ಒಟ್ಟು 17 ಕಡೆಗಳಲ್ಲಿ , 11 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಹರಿಗುಣ - ಲೋಲಗೆ ಪಮೋದತೀರ್ಥಮತಾಬ್ಧಿ ಚಂದ್ರಗೆಅದೀತೇಯನ ತೆರದಿ ಮೆರೆವಗೆ 1ನಿತ್ಯನಿರ್ಮಲ ಪುಣ್ಯಗಾತ್ರಗೆಸ್ತುತ್ಯಯತಿವರಸುಜನಮಿತ್ರಗೆ2ಮೇದಿನೀಸುರಜಾಲನಾಯಕಮೋದತೀರ್ಥರಚರಣಸೇವಕಆದಿಗುರು ಜಗನ್ನಾಥ ವಿಠಲಗೆ 3
--------------
ಗುರುಜಗನ್ನಾಥದಾಸರು
ಹನುಮ-ಭೀಮ-ಮಧ್ವ60ಕರುಣಿಸೈಹರಿಚರಣಸೇವೆ ನಿರುತಪಪರಿಪರಿಯ ಕ್ಲೇಶಗಳ ಪರಿಹರಿಸುತ ಪೊರೆವದುರಿತದೂರ ಹರಿಯಚರಣಸೇವಕನೆಅ.ಪಕಂಜಾಕ್ಷನ ದಯದಿ ಅಂಜದೆ ನೀರಧಿಯಹಿಂಜರಿಯದೆ ದಾಂಟಿ ಸಂಜೆ ಕಳೆಯೆ ಲಂಕೆರಂಜಿಸುವದು ಕಂಡು ಕಂಜಾಕ್ಷಿಗುಂಗುರ ಪ್ರ-ಭಂಜನನೀಡಿದೆಯೊ ಅಂಜನೆಯತನಯ1ದುರಳ ದೈತ್ಯನಾದ ಜರೆಯ ಸುತನ ಸೀಳಿಹರಿಗರ್ಪಿಸಿ ಸರ್ವವನು ಧರಣಿ ಭಾರನಿಳುಹಿಹರಿಯ ಮನವನರಿತು ಪರಿಪರಿಲಿ ಸೇವಿಸುತಪರಮಭಕ್ತನಾದೆ ಪರಿಸರನೆ ಸಲಹೊ2ಮುದ್ದು ಕೃಷ್ಣನ ಸೇವೆ ಶುದ್ಧಮನದಿ ಮಾಡಿಸದ್ವೈಷ್ಣವರ ಕುಲದ ಪದ್ಧತಿಯನರುಹಿಪದ್ಮನಾಭಕಮಲನಾಭ ವಿಠ್ಠಲನೊಲಿಸಿಸದ್ಗ್ರಂಥಗಳ ರಚಿಸಿ ಉದ್ಧರಿಸಿದೆ ಜಗವ 3
--------------
ನಿಡಗುರುಕಿ ಜೀವೂಬಾಯಿ