ಒಟ್ಟು 25 ಕಡೆಗಳಲ್ಲಿ , 14 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗಾ ಮನೆಗೆ ಬಾರೋ ಕೃಪಾಂಗ ಶ್ರೀರಂಗ ಪ ರಂಗ ಕಲುಷವಿಭಂಗ ಗರುಡ ತು-ರಂಗ ನವಮೋಹನಾಂಗ ಶ್ರೀರಂಗ ಅ.ಪ ಪಚ್ಚೆ ಬಾವುಲಿಗಳನು ನಿನ್ನ ಕಿವಿಯೊಳಗಿಟ್ಟುಮೆಚ್ಚಿ ಮುದ್ದಾಡುವನು ಹೆಚ್ಚಿದ ವಾಲಿಯನು ಬಾಣದಿ ಚುಚ್ಚಿದ ಸಪ್ತತಾಳಂಗಳನು ಬಿಚ್ಚಿದ ಸಮುದ್ರವ ಸುತ್ತ ಮುಚ್ಚಿದಎಚ್ಚರಿಕೆಯಲಿ ಲಂಕೆಯನು ಪೊಕ್ಕುಕಿಚ್ಚುಗಳ ಹಚ್ಚಿಸಿದ ಹನುಮನ ಮೆಚ್ಚಿದ ಖರದೂಷಣರ ಶಿರಗಳಕೊಚ್ಚಿದ ಅಚ್ಯುತಾನಂತ1 ಮುತ್ತಿನ ಹಾರವನು ಕಂಠದೊಳಿಟ್ಟುಎತ್ತಿ ಮುದ್ದಾಡುವೆನುಹತ್ತಿದ ರಥವನು ಮುಂದೊತ್ತಿದಕೌರವರ ಸೇನೆಗೆ ಮುತ್ತಿದಉಭಯರಿಗೆ ಜಗಳವ ಬಿತ್ತಿದ ಮತ್ತ ಮಾತಂಗಗಳನೆಲ್ಲಒತ್ತರಿಸಿ ಮುಂದೊತ್ತಿ ನಡೆಯುತಇತ್ತರದಿ ನಿಂತ ವರ ರಥಿಕರಕತ್ತರಿಸಿ ಕಾಳಗವ ಮಾಡಿದ 2 ಉಂಗುರಗಳನು ನಿನ್ನ ಅಂಗುಳಿಗಿಟ್ಟುಕಂಗಳಿಂದಲಿ ನೋಡುವೆಹೆಂಗಳ ಉತ್ತುಂಗದ ಕುಚಂಗಳಆಲಂಗಿಸಿದ ಭುಜಂಗಳಕಮಲಸಮ ಪಾದಂಗಳಹಿಂಗದೆ ಸ್ಮರಿಸಿದ ಮಾತಂಗನಭಂಗವ ಪರಿಹರಿಸಿ ಬ್ಯಾಗದಿಮಂಗಳ ಸ್ವರ್ಗವನಿತ್ತ ಉ-ತ್ತುಂಗ ವಿಕ್ರಮ ರಂಗವಿಠಲನೆ 3
--------------
ಶ್ರೀಪಾದರಾಜರು
ರಾಘವೇಂದ್ರರಾಯರೆಂಬ ರತುನ ದೊರೆಕಿತೋ ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ ಮಂಗಳಾರಿಗರು ತುಂಗಾತೀರದಿ ನಿಂದಿಹರೋ ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ1 ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ 2 ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ 3 ಶ್ರೀ ರಾಘವೇಂದ್ರರೂ ನಂತ ಮಹಿಮರೂ 4 ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ 5
--------------
ರಾಧಾಬಾಯಿ
ರುದ್ರದೇವರು ಪಾಲಿಸೊ ಪಾರ್ವತಿ ರಮಣಾ ನಿನ್ನಪಾಲಿಗೆ ಬಂದೆನೊ ಪಾಲಿಸೆನ್ನದೆ ಪ ವೇದವೇದಾಂತ ಪುರಾಣಗಳೆಲ್ಲನೀದಯಾಳುವೆಂದು ಪೊಗಳುತಿರೆಹಾದಿಬೀದಿ ದೇವತೆಗಳಿಗೆರಗಿ ನಾಖೇದಬಟ್ಟು ನಿನ್ನ ಮೊರೆ ಹೊಕ್ಕೆ ಮಹದೇವ 1 ತುಂಗಾ ಕುಮದ್ವತಿ ಸಂಗಮೇಶ್ವರ ನಿನ್ನಕಂಗಳಿಂದಲಿ ನೋಡೂ ಕರುಣದಿಂದಕಂಗೆಟ್ಟು ಕಳವಳಿಸುತಿರೆ ನೀ ನೋಡಿಭಂಗಪಡಿಸಿದರೇನು ಭಾಗ್ಯವು ಬರುವದು 2 ಆಪತ್ತು ಕಳೆದು ಸಂಪತ್ತು ನೀಡಿ ನಿನ್ನರೂಪವ ತೋರಿಸೋ ತ್ವರಿತದಲಿಗೋಪತಿಕೃಷ್ಣವಿಠಲನೆಲ್ಲ ಲೋಕವವ್ಯಾಪಿಸಿರಲು ಸಂದೇಹ ವ್ಯಾತಕಯ್ಯಾ 3
--------------
ಗೋಪತಿವಿಠಲರು
ವಾಸುದೇವ ಬಲ್ಲಭಾಸುರಾಂಗ ಶ್ರೀವಾಸುಕಿಶಯನನಸಾಸಿರ ನಾಮವ ಲೇಸಾಗಿ ಪಠಿಸದೆ ಪ ಮುರ ಮುಷ್ಟಿಕ ವೈರಿಯನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ 1 ಕಾಯವು ಸ್ಥಿರವಲ್ಲ ಎನ್ನೊಳುಮಾಯೆ ತುಂಬಿತಲ್ಲಪ್ರಾಯಮದದಿ ಪರಸ್ತ್ರೀಯರ ಕೊಂಡಾಡಿಕಾಯಜಜನಕನ ಗಾಯನ ಮಾಡದೆ2 ಕಂಗಳಿಂದಲಿ ನೋಡೋ ದೇವ ನಿ -ನ್ನಂಗಸಂಗವ ನೀಡೋಮಂಗಳಮಹಿಮ ಶ್ರೀರಂಗವಿಠಲ ಮುಂ-ದಂಗಬಾರದಂತೆ ನೀ ದಯಮಾಡೋ 3
--------------
ಶ್ರೀಪಾದರಾಜರು
ಶ್ರೀ ಸತ್ಯಸಂಧರು ಸತ್ಯ ಬೋಧರ ಕಂಡ | ಯತಿವರ್ಯ ಸತ್ಯಸಂಧ ಕೃತ್ಯ ನಿಮ್ಮದು ಆನಂದಾ ಪ ಸ್ತುತ್ಯುಯತ್ಯಾಶ್ರಮವ ವಹಿಸುತಪ್ರತ್ಸಹತ ಸಚ್ಚಾಸ್ತ್ರ ಬೋಧಕಪ್ರತ್ಯರ್ಥಿ ಮಾಯ್ಗಳ ಖಂಡಿಸುತಭೃತ್ಯ ಜನಕಭೀಷ್ಟ ಗರೆವಾ ಅ.ಪ. ಗಂಗೆಮೀಯಲು ಸಾಧು ಸಂಗದಿ ತೆರಳುತ್ತಅಂಗಜಾರಿಯ ಪುರದೀ |ಮಂಗಳಾಂಗನು ಹರಿಪದಾಬ್ಜದಿಬೃಂಗರೆನಿಸುತ ಪೂಜೆಯ ಗೈಯ್ಯಲುರಂಗ ಹರಿಪಾದಾರವಿಂದವಕಂಗಳಿಂದಲಿ ಕಂಡಯತಿಯ 1 ಗಯ ಗಧಾದರ ನಂಘ್ರಿಪ್ರಿಯವಿಂದ ಭಜಿಸಲುನಯಸುತ್ತ ಪರಿವಾರವಾ |ಮಾಯಿಗಳ ದುರ್ವಾದ ಖಂಡಿಸಿಹೇಯಮತವಿದ್ವಂಸ ಗೈಯ್ಯುತರಾಯದಶರಥ ಸುತನು ರಾಮಗೆಜಯಪತ್ರಾರ್ಪಿಸಿದ ಮಹಿಮ 2 ವಿಷ್ಣುಪಾದವ ಮನ ಮುಟ್ಟಿ ಭಜಿಸಲು ಪೋಗೆದುಷ್ಟಗಯಾಳವಾರರು |ದಿಟ್ಟತನದಲಿ ಕದವಮುಚ್ಚಲು |ಶ್ರೇಷ್ಠ ಯತಿಗಳ ಭಕ್ತಿಗೊಲಿಯುತಥಟ್ಟನೇ ಕದತೆರೆಯಲಂದಿನಅಟ್ಟಹಾಸದಿ ಪೂಜೆಗೈದ 3 ಬಾಳಲಜ್ಜೆಲಿಗಯ | ವಾಳರು ಶರಣೆನ್ನೆಲಾಲಿಸುವರ ಭಿನ್ನ ಪ |ಮೂಲರಾಮರ ಸೇವೆಯನುಗಯೆವಾಳರೆಲ್ಲರು ಮಾಡಲೆನುತಲೀಲೆಯಿಂ ಮುದ್ರಾಂಕಗೈದಘಜಾಲವನು ತಾ ಕಳೆದ ಯತಿಯ 4 ಮಹಿಷಿ ಕ್ಷೇತ್ರದಿಅಂಗವೃಂದಾವನವ ಪೊಗಿಸುತರಂಗಗುರು ಗೋವಿಂದ ವಿಠಲನಮಂಗಳ ಧ್ಯಾನದಲಿರುತಿಹ 5
--------------
ಗುರುಗೋವಿಂದವಿಠಲರು
ಸೀತಾಮನೋಹರ ವಿಠಲಾ | ಕಾಪಾಡೊ ಇವಳಾ ಪ ಮಾತುಮಾತಿಗೆ ನಿನ್ನ | ಸ್ಮರಣೆ ಸುಖ ಕೊಟ್ಟು ಅ.ಪ. ಮಂಗಳಾಂಗನೇ ಹರಿಯೇ | ಶೃಂಗಾರ ಮೂರುತಿಯೇಭಂಗಗೈ ಅಜ್ಞಾನ | ಸತ್ಸಂಗವನೆ ಕೊಟ್ಟುಸ್ವಾಂಗಾಯ ನಾಮ | ನೀಲಾಂಗ ಶ್ರೀ ಹರಿಯೆಕಂಗಳಿಂದಲಿ ಕಾಂಬ | ಹವಣೆಯನು ತಿಳಿಸೋ 1 ತರತಮಾತ್ಮಕ ಜ್ಞಾನ | ಹರಿಗುರು ಸದ್ಭಕ್ತಿಮರುತ ಮತ ದೀಕ್ಷೆಯನು | ಕರುಣಿಸೋ ಹರಿಯೇದುರಿತಾಳಿ ದುಷ್ಕರ್ಮ | ಪರಿಹರಿಸಲೀವಳಿಗೆಪರಮ ಆನಂದವನೆ | ಕರುಣಿಸೊ ಹರಿಯೇ 2 ಪೇಳ್ವುದೆನಿಹುದೆನಗೆ | ಸರ್ವಜ್ಞ ನೀನಿರುವೆಭವದಿಂದ ಕಡೆಗಿತ್ತು | ಪವನಂತರಾತ್ಮಈ ವಿಧದಭಿನಿಪವ | ನೀವೊಲಿದು ಸಲಿಸೆಂದುದೇವ ಪ್ರಾರ್ಥಿಪೆ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಸ್ವಾಮಿ ಗುರು ಗೋವಿಂದ ವಿಠಲ ಪೊರೆ ಇವನಾ ಪ ಶ್ರೀಮನೋಹರನಂಘ್ರಿ | ಕಮಲಕಾಂಕ್ಷಿಪನಾ ಅ.ಪ. ಶರಧಿ | ಮೇಶ ಮಧ್ವೇಶಾ 1 ತುಂಗೆ ತೀರದಿ ಧವಳ | ಗಂಗೆ ತಟವಾಸಯತಿಪುಂಗವರ ಕರುಣಾ | ಪಾಂಗ ವೀಕ್ಷಣವಾಮಂಗಳ ಸ್ವಪ್ನದಲಿ | ಕಂಗಳಿಂದಲಿ ಕಂಡುಸಂಗ ಸಾಧುಗಳ ಉ | ತ್ತುಂಗ ಬಯಸುವನೋ 2 ಜಲಜನಾಭನ ಭಜಿಸೆ | ಕುಲವು ಪ್ರಾಧಾನ್ಯಲ್ಲಹಲವಾರು ದೃಷ್ಠಾಂತ | ಕೇಳಿ ಬರುತಿಹುದೋಸುಲಭ ನೀನೆಂತೆಂದು | ಬಲವಿನಿಂ ಪ್ರಾರ್ಥಿಸುವೆತಿಳಿಪುವುದು ಮರುತಮತ | ಹಲವು ತತ್ವಗಳಾ 3 ಪಾದ್ಯ | ಚೀರ್ಣ ಸತ್ಕತಿಯವನುಪೂರ್ಣಗೈಸಿವನ ಪ್ರಾಚೀನ ಕರ್ಮಗಳಾ 4 ನಾಮಾಧಿಕಾರಿ ಇವ | ನಾಮಸ್ಮøತಿ ಸರ್ವದಾನೇಮದಿಂ ಫಲಿಸಿವಗೆ | ಸೋಮಧರನುತನೇಕಾಮಜನಕನೆ ಗುರೂ | ಗೋವಿಂದ ವಿಠಲಯ್ಯಈ ಮಾತು ಸಲಿಸೆಂದು | ಸ್ವಾಮಿ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಹೊರಗ್ಹೋಗಿ ಆಡಬೇಡವೋ ಕಂದಾ ಮಹಾನಂದಾ ಬಹುಸರಸಿಜಾಕ್ಷಿಯರು ದೂರುವರೋ ಗೋವಿಂದಾ ಬಾ ಮನೆಗೆ ಮುಕುಂದಾ ಪ ಹೆಂಗಸ ಕೊಂದನೆಂಬುವರು ಮನೆ ಅಂಗಳದೊಳಗೆ ಬಚ್ಚಿಟ್ಟು ಕೊಂಬುವರೋಶೃಂಗಾರದಲಿ ಮೋಹಿಸುವರೋ ತಮ್ಮ ಕಂಗಳಿಂದಲಿನೋಡಿ ದೃಷ್ಟಿ ಬಿಡುವರೋ1 ಕಳ್ಳತನವ ಕಲಿಸುವರೋ ಏನ ಬಲ್ಲೆ ಕಂದಮ್ಮ ನೀ ಸುಳ್ಳಕಲಿಸುವರೋಒಳ್ಳೆಯವರಲ್ಲ ಗೋಪಿಯರು ಗ್ರಾಮದಲೆ ನಿಲ್ಲಲು ಕೆಟ್ಟ ಸೊಲ್ಲನಾಡುವರೋ2 ಸುಂದರ ಸೌಭಾಗ್ಯನಿಧಿಯೇ ನಿನ್ನಒಂದು ಕ್ಷಣವು ಬಿಟ್ಟು ಇರಲಾರೆ ಹರಿಯೇ ಇಂದಿರೇಶನಸುರ ದೊರೆಯೇ 3
--------------
ಇಂದಿರೇಶರು
ಕಂಡೆನಾ ಕನಸಿನಲಿ ಗೋವಿಂದನ ಪಕಂಡೆನಾ ಕನಸಿನಲಿ ಕನಕರತ್ನದ ಮಣಿಯ |ನಂದನ ಕಂದ ಮುಕುಂದನ ಚರಣವ ಅ.ಪಅಂದುಗೆಕಿರುಗೆಜ್ಜೆ ಘಲಿರೆಂಬ ನಾದದಿಬಂದು ಕಾಳಿಂಗನ ಹೆಡೆಯನೇರಿ ||ಧಿಂಧಿಮಿ ಧಿಮಿಕೆಂದು ತಾಳಗಳಿಂದಾನಂದದಿ ಕುಣಿವ ಮುಕುಂದನ ಚರಣವ 1ಉಟ್ಟ ಪೀತಾಂಬರ ಉಡಿಯ ಕಾಂಚಿಯದಾಮತೊಟ್ಟ ಮುತ್ತಿನ ಹಾರ ಕೌಸ್ತುಭವು ||ಕಟ್ಟಿದವೈಜಯಂತಿತುಲಸಿಯ ವನಮಾಲೆಇಟ್ಟ ದ್ವಾದಶನಾಮ ನಿಗಮಗೋಚರನ 2ಕಿರುಬೆರಳಿನ ಮುದ್ರೆಯುಂಗುರ ಮುಂಗಡೆಕರದಲಿ ಕಂಕಣ ನಳಿತೋಳುಗಳ ||ವರಚತುರ್ಭುಜ ಶಂಖಚಕ್ರದಿ ಮೆರೆವನನಿರುತದಿ ಒಪ್ಪುವ ಕರುಣಾ ಮೂರುತಿಯ 3ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲಸಣ್ಣ ನಗೆಯ ನುಡಿ ಸವಿಮಾತಿನ ||ಪುಣ್ಯ ಚರಿತ್ರನ ಪೊಳೆವ ಕಿರೀಟನಕಣ್ಣು ಮನ ತಣಿಯದಕಂಸಾರಿಕೃಷ್ಣನ4ಮಂಗಳ ವರತುಂಗಭದ್ರದಿ ಮೆರೆವನಅಂಗಜಪಿತಶ್ರೀ ಲಕ್ಷ್ಮೀಪತಿಯ ||ಶೃಂಗಾರ ಮೂರುತಿಪುರಂದರವಿಠಲನಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5
--------------
ಪುರಂದರದಾಸರು
ಮೋಸ ಹೋದೆನಲ್ಲ - ಸಕಲವು-|ವಾಸುದೇವಬಲ್ಲಪಭಾಸುರಂಗ ಶ್ರೀ ವಾಸುಕಿಶಯನನ |ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪದುಷ್ಟಜನರ ಕೂಡಿ - ನಾನತಿ-|ಭ್ರಷ್ಟನಾದೆ ನೋಡಿ ||ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ 1ಕಾಯವು ಸ್ಥಿರವಲ್ಲ-ಎನ್ನೊಳು-|ಮಾಯೆತುಂಬಿತಲ್ಲ ||ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |ಕಾಯಜಜನಕನ ಧ್ಯಾನವ ಮಾಡದೆ2ಕಂಗಳಿಂದಲಿ ನೋಡೊ-ದೇವಾನಿ-|ನ್ನಂಗ ಸಂಗವ ನೀಡೋ ||ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|ನ್ನಂಗದೊಳಿರುವಂತೆ ದಯವನು ಮಾಡೊ 3
--------------
ಪುರಂದರದಾಸರು