ಒಟ್ಟು 73 ಕಡೆಗಳಲ್ಲಿ , 30 ದಾಸರು , 66 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಸಾರಿ ಪ. ಶೌರಿ ಸುರ ನರವಂದಿತ ಚರಣವ ಕೋರಿ ಪರಿಪರಿ ಬೇಡುವೆ ನಿನ್ನೆಡೆ ಸಾರಿ ಅರಿಯದ ಕಂದನ ಪೊರೆ ದಯೆತೋರಿ ಅರಿಯೆನದಾರನು ಮರೆಯೆನು ನಿನ್ನನು ಕರುಣಾಕರನೆಂಬೀ ಬಿರುದುಳಿಸಿನ್ನು 1 ಮನ್ಮಥಪಿತ ಬಾ ಸುಂದರಕಾಯ ಮನ್ನಿಸು ಎನ್ನಪರಾಧವ ಜೀಯ ಚಿನ್ಮಯರೂಪನೆ ಚೆನ್ನಿಗರಾಯ ಅನ್ಯರ ನೆರೆಯೆನು ನೀ ಕೇಳಯ್ಯ ಎನ್ನೊಳಗೀಪರಿ ಛಲವೇಕಯ್ಯ ಇನ್ನಾದರು ಕೈಪಿಡಿ ದಮ್ಮಯ್ಯ 2 ಮಂದರಗಿರಿಧರ ಗೋವಿಂದನೆ ಬಾ ನಂದಕುಮಾರನೆ ತಡೆಯದೆ ನೀ ಬಾ ನಂದಿನಿಗೊಲಿದಾನಂದವ ಕೊಡು ಬಾ ವೃಂದಾವನ ವಿಹಾರನೇ ಬಾ ಬಾ ಇಂದಿರೆಯರಸನೆ ಶೇಷಗಿರೀಶನೆ ಇಂದೆನಗೊಲಿದೈ ತಂದೆಯೆ ಭಳಿರೆನೆ 3
--------------
ನಂಜನಗೂಡು ತಿರುಮಲಾಂಬಾ
ಗಿರಿಧರ ಗೋಪಾಲ | ಗಾನವಿಲೋಲ ಪ ವರನೀಲೋತ್ಪಲ ಶ್ಯಾಮಲ ಕೋಮಲ ಕರುಣಾಲವಾಲಾ ಗೋಪಾಲಬಾಲ ಅ.ಪ ಸಕಲ ಚರಾಚರ ಭರಿತ ಸುಖಂಕರ ಬಕಶಕಟಾಸುರನಿಕರ ಭಯಂಕರ ಶುಕಮೌನೀಶ್ವರನುತ ಕರುಣಾಕರ ಸುಕುಮಾರಾಂಗ ರಾಜಿತ ಮಾಂಗಿರಿವರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ ದೀನೊದ್ದರ ಸಗಟಾಸುರದಮನಾ ಆನಂದ ಮೂರುತಿ ಫಣಿವರ ಶಯನಾ 1 ಕರುಣಾ ಕರಗಿರಿಧರ ಸರ್ವೇಶಾ ಶರಣಾಗತ ವತ್ಸಲ ಪಯೋನಿಧಿವಾಸಾ 2 ಕಂಬುಕಂದರ ಕಮಲಳಾಕ್ಷಾ ಅಂಬುಜ ಭವನುತಗೋಗೋರಕ್ಷಾ 3 ಶಂಬರ ಮಥನ ಜನಕ ಮಹಾ ಮಹಿಮಾ ಜಂಭಭೇದಿಸುತ ಸಖಘನ ಶಾಮಾ 4 ಪೀತಾಂಬರಧರ ಕೃಷ್ಣ ಶ್ರೀಧರಾ ಮಾತುಳನಾಶನ ಕೃತಭೂಧರಾ 5 ಗುರುಮಹಿಪತಿ ಸುತ ಜೀವನರಾಮಾ ಪರಮಾನಂದ ಕಾಯಕ ಗುಣಧಾಮಾ 6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾರೆ ಮುಕ್ತಕದಾರತಿ ಹರಿಗೆ ಕಮಲ ಮುಖಿ ಗಿರಿಧರಗೆ ಪ ಕ್ರೋಢ ನರಮೃಗಗೆ ಮಾಣವಕನಿಗೆ ವೀರಭಾರ್ಗವಗೆ ಸ್ಥಾಣು ಬಾಣವ ತುರಗವಾಹನಗೆ 1 ಮಂದರೋದ್ಧರ ಮಾತುಳಾಂತಕಗೆ ಶಿಂಧು ಮಂದಿರ ಸಾರಸಾಂಬಕಗೆ ವಂದಿಸುತ ಗೋವೃಂದ ಗೋಪಾಲಗೆ 2 ಸಾಮಗಾನವಿಲೋಲ ರಂಗನಿಗೆ ಶ್ರೀಮಹಿ ರಮಣ ವೆಂಕಟಗೆ ಕಾಮಿತಾರ್ಥವ ಕೊಡುವ ಕೋಮಲಾಂಗಗೆ ಶ್ರೀ ಶಾಮಸುಂದರವಿಠಲ ಮೂರುತಿಗೆ 3
--------------
ಶಾಮಸುಂದರ ವಿಠಲ
ತಿಳಿಯದೊ ನಿನ್ನಾಟ ತಿರುಪತಿಯ ವೆಂಕಟ ಪ. ನೀರೊಳು ಯಳವ ಮೋರೆಯ ನೆಳಲ ನೋಡುವಿ ಸುಳಿವರಂಬುಧಿ ಇಳೆಯನಾಳುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ದನಿಯನು ನಳಿನಮುಖಿಯರಿಗೆ ನಾಚಿಸುವದಿದೊಳಿತೆಯೇಳು ಹವಣಗಾರನೆ 1 ಆರುಬಲ್ಲರು ನಿನ್ನ ಶ್ರೀ ಲಕ್ಷ್ಮಿಯ ಮನಸಿಗೆ ತೋರದಿಹ ಪರಬ್ರಹ್ಮ ಉಳಿದವರು ಬಲ್ಲರೆ ನೀರಜಾಸನ ಬೊಮ್ಮಾ ಇದು ನಿಮ್ಮ ವರ್ತಿ ಭಾರ ಬೆನ್ನಲಿ 2 ಭೂರಿ ಮಾರ ಜನಕನೆ ಮೆರಿವೆ ಕೋಮಲಾಂಗನೆ 3 ಸಕಲ ಮಾಯವಿದೇನೊ ತ್ರಿವಿಕ್ರಮನ ಪಾಲಿಸಿ ಸಕಲನುಳಿಹಿದೆ ನೀನು ಭಕುತಿಯಿಂದಲಿ ಸ್ತುತಿಪರಿಗೆ ಸುರಧೇನು ಸುಮನಸರ ಭಾನೂ ಅಖಿಳವೇದೋದ್ಧಾರ ಗಿರಿಧರ 4 ನಿಖಿಳ ಭೂಮಿಯ ತಂದ ನರಹರಿ ಯುಕುತಿಯಲಿ ಆಳಿದೆ ಭಕ್ತವೃಂದಕೆ ಸುಖವ ತೋರುವ ವೇಣು ಗೋಪಾಲನೆ ರುಕುಮನನುಜೆಯ ರಮಣ ಬೌದ್ಧನೆ ಲಕ್ಷುಮಿಯರಸನೆ ಕಲ್ಕಿ ರೂಪನೆ 5 ನಿನ್ನ ರೂಪವಿದೆಲ್ಲಾ ನೋಡುವರಿಗೆ ಕಣ್ಣು ಸಾಸಿರವಿಲ್ಲಾ ಪಾಡಿ ಪೊಗಳಲು ರಂನ್ನಘಾತಿದೆನಲ್ಲಾ ಕಂಣಮುಚ್ಚದೆ ಬೆಂನ್ನ ತೋರುವೆ ಮಂಣ ಕೆÉದಿರದಿ 6 ಚಿಂಣಗೊಲಿದನೆ ಸಂಣವಾಮನ ಪುಣ್ಯಪುತ್ರನೆ ಹಂಣುಸವಿದನೆ ಬೆಂಣೆಗಳ್ಳನೆ ಹೆಂಣುಗಳ ವ್ರತಗಳೆವ ಹೆಳವನಂದು ಗೆಲಿಸಿದ ರಂಗ ದೇವೋತ್ತುಂಗನೆ 7
--------------
ಹೆಳವನಕಟ್ಟೆ ಗಿರಿಯಮ್ಮ
ದೀನಮಂದಾರ ಶ್ರೀಧರಾ | ದಾನವಕುಲ ಹರಣಾ ಪ ಕೃಪಾಳೋ ಮುನಿಜನ ಮನೋನಿಲಯ ಅ.ಪ ವಿಮಲಾ ಸುಮಹಿಮ ಜಗದೊಡೆಯ | ಮಾನವ ದ್ವಿರದಾರಿಪುದೇವ 1 ಧರಣೇಶ ರಾಘವ | ಗಿರಿಧರ ತ್ರಿಗುಣಭವದೂರ 2 ಮಾವರ ರಾಧಾಮನೋಹರ ಪ್ರೇಮಾಕರ ಮುರಲಿ ವಿನೋದ | ವಿಹಂಗಧ್ವಜ ಶಾಮಸುಂದರ ಕುಜನ ಸಂಹಾರಾ3
--------------
ಶಾಮಸುಂದರ ವಿಠಲ
ದೇವ ಹನುಮಶೆಟ್ಟ | ರಾಯ ಜಗಜಟ್ಟಿ ಪರಮೇಷ್ಟಿ ಪ ಪಾವನಚರಿತ ಸಂಜೀವನ ಗಿರಿಧರ ಪಾವಮಾನಿ ಕರುಣಾವಲೋಕನದಿ ನೀ ನಲಿಯುತಲಿ ಸದಾವಕಾಲ ತವ ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ ವಾನರ ಕುಲನಾಯಕ | ಜಾನಕಿಶೋಕ ನಿವಾರಕ ಕಾನನ ತೃಣಪಾವಕ | ಹೀನ ಕೌರÀವ ನಾಶಕ | ಸನ್ಮಾನಿ ತಿಲಕ ಆನಂದತೀರ್ಥನಾಮಕ | ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ ಗೀರ್ವಾಣ ವಿನುತ ಜಗತ್ಪ್ರಾಣ ಕಲ್ಯಾಣ ಮೂರುತಿ 1 ಮರುತನಂದನ ಹನುಮ | ಪುರಹರರೋಮ ಪರಮಪುರುಷ ಶ್ರೀ ಭೀಮಾ ಕರುಣಸಾಗರ ಜಿತಕಾಮ | ಸದ್ಗುಣ ಭೌಮ ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ ಜರಿಜ ವಿನಾಶಕ || ದುರಿತ ವಿಮೋಚಕ ಸುರತರು ಭಾರತಿವರ ಮರಿಯದೆ ಪಾಲಿಸೊ ನಿರುತ ಮಮ ಚರಿತ 2 ಧಿಟ್ಟ ಶಾಮಸುಂದರ ವಿಠಲ ಕುವರ ದುಷ್ಟರಾವಣ ಮದಹರ ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ ನಿನ್ನಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ 3
--------------
ಶಾಮಸುಂದರ ವಿಠಲ
ದೇವಾ ದೇವಾ ಸಾರಂಗ ಪಾಣಿ ದೇವಾ ದೇವಾ ಸಾರಂಗ ಪಾಣೀ ಪ ದೇವ ದೇವ ಘನ ಶ್ರೀ ವಧುವಲ್ಲಭ ಸಾವಿರ ನಾಮದ ಪಾವನ ರೂಪಾ 1 ಭುವನವ ಪಿಡಿದೊಯ್ದನುಜನ ಹರಿ ಪವನಜ ಪ್ರೀಯಾ2 ಕುಂಜರ ಧ್ವಜಜನ ರಂಜಿಪ ಕದಲಿಗೆ ಅಂಜಿಕೆ ಹಾರಿಪ ಕುಂಜದ ಕರನೇ 3 ಸುಮನದಿ ಧರೆಯೊಳು ನಮನ ಕೃತಕ ಭಯ ಗಮನ ಸುರೇಶಾ4 ವಿಧಿ ತ್ರಿಪುರ ವಿನುತ ಪದ ಮಿಥುನದಯಾಳಾ5 ಹರಿಯೆಂದೊದರಲು ಸರಿಯಾದಿಗಳಿಗೆ ಅರಿಯ ದಂದದಿ ಬಂದು ಕರಿಯನು ಕಾಯ್ದೆ6 ನಂದನ ನಂದನ ಮಂದರಗಿರಿಧರಾ ನಂದನೆ ಮಹಿಪತಿ ನಂದನ ಪ್ರೀಯಾ||7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬು ನಂಬೆಲೆ ಮನ ಗಿರಿಧರನ ನಿನ ಗಿಂಬುಗೊಡುವ ಭಕ್ತ ಸಂಜೀವನ ಪ ಕತ್ತೆಯಂತೆ ಕೂಗಿ ಕೆಡಬೇಡ ಪರ ಮಾರ್ಥತತ್ತ್ವದ ಹಾದಿ ತಿಳಿ ಮೂಢ ಸತ್ಯರ ಪಾದದಿ ಮನನೀಡೋ ನಿತ್ಯ ಉತ್ತಮರೊಳಗಾಡಿ ನಿಜ ನೋಡೋ 1 ಕೋತಿಯಂತೆ ಕುಣಿಯಲುಬೇಡೋ ಮಹ ನೀತಿವಚನ ಮೀರಿ ನಡಿಬೇಡೋ ಮಾತುಮಾತಿನ ಸಂಶಯಬೇಡೋ ಮುಂದೆ ಪಾತಕದೊಳು ಬಿದ್ದು ಕೆಡಬೇಡೋ 2 ಸಾರಸಂಸಾರ ಮಿಥ್ಯವೆಂದು ತಿಳಕೋ ನೀನು ಧೀರ ಶ್ರೀರಾಮನ ಅಡಿಗ್ಹೊಂದಿಕೋ ಗಂ ಭೀರ ಮೋಕ್ಷಪದವನೆ ಪಡಕೋ 3
--------------
ರಾಮದಾಸರು
ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆಪ. ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ1 ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ 2 ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ 3
--------------
ವಾದಿರಾಜ
ನಿತ್ಯ ಶುಭಮಂಗಳಂ | ಪ್ರಿಯಕರಾನಂದ ಶ್ರೀ ತುಲಸಿ ಮಾತೆ ಪ ದಿನಕರನು ಉದಯಿಸಲಾಕ್ಷಣದಿ ಭಕ್ತರು ನಿನ್ನ | ನೆನೆದು ಭಕುತಿಯಲಿ ಜೀವನ ನೀಡುತಾ | ಪಣೆಗೆ ಮೃತ್ತಿಗೆ ತೀಡಿ ಪ್ರಣೀತರಾಗುತ ಪ್ರದ ಕ್ಷಣೆ ಮಾಡಿದವರ ಫಲವೆಣೆಸಲಳವೇ 1 ಹರಿಯನಾಗ್ರದಿ ತ್ರಿಪುರಹರನು ಮಧ್ಯದಿ ಬ್ರಹ್ಮ | ನಿರುವ ಮೂಲದಿನಾಕಚರರು ಮುದದೀ | ನಿರುತ ಶಾಖಂಗಳಲಿ ಚರಿಸುತ್ತಲಿಹರೆಂದು | ಧರಣಿ ಸುರರರ್ಚಿಪರು ಹರುಷದಿಂದಾ2 ಕಾರ್ತಿಕಶುದ್ಧ ಸುಮುಹೂರ್ತ ದ್ವಾದಶಿಯಲ್ಲಿ | ಅರ್ತಿಯಿಂದಲಿ ಸುಜನರರ್ತುತ್ವರದೀ | ನರ್ತನದಿ ತವನಾಮ ಕೀರ್ತನೆಯ ಪಾಡುತಲಿ | ಬೆರ್ತುನಿಂದವರ್ಗೆ ನೀ ಸಾರ್ಥಿ ಎನಿಪೆ 3 ಕಾಂತೆ ನಿನ್ನ ನುದಿನವನಂತ ಜನ ವಂದಿಸುತ | ಅಂತರಂಗದಿ ನಲಿದು ನಿಂತರವರಾ | ಚಿಂತೆಪರಿಪರಿಪೆ ಅಳಕಾಂತೆ ದುರಿತಘನಿಚಯ | ಪಾವಕ ಸುಸಂತ ವಿನುತೆ 4 ಅದಿಗಿಂದಿಗೆ ನೀನು ವೃಂದಾವನದಿ ಮಹಿಮೆ | ನಿಂದು ತೋರಿದೆ ಯೋಗಿವೃಂದ ವಂದ್ಯೆ | ತಂದೆ ಶ್ರೀ ಗಿರಿಧರನ ಕಂದನನುದಿನ ಸಲಹು | ಮಂದರೋದ್ಧಾರ ಪ್ರೀಯ ಕುಂದವದನೆ 5 ಅಂಕಿತ-ಗಿರಿಧರಕಂದ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಿತ್ಯ ಶುಭ ಮಂಗಳಂ ಭಯ ವಿನಾಶನದೇವ ಶ್ರೀನಿವಾಸನಿಗೆ ಪ. ಮಂಗಳಂ ಜಲಚರಗೆ ಮಂಗಳಂ ಗಿರಿಧರಗೆ ಮಂಗಳಂ ಭೂದೇವಿ ರಕ್ಷಕನಿಗೆ ಮಂಗಳಂ ನರಹರಿಗೆ ಮಂಗಳಂ ಮಾಣವಗೆ ಮಂಗಳಂ ಭಾರ್ಗವಗೆ ದಾಶರಥಿಗೆ 1 ಮಂಗಳಂ ಗೋಪಾಂಗನೆಯರ ಕಾಯ್ದವನಿಗೆ ಮಂಗಳಂ ತ್ರಿಪುರ ಸುರರಳಿದ ಹರಿಗೆ ಮಂಗಳಂ ಹಯವೇರಿ ಕಲಿಮುಖರ ಗೆಲಿದವಗೆ ಮಂಗಳಂ ಶ್ರೀಕೃಷ್ಣ ಶ್ರೀನಿವಾಸನಿಗೆ 2 ಆಪಾದಮೌಳಿ ಪಾವನರೂಪನಿಗೆ ಆಪನ್ನ ರಕ್ಷಕಗೆ ಆದಿರೂಪನಿಗೆ ಆಪದ್ಭಾಂಧವ ಶ್ರೀಗುರುಗಳಂತರ್ಗತಗೆ ಗೋಪಾಲಕೃಷ್ಣವಿಠ್ಠಲಮೂರ್ತಿಗೆ 3
--------------
ಅಂಬಾಬಾಯಿ
ಪಾಲಿಸಯ್ಯ ಎನ್ನ ಪಾದಪದ್ಮದೋರಿ ನೀ| ಬಾಲಲೀಲೆ ದೋರ್ವೆ ಗೋಪಾಲ ಬಾಲರನ್ನನೇ ಪ ನಂದ ನಂದ ನಂದು ಓಡಿ ನಂದನೆಯಾ ಭಾವಕಾಗಿ| ಬಂದ ಬಂದು ದುರಿತವನು ಬಂದು ಬಂದು ಹರಿಸಿ| ಛಂದ ಛಂದದಿಂದ ಭಕ್ತರೈವರನು ಕಾಯ್ವೆ ಮು ಸಿಂಧು ವಾಸನೆ 1 ನಾಗನಾಗ ಶಯನ ಯನ್ನ ರಕ್ಷಿಸೆಂದು ಕರೆಯ ಕೇಳಿ| ನಾಗ ನಾಗದವನ ಬಿಟ್ಟು ಓರ್ವನೇ ಮಾರುತಿಯಾ| ವೇಗ ವೇಗದಿಂದ ಬಂದು ಪ್ರಾಣನುಳಹಿದೇ ನಿಗ| ಮಾಗ-ಮಾಗೋಚರ ಭೋಗ ಭೋಗಗನ ವ್ಯಾಪ್ತನೇ2 ಸುಂದ್ರ ಇಂದ್ರ ಚಾಪದಂತೆ ಪೊಳೆವ ಭ್ರೂಲತೆಯು|| ಪೇಂದ್ರ ಚಂದ್ರ ಧರನುತ ಮಂದ್ರಗಿರಿಧರ ಗುಣ| ಸಾಂದ್ರ ಚಂದ್ರಕುಲ ಸಿರೋಮಣೀ ವಾರಜಾಕ್ಷಯಾದ| ವೇಂದ್ರ ಇಂದ್ರನುತ ಮಹಿಪತಿ ನಂದ ನೋಡೆಯನೇ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಪಾಲಿಸು ಪರಮಪಾವನ ಪದ್ಮಾವತೀರಮಣ ಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ. ಪಾಹಿಪಾರ್ಥಸಾರಥಿಅ.ಪ. ಮದನಜನಕ ಮಹಿಮಾಂಬುಧಿ ನಿನ್ನ ಪದಕಮಲವ ನಾ ಸ್ಮರಿಸದೆ ಎನ್ನ ಮದಮುಖತನವನು ಒದರುವದೆನ್ನ ಪದುಮನಾಭ ರಕ್ಷಿಸು ನೀ ಮುನ್ನ ಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧ ಉದುಭವಿಸುವುದು ನಿಜವೇ ಭಕ್ತವಾತ್ಸಲ್ಯ ಇದಕೆ ನೀ ಊನ ತರುವೆ ಸಾಕು ಈ ಮರವೆ ಒದಗಿಸು ಸರ್ವಮನಸಿನೊಳ್ ಪುದು- ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ- ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತ ಮಧುಸೂದನ ಮಂದರಗಿರಿಧರ ನೀ- ರದ ನಿಭ ನಿರ್ಮಲ ನಿಜರೂಪ ಗುಣ ಸದನಾಚ್ಯುತ ರವಿಕುಲದೀಪ ನಿರ- ವಧಿ ಆನಂದ ರಸಾಲಾಪ ಬುಧಜನೋಪಲಾಲಿತ ಲೀಲಾಯತ ಉದಧಿಶಾಯಿ ಮಾನದ ಮಧುಸೂದನ1 ನಾಮಸ್ಮರಣೆಯೆ ನರಕೋದ್ಧಾರ ನೇಮವಿಲ್ಲೆಂಬುದು ನಿನ್ನ ವಿಚಾರ ಸಾಮಾರ್ಥದ ಗುಣಕೆಲ್ಲನುಸಾರ ಪಾಮರ ಮನಕಿದು ಈ ಗುಣಭಾರ ಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿ ಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬ ಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊ ಸಾಮಗಾನಲೋಲ ಸುಜನ ಸ್ತೋಮ ಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬ ತಾಮಸ ಪರಿಹರಿಸಿ ಜ್ಞಾನೋದಯದ ಸದಾನಂದ ಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆ ನೀ ಮಾಡುವುದೆಲ್ಲವು ಸಹಜ ಗುಣ ಧಾಮಾಶ್ರಿತ ನಿರ್ಜರಭೂಜ ಸುಜನ ಸ್ತೋಮಾರ್ಕಾಮಿತ ವಿಭ್ರಾಜ ಶ್ರೀಮಚ್ಛೇಷಾಚಲ ಮಂದಿರ ಸು- ತ್ರಾಮಾರ್ಚಿತ ಸದ್ರಾಮ ಶ್ರೀರಾಮ2 ಉಡುವ ಸೀರೆಯ ಸೆಳೆಯಲು ದ್ರುಪಜೆಯ ಕೊಡಲಿಲ್ಲವೆ ಬಹುವಸನ ಸಂತತಿಯ ಹಿಡಿಯವಲಕ್ಕಿಗೆ ದ್ವಾರಕ ಪತಿಯ ಕಡು ಸರಾಗವಾಯ್ತಿಂದಿನ ಪರಿಯ ಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನ ಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟ ಕೊಡು ದಯವಿಟ್ಟು ಮುದದಿ ಕರುಣಾವುದಧಿ ಕಡುಲೋಭಿತನ ಬಿಡು ಮಹರಾಯ ಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತ ಕರ್ಮ ವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯ ಒಡೆಯ ಶ್ರೀ ಲಕ್ಷ್ಮೀನಾರಾಯಣ ನಡುನೀರೊಳು ಕೈಬಿಡುವೆಯ ನೀ ತೊಡಕೊಂಡ ಬಿರುದೇನಯ್ಯ ಈ ಕಡು ಕೃಪಣತನ ಸಾಕಯ್ಯ ಪೊಡವಿಯೊಳಗೆ ಪಡುತಿರುಪತಿಯೆಂಬ ದೃಢಕಾರ್ಕಳದೊಡೆಯ ಶ್ರೀನಿವಾಸನೆ3
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಬೇಗನೆ ಪಂಕಜನಯನ ಪ ಸನ್ನುತ ಶುಭಕರ ಚರಿತ ಗಿರಿಧರ ಹರಿ ಕರಿವರದ ಮುರಾರಿ 1 ರತಿಪತಿಪಿತ ಸದ್ಗತಿಗಾಣಿಸು ಯಂ- ದತಿ ಮುದದಿ ನಿನ್ನ ಸ್ತುತಿಸುತಲಿರುವೆನು 2 ಶರಣಾಗತ ರಕ್ಷ ಕರುಣಾಂಬುಧೆ ಧರೆಯೊಳಧಿಕ 'ಹೆನ್ನೆಪುರ ಹರಿಯೆ’ 3
--------------
ಹೆನ್ನೆರಂಗದಾಸರು