ಏನುಮಾಡಿದಿ ಬಂದು ಈ ನರದೇಹದಿ |
ಜ್ಞಾನ ಸಾಧನ ಹೇಳು ಪ
ಭವ |
ಕಾನನವಿಡಿದೆಲ್ಲೋ ಅ.ಪ
ಮಾನವ ಜನುಮದಿ |
ನಿನ್ನ ತಂದನಲ್ಲೋ ಪ್ರಾಣೀ |
ಪನ್ನಗಶಯನನ ಘನ್ನ ವಿಶ್ವಾಸದ |
ಲಿನ್ನು ವಿರಹಿತಾದೆಲ್ಲೋ ಪ್ರಾಣಿ 1
ಕಂಡಪಥಕ ಹರಿದಂಡಲೆಯದೆನೆಲೆ |
ಗೊಂಡವರೊಳು ಕೂಡೋ ಪ್ರಾಣಿ |
ಖಂಡಿಸಿ ಸಂಶಯ ಪುಂಡರೀಕಾಕ್ಷನ |
ಕೊಂಡಾಡುತ ಬಾಳೋ ಪ್ರಾಣಿ 2
ಹಿಂದಿನ ಮರವಿಗೆ ಇಂದಿಗೆ ನೀರೆರಿ |
ಮುಂದ ಸ್ವಹಿತ ನೋಡೋ ಪ್ರಾಣಿ |
ತಂದೆ ಮಹಿಪತಿ ನಂದನ ಪ್ರಭುದಯ |
ದಿಂದ ಸಾರ್ಥಕ ಮಾಡೋ ಪ್ರಾಣಿ 3