ಒಟ್ಟು 19 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲವರು ಮೊರೆ ಹೋಗುವರೆ ನೀನಾವಬಲ್ಲಿದನೆಂದೆನ್ನನುಪೇಕ್ಷಿಪೆ ರಂಗ ಪ.ಸಲ್ಲದವನು ಸಾಲಗೂಳಿ ನೀ ಎಂದೆನ್ನಕ್ಷುಲ್ಲನ ಮಾಡಿ ನೀಕರಿಸದಿರೊಒಳ್ಳೆ ಸತ್ಯವ್ರತರ ಋಣ ನುಂಗಿ ಸೆರೆಸಿಕ್ಕಿಕಲ್ಹೊತ್ತು ಪುಲ್ಗಚ್ಚಿ ಹಲ್ದೆರೆದೆ ನೀನು 1ಬೇಡಿ ತಿರಿದು ಉಂಬ ಬಡವ ಛೀ ಸಾರೆಂದೀಡಾಡುವುದುಚಿತೆ ನೀ ನೃಪನೊಂಚಿಸಿಬೇಡಿ ಮನೆಯ ಕೊಂಡೆ ನೀರಿನರಸನಲ್ಲಿರೂಢಿಯ ಗೂಡ ಬಿಟ್ಟೋಡಿದೆತುಡುಗ2ನಾ ದೋಷಪೂರ್ಣನೆನುತ ಮನ ಬಲ್ಲದುನೀ ದೋಷದೂರನುಶ್ರುತಿಬಲ್ಲವುಭೂದೋಷಹರ ಪ್ರಸನ್ವೆಂಕಟೇಶ ತಿಳಿಯದೆನಾ ದಾಸನಾದೆ ನಾಮಸ್ವಾದಕ್ಹುಚ್ಚಾದೆ 3
--------------
ಪ್ರಸನ್ನವೆಂಕಟದಾಸರು
ಹಣ್ಣು ತಾ ಬೆಣ್ಣೆ ತಾರೆ - ಗೋಪಮ್ಮ-|ಹಣ್ಣು ತಾ ಬೆಣ್ಣೆ ತಾರೆ ಪಅಡವಿಯೊಳಗೆ ಅಸುರನ ಕೊಂದ ಕೈಗೆ |ಮಡುವಿನೊಳಗೆ ಮಕರನ ಸೀಳ್ದ ಕೈಗೆ ||ಪೊಡಿವಿಯೊಳಗೆ ಚೆಂಡನಾಡಿದ ಕೈಗೆ |ಸಡಗರದಲಿ ಭೂಮಿ ಬೇಡಿದ ಕೈಗೆ 1ಶಂಖ ಚಕ್ರಗಳ ಪಿಡಿದಂಥ ಕೈಗೆ |ಶಂಕೆಯಿಲ್ಲದೆ ಮಾವನ ಕೊಂದ ಕೈಗೆ ||ಬಿಂಕದಿಂದಲಿ ಕೊಳಲೂದುವ ಕೈಗೆ |ಪಂಕಜಮುಖಿಯರ ಕುಣಿಸುವ ಕೈಗೆ 2ದಿಟ್ಟತನದಲಿಬೆಟ್ಟವೆತ್ತಿದ ಕೈಗೆ|ಸೃಷ್ಟಿಯ ದಾನವ ಬೇಡಿದ ಕೈಗೆ ||ದುಷ್ಟಭೂಪರನೆಲ್ಲ ಮಡುಹಿದ ಕೈಗೆ |ಕೆಟ್ಟ ದಾನವರನು ಸದೆಬಡಿದ ಕೈಗೆ 3ಕಾಳಿಯ ಮಡುವನು ಕಲಕಿದ ಕೈಗೆ |ಸೋಳಸಾಸಿರ ಗೋಪಿಯರಾಳಿದ ಕೈಗೆ ||ಮೇಳದ ಭಕ್ತರುದ್ಧರಿಸುವ ಕೈಗೆ |ಏಳು ಗೂಳಿಯ ಗೆದ್ದ ಯದುಪನ ಕೈಗೆ 4ಬಿಲ್ಲು - ಬಾಣಗಳನು ಪಿಡಿದಂಥ ಕೈಗೆ |ಮಲ್ಲಸಾಧನೆಯನು ಮಾಡಿದ ಕೈಗೆ ||ಎಲ್ಲ ದೇವರದೇವ ರಂಗನ ಕೈಗೆ |ಬಲ್ಲಿದಪುರಂದರವಿಠಲನ ಕೈಗೆ5
--------------
ಪುರಂದರದಾಸರು
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ-------------------------- 5
--------------
ಪುರಂದರದಾಸರು