ಒಟ್ಟು 39 ಕಡೆಗಳಲ್ಲಿ , 11 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಪ್ಪಿಕೊಂಬೆ - ರಂಗಯ್ಯ ನಿನ್ನ |ಎಂದಪ್ಪಿಕೊಂಬೆ........................... ಪಎಂದಪ್ಪಿಕೊಂಬೆ ನಾನೆಂದು ಮುದ್ದಾಡುವೆ |ಎಂದಿಗೆ ಸವಿಮಾತನಾಡಿ ನಾ ದಣಿವೆನೊ ಅ.ಪಅರಳೆಲೆಮಾಗಾಯಿ ಕೊರಳ ಪದಕ ಸರ |ತರಳರನೊಡಗೂಡಿ ಬೆಣ್ಣೆಯ ಮೆಲುವನ............... 1ಅಂದುಗೆಪಾಯ್ವಟ್ಟು ಗೆಜ್ಜೆ ಘಿಲುಘಿಲು ಕೆನೆ |ಚೆಂದದಿ ಕುಣಿವ ಮುಕುಂದನ ಚರಣವ................ 2ಹೊನ್ನಿನ ಉಡುದಾರ ರನ್ನದ ಚೌಕುಳಿ |ಚಿನ್ನದುಂಗುರವಿಟ್ಟಜಾಹ್ನವಿಜನಕನ.......................3ಅಪ್ಪಣ್ಣ ಭಾಗವತನ ರೂಪವು ತಾನಾಗಿ |ತುಪ್ಪದ ಬಿಂದಿಗೆ ತಂದ ವಿಠಲನ...................... 4ಪರಿಪರಿ ಭಕುತರ ಮರೆಯದೆ ಸಲಹುವ |ಪುರಂದರವಿಠಲನ ಸಿರಿಪಾದ ಪದುಮನ 5
--------------
ಪುರಂದರದಾಸರು
ಕಂಡೀರೇನೆ ಕಂಡೀರೇನೆ ಹಿಂಡುಗೋಪೇರುಪುಂಡರೀಕವರದ ಶ್ರೀ ಪಾಂಡುರಂಗ ಕೃಷ್ಣಯ್ಯನ ಪ.ಒಮ್ಮೆ ನಾನಂಜಿಸಿಕೊಂಡರಮ್ಮೆಯನುಣ್ಣದೆ ಹೋದನಮ್ಮ ರಂಗ ಸುಮ್ಮಾನದಿ ಭೀಮರಥಿಯಲಿದ್ದಾನಂತೆ 1ಎಡಬಲ ನೋಡದಲೆ ನಡೆದ ಕಾರಣವೇನೆಹಡೆದವರ ಮೇಲೆ ತಾ ಕಡುಕೋಪ ಉಚಿತೇನೆ 2ಗೆಜ್ಜೆ ಘಿಲ್ಲು ಒಡ್ಯಾಣದ ಗುಜ್ಜನ ಕಾಣದೆ ಕಣ್ಣಕಜ್ಜಳ ನೀರಾಗುತಿವೆ ದುರ್ಜನಾರಿ ಕೃಷ್ಣಯ್ಯನ 3ತಾಯಿತಂದೇರಗಲಿ ತಾನು ಬಯಲೊಳಗೆಂತಿಹನೆಮಾಯದ ಲೀಲೆಯ ನೋಡ್ವ ಬಯಕೆ ಕೈಗೂಡಲಿಲ್ಲ 4ಆಡುತಾಡುತ ಬತ್ತಲೆ ಓಡಿದ ವಾಜಿಯನೇರಿರೂಢಿಯೊಳ್ಪ್ರಸನ್ವೆಂಕಟ ಒಡೆಯ ವಿಠಲಯ್ಯನ 5
--------------
ಪ್ರಸನ್ನವೆಂಕಟದಾಸರು
ಕೋಲಕೋಲೆಂದು ಕೋಮಲೆಯರೆಲ್ಲರಕಾಲುಗೆಜ್ಜೆಯು ಘಿಲ್ಲು ಘಿಲುಕೆಂದು ಇಲ್ಲೆ ಪ.ಸಿಂಧುಶಯನನ ಚಂದದಲೆ ನೋಡಿಆನಂದ ಭಾಷ್ಪದ ಬಿಂದು ಉದುರುತ ಪಾಡಿಮಂದಹಾಸದಿ ಮನೆಗೆ ಬಾರೆನಲುಕೂಡಿಕೊಂಡು ಕೃಷ್ಣನ ಸಭೆಯ ಪ್ರವೇಶಮಾಡಿ 1ಕರಲಾಘವ ಧರ್ಮ ಕೊಟ್ಟನು ರಾಜ ಶ್ರೇಷ್ಠನು ಮನನರಹರಿಯಲ್ಲಿಟ್ಟಿಹನು ವರಸಿಂಹಾಸನ ಏರಿದಶ್ರೇಷ್ಠ ತೋರಿದ ಬಲುಹರುಷ ಬೀರಿದರಾಜಗೋಪಾಲನ ನೋಡುವ ವರವ ಬೇಡುವ 2ಜಳಕುಜಳಕುರಂಗ ಜಳಜಳಿಸುತ ಬರಲುಬೆಳಕು ತುಂಬಿತು ಬಹಳೆಮಂದಿರದಲಿಥಳಕು ಥಳಕನೆ ಹೊಳೆವ ಸಿಂಹಾಸನದÀಲಿಕುಳಿತ ಕೃಷ್ಣನು ಅಣಕಿಸಿ ಸೂರ್ಯನ 3ಭೇರಿತುತ್ತೂರಿನಾನಾಪರಿವಾದÀ್ಯವಸಾರಿ ಕುಳಿತ ಧೀರ ಮುರಾರಿಚಾರುಮಲ್ಲಿಗೆ ಮಳೆಗರೆದ ಸುಖಸುರಿವರರಾಯರು ಏನು ಧನ್ಯರೆÉ ರಾಜಗೋಪಾಲನ್ನ ನೋಡುವ 4ಹಲವು ರಾಯರು ಹಲವು ಯಾದವರುಬಲುಸೊಗಸಿಲೆ ಬಂದು ಕುಳಿತಾರೆ ಅವರುಹಲಧರನ ಹತ್ತಿರೆ ರಾಮೇಶನವರುಜಲಜಾಕ್ಷನ ನೋಡುತಲೊಪ್ಪುತಿಹರು 5ಕಡು ಚಲ್ವ ರಾಮೇಶನ ಮಡದಿಯರುಉಡುರಾಜಮುಖಿಯರು ನಡೆದು ದ್ರೌಪತಿಸುಭದ್ರೆಯರ ಮಾನÀ ಶುದ್ಧೆಯರಹರಿಯ ಅಡಿಗೆರಗುವ ರಾಜಗೋಪಾಲನ ನೋಡುವ 6
--------------
ಗಲಗಲಿಅವ್ವನವರು
ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ ಪಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪಸಲಿಲಜೋದ್ಬವನವದನನಿಲಯಳೇಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |ತಳಿರ ಪೋಲುವ ದಿವ್ಯಪಾದ| ಚೆಲ್ವಪೆಂಡೆಯ ಭೇದ ||ನಲಿವಯುಗಳಜಂಘೆ| ಜಲಗುಳ್ಳೆಯಂತೆಜಾನು|ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ 1ದಿನಕರಕೋಟಿ ತೇಜದಿ ಹೊಳೆವ ಅನುಪಮವಾದ |ಕನಕವಸನದಿಂದಲಿ ಎಸೆವ | ಘನವಾದ ಜಘನಗ-ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||ತನು ಜಠರವುಜಾಹ್ನವಿಸುಳಿನಾಭಿಯು |ಘನಸ್ತನಯುಗಳ ಚಂದನಲೇಪಿತಳೆ 2ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |ಸೊಂಡಿಲಿನಂತೆ ಭುಜದಭಾರನಡೆವ ಒಯ್ಯಾರ ||ಮಂಡಿತವಾದ ಕಂಕಣ ತೋಳ್ಬಳೆಗಳು |ದುಂಡು ಹವಳ ಕೈಕಟ್ಟುಳ್ಳವಳೆ 3ನಸುನಗು ಮುಖವು ನಾಸಾಭರಣ | ಎಸೆವಕಪೋಲ|ಹೊಸಕುಂಡಲಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||ಶಶಿಸೂರ್ಯರ ಆಭರಣ ಸುಶೋಭಿತೆ |ಕುಸುಮಮುಡಿದ ಮೂರ್ಧಜವುಳ್ಳವಳೇ4ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |ಹಿಂಗದೆ ಭಕ್ತರ ಸಲಹುವಭಾರ| ಕಂಗಳ ಮನೋಹರ ||ರಂಗಪುರಂದರವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ 5
--------------
ಪುರಂದರದಾಸರು
ನಿನ್ನ ಮಗನೇನೇ ಗೋಪಿ-ಗೋಪಮ್ಮ |ನಿನ್ನ ಮಗನೇನೆ ಗೋಪಿ? ಪಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪಿ? ಅ.ಪಕಟವಾಯ ಬೆಣ್ಣೆ ಕಾಡಿಗೆಗಣ್ಣುಕಟಿಸೂತ್ರ|ಪಟವಾಳಿಕೈಪಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ 1ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ 2ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ 3
--------------
ಪುರಂದರದಾಸರು
ಬಂದನೇನೆ-ರಂಗ-ಬಂದನೇನೆ-ಎನ್ನ |ತಂದೆ ಬಾಲಕೃಷ್ಣ ನವನೀತಚೋರ ಪಘಿಲುಘಿಲು ಘಿಲುರೆಂಬ ಪೊನ್ನಂದುಗೆ ಗೆಜ್ಜೆ |ಹೊಳೆಹೊಳೆಯುವಪಾದಊರುತಲಿ ||ನಲಿನಲಿದಾಡುವ ಉಂಗುರ ಅರಳೆಲೆಥಳಥಳ ಹೊಳೆಯುತ ಶ್ರೀಕೃಷ್ಣ 1ಕಿಣಿಕಿಣಿಕಿಣಿಯೆಂಬ ಕರದ ಕಂಕಣ ಬಳೆ |ಝಣಝಣಝಣರೆಂಬ ನಡುವಿನ ಗಂಟೆ ||ಗಣಗಣಗಣಯೆಂಬ ಪಾದದ ತೊಡವಿನ |ಕುಣಿಕುಣಿಕುಣಿದಾಡುತ ಶ್ರೀಕೃಷ್ಣ 2ಹಿಡಿಹಿಡಿಹಿಡಿಯೆಂದು ಪುರಂದರವಿಠಲನ |ದುಡುದುಡುದುಡುದುಡು ಓಡುತ ||ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು |ಬಿಡಿಬಿಡಿ ದಮ್ಮಯ್ಯ ಎನ್ನತಲಿ 3
--------------
ಪುರಂದರದಾಸರು