ಒಟ್ಟು 21 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು ಸರಸಿಜಭವಾದ್ಯರಿಗೆ ಬಿಡದು ಪ ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ ದಿರದಾವ ಜನುಮವಾಗೆ ಪ್ರಾಣಿ ಅ.ಪ. ವಾರಿಜಭವನ ನೋಡು ಮುನಿಶಾಪದಿಂ ಧಾರುಣಿಯೊಳು ಪೂಜೆ ತೊರೆದ ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ- ತಾರವಿಲ್ಲದವನಾದನೋ ಪ್ರಾಣಿ1 ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು ಯುಗದೊಳಗೆ ಕೋತ್ಯಾದನಲ್ಲೋ ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ 2 ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ ಅವನಿಪತಿ ಮೊರೆ ಹೊಕ್ಕನಲ್ಲೊ ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ 3 ಇಂದ್ರ ತರ್ಕವನೋದಿ ನರಿಯಾದ ಪರಸತಿ- ಯಿಂದ ಮೇಷ ವೃಷಣನಾಭ ಕಂದರ್ಪ ಶರೀರದಿಂದ ನಾಶನನಾಗಿ ಬಂದ ಮೀನಿನ ಗರ್ಭದಿಂದ ಪ್ರಾಣಿ4 ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ ಭಾರ್ಯರಿಗೆ ಶಿಲುಕಿ ತಮ್ಮಾ ವೀರ್ಯವನು ಕಳಕೊಂಡು ಬರಿದಾದರೋ ಕರ್ಮ- ಕಾರ್ಯ ವಾರಿಗು ಬಿಡದೆಲೋ ಪ್ರಾಣಿ 5 ಪಾವಕನು ಸರ್ವಭಕ್ಷಕನಾದ ಮಿಕ್ಕಾದ ಅವಾವ ಸುರರ ಕರ್ಮಂಗಳ ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು ಪಾವನ್ನ ನೀನಾಗೆಲೋ ಪ್ರಾಣಿ 6 ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ ಸಾವು ಸಾಕಲ್ಯದಿ ಮರೆಯದಲೆ ಕ್ಲುಪ್ತ ಮಾಡಿಪ್ಪನೋ ಅದನು ಆವನಾದರು ಮೀರಲೊಳÀವೇ ಪ್ರಾಣಿ 7 ಉಣಬೇಕು ಉಣಬೇಕು ಮತ್ತೆ ಉಣಲೀಬೇಕು ತ್ರಿ-ಗುಣ ಕಾರ್ಯರ ಭವಣೆ ಮನುಜ ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು ಅಣುಮಾತ್ರವೂ ತಪ್ಪವೋ ಪ್ರಾಣಿ 8 ಧೀರನಾಗಲಿ ಮಹಾಶೂರನಾಗಲಿ ಮತ್ತೆ ಧಾರುಣೀಪತಿ ಭಾಗ್ಯನಾಗೆ ಆರಿಗಾದರು ಬಿಡದು ಪರೀಕ್ಷಿತರಾಯನು ನೀರೊಳಗಿದ್ದ ತಿಳಿಯೋ ಪ್ರಾಣಿ 9 ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ- ಬಿಲ ಸಪ್ತದ್ವೀಪ ಪಾತಾಳದಿ ನಭ ಸ್ವರ್ಗಾದಿಲೋಕ ಜನನಿಯ ಜಠರ- ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ 10 ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ ಗುಣವಂತ ಜನರು ಒಂದು ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ 11 ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ- ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ 12 ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು ರೊಕ್ಕಾ ಸುಖ ದುಃಖ ಕಾರಣಗಳು ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ- ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ 13 ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ- ದೇಶಕ್ಕೆ ಒಯ್ಯುವುದು ಕಾಲ ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ- ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ 14 ಮಾರುತ ಭಾರತಿ ಶೇಷ ಶಿವ ಪಾರ್ವತಿ- ಸರಸಿಜ ಬಾಂಧವಾಗ್ನಿ ಧರ್ಮ ಕಾಲ ಮೃತ್ಯು ಕಾಲನ ದೂತರು ಅರಸುತಿಪ್ಪರು ಲವ ತೃಟಿಯ ಪ್ರಾಣಿ 15 ಇವರಿವರಿಗುತ್ತಮರು ಇವರಿವರಗಧಮರು ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು ವಿವರದಲಿ ತಿಳಿ ತಾರತಮ್ಯ ಪ್ರಾಣಿ 16 ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ ಶಕುತಿಯಿಲ್ಲವೊ ಕಾಣೊ ಮರುಳೆ ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ- ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ 17 ಕರುಣಾ ಕಟಾಕ್ಷವುಳ್ಳನಕ ಸುರ ನರೋರಗ ಯಕ್ಷಲೋಕದಲ್ಲಿದ್ದವರು ಬರಿದೆ ಕೂಗಿದರೇನು ಆಹುದೋ ಪ್ರಾಣಿ 18 ಕಾಲ ತಪ್ಪಿಸಿ ಕಾವ ಹರಿತಾನು ಸಾವ ಕಾಲವ ಮಾತ್ರ ತಪ್ಪಿಸನೋ ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ 19 ಭಗವವÀಸ್ವತಂತ್ರವನು ತಿಳಿಯದೆ ಮರುಳಾಗಿ ಜಗದೊಳಗೆ ಚರಿಸದಿರೊ ಮಾನವ ಅಘ ದೂರನಾಗೊ ನಾನಾ ಬಗೆಯಿಂದಲ- ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ 20 ಹಲವು ಮಾತೇನಿನ್ನು ದಾಸಭಾವವ ವಹಿಸಿ ಕಲಿಯುಗದೊಳಗೆ ಸಂಚರಿಸೆಲೊ ಬಲವಂತ ವಿಜಯವಿಠ್ಠಲನ ಪಾದಾಂಬುಜವ ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ 21
--------------
ವಿಜಯದಾಸ
ಹರಿಯ ಚರಣ ನಿರುತ ಸ್ಮರಿಸಲೊ ಮೂಢ ಮನುಜ ನಿತ್ಯ ಪಾಡಿ ಭಜಿಸು ನರಕಭಯ ವಿಮುಕ್ತನಾಗೆಲೋ ಪ ಹಿಂಡುಬಳಗ ಕೂಡಿಹಾಕಿದಿ ಆಸಕ್ತನಾಗಿ ಬಂಡಿಹೊನ್ನು ಘಳಿಸಿ ಹೊಳಿದಿ ಬಗೆಬಗೆಯಲಿಂಡು ಬಂಡÀ ಬೆಳಸಿ ತುಂಡಗ್ವಾಣದಿ ತುಂಡಿನೇಗ ಜವನಭಟರು [?] ಬೆನ್ನ ಬಿಡವು 1 ಪಗಲು ಹರಟಿಯೊಳಗೆ ಪೋದಿತು ಆಯುಷ್ಯದೊಳಗೆ ಮಿಗಿಲು ರಾತ್ರಿ ವಿಷಯಗಳೆಯಿತು ಸುಗಂಧದ್ರವ್ಯ ಸೊಗಸಿನಿಂದ ಮೈಯ್ಯ ಮುಸುಕಿತು ಜಗದಿ ಘೂಳೆಯಂತೆ ಮೆರೆದಿ ಸೊಗಸಿನಂಗ ತೊಲಗಿತಲ್ಲಿ 2 ದುಷ್ಟತನಕೆ ದಾರಿ ಕೊಡದಿರು ಲೋಕದಲಿ ನೀನು ಭ್ರಷ್ಟನಾಗದೆ ತುಷ್ಟಿಯಿಂದಿರು ಕಷ್ಟಸುಖಗಳ್ಹರಿಗೆಯರ್ಪಿಸಿ ಸೃಷ್ಟಿಪರ ನರಸಿಂಹವಿಠಲನಷ್ಟ ವಿಧದಿ ಪೂಜೆಗೈದು ಇಷ್ಟ ಮುಕ್ತಿ ಸುಖ ಪಡೆಯೋ 3
--------------
ನರಸಿಂಹವಿಠಲರು
(ಬಪ್ಪನಾಡಿನ ಪಂಚದುರ್ಗೆ)ಮಂಗಲಂ ಶ್ರೀಪಂಚದುರ್ಗೆಗೆ ಜಯಮಂಗಲಾರತಿಯೆತ್ತಿ ಶ್ರೀಮಹೇಶ್ವರಿಗೆ ಪ.ಶಂಖಚಕ್ರಶೂಲಾಂಕುಶಪಾಣಿಗೆಶಂಕರನಂಕಾಲಂಕಾರಿಗೆಕುಂಕುಮಬೊಟ್ಟಕಸ್ತೂರಿ ಲಲಾಟೆಗೆಪಂಕಜಗಂಧಿ ಶ್ರೀಪಾರ್ವತಿಗೆ 1ಕೋಕಿಲಗಾನೆಗೆ ಕೋಕಪಯೋಜೆಗೆಶ್ರೀಕಂಠನರ್ಧಾಂಗಿ ಶ್ರೀಗೌರಿಗೆಏಕದಂತನ ಜನನಿಗೆ ಜಗದಂಬೆಗೆಲೋಕನಾಯಕಿ ಶ್ರೀಮಹಾಕಾಳಿಗೆ 2ಕಂಜದಳಾಕ್ಷಿಗೆ ಕಲಧೌತಗಾತ್ರೆಗೆಕುಂಜರಗಮನೆಕಂಧರಜಾತೆಗೆಮಂಜೀರನೂಪುರರಣಿತಪದಾಬ್ಜೆಗೆನಂಜುಂಡನ ಮನಮಂಜುಳೆಗೆ 3ಅಂಗಜರೂಪೆಗೆ ಮಂಗಲದಾತೆಗೆಭೃಂಗಕುಂತಳೆ ಸರ್ವಮಂಗಲೆಗೆಬಂಗಾರಮಕುಟೋತ್ತಮಾಂಗದಿ ಧರಿಸಿದಸಂಗೀತಲೋಲೆಗೆ ಶರ್ವಾಣಿಗೆ 4ರೂಢಿಗಧಿಕ ಬಪ್ಪನಾಡಿಗೊಡತಿಯಾಗಿಮೂಡಿತೋರಿದ ಶ್ರೀಮುಕಾಂಬಿಕೆಗೆಕ್ರೋಡಾವತಾರ ಲಕ್ಷ್ಮೀನಾರಾಯಣ ಸೊಸೆಬೇಡಿದಿಷ್ಟವನೀವ ಸರ್ವೇಶೆಗೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಂಗಲಂ ಜಯ ಶುಭಮಂಗಲಂ ಪ.ಶ್ರೀಗೌರೀಸುಕುಮಾರನಿಗೆಯೋಗಿವರೇಣ್ಯ ಶುಭಾಕರಗೆರಾಗ ಲೋಭ ರಹಿತಗೆ ರಜತೇಶಗೆಭಾಗೀರಥಿಸುತ ಭವಹರಗೆ 1ಪಾಶಾಂಕುಶ ವಿವಿಧಾಯುಧಗೆಪಾಶದರಾರ್ಚಿತ ಪಾವನಗೆವಾಸರಮಣಿಶತಭಾಸಗೆ ಈಶಗೆಭಾಸುರತನಕ ವಿಭೂಷಣನಿಗೆ2ಶೀಲ ಸುಗುಣಗಣ ವಾರಿಧಿಗೆನೀಲೇಂದೀವರಲೋಚನೆಗೆಲೋಲಲಕ್ಷ್ಮೀನಾರಾಯಣ ರೂಪಗೆಶಾಲಿ ಪುರೇಶ ಷಡಾನನಗೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶೋಭಾನವೇ ಬಗಳಾಮುಖಿ ದೇವಿಗೆಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿಪಸುತ್ತಿದ ಸರಿಗೆಯು ಒತ್ತಿದ ಚಿಂತಾಕೆತ್ತಿದ ರಾಗಟೆ ಹತ್ತಿದ ಚವುರಿಮತ್ತೆ ತುರುಬಿಗೆ ಪಂಚಕ ಮುಡಿದಿಹಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ1ಶ್ರವಣ ಮನನ ನಿಧಿಧ್ಯಾಸನ ಸಾಧಿಸಿಭವಭವಗಳ ತರಿದೆಲ್ಲವ ಛೇದಿಸಿಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆಪವಳದಾರತಿಯೆ ಬೆಳಗಿರೆ2ವಾಲೆಬಳೆಗಳು ತಾಳಿಯು ಮೂಗುತಿಸಾಲಿನ ಅಡ್ಡಿಕೆ ತಾಯಿತ ಸರಪಳಿಮೇಲು ಪದಕವೆ ಮೆರೆದಿಹ ಮೆರೆದಿಹ ಬಗಳಾಮುಖಿಗೆಲೋಲದಾರತಿ ಬೆಳಗಿರೆ3ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿಧರಿಸಿಹ ಸದ್ಗುರುನಾಥಗೆತೈಲದಾರತಿಯ ಬೆಳಗಿರೆ4ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆಜಸವುಂಗರ ಮೀನೆಸೆದಿಹಮುದ್ರಿಕೆಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆಶೀಲದಾರತಿಯ ಬೆಳಗಿರೆ5ಧಗಧಗಿಸುವ ಪೀತಾಂಬರದುಡುಗೆಯಝಗ ಝಗಿಸುವ ಮಹಾಸ್ವರ್ಣದ ಕಂಚುಕಿನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆಸುಗಮದಾರತಿಯ ಬೆಳಗಿರೆ6ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿಮೊಗೆ ಮೊಗೆದು ದಶನಾದವ ಸೇವಿಸಿಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆಸುಗಮದಾರತಿಯ ಬೆಳಗಿರೆ7ಸಪ್ತಾವರಣ ಭಸ್ಮವ ಮಾಡಿಸಪ್ತಭೂಮಿಕೆ ಪಾವಟಿಗೆಯನೇರಿಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆತೃಪ್ತದಾರತಿಯ ಬೆಳಗಿರೆ8ಕಂಕಣ ಹರಡಿಯ ಹಸ್ತದ ಕೈಯ್ಯಲಿಅಂಕುರಪಟ್ಟಿಯು ಪರಿಘವು ಶರಧನುಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗೆಪಂಕಜದಾರತಿಯ ಬೆಳಗಿರೆ9ಸಾರಿಯೆ ತ್ವಂ ಪದ ತತ್ವಮಸಿ ಪದಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ10ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ11ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆಅಭಯವ ನೀಡುತ ಭಕ್ತಿರಿಗಾಧಾರವಾಗಿ ಕರುಣಿಪಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ12ಚಿದಾನಂದ ಪರಬ್ರಹ್ಮವು ತಾನೇಮದಮುಖನು ಸಂಹರಿಸಲೋಸುಗಸದನಬ್ರಹ್ಮ ರಂಧ್ರದಿ ಸ್ಥಾನವಾಯ್ತುಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ13ಸಿದ್ದ ಪರ್ವತವಾಗಿಹ ಪ್ರ-ಸಿದ್ಧ ಬಗಳಾಮುಖಿಯೆಂದೆಣಿಸುವಸಿದ್ಧ ಚಿದಾನಂದಾವಧೂತಅವಧೂತಸದ್ಗುರುನಾಥಗೆಸಿದ್ಧದಾರತಿಯ ಬೆಳಗಿರೆ14
--------------
ಚಿದಾನಂದ ಅವಧೂತರು