ಒಟ್ಟು 72 ಕಡೆಗಳಲ್ಲಿ , 2 ದಾಸರು , 72 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದು ಚಂದ ಹರಿಯೆ ಮುಕುಂದ ಪ ಒದಗಿದ ಬಾಧೆಯ ಬಿಡಿಸಲು ಬೇಡಲುತುದಿಕೆಳಸುವ ತನಕ ಹಾನಿಯ ಕಾಯ್ವುದು 1 ಕುರು ಸಭೆಯೊಳು ಮಾನವನುಳಿಸೆಂದುತರುಣಿ ಬಾಯ್ದೆರೆ ಬೇಗ ಬಾರೆಂದು 2 ಮಕರಿಯ ಹಿಡಿತವ ಬಿಡಿಸಲು ಕರಿನೃಪಮುಖವೆತ್ತಿ ಮೊರೆಯುತೆ ಜವದಿ ಪೊರೆಯುವುದು 3 ತಡಮಾಡದೆ ಶರಣರ ರಕ್ಷಿಸದೆಚಡಪಡಿಸುವುದನು ನೋಡುತಲಿರುವುದು 4 ಮೊರೆಯಿಡೆ ಭಕುತರ ಪೊರೆಯಯ್ಯ ಜವದಲಿಕರುಣಿಸು ಗದುಗಿನ ವೀರನಾರಾಯಣ 5
--------------
ವೀರನಾರಾಯಣ
ಏನು ಮಾಡಿದೆ ಮೂಢಮನುಜಾಮಾನವ ಜನುಮದಿ ಬಂದೀ ಜಗದೀ ಪ ದೇಶದ ಸೇವೆಗೆ ತನು ನೀಡಿದೆಯಾಭಾಷೆಯ ಏಳ್ಗೆಗೆ ಮನ ಮಾಡಿದೆಯಾಕಾಸಿಗಾಗಿ ವಂಚಿಸಿ ನಿನ್ನೊಡಲಿನಪೋಷಣೆಗಾಗಿ ದುಡಿದೆಯಲ್ಲದೆ 1 ಆರ್ತರ ದುಃಖವನೀಡಾಡಿದೆಯಾಸ್ವಾರ್ಥದ ಹಂಬಲ ಬಿಟ್ಟು ನಡೆದೆಯಾಪೂರ್ತಿಯಾಗಿ ಜನಹಿತ ನೋಡಿದೆಯಾಧೂರ್ತತನವ ಬರಿದೆ ತೋರಿದೆಯಲ್ಲದೆ 2 ಮದಮತ್ಸರಗಳ ನೆಲಕೆ ಬಡೆದೆಯಾಹೃದಯ ನಿರ್ಮಲಗೊಳಿಸಿ ನುಡಿದೆಯಾಮುದದಿ ಗದುಗಿನ ವೀರನಾರಾಯಣನಪದವನೊಮ್ಮೆಯಾದರೂ ಸ್ಮರಿಸಿದೆಯಾ 3
--------------
ವೀರನಾರಾಯಣ
ಏಳು ನಾರಾಯಣ ಏಳು ಲಕ್ಷ್ಮೀರಮಣಏಳು ಬೆಳಗಾಯ್ತರುಣ ಬೀರುತಿದೆ ಕಿರಣ ಪ ರಂಗ ಬರುತಿಹನೆಂದು ಮಂಗಳಾಂಗಿಯರೆಲ್ಲಅಂಗಳ ಸಾರಿಸಿಸುತೆ ಮಂಗಳವ ಪಾಡುತ್ತೆರಂಗೋಲಿಯೊಳು ನಿನ್ನ ಚಿತ್ರವನು ರೇಖಿಸುತೆಶೃಂಗರಿಸುತಿಹರು ನೋಡೆದ್ದು ಬಾರೋ 1 ಹಿಂಡಿ ನೊರೆ ಹಾಲ್ಗಳನು ಗಿಂಡಿಯೊಳು ತಂದಿಟ್ಟುಕೊಂಡು ವದನವ ತೊಳೆಯ ಬಿಸಿ ನೀರು ತಂದಿಟ್ಟುತಂಡತಂಡದಿ ಭಕುತ ಮಂಡಲಿಯು ಕಾದಿಹುದು ಹೆಂಡತಿಯನೊಡಗೂಡಿಯುಂಡು ತಣಿಯು ಬಾರೋ2 ವೆಳ್ಳೆ ತುಂಬಿಗಳಾಡೆ ಮಂಗಳಾರತಿ ಮಾಡಿಬೆಳ್ಳಿ ಕಳಶಗಳೆನಲು ಅಮೃತವನು ತುಂಬಿಬೆಳ್ಳನೆಯ ಹೂಗಳನು ಮಡಿ ತಳಿಗೆಯೊಳು ಹಿಡಿದುಬಳ್ಳಿ ಮಲ್ಲಿಗೆ ತಾವು ಆತುರದಿ ನಿಂತಿಹವು 3 ಚಿಕ್ಕೆಗಳು ಬಾಡುತಿವೆ ಚೊಕ್ಕೆಲರು ತೀಡುತಿದೆಮಕ್ಕಳಾಡುಲೆವೆ ಕಕ್ಕುಲತೆಯೊಲಿ ನಮ್ಮ ರಕ್ಷಿಸಲು ನೀನೇಳು 4 ಕರ ಮಕದು ಭಕುತಿಯಿಂದಲಿ ಬೇಡುವರುಪಾವು ಮಂಚವ ಬಿಟ್ಟು ಬೇಗೆದ್ದು ಬಾರೋ 5 ಕಂಜದೆಲೆಯಲಿ ಬಿದ್ದ ಮಂಜುವನಿಗಳ ಮೇಲೆಕೆಂಜೆಡೆಯನಾಂಶುಗಳು ರಂಜಿಸಲು ದೀಪದೊಳುಕಂಜನಾಭ ನಿರಾಂಜನವ ಬೆಳಗಲಿಕೆಮುಂಜಾಮದಲೆ ಕಾಯುತಿಹಳೊ 6 ಶಿರಬಾಗಿ ನಿನ್ನ ಚರಣಗಳಿಗೆ ಬಂದಿದೆ ಶರಣನಿರುತ ಧನವಾರೋಗ್ಯವಿತ್ತು ದುರಿತಾಪಹರಣಪರಿಕಿಸದೆ ರಕ್ಷಿಸಲು ಬಾರೋ ಕರುಣಾಭರಣವರ ಗದುಗಿನಲಿ ಮೆರೆವ ವೀರನಾರಾಯಣ 7
--------------
ವೀರನಾರಾಯಣ
ಒಲಿಯುವೆ ನೀನೆಂತು ಹಲಧರಾನುಜಾ ಪ ಹೊಗಳಲು ನೀ ಮರುಳಾಗುವನಲ್ಲಾತೆಗಳಲು ನೀ ಮುನಿಯುವನಲ್ಲಾಹೊಗಳಲ್ಯೊ ತೆಗಳಲ್ಯೊ ತಿಳಿಯುವುದಿಲ್ಲಬಗೆಯನು ತೋರಲು ಹೇಳಸೊಲ್ಲ 1 ಪಂಚಪಕ್ವಾನ್ನವ ಹಂಚೇನೆಂದರೆಲಂಚಗುಳಿಯು ನೀನಲ್ಲಚಂಚಲಮನದವ ತಾನಾಗಿಹನೈಹಂಚಿಕೆಯನು ಹೇಳ್ ನಿತ್ಯತೃಪ್ತನೆ 2 ಪತಿ ನೀನಹುದೋಘನತರ ಗದುಗಿನ ವೀರನಾರಾಯಣಮನಸಿನ ಇಂಗಿತವನು ಪೇಳೆಲೊ ನೀ 3
--------------
ವೀರನಾರಾಯಣ
ಕಂಡಿರೇನಯ್ಯ ಹರಿಯನ್ನು ಪ ಅಲ್ಲಲ್ಲಿ ಇರುವನಂತೆ ಎಲ್ಲೆಲ್ಲೂ ಶಿಕ್ಕನಂತೆಗುಲ್ಲನು ಕೊಡದಿಹನಂತೆ ಬಲ್ಲವ ಬಲ್ಲನಂತೆ 1 ಧ್ರುವನ ಮುಂದೆ ನಿಂತಿದ್ದನಂತೆಕುವರ ಪ್ರಹ್ಲಾದನ ಹಿಡಿದಿದ್ದನಂತೆಬವರದಿ ಪ್ರಾರ್ಥಿಸೆ ತೋರಿದವನಂತೆಶಬರಿಯ ಎಂಜಲ ತಿಂತಿದ್ದನಂತೆ 2 ಮುನಿಗಳು ಹೃದಯದಿ ಕಂಡರಂತೆವನಿತೆ ಯಶೋದೆಗೆ ಸಿಕ್ಕಿದನಂತೆಹನುಮ ಭೀಮರು ನೋಡಿದರಂತೆಅನಿತೋದ್ಭವಗೆ ಮೆಚ್ಚಿದನಂತೆ 3 ದ್ರೌವ್ಯದ ಕಣ್ಣಿಗೆ ಕಾಣಿಸನಂತೆದಿವ್ಯ ದೃಷ್ಟಿಗೆ ಸಿಲುಕುವನಂತೆಭವ್ಯ ಗದುಗಿನ ವೀರನಾರಾಯಣದಿವ್ಯ ದೃಷ್ಟಿಯ ಕೊಡು ಓರಂತೆ 4
--------------
ವೀರನಾರಾಯಣ
ಕನಕದಾಸರು ಕನಕಾ ನಿನ್ನ ಕೆಣಕಿ ನಾನು ತಿಣಕಲಾರೆನೊ ಕ್ಷಣಕು ಕ್ಷಣಕು ತಿಣಿಕಿ ತಿಣಿಕಿ ದಣಕೊಲಾರೆನೊಅಡಿಗಡಿಗೊಗೆದ ಮುಂಡಿಗೆಯನು ಒಡಿಯಲಾರೆನೊಒಡೆಯಲು ದುಡುಕಿ ದುಡುಕಿ ದಣಿವನು ತಡಕೊಲಾರೆನೊ 1 ಒಡೆಯ ದೇವನೆಂದಟ್ಟಿದ ಕುನಕವ ಮುಟ್ಟಿಲಾರೆನೋ ಮಡಿಯ ದೇವರೆಂದೊದಗಿಸಿದುರಗನ ಬಳಿಯ ಸಾರೆನೋ ಪಾತ್ರೆಯ ಒಳ ಮೈಯ್ಯ ಮಾತ್ರ ತೊಳೆದುದು ತಿಳಿಯಲಾರೆನೋಗೋತ್ರವ ಕೇಳಿ ಸುಸೂತ್ರದೊಳುತ್ತರ ಪಡೆಯಲಾರೆನೋ 2 ಅದಕೊ ಇದಕೊ ಯಾವುದಕೊ ನಾ ಕೆದಕಲಾರೆನೊಗದುಗಿನ ವೀರನಾರಾಣನ ಮರೆಯಲಾರೆನೊ 3
--------------
ವೀರನಾರಾಯಣ
ಕರುಣಿಸಲಾರೆಯಾ ಇನ್ನಷ್ಟು ನೀ ಸಿರಿಪತಿಯಾ ಪ ಕರುಣಿಸಲಾರೆಯಾ ಕರುಣಾಕರನೆಂಬೊಬಿರುದನುಳಿಸಿಕೊಳ್ಳಲಾರೆಯಾ ನೀನರಿಯಾ ಅ.ಪ. ಬುವಿಯೊಳು ನಿನ್ನ ದಯವಿರದಿರೆ ಕಣಲವಸಹ ಸರಿಯದಯ್ಯಾಭವದೊಳು ದೇವ ನಿನ್ನ ಕೃಪೆಯಾಗಲುಜವದೊಳೀಗಿನ ಸುಖ ಸ್ರವಿಸಿ ಪೋಗುವದಯ್ಯಾ 1 ಈಗೆಲ್ಲ ನಿನ್ನದಯೆದಿಂದೀ ಬಾಳ್ವೆಸಾಗಿದೆ ಬಲ್ಲೆನಯ್ಯಾಹೋಗಿಸಿ ಸಂಸಾರ ಬೇಗುದಿಯನು ನೀನುಬೇಗ ನಿನ್ನ ಧ್ಯಾನಭೋಗವ ನೀಡಯ್ಯಾ 2 ತುಷ್ಟಿಹೊಂದಲು ನೀ ಜೀಯಾ ಕಷ್ಟದ ಪರಿಯಾನಷ್ಟಮಾಡಲು ಅರಿಯಾಸೃಷ್ಟಿಯ ಜೀವಿಗದೃಷ್ಟ ಎಷ್ಟೆಷ್ಟೆಂಬಸ್ಪಷ್ಟ ಸಂಕಲ್ಪವ ಬದಲಿಸಲರಿಯಾ 3 ಎಲ್ಲವು ನಿನ್ನಧಿವಲ್ಲವೇ ಹರಿಯೇಸಲ್ಲದ ಅನುಮಾನಖುಲ್ಲ ದೈವವ ತಿರುವ ಬಲ್ಲೆಯಲ್ಲವೇ ನೀನುಬಲ್ಲೇಕೆ ಮನವನು ಕಲ್ಲು ಮಾಡಿದೆಯಾ 4 ಶರಣೆಂಬ ಜನ ಕೈಯ್ಯಾ ಎಂದೂ ಬಿಡದೆಪೊರೆಯುವೆ ಎಂಬರಯ್ಯಾಧರೆಯೊಳು ಗದುಗಿನ ವೀರನಾರಾಯಣಮರೆಯದೆ ಸಲಹಯ್ಯಾ ಕೇಳ್ವೆನ್ನ ಮೊರೆಯಾ 5
--------------
ವೀರನಾರಾಯಣ
ಕಾಯೋ ತೋಯಜ ನೇತ್ರ ಪ ಸುಮಿತ್ರ ಪವಿತ್ರ ಚರಿತ್ರ ಅ.ಪ. ಮಾನವ ಜನುಮದಿ ನೀ ತಂದೆಯೊಎನ್ನ ಗ್ಲಾನಿಯ ಕಳೆದು ಸುಜ್ಞಾನವನಿತ್ತು 1 ಕಠಿಣ ಸಂಸಾರದ ಕಟು ಅನುಭವವ ಸೈಸೆಸಟಿಯಲ್ಲೋ ಇದ ಸಂಕಟವ ಪರಿಹರಿಸಿ 2 ಹೃದಯದಿ ನೆಲಿಸಿ ನೀ ಸದಾವಕಾಲದೊಳುಗದುಗಿನೊಳ್ಮೆರೆಯುವ ವೀರನಾರಾಯಣ 3
--------------
ವೀರನಾರಾಯಣ
ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ. ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1 ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2 ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3 ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4
--------------
ವೀರನಾರಾಯಣ
ಕುಮಾರವ್ಯಾಸ ನಿತ್ಯ ಶುಭ ಮಂಗಳಂ ಪ ಮಂಗಳಂ ವೀರನಾರಾಯಣನ ಭಕ್ತಂಗೆಮಂಗಳಂ ಶಿವನಂಶ ದ್ರೋಣಸುತ ಶಿಷ್ಯಂಗೆಮಂಗಳಂ ಕನ್ನಡದೆ ಭಾರತವನೊರೆದವಗೆಮಂಗಳಂ ಯೋಗೀಂದ್ರ ಕುವರವ್ಯಾಸಂಗೆ 1 ಕವಿ ಪುಂಗವಂಗೆ 2 ಭಾರತದ ಶಾಸ್ತ್ರಾರ್ಥದೊಗಟವನು ಬಿಡಿಸುತಲಿಸಾರಿಜನರಿಗೆ ರಮ್ಯಗಮಕದಲಿ ಹೇಳಲಿಕೆಭಾರತದ ಶ್ರೀ ಬಿಂದುರಾಯರನು ಪ್ರೇರಿಸಿದ ತೋರ ಗದುಗಿನ ವೀರ ನಾರಾಯಣಂಗೆ 3
--------------
ವೀರನಾರಾಯಣ
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1 ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2 ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
--------------
ವೀರನಾರಾಯಣ
ಕೊಳಲನೂದೆಲೋ ಕೃಷ್ಣ ಕೊಳಲನೂದೆಲೊ ಪ ಕೊಳಲನೂದು ಮನದ ದುಗುಡಕಳೆದು ಮತ್ತೆ ಮನಕೆ ಪ್ರಶಾಂತೆತಳೆಯುವಂತೆ ನಿತ್ಯಮಂ_ಜುಳ ಸ್ವರಗಳನ್ನು ತೆಗೆದು ಅ.ಪ. ತುಂಬಿ ನಳಿನಬೆರಳುಗಳು ತೂತು ಮುಚ್ಚಿತೆರೆದು ಸವಿಯ ನಾದದಲ್ಲಿ ನಿಸಾರ ನಿ ದ ಪ ಮ ಪ ನಿ ಎಂದು 1 ಇಲ್ಲಿ ಪೀಠದಿ ಎದ್ದು ನಿಲ್ಲು ಥಾ7ಟದಿಮಲ್ಲಿಗೆ ವನಮಾಲೆ ಕೊರಳೊಳಲ್ಲಾಡುತಿರಲು ರೂಪದಲ್ಲಿ ಮನವಿನೈಕ್ಯವಾಗಿತಲ್ಲೀನರಾಗುವಂತೆ ಕೃಷ್ಣಾ 2 ಎದ್ದುನಿಂತು ಮಾಟದಿ ನಿಂತು ಮುದ್ದು ನೋಟದಿಬಿದ್ದವರನು ನೋಡಿ ನಮಗೆಶುದ್ಧ ಬುದ್ಧಿ ಕೊಟ್ಟು ನಮ್ಮದುದ್ಧರಿಪುದು ಗದುಗಿನ ಪ್ರಸಿದ್ಧ ವೀರನಾರಾಯಣ 3
--------------
ವೀರನಾರಾಯಣ
ಚಂದಲಾ ಪರಮೇಶ್ವರಿ ವಂದಿಸುವೆನು ಚಂದಲಾ ಪರಮೇಶ್ವರಿ ಪ ಚೆಂದಾಗಿ ಮನಸಿಗಾನಂದ ನೀಡುವ ನಿನ್ನಮುಂದೆಯೆ ಕಂದ ತಾ ಬಂದು ನಿಂದಿಹೆನವ್ವ ಅ.ಪ. ಘನದಯಾವಂತೆ ಕಾಯೆ ಇದು ನಿನ್ನಅನುಗ್ರಹವೆಂಬೆ ತಾಯೆಕನಸಿನೊಳಿರಲಿಲ್ಲ ಮನಸಿನೊಳಿರಲಿಲ್ಲಜನನಿ ನೀನೆ ಕರೆಸಿ ದರುಶನವಿತ್ತವ್ವ 1 ಸನಿತೆಯೊಳ್ಬಂದು ನಿಂತು ದಯಾಮೃತವಹನಿಸುವಿ ಜನರಿಂಗಿತುಜನರ ಪಾವನ ಮಾಡಿ ಘನ ಸಂತಸ ನೀಡಿಅನುದಿನ ಜನ ಪಾಡಿ ಕುಣಿಯುವಂತೆ ಕೃಪೆ ಮಾಡೆ 2 ಸದಯಾಮೂರ್ತಿಯು ನೀ ಸತ್ಯ ನಿನ್ನಯ ಪಾದಪದುಮಕೆ ಮಣಿಯುವೆ ನಿತ್ಯಗದುಗಿನ ವೀರನಾರಾಯಣನೆನ್ನಯಹೃದಯದಿ ಸತತ ನಿಲುವಂತೆ ಕರುಣಿಸೌ 3
--------------
ವೀರನಾರಾಯಣ
ಜನುಮದ ದಿವಸವಿದು ಹನುಮ ನಿನ್ನಜನುಮದ ದಿವಸವಿದೂ ಪ ಅನುದಿನ ನಿನ್ನನುನೆನೆಯುವ ಜನರಿಗೆ ಘನ ಮುದ ಕೊಡುವಂಥ ಅ.ಪ. ಯಾವಾಗಲೂ ಹರಿಯ ಭಕುತಿಯಲಿಸೇವೆಮಾಳ್ಪ ಪರಿಯಭಾವುಕರಿಗೆ ಕಲಿಸುವುದಕೆ ಗಡಜೀವಿಯಾಗಿ ಅವತರಿಸಿದ ನಿನ್ನದೂ 1 ಪೊಡವಿಯ ಮಾತೆಯನು ದನುಜಬ ಚ್ಚಿಡಲವಳಿರುವದನುಹುಡುಕಿ ತೆಗೆಯಲಾ ಕಡಲನೆ ಜಿಗಿಯುವಕಡುಶಕ್ತಿಯ ಗಡ ಪಡೆದ ನಿನ್ನಯ 2 ಧಾರುಣಿನ ಕಾರಣ ಗದುಗಿನವೀರನಾರಾಯಣಚಾರು ಚರಣದಿ ತೋರಿ ಭಕುತಿಯನುಸೂರೆಗೈಯ್ಯೆ ಮೈದೋರಿದ ನಿನ್ನನು 3
--------------
ವೀರನಾರಾಯಣ
ಜಯ ಕೊಲ್ಹಾಪುರ ನಿಲಯೇಶ್ರೀನಿವಾಸನ ಸತಿಯೇ ಸಾಗರರಾಜನ ಸುತೆಯೇನಾರಿಯರೆಲ್ಲದು ಕೂಡಿ ಆರತಿ ಬೆಳಗುವೆವು ಪ ಬಿಳಿಯ ಪತ್ತಲವುಟ್ಟು ಕಡಗ ಕಂಕಣ ತೊಟ್ಟುಜಡೆಗೆ ಮಲ್ಲೆಯ ಮಾಲೆ ಮುಡಿದಾ ವರಮಹಾಲಕ್ಷ್ಮಿಗೆ 1 ಮರುಗ ಮಲ್ಲಿಗೆ ಜಾಜಿ ಪಾರಿಜಾತದ ಕುಸುಮಸಿರಿಯ ಚರಣಕೆ ಅರ್ಪಿಸಲೆಂದು ಜಯ ಜಯ ಜಯ 2 ಬಡವರಾ ಮನೆತನಕೆ ಅಭಿಮಾನವನ್ನಿಟ್ಟುನಿರುತ ಕಳಶದಿ ಕುಳಿತ ಮಹಾಲಕ್ಷ್ಮೀಗೆ ಹಾಡುತ ಪಾಡುವೆವು 3 ಇಂದು ನಮ್ಮ ಸದನಕ್ಕೆ ಬಾ ಎಂದುಗದುಗಿನ ವೀರನಾರಾಯಣನ ಅರಸಿಗೆ ಹಾಡುತ ಪಾಡುವೆವು 4
--------------
ವೀರನಾರಾಯಣ