ಒಟ್ಟು 23 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಸ್ತು ಕಂಡೆನು ಒಂದು ಕರ್ತೃ ಸದ್ಗುರುವಿನ ಕೃಪೆಯಿಂದ ಧ್ರುವ ತೇಜ:ಪುಂಜದ ರೂಪ ಮೂಜಗದೊಳಗಿದು ಅಪರೂಪ ನಿಜ ನಿರ್ವಿಕಲ್ಪ ಸುಜನರ ಹೃದಯಕ ಸದ್ಛನದೀಪ 1 ರೂಪಕ ನೆಲೆಇಲ್ಲ ವ್ಯಾಪಕವಿದು ಜಗದೊಳಗೆಲ್ಲ ಗುಪಿತಜ್ಞಾನಿಯು ಬಲ್ಲ ಜಪತಪಕಿದು ಸಿಲ್ಕುವದಲ್ಲ 2 ಙÁ್ಞನಕ ಸಾಹೀತ ಮುನಿಜನ ಹೃದಯದಿ ಸದೋದಿತ ಧ್ಯಾನಕೆ ಆಯಿತು ಮನಕಾಮನವಿದು ಪೂರಿತ 3 ಮೂರಕೆ ವಿರಹಿತ ಮೂರುಲೋಕವು ವಂದಿತ ಪರಮ ಸಾಯೋಜ್ಯತ ತಾರಕವಸ್ತು ಸಾಕ್ಷಾತ 4 ಬೈಲಿಗೆ ನಿರ್ಬೈಲ ಭಾವಿಕ ಬಲ್ಲನು ಇದರ್ಹೊಯಿಲ ಮಹಿಪತಿಗನುಕೂಲ ಜೀವನ್ಮುಕ್ತಿಗೆ ಇದು ಮೂಲ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಪ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ. ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಕಾಲ ಹಿಂಗಿಸಿ ವಿ- ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು- ಶೀಲ ಜ್ಞಾನವಿತ್ತು ಆಲಸ್ಯಮಾಡದೆ ಶೀಲ ಮುಕ್ತಿಗನುಕೂಲವಾಗುವುದಕ್ಕೆ2 ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು ಕನಸಿಲಿ ಮನಸಿಲಿ ಮನಸಿಜನೈಯನ ನೆನೆಸುವ ಸೌಭಾಗ್ಯವನುದಿನ ಕೊಟ್ಟು ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ ವನಜವ ತೋರಿ ಸನ್ಮೋದವನೀಯೆ3
--------------
ವಿಜಯದಾಸ
ವೇದಾಬಲು ಸ್ವಾದ ಪ ಸಾದರದಲಿ ಬಿಡದೋದಿ ಪಠಿಸುವಗೆ ಅ.ಪ ಆದಿಯನಾದಿಗಳ ಹಾದಿಯ ತೋರಿ ಸ- ಗುಹ್ಯ ಪ್ರತಿತಾರ್ಥಗಳಿಹ 1 ಘನಸಾಧನೆಗಳಿಗನುಕೂಲಿಸುವುದು 2 ಸ್ವರಿತೋದಾತ್ತನುದಾತ್ತ ಪ್ರಚಯಗಳಿಂ ಗುರುರಾಮವಿಠಲನ ಚರಣನೋಡುವದಕೆ ವೇದಾ 3
--------------
ಗುರುರಾಮವಿಠಲ
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸುಮ್ಮನಿರಬ್ಯಾಡಿ ನಿಮ್ಮೊಳು ನೀಟ ನೋಡಿಒಮ್ಮನವ ಮಾಡಿ ಪರಬ್ರಹ್ಮನೊಲು ಕೂಡಿ ಧ್ರುವ ಹೊತ್ತುಗಳಿಯಲು ಬ್ಯಾಡಿ ಹೃತ್ಕಮಲದೊಳು ನೋಡಿ ಅತ್ತಿತ್ತಲಾಗದೆ ಚಿತ್ತಸ್ವಸ್ಥ ಮಾಡಿ ಹತ್ತಿಲಿಹ ವಸ್ತುವನು ಪ್ರತ್ಯಕ್ಷ ಮಾಡಿ ನಿತ್ಯ ನಿಜಾನಂದ ಸುಪಥವು ಗೂಡಿ 1 ಮುತ್ತಿನಂಥ ಜನ್ಮ ವ್ಯರ್ಥಗಳಿಯಲಿ ಬ್ಯಾಡಿ ನಿತ್ಯ ಸಾರ್ಥಕದ ಸಾಧನವ ಮಾಡಿ ಸತ್ಯ ಶಾಶ್ವತದಾವದೆಂದು ಖೂನದಲಿ ಅಡಿ ಕೃತ್ಯಾ ಕೃತ್ಯಾಗುವ ಸ್ವಸುಖ ಬೆರೆದಾಡಿ 2 ದೀನ ಮಹಿಪತಿ ಸ್ವಾಮಿ ತಾನೊಲಿದು ಬಾವ್ಹಾಂಗ ಜ್ಞಾನಾಭ್ಯಾಸವ ಮಾಡಿಕೊಳ್ಳಿ ಬ್ಯಾಗ ಭಾನುಕೋಟಿ ತೇಜ ದೀನದಯಾಳು ತಾಂ ನೆನೆವರಿಗನುಕೂಲವಾಗುತಿಹ್ಯ ಈಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು
ಶಾಂತ ಶಾಂತವು ಎಂದು ಎಂಬರಿ ನಿಮ್ಮನುಶಾಂತವಿಂತಿರುತಿರೆ ಶಾಂತಶಾಂತವಿಂತಿರೆ ಜೀವ ಮುಕ್ತನುಶಾಂತಿಲಿ ಭ್ರಾಂತಿರೆ ಭಯವುಕೃತಾಂತಪಸತಿಜಾರೆಯಾಗಲು ಗುರುನಾಥಲೀಲೆಯೆಂದುಸತಿಗನುಕೂಲವೇ ಶಾಂತಖತಿಯ ಮಾಡಲು ನಾನಾಜನರು ಚಂಚಲವಾಗದಸ್ಥಿತಿಯೇ ಶಾಂತ ಸತತ ಸಂಸಾರ ಕರಕರೆ ಬಳಲಿಕೆಸಂಗವಿಲ್ಲದಿಹುದೇ ಶಾಂತಅತಿ ಚೋರ ಸುಲಿದೊಯ್ಯೆ ಆನಂದದಲಿನಸುನಗುತಿರುವುದೇ ಶಾಂತ1ವಿಷವನಿಕ್ಕಿದವರನ್ನು ಕಾಣಲು ಅವರೊಳುವಿಶ್ವಾಸವಿಹುದೇ ಶಾಂತದುಶ್ಮನನು ತನ್ನನ್ನು ಕಡಿಯಬರೆ ಇದುಮೋಕ್ಷವೆಂಬುದೆನೆ ಶಾಂತಮುಸುಕಿನ ಮಾತ ಊರ ಮುಂದಿಕ್ಕಲುಮತಿಗೆಡದಿಹುದದು ಶಾಂತಹಸಿದು ಮಕ್ಕಳು ಅಳೆ ಹೆಂಡತಿ ರೋಧಿಸೆಕುಸಿದು ಬೀಳದೊಡದು ಶಾಂತ2ಕೊಟ್ಟಿದ್ದು ಸುಳ್ಳು ಎಂಬುವರೆದುರಿಗೆಕೊಟ್ಟಿಲ್ಲವೆಂಬುದೇ ಶಾಂತಭ್ರಷ್ಟರು ನಾನಾ ನಿಂದೆಯ ಮಾಡಲುಭಯ ಹುಟ್ಟದಿರುವುದೇ ಶಾಂತಬಿಟ್ಟುಹೋಗಲು ತನ್ನಸತಿಸುತರೆಲ್ಲರುಭ್ರಾಂತಿಯ ತೋರುವುದೇ ಶಾಂತದಿಟ್ಟ ಚಿದಾನಂದ ಸದ್ಗುರು ತಾನಾಗಿದೃಢನಾಗಿಹುದದು ಶಾಂತ3
--------------
ಚಿದಾನಂದ ಅವಧೂತರು