ಒಟ್ಟು 124 ಕಡೆಗಳಲ್ಲಿ , 42 ದಾಸರು , 117 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿದು ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ ಬದರಮಂಗಳಗಾತ್ರ ಬಲು ಸುಲಭ ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ 1 ಅಂದವಾದ ಕಾವ್ಯ ಸಾಮಥ್ರ್ಯಧೀರುವೆ ಮಂದಹಾಸದಿ ನೋಳ್ಪ ಭಕುತ ಜನರ ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು ನಿತ್ಯ 2 ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ ಸಾಧು ಸಜ್ಜನಗೇಯ ಸತ್ಯಬೋಧ ಮೋದಿ ಹಯವದನ ರಾಮ ವಿಜಯವಿಠ್ಠಲ ನಾದಿದೈವವೆಂದು ಎಣಿಸುವ ಜಪಶೀಲ 3
--------------
ವಿಜಯದಾಸ
ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ ಉರಗಕೇತನ ಮೊರೆಯ ಲಾಲಿಸಿ ತರಣಿಜನಿಗೆರಡೊಂದು ಯುಗದಲಿ ಧುರದಿ ಸಾರಥಿಯಾಗಿ ಸ್ಯಂದನ ಭರದಿ ನಡೆಸಿದ ಪರಮ ಪುರುಷನೆ ಅ.ಪ ಶರಣು ಜನ ಸುರಧೇನು | ಹೇ ತಾತ ನೀ ಮೂರೆರಡು ಜನುಮಗಳನ್ನು | ಕಳೆದು ಮ ತ್ತುರುವ ಅವತಾರವನು ಭಕ್ತಿಪೂರ್ವಕ ಪಿರಿಯರಾಜ್ಞದಿ ನೀನು ಪೂರೈಸಲಿನ್ನು ಧರಣಿಯೊಳಗವತರಿಸಿ ನರರಿಗೆ ಅರಿಯದಂದದಿ ಹರಿಯ ದಿಸೆಯೋಳ್ ಹರಿಯ ಸ್ಮರಿಸುತ ಚರಿಪ ಧೊರೆ ತವ ಚರಣ ದರುಶನಗರೆದು ಕರುಣದಿ 1 ಕ್ಲೇಶ ತಡಮಾಡದಲೆ ನೀ ಭವ ಪಾಶ | ದೃಢಮನವ ಕೊಡು ನಿ ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ ಬಿಡದೆ ಮಾಡುಪದೇಶ ಪೊಡವೀಶದಾಸ ಒಡೆಯನೇ ನೀನಡಗಿ ಎನ್ನನು ಕಡೆಗೆ ನೋಡಲು ಪಡೆದ ಜನನಿಯು ಪಿಡಿದು ಬಾಲನ ಮಡುವಿನೋಳ್ ತಾ ಬಿಡುವ ತೆರ ತವ ನಡತೆ ಎನಿಪುದು 2 ಮಂದನಾನಿಜವಯ್ಯ | ಸಂದೇಹವಿಲ್ಲದೆ ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು ರಂದರಾರ್ಯರ ಪ್ರೀಯ ಆನಂದ ನಿಲಯ 3
--------------
ಶಾಮಸುಂದರ ವಿಠಲ
ಕರುಣಾನಿಧಿ ನೀ ಶ್ರೀರಾಮ ನಿನ್ನ ಚರಣ ಸೇವಿಪರಾನತ ಪ್ರೇಮ ಪ. ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ. ಆಶ್ರಿತ ಜನರಿಗೆ ನೀನಲ್ಲದೆ ನಿ ನ್ನಾಶ್ರಯಗೊಡದಿರೆ ಗತಿ ಕಾಣೆ ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ ಜಗತ್ರಯ ಸಲಹೊ ಕೋದಂಡಪಾಣಿ 1 ಭವಭಯಭಂಜನ ಶ್ರೀರಾಮ ಎನ್ನ ಭಯವ ಬಿಡಿಸೊ ಜಾನಕಿ ರಾಮ ಕವಿಗೇಯ ನೀನೆ ಜಗದಭಿರಾಮ ಎನಗೆ ಜವನ ಬಾಧೆಯ ಬಿಡಿಸೊ ರಘುರಾಮ 2 ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ ಬಂದ ಕಷ್ಟದಿ ಸಲಹುವ ನೀನೆ ಮುಂದೋರಿ ಸಲಹೋ ತಾಯಿ ಗುರು ನೀನೆ ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ 3
--------------
ಸರಸ್ವತಿ ಬಾಯಿ
ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ ಗೇಯೆ ಪ ಕಾಯ ನಿನ್ನದುಕಾಯೇ ಕರುಣಾಬ್ಧಿಯೇಅ.ಪ. ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನ ಪದ್ಮಪಾದ ಹೃ-ತ್ಪದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ 1 ವೃಷ್ಟಿ ಗರೆಯಾಲುಈ ಕೊಲ್ಲೂರೊಳು ನೀ ಕರುಣದಿ ನಿಂದೀ 2 ನಿನ್ನ ಪಾದಾಬ್ಜವನ್ನು ಅನುದಿನಸನ್ನುತಿಸುವೆ ಚೆನ್ನ ವಿಜಯ ರಾ-ಯನ್ನ ಮನೆ ಮುಂದೆ ಕುನ್ನಿಯನ್ನೇ ಮಾಡಿ ಎನ್ನ ಪುಟ್ಟಿಪುದು ||ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ 3
--------------
ಮೋಹನದಾಸರು
ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ | ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ ಅಜನನಂದನೆ ಚಂದ್ರವದಗೆ | ಚತುರಮಯೆ | ಸುಜನರಿಗಾನಂದ ಸದಗೆ | ಧವಳಕಾಯೆ | ಭಜಿಸಿ ಬೇಡುವೆ ನಿನಗಿದನೆ | ಸೃಜಿಸಿ ಕೊಡುವುದು | ತ್ರಿಜಗದೊಳಗೆ ಹರಿ | ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ | ಹಜ ಮತಿಯನುದಿನ | ಕುಜನ ನಿವಾರೆ 1 ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ | ಕಲಕಾಲಾ ಸುಜ್ಞಾನಾಂಬುಧಿಯೆ | ತಲೆವಾಗಿ ನಮಿಸುವೆ | ಹಲವು ಜನ್ಮಂಗಳ | ಒಳಗೊಳಗೆ ಬಿದ್ದು | ಹಲಬುತಿಪ್ಪ ವ್ಯಾ | ಕುಲವನು ಕಳೆದು ನಿ | ಶ್ಚಲ ಮತದೊಳಗಿಡು 2 ನಿತ್ಯ ಉತ್ತಮ ಗುಣಸಮುದ್ರೇ | ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ | ಕವೇರಕನ್ಯೆ ......ಗಿತ್ತ ಪೊಳೆವ ಸೂಭದ್ರೆ | ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು ಸ್ರೌತ್ಯದಿಂದಲಿ ಬಲು | ನೃತ್ಯಮಾಡುವ ಸಂ |ಪತ್ತನೆ ಕರುಣಿಸು 3
--------------
ವಿಜಯದಾಸ
ಗುರು ವಾದಿರಾಜ ರವಿಕೋಟಿ ತೇಜಾ ಶರಣೆಂಬೆನಯ್ಯಾ ಸತತಗೇಯಾ ಪ ನಂಬಿದೆನು ನಿನ್ನ ದಯ ಸಂಪನ್ನ ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ 1 ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ 2 ಮಾಯಿಗಳ ವದ್ದ ಮಮತಾ ಗೆದ್ದ ಗಾಯನ ಪ್ರಸಿದ್ಧ ಗುಣದಲಿ ಇದ್ದ 3 ನಾನಾ ಚಾರಿತ್ರ ತೋರಿದ ಮಿತ್ರ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ4 ಸಂತತ ವಿರಕ್ತ ಜೀವನ ಮುಕ್ತಾ ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ 5 ಸ್ವಾದಿಪುರವಾಸ ಸಾಧುಗುಣ ಭಾಸಾ ಸದ್ಭಕುತ ಪೋಪ ಮಧ್ವಮುನಿಯ ದಾಸಾ 6 ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಿ7
--------------
ವಿಜಯದಾಸ
ಜಂಭಾರಿಸುತ ಅಭವ ಪ ಪುರಹರ ಸಾಂಬ ತ್ರಿಯಂಬಕ ಶಂಬಕಾರಿ ರಿಪುಗಂಭೀರ ಕರುಣಿ ಅ. ಪ. ಭಸಿತ ಭೂಷಿತ ಶರೀರ-ಭಕ್ತರುದ್ಧಾರ ವಿಷಕಂಠ ದುರಿತಹರ ಪಶುಪತಿ ಫಣಿಹಾರ-ಪಾವನಕಾರ ನೊಸಲನಯನ ವಿಕಸಿತಾಂಬುಜ ಮುಖ ಶಶಿಧರ ಮತ್ತರಕ್ಕಸ ಮದ ಮರ್ದನ ಘಸಣೆಗೊಳಿಪ ತಾಮಸವ ಕಳೆದು ಮಾ- ಬಿಸಜ ಪಾದವ ತೋರೊ 1 ರಜತ ಪರ್ವತ ನಿವಾಸ ನಿರ್ಮಲ ಭಾಸ ಗಜವೈದ್ಯನಾಶ ಗಿರೀಶ ಸುಜನರ ಮನೋವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಕೆಡಸಿದೆ ಅಜಗರ ಮಂದಿ ಗಜಮುಖ ಜನಕನೆ ಗಜಗಮನ ಮುನಿ ತನುಜನ ಕಾಯ್ದನೆ ವಜ್ರಮುನಿ ವಂದಿತ ಭಜಿಸುವೆ ನಿನ್ನ2 ಮಧರಾಪುರಿ ನಿಲಯ ಮೃತ್ಯುಂಜಯ ಸದಮಲ ಸುಮನಗೇಯ ಸದಾ ನಮಿಪರ ಹೃದಯದೊಳಗುಳ್ಳ ಭಯ- ಸದೆಯುತ್ತ ಕೊಡು ಅಭಯ ಜಾಹ್ನವಿ ಧರಕೃತ ಮಾರಾ ನದೀತೀರದಿ ವಾಸವಾಗಿಪ್ಪ ಸೌಂದರ್ಯ ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ ಮಧುಪನೆನಿಪ ಪಂಚವದನ ಕೈಲಾಸ 3
--------------
ವಿಜಯದಾಸ
ಜಯ ಜಯ ಜಯ ಮುನಿವರ್ಯ ಜಯ ಮಧ್ವಶಾಸ್ತ್ರ ವ್ಯಾಖ್ಯಾನಾತಿಗೇಯ ಪ ಮಂಗಲವೇಡೆಯೊಳುದುಭವಿಸುತ ಜಗ- ನ್ಮಂಗಲಕರವಾದ ಟೀಕೆಯ ರಚಿಸಿ ಮಂಗಲಮೂರುತಿ ರಾಮನ ಭಜಿಸುತಾ- ನಂಗನ ಜಯಿಸಿದ ಮುನಿಕುಲ ತಿಲಕ 1 ವಿದ್ಯಾರಣ್ಯನೆಂಬ ಖಾಂಡವ ವನವನೆ ಯಾದವೇಶನ ಸಖನಂತೆ ನೀ ದಹಿಸಿ ಮಧ್ವಶಾಸ್ತ್ರವೆಂಬ ರತ್ನವ ಜನರಿಗೆ ಸುಧೆಯಂತೆ ಕುಡಿಸಿದ ಯತಿವಂಶ ರತ್ನ 2 ಮಾಧ್ವಗ್ರಂಥವ ನೀನು ಬಂಧುವೆಂದೆಣಿಸುತ ರಾಜೇಶ ಹಯಮುಖ ಶ್ರೀರಾಮಚಂದ್ರ ಪಾಂದಾಂಬರುಹವನ್ನೆ ಬಿಡದೆ ಸೇವಿಸುತಲಿ ವಾದೀಭಗಳಿಗೆ ಮೃಗೇಂದ್ರನಾಗಿರುವಿ 3
--------------
ವಿಶ್ವೇಂದ್ರತೀರ್ಥ
ಜಯ ಜಯ ದ್ವಾರಕಾವಾಸ ಜಯ ಮುನಿಮಾನಸಹಂಸ ಪ. ಜಯ ಕಂಸಾಸುರವಿಧ್ವಂಸ ಯದುಕುಲಾವತಂಸ ಅ.ಪ. ಜಯಗೋಪೀಜನಜಾರ ಜಯ ಕೌಸ್ತುಭಮಣಿ ಹಾರ 1 ಜಯಜಯ ಸನ್ನುತಕಾಯ ಜಯಸುರಮುನಿಗೇಯ ಜಯ ಸಾಗರನಿಲಯ ಜಯ ಶುಭಗುಣವಲಯ 2 ಜಯಜಯ ದೈತ್ಯವಿನಾಶ ಜಯ ನುತಶೇಷಗಿರೀಶ ಜಯಜಯ ಮಂಜುಳಭಾಷ ಜಯ ಪಾಂಡವಪರಿತೋಷ3
--------------
ನಂಜನಗೂಡು ತಿರುಮಲಾಂಬಾ
ಜಯ ಜಯ ಮೃತ್ಯುಂಜಯ ಜಗದಾಶ್ರಯ ಭಯಹರ ವಿಗತಾಮಯ ಶಿವ ಸದಯಪ. ಭಾಗವತೋತ್ತಮ ಭಾಸುರಕಾಯ ಭಾಗೀರಥೀಧರ ಭಗವತೀಪ್ರಿಯ1 ಅಗಜಾಲಿಂಗನ ಸುಗುಣನಿಕಾಯ ಮೃಗಧರಚೂಡ ಮುನಿಜನಗೇಯ2 ಲಕ್ಷ್ಮೀನಾರಾಯಣಪರಾಯಣ ರಕ್ಷಿಸು ತ್ರಿಜಗಾಧ್ಯಕ್ಷ ಸುಶ್ರೇಯ3
--------------
ತುಪಾಕಿ ವೆಂಕಟರಮಣಾಚಾರ್ಯ
ಜಯ ಜಯ ಶ್ರೀಹರಿಪ್ರಿಯೆ ಜಯಕ್ಷೀರಾಂಬುಧಿತನಯೇ ಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ ಪ ಜಯ ರತ್ನಾಕರ ತನಯೆ ಕುರುಕರುಣಾಮಯಿ ಸದಯೆ ಹರಿ ವಕ್ಷ ಸ್ಥಳ ನಿಲಯೆ ಸುರಮುಖಗೇಯೆ 1 ಜಯ ಜಯ ಪಾವನ ಚರಿತೆ ಜಯಚತುರಾನನ ಮಾತೆ ಜಯ ಭಕುತಾಭಯ ದಾತೆ ನಮಿಸುವೆ ಭೂಜಾತೆ 2 ಜಯ ಜಯ ಕಾರ್ಪರ ಸದನೆ ಜಯನರಸಿಂಹನ ರಾಣಿ ಸುರಸಂಶೇವಿತಚರಣೆ ಪಾಹಿಜಗಜ್ಜನನಿ 3
--------------
ಕಾರ್ಪರ ನರಹರಿದಾಸರು
ಜಯ ಜಾನಕೀನಾಥ ಜಯ ಕುಶೀಲವ ತಾತ ಜಾಮಾತ ಪ ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ 1 ಘೋರ ಪಾಪವಿದೂರ ಕುಜನಸಂಹಾರ ಸಾರತತ್ವವಿಚಾರ ಸದಸದ್ವಿಹಾರ 2 ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ ನವತುಳಸಿದಳಧಾಮ ನತಜನಪ್ರೇಮ ಅವನಿಪಾಲಲಲಾಮ ಅಖಿಳಾಮರಸ್ತೋಮ ಕವಿಗೇಯ ಗುರುರಾಮವಿಠಲ ರಿಪುಭೀಮ3
--------------
ಗುರುರಾಮವಿಠಲ
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ದಯದಿ ಸಲಹೋ | ಜಯರಾಯ ಪ ಕಾಗಿಣಿ ನಿಲಯ | ಕವಿಜನಗೇಯ ಯೋಗಿವರಿಯ ಕೃಪಾಸಾಗರ ಸತತ 1 ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ ಮುರಿದು ಕುಭಾಷ್ಯವ | ಮೆರೆದ ಮಹಾತ್ಮ 2 ಭೀಮ ಭವಾಟಲಿ | ಧೂಮಧ್ವಜ ಸಂ ಸಿರಿ | ಶಾಮಸುಂದರಪ್ರಿಯ 3
--------------
ಶಾಮಸುಂದರ ವಿಠಲ
ನಮೋ ನಮೋ ಭೀಮಾ | ಜೀವೋತ್ತುಮಾಪ್ತ ಜನ ಪ್ರೇಮಾ ಪ ಕುಮಾನ ಜನ ಸುಪ್ರಮೋದ ವಿನಾಶಕ ಶಮಾದಿ ಗುಣನಿಧೆ | ಕ್ಷಮಾಪಣಂ ಕುರು ಅ.ಪ. ಕಾನನ ಸುಕುಠಾರ ||ಭ್ರಾಂತ ದುಶ್ಯಾಸನ | ಅಂತ್ಯವ ಕಾಣಿಸಿಕಾಂತಾ ಮಣೀಯನು | ಸಂತೋಷ ಪಡಿಸಿದೆ 1 ಗೋಪಿ | ನಂದಾನಗತಿ ಪ್ರೀಯವಂದೀಸಿ ಬೇಡುವೆ | ಕುಂದೂಗಳೆನ್ನಯನೊಂದಾನು ಎಣಿಸಿದೆ | ನಂದನ ಪಾಲಿಸೊ 2 ಕಾಯ ಭವ ಮುಖಾದಿ ಗೇಯ ||ಅವಿರತದಿ ಗುರು | ಗೋವಿಂದ ವಿಠಲನಸ್ತವನ ಗೈವನ | ಭವವ ಕಳೆಯುವ 3
--------------
ಗುರುಗೋವಿಂದವಿಠಲರು