ಒಟ್ಟು 22 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರಬೇಕು ಇರದಿರಬೇಕು ಶ್ರೀ - |ಹರಿದಾಸರು ಸಂಸಾರದೊಳು ಪ.ಕುಲಸತಿಯಾದರೆ ಕೂಡಿರಬೇಕು |ಸುಲಭದಿಂದ ಸ್ವರ್ಗ ಸೂರಾಡಬೇಕು ||ಕಲಹ ಗಂಟಿಸತಿ ಕರ್ಕಶೆಯಾದರೆ |ಹಲವು ಪರಿಯಿಂದಲಿ ಹೊರಗಾಗಬೇಕು 1ಮಕ್ಕಳು ತಾವು - ಮತಿವಂತರಾದರೆ |ಅಕ್ಕರೆಯಿಂದಲಿ ಕೂಡಿರಬೇಕು ||ಚಿಕ್ಕತನದಿ ಬುಧ್ಧಿ ತೇರುಂಡರಾದರೆ |ಗಕ್ಕನೆ ಅಲ್ಲಿಂದ ಹೊರಗಾಗಬೇಕು 2ದುಷ್ಟರ ಕಂಡರೆ ದೂರವಿರಬೇಕು |ಶಿಷ್ಟರ ಕಂಡರೆ ಕೈಮುಗಿಯಬೇಕು ||ದಿಟ್ಟ ಶ್ರೀ ಪುರಂದರವಿಠಲರಾಯನ |ಗಟ್ಟಿಯಾಗಿ ಆತನ ನೆರೆನಂಬಬೇಕು 3
--------------
ಪುರಂದರದಾಸರು
ಎಂದು ಹರಿಭಟರು ಕೆಡರು ಇವರಿಗೆ ಮತ್ತೆಂದಿಗಿಲ್ಲೆಡರುತೊಡರುಪ.ಘಟಜನುಕ್ತಿಯಲಿಕರಿಗಟ್ಟಿಯಾಗಿ ಪ್ರಾಣ ಸಂಕಟಬಡಲು ನಕ್ರನ ತುಟಿ ಹರಿದುಹರಿಪೊರೆದ1ಎಣಿಕೆಯಿಲ್ಲದ ಪಾಪ ಎಣಿಸಿ ಬಂದ್ಯಮನವರಹಣಿದು ವಿಪ್ರಜಾಮಿಳನ ವನಜಾಕ್ಷ ಪುರಕೊಯ್ದ 2ಮುನಿ ಕನಲಿ ಅಂಬರೀಷನ ದಣಿಸುತಿರೆ ಚಕ್ರವನು ಕಳುಹಿ ವೈಷ್ಣವಾಗ್ರಣಿಯ ಛಲ ಗೆಲಿಸಿದನು 3ಕಪಟಿ ಕೌರವ ಪಾಂಡುನೃಪಜರನು ಬೆಂಕೊಳಲುಕುಪಿತನಾಗಲೆ ಬಂದು ಕೃಪೆಯಿಂದ ಕಾಯ್ದ ಗಡ 4ಶ್ರೀಪ್ರಸನ್ವೆಂಕಟನ ಶ್ರೀಪದವ ನಂಬಿದರೆಶಾಪ ಪಾಪೋಗ್ರಸಂತಾಪವೇನು ಮಾಡುವುವು 5
--------------
ಪ್ರಸನ್ನವೆಂಕಟದಾಸರು
ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ವೈದ್ಯ ಬಂದ ನೋಡಿ - ವೆಂಕಟನೆಂಬ |ವೈದ್ಯ ಬಂದ ನೋಡಿ ಪ.ವೈದ್ಯ ಬಂದನು ವೇದವೇದ್ಯ ನೋಡೀಗಲೇಶ್ರೀದೇವಿರಮಣನು ಶ್ರೀನಿವಾಸನೆಂಬ ಅಪಎಷ್ಟು ದಿನದ ರೋಗಗಳೆಂಬುದ ಬಲ್ಲ |ಗಟ್ಟಿಯಾಗಿ ಧಾತುರಸಗಳನು ಬಲ್ಲ ||ಕಷ್ಟ ಬಡಿಸದಲೆನ್ನ ಭವರೋಗ ಬಿಡಿಸುವ |ಶಿಷ್ಟವಾದ ದೇಹ ಕೊಟ್ಟು ಕಾಯುವನಿವ 1ಹೊನ್ನು - ಹಣಂಗಳ ಅನ್ನವ ಅನುಸರಿಸಿ |ತನ್ನ ದಾಸನೆಂಬ ನಿಜವ ನೋಡಿ ||ಚೆನ್ನಾಗಿ ಜಿಹ್ವೆಗೆ ಸ್ವಾದವಾಗಿರುವಂಥ |ತನ್ನ ನಾಮಾಮೃತ ದಿವ್ಯ ಔಷಧವೀವ 2ಈತ ದಿಟ್ಟಿಸಿ ನೋಡೆ ಎಳ್ಳಷ್ಟು ರೋಗವಿಲ್ಲ |ಈ ತನುವಿಗೆಂದೆಂದು ರೋಗಬರಲರಿಯದು ||ಈತ ಅನಂತರೂಪದಿ ಜೀವರಿಗೆ ಮುನ್ನ |ಪ್ರೀತಿಯಿಂದಲಿ ಭವರೋಗ ಬಿಡಿಸುವ 3ಧರ್ಮವೈದ್ಯನಿವ ಜಗಕ್ಕೆಲ್ಲ ಒಬ್ಬನೆ |ಮರ್ಮಬಲ್ಲ ರೋಗಜೀವಂಗಳ ||ನಿರ್ಮಲವಾಗಿಹ ತನ್ನ ನಾಮಸ್ಮರಣೆ |ಒಮ್ಮೆ ಮಾಡಲು ಭವರೋಗ ಬಿಡಿಸುವ 4ಅನ್ಯ ವೈದ್ಯನೇಕೆ ಅನ್ಯ ಔಷಧವೇಕೆ ? |ಅನ್ನ ಮಂತ್ರ - ತಂತ್ರ - ಜಪವೇತಕೆ ? ||ಚೆನ್ನ ಪುರಂದರವಿಠಲನ್ನ ನೆನೆದರೆ |ಮನ್ನಿಸಿ ಸಲಹುವ ವೈದ್ಯ ಶಿರೋಮಣಿ 5
--------------
ಪುರಂದರದಾಸರು
ಹೇಸಿದೆನಯ್ಯಾ ಹೇಸಿದೆನೋಹೇಸಿದೆನಯ್ಯಾ ಹೇಸಿದೆನೋದೋಷ ಸ್ವರೂಪ ನಾರಿಯು ಸುಂದರದುಷ್ಮಾನನು ನಿನಗ್ಹೇಳಿವೆನುಪಮೊಲೆಗಳು ಮಾಂಸದ ಗಟ್ಟಿಯ ಕರಣೀಮೂಗದು ಸಿಂಬಳ ಸೋರುವಭರಣಿಬಲುದುರುಬದು ನರಕದ ಹೊಕ್ಕರಣಿಬಾಯದು ಕಲಗಚ್ಚಿನ ದೋಣಿ1ಶೋಣಿತಮೂತ್ರವು ಹರಿವಾ ಭಗವುಶ್ವಾನನ ಹಲ್ಲಿನತೆರದಿಹ ನಗುವುಕಾಣಿಸುವುದು ತನುದುರ್ಗಂಧವುಕೆಟ್ಟದರೊಳು ಕೆಟ್ಟವಿಷಯವು2ಸಿದ್ಧವು ಗತಿಗೆ ಸ್ತ್ರೀ ದೊರಕೆಂಬುದು ಸಮನಿಸಿವೇದಾಂತದಿ ತಿಳಿದಂದು ಸಿದ್ಧಚಿದಾನಂದಬೋಧಯಲಂದು ಸೀಮಂತಿಯನು ಬಿಡಬೇಕೆಂದು3
--------------
ಚಿದಾನಂದ ಅವಧೂತರು
ಹೊಯ್ಯಾಲೊ ಡಂಗುರವ - ಜಗ - |ದಯ್ಯನಯ್ಯ ಶ್ರೀಹರಿ ಅಲ್ಲದಿಲ್ಲವೆಂದುಪ.ಅಷ್ಟೈಶ್ವರ್ಯದ ಲಕುಮಿಯ ಅರಸೆಂದು |ಸೃಷ್ಟಿ - ಸ್ಥಿತಿ - ಲಯಕರ್ತನೆಂದು ||ಗಟ್ಟಿಯಾಗಿ ತಿಳಿದುಹರಿ ಎನ್ನದವರೆಲ್ಲ |ಭ್ರಷ್ಟರಾದರು ಇಹ - ಪರಕೆ ಬಾಹ್ಯರು ಎಂದು 1ಹರಿಯೆಂಬ ಬಾಲನ ಹರಹರ ಎನ್ನೆಂದು |ಕರುಣವಿಲ್ಲದೆ ಪಿತ ಬಾಧಿಸಲು ||ತರಳನ ಮೊರೆಕೇಳಿ ನರಮೃಗರೂಪದಿ |ಹರಿಯ ನಿಂದಕನ ಸಂಹರಿಸಿದ ಮಹಿಮೆಯ 2ಕರಿ ಆದಿಮೂಲನೆ ಕಾಯೆಂದು ಮೊರೆಯಿಡೆ |ಸುರರನು ಕರೆಯಲು ಬಲ್ಲದಿರೆ ||ಗರುಡನನೇರದೆ ಬಂದು ಮಕರಿಯ ಸೀಳ್ದು |ಕರಿರಾಜನ ಕಾಯ್ದ ಪರದೈವ ಹರಿಯೆಂದು 3ಸುರಪಗೊಲಿದು ಬಲಿಯ ಶಿರವನೊದ್ದಾಗಲೇ |ಸುರಸವು ಉದಿಸೆ ಶ್ರೀ ಹರಿಪಾದದಿ ||ಪರಮೇಷ್ಟಿ ತೊಳೆಯಲು ಪವಿತ್ರೋದಕವೆಂದು |ಹರ ತನ್ನ ಶಿರದಲ್ಲಿ ಧರಿಸಿದ ಮಹಿಮೆಯ 4ಮಾನಸಲಿಂಗಪೂಜೆಗೆ ಮೆಚ್ಚಿ ಶಿವ ಬಂದು |ಬಾಣನ ಬಾಗಿಲ ಕಾಯ್ದಿರಲು |ದಾನವಾಂತಕ ಸಾಸಿರ ತೋಳ ಕಡಿವಾಗ |ಮೌನದಿಂದೊಪ್ಪಿಸಿಕೊಟ್ಟ ಶಿವನು ಎಂದು 5ಭಕ್ತಗೊಲಿದು ಭಸ್ಮಾಸುರಗೆ ಶಿವ ವರವಿತ್ತು |ಭಕ್ತನ ಭಯದಿಂದ ಓಡುತಿರೆ ||ಯುಕ್ತಿಯಿಂದಸುರನ ಸುಟ್ಟು ಶಿವನ ಕಾಯ್ದ |ಶಕನು ಶ್ರೀಹರಿ ಅಲ್ಲದಿಲ್ಲವೆಂದು 6ಗರಳಜ್ವಾಲೆಗೆ ಸಿರಿರಾಮ - ರಾಮನೆಂದು |ಸ್ಮರಿಸುತಿರಲು ಉಮೆಯರಸನಾಗ ||ಕೊರಳು ಶೀತಲವಾಗೆ ಸಿತಿಕಂಠ ತನ್ನಯ |ಗಿರಿಜೆಗೆ - ರಾಮಮಂತ್ರವ ಕೊಟ್ಟ ಮಹಿಮೆಯ 7ಹರಬ್ರಹ್ಮ ಮೊದಲಾದ ಸುರರನುದಶಶಿರ |ಸೆರೆಹಿಡಿದು ಸೇವೆಯ ಕೊಳುತಿರಲು ||ಶರಧಿಯ ದಾಟಿ ರಾವಣನ ಸಂಹರಿಸಿದ |ಸುರರ ಲಜ್ಜೆಯ ಕಾಯ್ದ ಪರದೈವ ಹರಿಯೆಂದು 8ಜಗದುದ್ಧಾರನು ಜಗವ ಪೊರೆವನೀತ |ಜಗ ಬ್ರಹ್ಮಪ್ರಳಯದಿ ಮುಳುಗಲಾಗಿ ||ಮಗುವಾಗಿ ಜಗವನುದ್ಧರಿಸಿ ಪವಡಿಸಿ ಮತ್ತೆ |ಜಗದ ಜನಕಪುರಂದರವಿಠಲನೆಂದು9
--------------
ಪುರಂದರದಾಸರು