲಜಲೋಚನಬಾಲಕೃಷ್ಣನ3
--------------
ಪುರಂದರದಾಸರು
ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|ನಾಮವೆ ಕಾಯಿತು ನಾನೇನೆಂದೆ ಪಸುರತರುನೀನು ಫಲ ಬಯಸುವೆ ನಾನು |ಸುರಧೇನುನೀನು ಕರೆದುಂಬೆ ನಾನು ||ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |ಶರಧಿಕ್ಷೀರನು ನೀನು ತರಳನೈ ನಾನು 1ಅನಾಥನೈ ನಾನು ಎನಗೆ ಬಂಧುವು ನೀನು |ದೀನಮಾನವನಾನು ದಯವಂತ ನೀನು ||ದಾನವಂತಕ ನೀನು ಧೇನಿಸುವೆನು ನಾನು |ಜ್ಞಾನಗಂಭೀರ ನೀನು ಅಙ್ಞÕನಿ ನಾನು 2ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||ತಂದೆ ಪುರಂದರವಿಠಲರಾಯ ನೀ |ಬಂದೆನ್ನ ಮನದಲ್ಲಿ ನಲಿನಲಿದಾಡೊ 3
--------------
ಪುರಂದರದಾಸರು