ಒಟ್ಟು 42 ಕಡೆಗಳಲ್ಲಿ , 12 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀನಿಕೇತನ ಸರ್ವಪತಿಯು ಸಕಲ ಸಜ್ಜನಾನಂದ ಕರುಣಾ ಮೂರುತಿಯ ಕಂಠೇಧೃತ ಸತಿಯ ಮಣಿ ಮಯ ಪೀಠದಿ ಧ್ಯಾನಿಸಿ ಪರಮಾನುರಾಗದಿ ಪಾಡುತ ಮಾನಿಸಿ ಕರೆವೆ ಮುದದಿಂದ ಶೋಭಾನೆ 1 ಸಕಲ ಲೋಕಾಧಿನಾಥ ದೇವಾ ವಿಧಿ ನಾವ ವಿಕಸಿತ ಮುಖ ಕಂಜಭಾವ ಭಕ್ತರ ಸಂಜೀವ ಕುಂಡಲ ಶುಭ ಮುರುವಿಲಾಸಿತ ಕಪೋಲ ಸುಶೋಭಿತ ಕರುಣದಿ ಭಕುತಿಯನಿತ್ತು ದಯವಾಗು 2 ಕಂಧರಲಂಬಿ ವನಮಾಲಾ ಮಧ್ಯಸ್ಥ ಕೌಸ್ತುಭೇಂದಿರಾಸಕ್ತ ವಕ್ಷೋಲೀಲ ಕರುಣಾಲವಾಲ ಬಂದಹರಾರಿದ ರೆಂದಿವರ ಶುಭಾನಂದ ಕಾದಿದರ ಸುಂದರ ಶುಭಕರ ನಿಂದೀ ಮಂಟಪಕೆ ದಯವಾಗು 3 ವಿಧಿಯಾಸನಾದ ಕಂಜನೆ ಗದಾ ಗಂಭೀರ ವೃತ್ತ ನಾಭ ವಾಸಃ ಶೋಭ ಕರ ಭೋರ್ವಬ್ದಾಭ ಶುಭ ಪದಯುಗ ಕಂಜವ ಹೃದಯದಿ ತೋರುತ ಸದಯದೊಳಗರಿಗಳ ಸದೆವುತ ಹಸೆಗೆ ದಯವಾಗು 4 ಮೂರ್ತಿ ಸುರವರ ನುತಕೀರ್ತಿ ಶ್ರೀನಿಧಿ ಪರಿಹರಿಸಾರ್ತಿ ಪರಿಪೂರಿಸುತರ್ಥಿ ದೀನ ಬಂಧು ಸ್ವಜನಾನುಕಂಪ ಕರ್ಣಾನುಜಸಾರಥಿ ಶೇಷ ಗಿರೀಶ ಸುಮ್ಮಾನವ್ಯಾಕಿನ್ನು ಹಸೆಗೇಳು 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಿಡಿ ಸಾಧು ಸಂತರಾ ಸಂಗೆನ್ನ ಮನವೆ | ಹಿಡಿ ಸಾಧು ಸಂತರ ಸಂಗಾ | ಪೊಡವಿಲಿ ಭವಭಯ ಬಿಡಿಸಿ ಮುಕುಂದನ | ಅಡಿಗಳ ತೋರಿಸಿ ಕಾವುದು ಹಿಡಿಹಿಡಿ ಪ ಐದು ವರುಷ ಮಗನೈದಿದ ತಪದಲಿ | ಸಾಧು ಸಂಗನೇ ಹೊರೆಯಿತು | ಸಾಧಿಸಿ ಗರ್ಭದಲಿರೆ ಸಾಧು ಸಂಗ | ಪ್ರ | ಲ್ಹಾದನ ಯಚ್ಚರಿಸಿತು | ಹಾದಿಯೊಳಗ ರಾಹುಗಳ ರಾಯಾಗಾಗಲು | ಸಾಧು ಸಂಗುದ್ಧರಿಸಿತು | ಮೇದಿನಿಪತಿ ಪರೀಕ್ಷಿತಗೇಳು ದಿನದಲ್ಲಿ | ಬೋಧಿಸಿ ಸದ್ಗತಿ ದೋರಿತು ಹಿಡಿಹಿಡಿ 1 ವನಜಭವನ ಲೋಕದಲಿ ಸಾಧು ಸಂಗವು | ಸನಕಾದಿಕರ ಹೊರೆಯಿತು | ವನದಲಿ ಯದುರಾಯಗಾಗಲು ಸತ್ಸಂಗ | ಅನುಭವ ಸುಖ ದೊರೆಯಿತು | ವಿನಯದಿ ಸತ್ಸಂಗ ದೇಹೂತಿ ಮೊದಲಾದ | ಮುನಿಜನರುದ್ಧರಿಸಿತು | ರಣದಲ್ಲಿ ಅರ್ಜುನಗಾಗಲು ಸತ್ಸಂಗ | ಅನುಮಾನ ನೀಗಿಸಿ ಕಾಯಿತು ಹಿಡಿಹಿಡಿ 2 ಅಂದಿಗೆಂದಿಗೆ ಸಿದ್ಧ ಸಾಧಕರೆಲ್ಲಾ | ನಂದನ ಸುಖ ಬಿಡಿಸಿತು | ಹಿಂದಿನ ಕಥೆಗಳಿರತಿರಲಿನ್ನು ಸತ್ಸಂಗ | ಇಂದೆನ್ನ ಧನ್ಯಗೈಸಿತು | ಪಾದ ಪದುಮಸಂಗ | ನಂದನುದ್ಧರಿಸಿತು | ಯಂದೆಂದಿಗಗಲದೆ ಮುಕ್ತಿಗೆ ಹೊಣೆಯಾಗಿ | ಕುಂದದಾ ಸುಖಕೈಯ್ಯ ಗೊಟ್ಟಿತು ಹಿಡಿಹಿಡಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಂಗನಾಕುಲ ಶಿರೋಮಣಿ ಶ್ರೀಮಾ |ಶೃಂಗಾರವನಧಿಗರುಡಧ್ವಜೆಮಂಗಳಾದೇವಿ ಹಸೆಗೇಳು ಪಕ್ಷೀರಸಾಗರಕನ್ಯಾವಿಧಿ|ಮಾರಾಂತಕ ಶಕ್ರಕರಾರ್ಚಿತೆ ||ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು 1ಭಾರತಿಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು 2ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||ವಸುಧೆಗಾನಂದ ಪಡಿಸಲು |ಶುಭಕುಂದರದನೆಆಸಿತಕುಂತಲೆಯೇ ಹಸೆಗೇಳು 3ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆಕೃತಿ|ಯೊಡತಿ ಜಯಮಾಯಾ ಹಸೆಗೇಳು 4ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||ಪಾಣಿಯಾಗಿಹಳೆಶ್ರುತಿವೇದ್ಯೆ | ಶ್ರುತಿವೇದ್ಯೆ ದೇವದೇವಿಕಅಹಿವೇಣಿಶುಕವಾಣಿ | ಹಸೆಗೇಳು 5
--------------
ಪ್ರಾಣೇಶದಾಸರು