ಒಟ್ಟು 49 ಕಡೆಗಳಲ್ಲಿ , 25 ದಾಸರು , 46 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಮಂಗಲಂ ಮಂಗಲಂ ಭವತು ತೇ ಮಂಗಲಂ ಪ. ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ ಸಜ್ಜನನಿವಹಾರಾದಿತಗೆ ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ ಮೂಜದೊಡೆಯ ಮನೋಜ್ಞ ಮೂರುತಿಗೆ 1 ಚಂದ್ರಶೇಖರಸುಕುಮಾರಗೆ ಮಾರನ ಸುಂದರರೂಪ ಪ್ರತಾಪನಿಗೆ ನಿಂದಿತ ಖಲಜನವೃಂದವಿದಾರಗೆ ಸ್ಕಂದರಾಜ ಕೃಪಾಸಿಂಧು ಪಾವನಗೆ 2 ತಾರಕದೈತ್ಯಸಂಹಾರಗೆ ಧೀರಗೆ ಶೂರಪದ್ಮಾಸುರನ ಗೆಲಿದವಗೆ ಸೇರಿದ ಭಕ್ತರ ಸುರಮಂದಾರಗೆ ನಾರದಾದಿ ಮುನಿವಾರವಂದಿತಗೆ 3 ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ ಎಲ್ಲ ಭೂತಾಶ್ರಯ ಬಲ್ಲವಗೆ ಖುಲ್ಲದಾನವರಣಮಲ್ಲ ಮಹೇಶಗೆ ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4 ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ ಮಂಜುಳಕಾಂತಿ ವಿರಾಜನಿಗೆ ನಂಜುಂಡನ ಕರಪಂಜರಕೀರ ಪಾ- ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಂಗಳ ಮುಖ್ಯ ಪ್ರಾಣೇಶಗೆ ಪ ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ಅ.ಪ ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ1 ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ 2 ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ3
--------------
ವ್ಯಾಸರಾಯರು
ಮಂಗಳಂ ಶುಭಮಂಗಳಂ ಪ ಅಂಜನೆ ಗರ್ಭದಿಂ ಬಂದವಗೆ ಕಂಜಾಕ್ಷಿ ವಾರ್ತೆಯ ತಂದವಗೆ ಸಂಜೀವನ ತಂದು ರಾಮನ ರಂಜನೆಗೈದ ಮುಖ್ಯಪ್ರಾಣಗೆ 1 ಕುಂತಿಯ ಕಂದನೆಂದೆನಿಸಿದವಗೆ ದಂತಿ ಸಾಸಿರ ಬಲವಂತನೆಗೆ ಕಂತು ಪಿತನ ಮಂತ್ರಿಯೆನಿಸಿ ಕುರುಕುಲ ಅಂತಕನಾದ ಭೀಮಸೇನಗೆ 2 ನಡುಮನೆ ವೇದವತಿ ವರಸುತಗೆ ಉಡುದಾರ ಉಪವೀತ ತೊರೆದವಗೆ ಸಿರಿ ರಂಗೇಶವಿಠಲನ ಬಿಡದೆ ಪೂಜಿಪ ಮಧ್ವರಾಯಗೆ 3
--------------
ರಂಗೇಶವಿಠಲದಾಸರು
ಮನ್ಮಥಪಿತ ವಿಠಲ ನೀನಿವಳ ಸಲಹೊ ಹರಿಯೇಮನ್ಮನೋರಥ ಭಿನ್ನಪವ ಸಲಿಸೋ ಪ ಜನ್ಮಜನ್ಮಾಂತರದ ಪುಣ್ಯ ಸಂಚಯ ಫಲಿಸಿನಿನ್ನ ದಾಸತ್ವದಲಿ ಕಾಂಕ್ಷೆ ಬಹುಯಿರಿಸೆನನ್ನೆಯಿಂದಲಿ ಪೂಜೆ ಪರಿಕರಂಗಳ ಕೊಂಡುಸ್ವಪ್ನ ಸೂಚಕದಂತೆ ನಿನ್ನರ್ಚನೆಯ ಕಾತುರಳ 1 ತರತಮದಿ ಸುಜ್ಞಾನ ಹರಿಗುರೂ ಸದ್ಭಕ್ತಿಪರಮ ವೈರಾಗ್ಯವನು ವಿಷಯಾದಿಗಳಲೀಪರತತ್ವ ಹರಿಯೆಂಬ ವರಮತಿಯ ನೀನಿತ್ತುಗುರುಮಧ್ವ ಮತದಲ್ಲಿ ಪರಮದೀಕ್ಷೆಯನೀಯೋ 2 ಪತಿ ಸುತರು ಹಿತರಲ್ಲಿ | ಗತಿದಾತ ಗುರುವಿನೊಳುಕ್ಷಿತಿರಮಣ ತವವ್ಯಾಪ್ತಿ ಮತಿಯ ಪಾಲಿಸುತಗತಿ ದೋರೊ ಸನ್ಮುಕುತಿ ಪಥವನೀ ಸಲಿಸುತ್ತಹುತವಹಕ್ಷಾಂತರ್ಗತ ಮನದಿ ನೆಲಸುತಲೀ 3 ಸಂಜೀವ ಪಿತನೇ |ನಂಜು ಸಂಸ್ಕøತಿ ಬಂಧ ಮೋಚಕೇಚ್ಛೆಯ ಮಾಡಿಅಂಜಿಕೆಯನೆ ಕಳೆಯೊ | ಕಂಜಾಕ್ಷ ಹರಿಯೇ 4 ಪಾವಮಾನಿಯ ಪ್ರೀಯ ಭಾವುಕಳ ಹೃದ್ಗತನೆನೀವೊಲಿದು ತವಸ್ಮರಣೆ ಸರ್ವದಾ ಸರ್ವತ್ರಈವುದಿವಳಿಗೆ ಎನ್ನ ಬಿನ್ನಪವ ಸಲ್ಲಿಪುದುಗೋವಿದಾಂಪತಿಯೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮುಖ್ಯಪ್ರಾಣ ಮೂಲಗುರು ಅಹುದೊ ಪ. ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀ ಅಹುದೊಅ.ಪ. ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ ತಂದ್ಯೊ ಸಕಲ ಕಪಿಗಳಿಗೆಮಂಜುಭಾಷಣ ನೀನು ಶರಧಿಯನು ದಾಟಿದೆಯೊಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ 1 ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನುಪಂಥವನಾಡಿ ದಾಯಾದ್ಯರೊಡನೆಕಂತುಪಿತನ ಕೂಡಿ ಕೌರವರ ಗೆಲಿದ್ಯೊಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ 2 ಮಧ್ವಾವತಾರದಲಿ ಮುನಿವೇಷವನು ತಾಳಿಅದ್ವೈತವೆಂಬೊ ಅರಣ್ಯವನು ತರಿದೆಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆಮುದ್ದು ಹಯವದನದಾಸ ನೀನಹುದೊ 3
--------------
ವಾದಿರಾಜ
ಮುರಳೀ ವಿಹಾರಿ ವಿಠಲ | ಪೊರೆಯ ಬೇಕಿವಳಾ ಪ ಕರುಣಿ ಕಂಜಾಕ್ಷ ಹರಿ | ಮೊರೆ ಇಡುವೆ ನಿನಗೇ ಅ.ಪ. ಸ್ವಾಪದಲಿ ಗುರುದರ್ಶ | ಸುಫಲ ಮಂತ್ರಾಕ್ಷತೆಯನೀ ಪಾಲಿಸಿಹೆ ದೇವ | ಹೇ ಪರಮಾತ್ಮನೇಆ ಪಯೋಜ ಭವನುತ | ಗೋಪಾಲ ಕೃಷ್ಣನೇಈ ಪರಿಯ ಕಾರುಣ್ಯ | ನಾ ಪೊಗಳಲಳವೇ 1 ಕನ್ಯೆ ಬಹು ಭಕ್ತಿಯುತೆ | ಮಾನ್ಯ ಮಾಡುತ ಅವಳಸನ್ಮನೋಭೀಷ್ಟಗಳ | ವಕ್ಷಿಸೋ ಹರಿಯೇಅನ್ಯಳಲ್ಲವೊ ಅವಳು | ನಿನ್ನ ದಾಸಿಯೆ ಇಹಳುಮಾನ್ಯ ಮಾನದ ಹರಿಯೆ | ಚೆನ್ನಾಗಿ ಸಲಹೋ 2 ಸಿರಿ ವತ್ಸ ಲಾಂಛನ 3 ಕರ್ಮ ನಾಮಕನೇಭರ್ಮಗರ್ಭನ ಪಿತನೆ | ನಂಬಿ ಬಂದಿಹಳೀಕೆಹಮ್ರ್ಸದಲಿ ನಿನಕಾಂಬ | ಸಾಧನವ ಗೈಸೋ 4 ಪಾವಮಾನಿಯ ಪ್ರೀಯ | ಕೋವಿದೋತ್ತಂಸ ಹರಿನೀ ವೊಲಿಯದಿನ್ನಿಲ್ಲ | ಭಾವ ಜಾನಯ್ಯಾದೇವ ದೇವೇಶ ಗುರು | ಗೋವಿಂದ ವಿಠ್ಠಲನೆಗೋವತ್ಸದನಿಗಾವು | ಧಾವಿಸಿ ಪೊರೆವಂತೆ 5
--------------
ಗುರುಗೋವಿಂದವಿಠಲರು
ಮೂರುತಿಯ ತೋರೋ ಮಾರುತಿ ಧಾರುಣಿಯೊಳ್ ನೀನೇ ಗತಿಪ ಅಂಜನಾ ಸುಕುಮಾರ ಕಂಜಾಕ್ಷ ಕಿಂಕರ ಸಂಜೀವ ಗಿರಿಧರ ಅಂಜಿಕೆಯ ಕಳೆವ ಧೀರ 1 ಎರೆಡು ದಳದವರ ಕರೆದು ಕೌರವನುರ ಇರಿದು ಕರುಳಸರ ವರಸತಿಗಿತ್ತ ಧೀರ 2 ಕಾಕು ಮಾಯ್ಗಳ ಮತ ನೂಕಿ ಬಿಸಾಡುತ ಶ್ರೀಕಾಂತ ಸನ್ಮತ ಕೈಗೊಂಡು ನಿಲಿಸಿದಂಥ 3
--------------
ಲಕ್ಷ್ಮೀನಾರಯಣರಾಯರು
ಯಾಕೆ ಮರುಳಾದೆಮ್ಮ ಎಲೆ ಭಾರತೀ |ಸಾಕಲಾರದೆ ವಿವಿಧ ರೂಪ ತಾಳ್ದನಿಗೇ ಪ ಕಂಜಾಕ್ಷಿ ಸೀತೆಯನು | ಅರಸಲ್ಕೆ ಅಬ್ಧಿಯನುಅಂಜದಲೆ ಉತ್ತರಿಸಿ | ಶತ್ರು ಮಧ್ಯಾ |ಸಂಜೆಯಲಿ ಕಂಡು | ಕಂಜಾಕ್ಷಿ ಗುಂಗುರವಅಂಜದಲೆ ಇತ್ತಿಹ ಪ್ರ | ಭಂಜನಗೆ ನೀನು 1 ವಿಷದ ಲಡ್ಡಿಗೆಯನ್ನು | ಹಸನಾಗಿ ತಿಂದವನುವಿಷಧಿಯೊಳು ಮುಳುಗಿರಲು | ವಿಷಗಣವು ಕಡಿಯೇ |ವಿಷಗಣವು ಪಲ್ಮುರಿದು | ಅಸುವ ನೀಗಲು ಕ್ಷಣದಿವಿಷ ಮರೆದೆ ಕಲಕುತಲಿ | ವಸುಧೆಯಾಳ್ದನಿಗೇ 2 ವಿಪಿನ | ಪ್ರಧ್ವಂಸಕಾನಳಗೇ 3 ಖೇಚರನು ತಾನು ನೀ | ಶಾಚರರ ಸಂಹರಿಸಿಪಾಚಕನು ಮತ್ತಾಗಿ | ಕೀಚಕರ ಸವರೀ |ಯಾಚಿಸುತ ಭಿಕ್ಷಾನ್ನ | ವಾಚಿಸುತ ಸಚ್ಛಾಸ್ತ್ರಮೋಚಕನು ಆದವಗೆ | ಯೋಚಿಸಿಯು ಕೈಪಿಡಿದೇ4 ಎಂಜಲೆಡೆಯನು ಕೊಂಡು | ಅಂಜದಲೆ ಮರಕ್ಹಾರಿಸಂಜೆ ಚರಳೆರ ಕೊಂದಧ | ನಂಜಯ ನಿ ಗೊಲಿದ |ಕಂಜಾಕ್ಷನಾದ ಗುರು | ಗೋವಿಂದ ವಿಠಲ ಪದಕಂಜ ಭಜಿಸುವ ಭಾವಿ | ಕಂಜ ಸಂಭವಗೇ 5
--------------
ಗುರುಗೋವಿಂದವಿಠಲರು
ಲಾಲಿ ಲಾಲೀ ಲಾಲಿ ಮೊದಲಗಟ್ಟೇಶ ಲಾಲಿ ಲಾಲೀ ಲಾಲಿ ತುಂಗಭದ್ರ ತೀರೇಶಾ ಪ. ಆಂಜನೆಯ ಸುತನಾಗಿ ಅಂಬರಕೆ ಹಾರಿ ಕಂಜಾಕ್ಷ ರಾಮರಂಘ್ರಿಗಳನ್ನು ಸಾರಿ ಮಂಜುಭಾಷಿಣಿಗೆ ಹರಿ ಮುದ್ರಿಕೆಯ ತೋರಿ ಶೌರಿ 1 ಕುರುಕುಲದಿ ಜನಿಸಿದ ಕುಂತೀ ಕುಮಾರ ರಣಧೀರನೆನಿಸಿದ ಕುರುಪ ಸಂಹಾರ ಧರೆಯ ಭಾರವ ಕಳೆದೆ ಗದೆಯಿಂದ ಶೂರ ಧುರಧೀರ ಶ್ರೀ ಕೃಷ್ಣನಂಘ್ರಿ ಪರಿಚಾರ 2 ಅನ್ಯಮತಗಳ ಮುರಿದ ಧನ್ಯಮುನಿವರನೆ ಮಾನ್ಯ ಸುರರಿಂದ ಹರಿಗುನ್ನಂತಪ್ರಿಯನೆ ಭವ ಬನ್ನ ಬಿಡಿಸುವನೆ ಘನ್ನ ಗೋಪಾಲಕೃಷ್ಣವಿಠ್ಠಲನ ಸೂನೆ 3
--------------
ಅಂಬಾಬಾಯಿ
ವಾಯುದೇವರ ಸ್ತೋತ್ರ ಲಾಲಿ ಲಾಲಿ ತ್ರಿಭುವನ ಪಾವನ ಲಾಲಿ ಪ ಅಂಜನದೇವಿಯ ಕಂದಗೆ ಲಾಲಿಕಂಜಾಕ್ಷಿಗೆ ಮುದ್ರಿಕೆಯಿತ್ತಗೆ ಲಾಲಿ ||ಅಂಜದೆ ಅಸುರರ ಕೊಂದಗೆ ಲಾಲಿಸಂಜೀವನ ಗಿರಿ ತಂದಗೆ ಲಾಲಿ 1 ಕುಂತಿಯುದರದಿ ಬಂದಗೆ ಲಾಲಿದಂತಿಯ ಗಗನಕ್ಕೆ ಒಗದಗೆ ಲಾಲಿ ||ಭ್ರಾಂತನ ಉದರವ ಬಗೆದಗೆ ಲಾಲಿಚಿಂತಾಮಣಿ ಭೀಮರಾಯಗೆ ಲಾಲಿ 2 ಸೋಹಂ ಎಂಬರ ತರಿದಾಗೆ ಲಾಲಿ ದಾ-ಸೋಹಂ ಎಂಬರ ಪೊರೆದಗೆ ಲಾಲಿ ||ಮೋಹನ್ನ ವಿಠ್ಠಲನ್ನ ಭಜಿಪಗೆ ಲಾಲಿಸ್ನೇಹದಿ ಭಕತರ ಪೊರೆವಗೆ ಲಾಲಿ 3
--------------
ಮೋಹನದಾಸರು
ವಾಯುದೇವರು ಇದು ಏನು ಕೌತುಕವೊ ಹನುಮರಾಯ ಪದುಮನಾಭನ ದಯಾಪಾತ್ರ ಶುಭಕಾಯ ಪ. ಅಂಜನೆಯ ಸುತನಾಗಿ ಅಂದು ಶ್ರೀ ರಾಮರಡಿ ಕಂಜಗಳ ಸೇವಿಸುತ ಮುದ್ರಿಕೆಯನು ಕಂಜಾಕ್ಷಿಗಿತ್ತು ಕ್ಷೇಮವನರುಹಿ ಬಂದಾಗ ಸಂಜೀವ ನಿನಗಿಷ್ಟು ತೊಡಿಗೆ ಕೊಟ್ಟಳೆ ದೇವಿ 1 ಮರುವಾರ್ತೆ ತಂದು ರಾಮಗರುಹಿ ಸೇತುವೆಯ ಗಿರಿಯಿಂದ ಕಟ್ಟಿ ಕಾರ್ಯವ ಸಾಧಿಸೆ ಸಿರಿಸಹಿತ ಶ್ರೀ ರಾಮ ರಾಜ್ಯಕೆ ಬಂದಾಗ ಮರುತ ನಿನಗಿಷ್ಟು ಆಭರಣ ಕೊಟ್ಟನೆ ಪೇಳು 2 ಎಲ್ಲೆಲ್ಲಿ ನಿನ್ನ ಕೀರ್ತಿಯ ಕೇಳೆ ಕೌಪೀನ ವಲ್ಲದಲೆ ಮತ್ತೊಂದರ್ಹಂಬಲಿಲ್ಲ ಮಲ್ಲ ವೈರಾಗ್ಯದಲಿ ಎಂಬುದನು ಕೇಳಿದೆನು ಇಲ್ಲಿ ನೋಡಲು ಇಷ್ಟು ವೈಭವವ ಪಡುತಿರುವೆ 3 ರಾತ್ರೆಯಲಿ ಕೀಚಕನ ಕೊಲ್ಲಲೋಸುಗ ಅಂದು ಮಿತ್ರೆ ರೂಪವ ಧರಿಸಿ ಶೃಂಗರಿಸಿಕೊಂಡು ಕತ್ತಲೊಳು ನೋಡಿಕೊಳ್ಳಲು ಆಗಲಿಲ್ಲೆಂದು ಹಸ್ತ ಕಡಗ ಹರಡಿ ಇಟ್ಟು ಮೆರೆಯುವೆಯೊ 4 ಹುಟ್ಟುತಲೆ ಸಂನ್ಯಾಸ ತೊಟ್ಟು ಬ್ಯಾಸತ್ತೊ ನಡು ಪಟ್ಟಿ ಉಡುದಾರ ಉಡುಗೆಜ್ಜೆ ಕಾಲ್ಗಡಗ ಇಟ್ಟು ನಾನಾ ಬಗೆ ಕದರುಂಡಲಿಯಲಿ ನೆಲಸಿ ಶ್ರೇಷ್ಠ ಗೋಪಾಲಕೃಷ್ಣವಿಠ್ಠಲನ ಪ್ರಿಯನಾದಿ 5
--------------
ಅಂಬಾಬಾಯಿ
ಶೋಭಾನೆ ಶೋಭಾನೆ ಶೋಭಾನೆ ಪ ಶ್ರೀಗಣಾಧಿಪತಿಯ ಸಂಸೇವಿಸಿ ಶಂಕರನ ಭಜಿಸಿ ವಾಗಾಭಿಮಾನಿಯೆನಿಪ ಸರಸ್ವತಿ ದೇವಿಗೆ ವÀಂದಿಸಿ ಸಾಗರಸುತೆಯರಮಣ ನಿಂತು ಪೇಳಿಸಿದ ಪರಿಯೊ ಳೀಗ ಗಂಡುಮಕ್ಕಳಾಶೀರ್ವಾದ ಪದವ ಪೇಳ್ವೆ ಸುಜನರೆಲ್ಲಾಲಿಪುದು ಶೋಭಾನೆ 1 ಬಾಲನಾಗಿ ಪ್ರಹ್ಲಾದನವೋಲ್ ಬಹುಕ್ರೀಡೆಗಳಾಡುತಲಿ ಮೇಲೆ ಪಂಚಾಬ್ದದಿ ಸದ್ ವಿದ್ಯಾಭ್ಯಾಸಗಳನೆ ಮಾಡಿ ಶಾಸ್ತ್ರಾರ್ಥವೇತ್ತನಾಗುತಲಿ ಶೀಲಾದಿ ಸದ್ಗುಣಗಳುಳ್ಳ ಬಾಲೆಯಳ ಮದುವೆಯಾಗಿ ಕಾಲ ಕಾಲದಲ್ಲಿ ದೇವಋಷಿ ಪಿತೃಗಣಗಳ ಪೂಜೆ ಅಗ್ಗಳ ನೀನಾಗು 2 ಕೆರೆಗಳ ಕಟ್ಟಿಸು ಸರೋವರಗಳನ್ನೆ ಮಾಡಿಸು ನಿ- ನಿಖಿಳ ಯಜ್ಞಗಳಾಚರಿಸು ಸತ್ಪಾತ್ರಕ್ಕೆಯಿತ್ತುದಾತನೆಂದೆನಿಸು ನಿರತ ಬಂದವರಿಗನ್ನ ನೀಡುತ್ತ ಪ್ರಸನ್ನ ಮನದಿ ಮರಗಳ ಹಾಕಿಸು ಸಪ್ತಸಂತಾನಗಳನ್ನೆಗಳಿಸು ಮಾನ್ಯರೊಳು ವರ್ತಿಸಿಸುಖಿಸು 3 ಧರ್ಮಯುಕ್ತನಾಗುತ್ತ ಅಧರ್ಮಗಳ ಬಿಡುತ ಸ- ತ್ಕರ್ಮಗಳಾಚರಿಸು ಫಲವ ಕಂಜಾಕ್ಷಗರ್ಪಿತಮಾಡು ನಿತ್ಯ ಸಂತಸದಿ ಮರ್ಮಜ್ಞರೆನಿಪ ಗುರುಹಿರಿಯರ ಸೇವಿಸುತ ಸ ಮಾಡಿ ನಿತ್ಯಸುಖಿಯಾಗು 4 ಧೀರ್ಘಾಯುವಾಗಿರು ಬಂಧು ವರ್ಗವ ಪರಿಪೋಷಿಸು ಭರ್ಗಾದಿ ದೇವತೆಗಳ ಭಕ್ತಿಯಿಂದಾ ಪೂಜಿಸಿತ್ರಿ- ಅರ್ಥಿಯ ಪೊಂದು ಸ್ವರ್ಗಸ್ಥಿತಿ ಲಯಕರ್ತ ಗುರುರಾಮವಿಠಲ ನಘ್ರ್ಯ ಸಂಪದಗಳಿತ್ತು ಆದರಿಸಿ ತನ್ನ ಭಕ್ತಾ ನಿತ್ಯ ಸತ್ಯಾಧನವ ಮಾಡಿಸುವಾ ಶೋಭಾನೆ 5
--------------
ಗುರುರಾಮವಿಠಲ
ಶ್ರೀಮದನಂತಸ್ವಾಮಿ ರಕ್ಷಿಸು ಪುಣ್ಯ- ನಾಮ ಸರ್ವಾಂತರ್ಯಾಮಿ ಪ. ಸೋಮಾರ್ಕಕಾಮಸೂತ್ರಾಮ ಪ್ರಮುಖಸುರ- ಸ್ತೋಮವಂದಿತ ಭೀಮಬಲ ಗುಣ- ಧಾಮ ವರನಿಸ್ಸೀಮ ಮಹಿಮನೆ ಅ.ಪ. ಅಂತರ್ಬಹಿವ್ರ್ಯಾಪ್ತನೆ ಸತತ ರಮಾ- ಕಾಂತಗೆ ಪರಮಾಪ್ತನೆ ಚಿಂತಿಪ ಭಕ್ತರ ಚಿಂತಾಮಣಿ ನಿ- ಶ್ಚಿಂತನೊಂದೆ ಶಿರದಿ ಸಾಸವೆ- ಯಂತೆ ಲೋಕವನಾಂತುಕೊಂಡಿಹೆ 1 ರಾಮನ ಸೇವೆಗಾಗಿ ಲಕ್ಷ್ಮಣನೆಂಬ ನಾಮವ ತಾಳ್ದ ಯೋಗಿ ಯಾಮಿನೀಚರರ ನಿರ್ನಾಮಗೈದ ವೀರಲ- ಲಾಮ ನಿರ್ಜಿತಕಾಮ ಸಜ್ಜನ- ಪ್ರೇಮ ಭೌಮ ನಿರಾಮಯನೆ ಜಯ 2 ಸಂಕರ್ಷಣ ಸುಗುಣಾ-ಭರಣ ನಿ- ಶ್ಯಂಕ ವೈರಿಭೀಷಣ ಶಂಕರಾದಿಸುರಸಂಕುಲನುತಪಾದ- ಪಂಕಜನೆ ತಾಟಂಕಗೋಪಾ- ಲಂಕೃತಾಂಗ ಶುಭಂಕರನೆ ಜಯ 3 ಸಾರತತ್ತ್ವಬೋಧನೆ ಶರಣುಜನ ವಾರಿಧಿಚಂದ್ರಮನೆ ಘೋರಭವಾರ್ಣವತಾರಕನಮಲ ಪಾ- ದಾರವಿಂದದ ಸೌಂದರ್ಯ ನಿಜ ಭೂರಿ ನೇತ್ರಗಳಿಂದ ಕಾಣುವೆ 4 ಮಂಜುಳ ನಗರೇಶನೆ ಭಕ್ತಭಯ- ಭಂಜನ ಸುವಿಲಾಸನೆ ಕಂಜಾಕ್ಷಸಖ ಲಕ್ಷ್ಮೀನಾರಾಯಣನ ತೇಜಃ- ಪುಂಜ ಭಗವದ್ಭಕ್ತಜನಮನೋ-ರಂಜನಾತ್ಮ ನಿರಂಜನನೆ ಜಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಿಯಾರೊ ನಿನಗೆ ಲೋಕದÉೂಳಗೆ ಸಮರ್ಯಾರೊ ಪ ಅಂಜನೆಯಲ್ಹುಟ್ಟಿ ಅಂಬುಧಿಯ ನೀನ್ಹಾರಿದೆ ಕಂಜಾಕ್ಷಿ ಕರಕಮಲಕೆ ಉಂಗುರವನಿಟ್ಟೆ 1 ಕೊಂದು ಕೌರವರನಾಳಿದ್ಯೊ ಗಜಪುರವನ್ನು ತಂದು ದ್ರೌಪದಿಗೆ ಸುಗಂಧ ಕುಸುಮವನಿಟ್ಟೆ 2 ಚಾರು ಚರಣಕ್ಕೆ ನಾ ನಮಿಸುವೆನು ಭೀಮೇಶಕೃಷ್ಣನ ಭಕ್ತ3
--------------
ಹರಪನಹಳ್ಳಿಭೀಮವ್ವ