ಇನ್ನಾದರೂ ದಯಬಾರದೆ ನಿನಗೆ ಸಂ-|
ಪನ್ನ ಮೂರುತಿ ಶ್ರೀಹರಿ ಪ
ನಿನ್ನ ನಾಮಸ್ಮರಣೆ ದೊರಕಿತು ||
ನಿನ್ನ ನಂಬಿದನಾಥನನುದಿನ ಅ.ಪ
ಧಾರಿಣಿಯಲಿ ಬಳಲಿದೆ ||
ಪಾರ ರಹಿತನೆ ನಿರ್ಗುಣಾತ್ಮಕ |
ಮಾರನನು ರಕ್ಷಿಸಿದ ದೇವನೆ 1
ಕಂದ ಧ್ರುವನು ಬಂದು ನಿಂದು ಮಧುವನದಲ್ಲಿ |
ಚಂದದಿಂ ತಪಗೈಯಲು ||
ನಂದನಂದನ ದೇವ ಪಾಲಿಸು 2
ನಂಬಿದ ದ್ರೌಪದಿಗಭಯವಿತ್ತೆ ||
ಸಂಭ್ರಮದಿ ಕೊಡುವಂತೆ ಭಕ್ತಕ-|
ದಂಬಪಾಲಕ ಶ್ರೀನಿವಾಸನೆ 3