ಮರುಳೆ ಸುಖ ನೀನೆನು ಪಡೆದಿ
ನರಜನುಮ ತಾಳಿ ಇಹ್ಯದಿ ಪ
ಪರಿಪರಿ ಜನುಮ ತಾಳಿ
ಪರಮ ಬಂಧದೊಳೊರಲ
ಉರುಳಿ ವರಮುಕ್ತಿ ದೊರೆವ ಕೀಲಿ
ಸ್ಮರಿಸಿ ಬಂದಿ ಹರಿಯ ಬಳಲಿ 1
ಅರಿಯದೆ ಮತ್ತು ಭವಮಾಲೆ
ಕೊರಳಿಗ್ಹಾಕಿಕೊಂಡಿ ದುರುಳ
ಮರೆಯಮೋಸ ಕಾಂಬೋದೆಲ್ಲ
ಹರಿದು ಪೋಗ್ವುದು ಸ್ಥಿರವಲ್ಲ 2
ಸಮಯ ಮಿಂಚಿಪೋದ ಬಳಿಕ
ಕ್ರಮದಿ ಮತ್ತೆ ಸಿಗುವುದೆ ಮೂರ್ಖ
ವಿಮಲ ಶ್ರೀರಾಮ ಪಾದಕಮಲ
ನಮಿಸಿ ಪಡಕೊ ಮುಕ್ತಿಮಾಲಾ 3