ಒಟ್ಟು 50 ಕಡೆಗಳಲ್ಲಿ , 24 ದಾಸರು , 50 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನವನೀತ ಚೋರಾ ಪ ಸಹೋದರಿ ಮಾನಸ ಚಕೋರ ಚಂದ್ರ ಚಂದ್ರ ಕುಲಚಂದ್ರ ಚಂದ್ರಮುಖ ಅ.ಪ ಸೂರಿಜನಪ್ರಿಯ ಸುಗುಣನಿಲಯ ಪಾ- ಕಾರಿಗರ್ವಹರ ಕರುಣಾ ಜಲಧೇ1 ಸದ್ವಿಹಾರ ದೇವ ದ್ವಿಜ ಪೋಷಕ 2 ರಾಮಾನುಜ ಭೃಗು ರಾಮತ್ರಿಜಗದಭಿರಾಮಪಾಹಿ ಗುರುರಾಮವಿಠಲ ಜಯ3
--------------
ಗುರುರಾಮವಿಠಲ
ನೀಲ ಸುಂದರ ಲೀಲವಿಗ್ರಹನೆ ಪ ಭಂಜನ ಬಾರೈ ಉರುಟಣೆಗೆ ಅ.ಪ. ಸಾರಸ ರೇಖರಂಜಿತ ಪಾದಪಂಕಜಕೆ ನವ್ಯಮಾದ ಸುಗಂಧ ಚೂರ್ಣವ ನಿಂದು ಲೇಪಿಸುವೆ 1 ಫಾಲ ಫಾಲ ದೇಶದಿ ನಾಂ ಇಂದು ತಿಲಕವ ತಿದ್ದಿ ನಿಲವೆನು ಪ್ರಾಣ ನಾಯಕನೆ 2 ಸಾಧು ರಕ್ಷಣ ದಕ್ಷ ರಾಕ್ಷಸ ಶಿಕ್ಷ ಭುಜಯುಗಕೆ ಶ್ರೀಧರಿತ್ರೀಫಾಲ ಲೋಲನೆ ಗಂಧವ ಲೇಪಿಸುವೆ 3 ಕಂಬುಕಂಠ ಶ್ರೀಕಂಠ ಮಿತ್ರನೆ ನಿನ್ನಯ ಕಂಠಕೆ ನಾಂ ಅಂಬುಜೋಪಮ ಹಸ್ತದಿ ಗಂಧವ ನಿಂದು ಲೇಪಿಸುವೆ 4 ಚಕೋರ ಚಂದ್ರನೆ ಮಾಲೆಯನರ್ಪಿಸುವೆ ಧೇನುನಗರ ಶ್ರೀರಾಮಚಂದ್ರನೆ ವೀಟಿಯ ಸ್ವೀಕರಿಸೈ 5
--------------
ಬೇಟೆರಾಯ ದೀಕ್ಷಿತರು
ನೆನೆಯೋ ನೀ ಎನ್ನ ಮನವೇ| ಅನುಪಮ್ಯ ಶ್ರೀ ಮುಕುಂದನಾ| ಚಕೋರ ಸುನಕ್ಷತ್ರೇಶ ಗೋಪಾಲನಾ| ಶ್ರೀಲೊಲನಾ ನಂದಬಾಲನಾ ಪ ವರಭಕ್ತ ಧೃವಗ ಸ್ಥಿರಪದ ವಿತ್ತನಾ| ಧರಣಿಯ ಭಯಹರ ಪುರುಷೋತ್ತಮನಾ| ಉರಗ ತುಳಿದವನಾ| ಉರಗಶಯನುರಗಾ ಭರಣನ ಸಖನಾ| ಸುನಖನ ಅಬ್ಬ ಮುಖನಾ 1 ದುರಿತ ನಿವಾರಕನಾ| ಕರುಣಾದೀ ಅಹಲ್ಯಯ ನುದ್ಧರಿಸಿದನಾ ಸರಸಿಜ ಸಮಪದ ಸರಸಿಜನಾಭನಾ| ಸರಿಸಿಜ ಪಾಣಿಯ ಸರಸಿಜ ನೇತ್ರನಾ 2 ಸುಚರಿತ್ರನಾ ಮುನಿಸ್ತೋತ್ರನಾ| ಗುರುವರ ಮಹಿಪತಿ ನಂದನ ಜೀವನಾ| ಗಿರಿವರಧಾರನಾ ಕಂಸಾಸುರ ಮರ್ಧನಾ| ಶರಧಿ ನಿವಾಸನಾ| ಹರಿಶತ ಕಿರಣ ಹರಿಸುತ ಪ್ರೀಯನಾ| ಸ್ಮರಸೈಯ್ಯನಾ ಕೃಷ್ಣರೇಯನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪುಣ್ಯ ದೊರಕುವುದು ಅನು ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ ಬಡತನವಿದ್ದರು ನೆರೆಹೊರೆ ಮನೆಯಲ್ಲಿ ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ ಬಿಡದೆ ಮಾಡುವ ಗೃಹಕೃತ್ಯಂಗಳು ಜಗ ಅನುದಿನ 1 ವಿಪರೀತ ಕಾಲಗಳಟ್ಟಿದ ಕಾಲಕ್ಕು ಸ್ವಪನಾದಿಯಪ ಕಳವಳಿಸದಲೇ ಪತಿ ಸೇವೆ ಅಫಲದಲ್ಲಿ ಮಾಡಿ ಒಲಿದೊಲಿದಾಡುವ2 ಲಾವಣ್ಯ ಪುರುಷರ ಕಂಡರು ಮನದಲ್ಲಿ ಭಾವಿಸಬೇಕು ಸಹೋದರರು ಎಂದು ವಿಭೂತಿ ರೂಪವ ನಿತ್ಯ 3 ಬಂದು ತಂದರೆ ಸಾವಿರ ಮಾಡಿ ಚಿಂತಿಸಿ ಇಂದಿರೇಶನೆ ಪತಿರೂಪವೆಂದು ಅಂದದದಲಿದ್ದ ವಿಭವಾನುಸಾರ ಆ ನಂದವಾಗಿ ಸಂಸಾರದೊಳಗಿರೆ 4 ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ ಹಿತವಂತಳಾಗಿ ನುಡಿಸಿಕೊಳುತಾ ಗಾತ್ರ ಸರ್ವದಾ ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ 5 ಚಕೋರ ಚಂದ್ರಮನಲ್ಲಿ ಮನಸು ಇಟ್ಟು ಸುಖಬಡುವಂತೆ ನಾನಾ ಪ್ರಕಾರ ಕಕುಲಾತಿಯಿಂದ ಕಾಮುಕಳಾಗದೆ ಮಹಾ ಭಕುತಿಯಿಂದಲಿ ಗುರು ಹಿರಿಯರ ಸಮ್ಮತ 6 ಸಂತಜನರೆಂಬ ಕ್ಷೀರಾಂಬುಧಿ ಮಧ್ಯ ಸಂತತ ಮೀನಿನಂದದಿ ಬೀಳುತಾ ಪತಿ ಧರ್ಮವಹಿಸಿ ಶ್ರೀ ಕಾಂತನ ಗುಣಕಥೆ ಕೇಳಿ ಪೊಗಳಲಾಗಿ 7 ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ ಪ್ರೇಮದಿಂದಲಿ ಗುಣಗಳ ಗುಣಿಸೀ ಕಾಮಾದಿ ಚತುರ್ವಿಧÀ ಪುರುಷಾರ್ಥ ತನ್ನಯ ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ 8 ಆವಾವ ಪ್ರಯೋಜನ ಮಾಡಲು ಸರ್ವದ ದೇವದೇವೇಶನಾಧೀನವೆಂದೂ ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು ಪಾವನ ವಿಜಯವಿಠ್ಠಲನ ಭಕುತಿಯಿಂದಾ 9
--------------
ವಿಜಯದಾಸ
ಪೂರ್ಣರೂಪನೆ ಎನ್ನ ಪೂರ್ಣ ಮನದಲಿ ನಿಂತು ಪೂರ್ಣಗೊಳಿಸಭಿಲಾಷೆಯ ಪ. ಪೂರ್ಣ ಚಂದ್ರನ ಕಾಂತಿ ಪೂರ್ಣಧಿಕ್ಕರಿಸುವೊ ಪೂರ್ಣ ಪ್ರಕಾಶ ಹರಿಯೆ | ನೀ ಪೊರೆಯೊ ದೊರೆಯೆ ಅ.ಪ. ಪೂರ್ಣಕಾಮನೆ ಸ್ವಾಮಿ ಪೂರ್ಣ ಆನಂದ ಸಂ- ಪೂರ್ಣ ಗುಣಗಣನಿಲಯನೆ ಪೂರ್ಣ ಭಕ್ತರದಾತ ಪೂರ್ಣ ಲಕ್ಷ್ಮೀಶಪ್ರೀತ ಪೂರ್ಣಭೋಧರ ವರದನೆ ಪೂರ್ಣ ಪ್ರಕಾಶ ನಿನ್ನ ಕಾಣದೆಲೆ ಕಂಗೆಡುವೆ ಪಾದ ನೀಡೋ 1 ಚಕೋರ ಪೂರ್ಣಚಂದ್ರನೆ ಭಕ್ತಿ ಪೂರ್ಣ ಶರಧಿಗೆ ಚಂದ್ರನೆ ಪೂರ್ಣ ಬಾಧೆಯಪಡುವೆ ಪೂರ್ಣಗೈಸೆನ್ನಭವ ಪೂರ್ಣಚಂದ್ರನೆ ತಾಪಕೆ ಪೂರ್ಣ ನಂಬಿರುವೆನೊ ಪೂರ್ಣದಯವನೆಗರೆಯೊ ಪೂರ್ಣ ಕೃಪೆ ಚಂದ್ರಿಕೆ ಈಗಲೇ | ಬೀರೆನ್ನ ಮೇಲೆ 2 ಪೂರ್ಣಚಂದ್ರನ ವಂಶ ಪಾವನವಗೈಯಲು ಪೂರ್ಣ ಯದುಕುಲದಿ ಜನಿಸಿ ಪೂರ್ಣ ಯುದ್ಧದಲಿ ಗೆಲಿಸಿ ಪೂರ್ಣ ರಾಜ್ಯವನಿತ್ತೆ ಪ್ರಾಣಿ ಹೃದ್ಗುಹವಾಸಿ ಪೂರ್ಣ ಶ್ರೀ ವೆಂಕಟೇಶ | ಶ್ರೀ ಶ್ರೀನಿವಾಸ 3 ಪೂರ್ಣತತ್ವಗಳಿಗೆ ಪೂರ್ಣ ಶಕ್ತಿಯನಿತ್ತು ಪೂರ್ಣಗೊಳಿಸಿದೆ ಸೃಷ್ಟಿಯ ಪೂರ್ಣತತ್ವಾಧಿಪತಿ ಪ್ರಾಣದೇವನ ಪ್ರಿಯ ಪೂರ್ಣ ಭಕ್ತರ ರಕ್ಷಕ ಪೂರ್ಣ ಮನೋರಥದಾತ ಜೀವನಂತರ ವ್ಯಾಪ್ತ ಜ್ಞಾನ ವಿಜ್ಞಾನದಾತ | ಸುಜನರಿಗೆ ಪ್ರೀತ 4 ಪೂರ್ಣ ಭೂಮಂಡಲಕೆ ಪೂರ್ಣ ಪ್ರಭು ನೀನೆಂದು ಪೂರ್ಣಬೋಧರು ನುಡಿವರೊ ಪೂರ್ಣ ದೇವತೆಗಳು ಪೂರ್ಣ ನಿನ್ನನು ಭಜಿಸಿ ಪೂರ್ಣ ಪದ ಪಡೆದಿರುವರೊ ಪೂರ್ಣ ಹರಿ ಗೋಪಾಲಕೃಷ್ಣವಿಠ್ಠಲ ಎನ್ನ ಪೂರ್ಣ ಇಚ್ಛೆಯನೆ ಸಲಿಸೊ | ನೀ ಮನದಿ ನೆಲಸೊ5
--------------
ಅಂಬಾಬಾಯಿ
ಬರತಾರಂತ್ಹೇಳೆ ಬಾಲೆಕರೆಯಲು ಬಾಯಿಮಾತಿನಲೆಬರತಾರಂತ್ಹೇಳೆ ಪ. ರಂಗನ ಪಾದಕಮಲ ಭೃಂಗಳೆ ದ್ರೌಪದಿಮಂಗಳಾದೇವಿ ರುಕ್ಮಿಣಿ ಸಖಿಯೆಮಂಗಳಾದೇವಿ ರುಕ್ಮಿಣಿ ಕರೆಯಲು ಅಂಗಳದೊಳಗೆ ಬರುತಾಳೆ ಸಖಿಯೆ 1 ಇಂದಿರೇಶನೆಂಬೊ ಚಂದ್ರಗೆಚಕೋರ ಕುಂದದಂಥವಳ ಸುಭದ್ರಾ ಸಖಿಯೆಕುಂದದಂಥವಳೆ ಸುಭದ್ರೆ ಕರೆಯಲೆ ಬಂದಳು ಭಾಮೆ ಎದುರಲಿ ಸಖಿಯೆ 2 ನಗ ಧರನ ಮುಖವೆಂಬೊ ಮುಗಿಲಿಗೆನವಿಲಸುಗಣಿರೈವರ ಮಡದಿಯರುಸುಗುಣರೈವರ ಮಡದಿಯರು ಕರೆಯಲುಮೂರ್ಜಗದ ಮೋಹನೆಯರು ಬರ್ತಾರೆ ಸಖಿಯೆ3 ಹರಿಯಾಗ್ರಜ ತನ್ನ ಹಿರಿಯರ ಕೂಡಿಕೊಂಡುಬರುವನು ಪರಮ ಹರುಷದಿ ಸಖಿಯೆಬರುವನು ಪರಮ ಹರುಷದಿ ಈ ಮಾತುದೊರೆಗಳಿಗೆ ಹೇಳೆ ವಿನಯದಿ ಸಖಿಯೆ4 ಎಲ್ಲರೂ ಮುತ್ತುರತ್ನ ಝಲ್ಲಿ ವಸ್ತ್ರಗಳಿಟ್ಟುಚಲುವ ಪ್ರದ್ಯುಮ್ನನ ಒಡಗೂಡಿ ಸಖಿಯೆಚಲುವ ಪ್ರದ್ಯುಮ್ನನ ಒಡಗೂಡಿ ಐವರಿಗೆ ಮಲ್ಲಿಗೆ ತೂರಾಡಿ ಕರೆಯಲಿ ಸಖಿಯೆ5 ಅಷ್ಟೂರು ಬಗೆಬಗೆ ಪಟ್ಟಾವಳಿಯನುಟ್ಟುಧಿಟ್ಟ ಸಾಂಬನ ಒಡಗೂಡಿಧಿಟ್ಟ ಸಾಂಬನ ಒಡಗೂಡಿ ಐವರಿಗೆ ಬುಕ್ಕಿಟ್ಟು ತೊರ್ಯಾಡಿ ಕರೆಯಲಿ ಸಖಿಯೆ6 ಮಾನಿನಿ ಮಾನಿನಿ ಸಹಿತಾಗಿ ರಮಿಅರಸುಮಾನದಲಿ ಐವರನ ಕರೆಸುವ ಸಖಿಯೆ7
--------------
ಗಲಗಲಿಅವ್ವನವರು
ಬಾರೆ ಭಾಗ್ಯದ ನಿಧಿಯೆ | ಬಾರೆ ಜಾನಕಿಯೆ ಪ ಚಕೋರ ಸುಖಾಗ್ರಣೆ ಸೇರಿದೆ ತವಪದ ವಾರಿಜ ನಿಲಯೆ ಅ.ಪ ಕೃತಿ ಶಾಂತಿ ಜಯ ಮಾಯೆ ಕ್ಷಿತಿಜಕೋಮಲ ಕಾಯೆ ಶಿತಕಳೆವರ ವಿಧಿಶತಕ್ರತು ಸುಮನಸ ತತಿನುತೆ ಪಾವನೆ ರತಿಪತಿ ತಾಯೆ 1 ಮಂಗಳೆ ಮುದ ಭರಿತೆ ಇಂಗಡಲಜೆ ಕೃಪಾಂಗಿಯೆ ಎನ್ನಂತ ಮಾನವ ಸಿಂಗನ ತೋರೆ 2 ಶಾಮಸುಂದರ ರಾಣಿ ವಾಮಾಕ್ಷಿ ಕಾಲ್ಯಾಣಿ ಕಾಮಿನಿ ಮಣಿ ಸತ್ಯಭಾಮೆ ರುಕ್ಮಿಣಿ ಗೋಮಿನಿ ರಮೆ ಶುಭನಾಮ ಲಲಾಮೆ 3
--------------
ಶಾಮಸುಂದರ ವಿಠಲ
ಬಾರೈಯ್ಯಾ ಬಾರೈಯ್ಯಾ ಚಕೋರ ಶಶಾಂಕಾ ಪ ಕ್ಲೇಶ ಕಳೆದು ತವ ದಾಸ ಜನರ ಸಹವಾಸವ ನೀಡಲು 1 ಹನುಮ ಭೀಮ ಮುದ | ಮುನಿವರ ಹರಿಪದ ಅನುದಿನ ಗರೆಯಲು 2 ವಾತಜ ನಿನ್ನಯ ದೂತರು ನಾವೈ ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು 3 ಭಾವ ಭಕ್ತಿಯಲಿ | ಸೇವಿಪರಿಗೆ ಸುಖ | ದೇವಗುರು | ಛಾವಣಿ ನಿಲಯಾ 4 ತಂದೆ ನೀನೊಲಿದರೆ | ನಂದಜ ಶಾಮ ಸುಂದರ ಸಲಹುವನೆಂದು ಪ್ರಾರ್ಥಿಪೆವು 5
--------------
ಶಾಮಸುಂದರ ವಿಠಲ
ಬೃಂದಾವನದಿ ನೋಡುವ ಬಾರೆ ಗೋ-ಪ ವಿಂದನಾಡುವ ಸಂದಣಿ ಸಾಲದೆ ಸಖಿ ಅ.ಪ. ಮುನಿಗಳು ತರು ಪಕ್ಷಿ ಮೃಗಂಗಳಾಗಿರೆಸನಕಾದಿಗಳು ಗೋವುಗಳಾಗಿರೆಅನಿಮಿಷರೆಲ್ಲರು ಗೋಪಾಲರಾಗಿರೆದನುಜಾಂತಕನು ಮನುಜನಂತಾಗಿರೆ 1 ತಳಿತ ತೋರಣದಿಂ ತಂಪಿನ ನೆಳಲಿಂಮಳೆಯಾಗಿ ಸುರಿವಾ ಮಕರಂದ ಜಲದಿಂಫಲ ಪುಂಜಗಳಿಂ ಶುಕಚಾಟುಗಳಿಂನಳಿನನಾಭನನುಪಚರಿಪ ವೃಕ್ಷಗಳುಳ್ಳ 2 ತಳಿತ ತರುಗಳೆಲ್ಲ ತಂತಮ್ಮ ಜಾತಿಯಉಲುಹನುಳಿದು ಕಣ್ಣುಮುಚ್ಚಿ ತೆರೆಯುತ್ತನಳಿನನಾಭನ ವೇಣುಗೀತೆಯ ರಸದಲ್ಲಿಮುಳುಗಿ ಮುನಿಗಳಂತಿಪ್ಪ ಪÀಕ್ಷಿಗಳುಳ್ಳ 3 ಚಿತ್ತಜನೈಯನ ವೇಣುನಾದವಎತ್ತಿದ ಕಿವಿಯಿಂದ ಸವಿಯುತಲಿಮತ್ತಾದ ಸುಖಜಲ ಕಡಲಾಗಿ ಹರಿಯಲುಚಿತ್ತರದಂತಿಪ್ಪ ತುರುವಿಂಡುಗಳುಳ್ಳ 4 ನಖ ತಿಂಗಳ ಬೆಳಕಿಗೆತುಂಗ ಚಂದ್ರಕಾಂತ ಶಿಲೆ ಒಸರಿಹಿಂಗದೆ ಹರಿದು ಕಾಳಿಂದಿಯ ಕೂಡಲುಗಂಗೆ ಯಮುನೆಯರ ಸಂಗಮದಂತಿಪ್ಪ 5 ಚಕೋರ ಚಕ್ರವಾಕಇರುಳು ಹಗಲು ಎಂದು ಹೋಗುತಲಿರುತಿಪ್ಪ6 ಹರಿಯ ಕೊಳಲ ಸ್ವರದತಿ ಮೋಹನಕೆತರುಮೊಗ್ಗೆಗಳಿಂ ಪುಳುಕಿತವಾಗೆಗಿರಿಯು ಝರಿಯಾ ನೆವದಿಂ ಕರಗಲುತೊರೆಯು ಸುಳಿಯ ನೆವದಿಂದ ತಾ ನಿಲ್ಲುವ7 ಕುಂಡಲ ತಾಳಮೇಳದ ರಭಸಕ್ಕೆನಲಿನಲಿದಾಡುವ ನವಿಲ ಹಿಂಡುಗಳುಳ್ಳ 8 ನಳನಳಿಸುವ ವನಮಾಲೆ ಇಂದ್ರಚಾಪಪೊಳೆವ ಪೊಂಬಟ್ಟೆ ಮಿಂಚು ವೇಣುಗಾನಎಳೆಯ ಗರ್ಜನೆ ಶ್ಯಾಮಮೇಘ ಕೃಷ್ಣಮಳೆಯ ಮೇಘವೆಂದು ಚಾತಕ ನಲಿಯುತ9
--------------
ವ್ಯಾಸರಾಯರು
ಭಜೆ ಮುಕುಂದಂ ಗೋವಿದಂ ಪ ಚಕೋರ ನಿರಶೇಷಂ | ಗಾಧಿ ತನಯ ಸತ್ಕøತು ಪರಿತೋಷಂ 1 ಶಂಭರ ಸಂಭವ ಜಿತಶುಭನಯನಂ | ಶಂಭರ ನಿಧಿ ಕಮಲಾಯುತ ಶಯನಂ 2 ಘನ ಶ್ರೀ ಗಿರಿಧರ ಸುತ ಪರಿಪೋಷಂ | ಕನಕಲಸತ್ಸೋದಾಮಿನಿ ಜೈಲಂ 3 ಅಂಕಿತ-ಗಿರಿಧರಸುತ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾರತೀರÀಮಣನೆ ಸಾರಿದೆನು ಚರಣ ತೋರು ಮನ್ಮನದಲಿ ಭೂರಿಸುಕÀರುಣ ಪ ನಾರಾಯಣಾಂಕದಿ ಕುಳಿತಿಹ ಶೂರಾ ಸೂರಿಸ್ತೋಮತೇಜೊರಂಜಿಪುದಾರಾ ಮಾರಮಣನಾಙÁ್ಞದಿಂ ಬ್ರಹ್ಮಾಂಡಧಾರಾ ಧಾರಕಾನಂದ ವಿಠಲನ್ನಚಾರಾ 1 ದುರುಳರಕ್ಕಸತತಿಯ ದ್ವಿರದ ವಿದಾರ ಹರಿರಘುವರನಪಾದ ಶರಧಿಜ ಚಕೋರ ಹರಮುಖ್ಯ ಸುರಸರಸಿರುಹಕೆ ದಿನಕರ ವರದೇಶವಿಠ್ಠಲನ ಸ್ಮರಿಪÀ ಸಮೀರ 2 ಕುರುಕುಲ ಸಂಜಾತ ದ್ರುಪದಜಾನಾಥ ದುರಿಯೋಧನನ ಊರುತರಿದ ನಿರ್ಭೀತ ಪರಮ ಭಗವದ್ಭಕÀ್ತವೃಂದ ಸುಪ್ರೀತ ವರದೇಂದ್ರ ವಿಠ್ಠಲನ ಪ್ರೀಯ ಸುತನೀತ 3 ಅದ್ವೈತ ಮತತಿಮಿರ ಧ್ವಂಸÀನ ಧಿರ ಶುದ್ಧವೈಷ್ಣವ ಮತಸ್ಥಾಪನಾಪಾರ ಸದ್ವಾಕ್ಯದಿಂದಲಿ ಹರಿಪಾರವಾರ ಮಧÀ್ವಸುಂದರ ವಿಠ್ಠಲನ ಸುಕುಮಾರ 4 ವರದೇಶವಿಠ್ಠಲ ವರದೇಂದ್ರ ವಿಠಲ ಸುಂ - ದರ ವಿಠಲ ಆನಂದ ವಿಠ್ಠಲನ್ನ ಪರಿಪರಿ ವಿಧದಲ್ಲಿ ಕರುಣವ ಪಡೆದಿಹ ಗುರುಜಗನ್ನಾಥ ವಿಠ್ಠಲನ ನಿಜದೂತ 5
--------------
ವರದೇಶವಿಠಲ
ಭಾವಯೆ ಭವಭಾವಿತಚರಣಂ ಭವಭಯಾಪರಿಹರಣಂ ಪ ಕೋವಿದಂ ನಿಜ ಭಾವದಂ ಹೃದಿಅ.ಪ ವ್ಯಾಘ್ರಭೂಮಿಧರಾಗ್ರವಿಹರಣಮಗ್ರಜನ ಶರಣ್ಯಂ ಶೀಘ್ರ ಫಲದಮುದಗ್ರಪೌರುಷವಿಗ್ರಹಂ ಸುರಾಗ್ರಗಣ್ಯಂ1 ಕುಂಡಲೀಫಣಮಂಡಲಾಕೃತಮಂಡಜಾತಗಮನಂ ಹಿಮಕರಮಂಡಲವದನಂ 2 ರಾಮಮಿನಕುಲಸೋಮಮಾಶ್ರಿತ ಪ್ರೇಮಮಾಜಿಭೀಮಂ ಶ್ಯಾಮಜಲಧರಕೋಮಲಂಗುಣಧಾಮಮೀಶಪ್ರೇಮನಾಮಂ3 ನಂದನಂದನಮಿಂದಿರಾ ಹೃದಳಿಂದ ಲೋಲಮಿಳಿಂದಂ ಕುಂದರದನಮಮಂದಕರುಣಾನಂದಿತಾಖಿಲಲೋಕವೃಂದಂ4 ಸಾರನಿಗಮವಿಹಾರ ಕುಶಲಮುದಾರ ವರದವಿಠಲಂ ಭೂರಮಾಕುಚಕೋರಕಾಂಚಿತ ಚಾರುಮುಕ್ತಾಹಾರ ಪಟಲಂ 5
--------------
ವೆಂಕಟವರದಾರ್ಯರು
ಮಾಧವ ನಿಮ್ಮ ಪಾದಾ ದೋರೋ| ಸಾರಭಕುತಜನ ಸುರತರುವಾಗಿಹ ಪಾದಾದೋರೋ ಪ ಚಕೋರ ಚಂದಿರವಾದ ಪಾದಾದೋರೋ| ಪಾದ ದೋರೊ 1 ಕುಣಿದಾಡಿದ ಪಾದಾ ದೋರೋ| ಆಫಣಿಯಂಗವ ನಿರ್ವಿಷ ಮಾಡಿದ ಪಾದಾ ದೋರೊ2 ಸರಸಿಜ ಭವಭವರೊಂದಿತ ಪಾವನ ಪಾದಾ ದೋರೋ| ಗುರುಮಹಿಪತಿ ಪ್ರಭು ಕಂದಗೊಲಿದು ಬಂದು ಪಾದಾದೋರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಮುರಾರಿ ವಿದುರವಂದ್ಯ ಸದಾನಂದ ಶ್ರೀಹರಿ ಧ್ರುವ ಗೋಪವೇಷಧರ ಗೋಪ ಕೀಶೋರ ಚಕೋರ 1 ಯದುಕುಲತಿಲಕ ವಿರಾಜಿತ ಪೂರ್ಣ ಸದೋದಿತ ಸುಖಸಾಂದ್ರ ಸದ್ಗುಣ 2 ಭಾಸ್ಕರಕೋಟಿ ತೇಜ ಮಾಮನೋಹರ ದಾಸ ಮಹಿಪತಿ ಸ್ವಾಮಿ ಸಕಲ ಸಹಕಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾನಸ-ಗಣ್ಯಚಿನ್ಮಯನ ಪ ವನಮಾಲಿಕಾಗಳನ ಮಿಂಚನು ಸೋಲಿಸುತಿಹನ ||ಕಣ್ಣಾರೆ|| 1 ಹೃದಯಾತಂಕಮೋಚನನ ಚಕುಂಕುಮಾಂಕಿತನ 2 ಗುಣವೃಂದ ಪೂರಿತನ ಚಕೋರನಂದ ಚಂದಿರನ 3 ಕುಂಡಲ ಭೂಷಣನಿಕರ ಭೂಷಿತನ ಸುಖದಾಯಕನ ||ಕಣ್ಣಾರೆ|| 4 ಶರಣೆಂದು ಕರದಿ ತೊರುವವನ ನೆಲಸಿಹ ವರದ ವಿಠಲನ 5
--------------
ಸರಗೂರು ವೆಂಕಟವರದಾರ್ಯರು