ರಾಘವೇಂದ್ರರಾಯರೆಂಬ ರತುನ ದೊರೆಕಿತೋ
ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ
ಮಂಗಳಾರಿಗರು ತುಂಗಾತೀರದಿ ನಿಂದಿಹರೋ
ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ1
ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ
ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ 2
ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ
ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ 3
ಶ್ರೀ ರಾಘವೇಂದ್ರರೂ
ನಂತ ಮಹಿಮರೂ 4
ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ
ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ 5