ಒಟ್ಟು 20 ಕಡೆಗಳಲ್ಲಿ , 13 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ರಘೂತ್ತಮತೀರ್ಥರು ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ. ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ 1 ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ 2 ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ 3
--------------
ಶ್ರೀದವಿಠಲರು
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು
ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು
ಎನ್ನ ತಂದೆ ಎನ್ನತಾಯಿ ಎನ್ನ ಬಂಧುವೆ ನೀಇನ್ನಾರೊಡೆಯರಿಲ್ಲ ಕಾಯೊ ಲಕ್ಷ್ಮೀನಲ್ಲ ಪ.ಕರುಣ ನೋಟದಿ ನೋಡಿ ಹೊರಡಿಸಿದ ತಂದೆ ಮಂದರಧರನೆ ಬಸುರೊಳಿಟ್ಟ ತಾಯಿ ನೀನುಧÀರೆಗೆ ಪರಗತಿಗೆ ನೆಲೆಗೊಡುವ ಬಾಂಧವ ನೀನುದುರಿತಕರಿಗಣಕೆ ಸಿಂಹಾಸ್ಯ ನೀನು1ಷÀಟ್ಕರ್ಮ ಸಂಗ್ರಹವ ಮಾಡಿಸುವ ತಂದೆ ನೀದುಷ್ಕರ್ಮ ಖಂಡಿಸುವ ತಾಯಿ ನೀನುಷಟ್ಕೋಣ ಬಲದಿರುವ ತ್ರಿಕೂಟಾದ್ರಿವಾಸ ವಷಟ್ಕಾರಗೈದೆ ಕೌರವ ಕುಲಾರಿಯು ನೀನು 2ಶ್ರುತಿವಿರೋಧಿಗಳ ಮೋಹಿಪ ಸುರರ ತಂದೆ ನೀಅತುಳಧರ್ಮಾತ್ಮಕರ ತಾಯಿ ನೀನುಕ್ಷಿತಿಗೆ ವೈಕುಂಠವೆನಿಪ ಪ್ರಸನ್ವೆಂಕಟ ಬಂಧುಗತಿಗೆ ಗತಿಯಾದಾದಿಪುರುಷ ನಮೋ 3
--------------
ಪ್ರಸನ್ನವೆಂಕಟದಾಸರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು