ಒಟ್ಟು 21 ಕಡೆಗಳಲ್ಲಿ , 16 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಿಯಾರೈ ಜಯಮುನಿ ಸಮರಾರೈ ಗುರುಮಧ್ವಕೃತಿ ವಿವೃತಿ ರಚಿಸುವಲ್ಲಿ ಪ ವರ್ಣವಂದಾರು ಬಿಡದಲೆ ಬಹುಫಲ ವರ್ಣಿಪೆ ಲೋಭದಿ ಶರಣ ಜನರಿಗೆ ಕರ್ಣಸುಧಾರಸ ಬೆರೆದು ನೀ ಬಲುಗೂಢ ಪೂರ್ಣಮತಿ ಭಾವವ ತೆಗೆವತಿ ಶೂರ 1 ಒಂದೊಂದು ವಚನವ ಹಿಂದಾಗಿ ಮುಂದಾಗಿ ಛಂದಾಗಿ ತಿರಿಗಿಸಿ ತಿರೆಯ ಸಿಂಧುರದಂತೆ ಬಂದಿಸಿ ಮುಂದಾಗಿ ಬಂದು ದುರ್ವಾದಿಯ ಸಂದುಗಳನೆ ಸೀಳಿ ಮೆರೆದತಿ ಶೂರ 2 ಕತ್ತಿಯ ಒಂದೇ ಹಿಡದೆ ಬಿಡದಲೆವೆ ಹತ್ತು ದಿಕ್ಕಿಗೆ ತಿರಿಗಿಪ್ಪ ವೀರನ ತೆರೆ ಅತ್ಯರ್ಥ ಮೂಲದ ಹಿಡಿದು ಅದನ್ನು ಸುತ್ತಿಸಿ ವಿಮತರ ತತ್ತರಿಸುವ ಧೀರ3 ಮೂಲ ವಚನಗಳ ಕಲ್ಪಲತೆಯ ಮಾಡಿ ಮೇಲಾದ ತತ್ವಗಳೆಂಬೊ ಫಲಗಳು ಶೀಲಮತಿಗಳುಳ್ಳ ಶಿಷ್ಯ ಶಿಶುವಿಗಳಿ ಗಾಲಿಸಿ ಮೇಳಿಸುತ ಒಲಿಸುವ ಧೀರ 4 ಅಕ್ಷೋಭ್ಯ ಮುನಿಗಳ ಪುಣ್ಯಫಲಗಳೆಂತೊ ಕರ್ಮ ಕಷ್ಟವೆ ಒದಗಿತು ಈ ಕ್ಷೋಣಿತಳದಲ್ಲಿ ವಾಸುದೇವವಿಠಲನಕಕ್ಷವ ವೊಹಿಸಿ ಪುಟ್ಟಿದ್ಯೊ ಜಯರಾಯ5
--------------
ವ್ಯಾಸತತ್ವಜ್ಞದಾಸರು
(ಕಾರ್ಕಳದ ವೆಂಕಟೇಶನನ್ನು ನೆನೆದು)ಶ್ರೀನಿವಾಸ ನಮೋ ನಮೋ ಶ್ರುತಿಗಾನಲೋಲಪಾಹಿಪ.ಭಾನುಕೋಟಿ ಸಮಾನ ಭಾಸಿತ ದಾನವವಿಪಿನನ-ವೀನದವಾನಲ ದೀನೋದ್ಧಾರ ದಯಾನಿಧೆ ಸುಂದರ ಅ.ಪ.ಶೇಷಗಿರಿಯಿಂದ ಸುಜನಗಳ ಘೋಷದಿ ನಂಬಿದದಾಸಜನರಭಿಲಾಷೆಯನು ಸಂತೋಷದಿ ಕೊಡಲು-ಲ್ಲಾಸದಿಂದ ಪರೇಶ ನಾನಾ ವಿಲಾಸದಿ ನೆಲಸುತಕಾಸುವೀಸದ ಭಾಷೆಯನು ದಿಗ್ದೇಶದಿಂದ ಮಹಾಸುಕೀರ್ತಿಯರಾಸಿಗಳಿಸಿ ಜಗದೀಶ ಪರೇಶ ಮ-ಹೇಶವಿನುತನಿರ್ದೋಷಜಗನ್ಮಯ1ಉತ್ತಮಾಂಗಸುರತ್ನಖಚಿತಕಿರೀಟದ ನಿಜಪದ-ಭಕ್ತಜನಮನವೃತ್ತಿ ಒಲಿಸುವ ಕೂಟದ ಕರುಣೋ-ತ್ಪತ್ತಿ ಸರಸಿಜನೇತ್ರಯುಗ್ಮದ ನೋಟದ ಭೂಷಣ-ಮೊತ್ತದಿಂದಾದಿತ್ಯಕೋಟಿಯನ್ನೆತ್ತಿಂದತೆಸೆವುತ್ತ ಮಂಗಲ-ಮೂರ್ತಿಧರಿಸಿ ಜನರರ್ತಿಯ ಸಲಿಸುವಚಿತ್ತಜಜನಕ ಸರ್ವೋತ್ತಮ ನಿರುಪಮ 2ಪಂಕಜಾಂಬಕ ಶಂಕರಾಪ್ತ ಶುಭಾಕರ ಶ್ರೀವ-ತ್ಸಾಂಕ ಮುಕ್ತಾಲಂಕೃತ ಕರುಣಾಕರ ಭಕ್ತಾ-ತಂಕರಹಿತ ನಿಶ್ಯಂಕ ನಿತ್ಯನಿರಾಕರ ಪ್ರಭುವೆಂಕಟೇಶ ನಿರಾಮಯಾಮರಸಂಕುಲಾರ್ಚಿತ ಶಂಖಚಕ್ರಗ-ದಾಂಕಿತ ದನುಜಭಯಂಕರವರನಿರ-ಹಂಕರ ನಿಜದ ನಿಷ್ಕಳಂಕಚರಿತ್ರ 3ಮಂದರಾಧರ ಮಾಪತೇ ಮುಖಚಂದಿರ ಮೌನಿವೃಂದವಂದ್ಯ ಸುರೇಂದ್ರಪೂಜ್ಯ ಧುರಂಧರ ಮಹಾ-ಸಿಂಧುಶಯನ ಮುಕುಂದಕಂಬುಕಂಧರಶೋಭಿಪಕುಂದರದನ ಕುಚೇಲಪಾಲಾರವಿಂದನಾಭ ಪುರಂದರಾರ್ಚಿತಮಂದಹಾಸ ಮುಚುಕುಂದವರದ ಗೋ-ವಿಂದಸಚ್ಚಿದಾನಂದಉಪೇಂದ್ರ4ಮೂರು ಲೋಕೋದ್ಧಾರಿ ಘನಗಂಭೀರನೆ ವೆಂಕಟಧೀರಕಾರ್ಕಳಸಾರನಗರಾಧಿಕಾರನೆ ಭೂಸುರ-ಭೂರಿವೇದಪುರಾಣಘೋಷಾದಿಹಾರನೆ ಸಂತತಚಾರುಗೌಡಸಾರಸ್ವತಶೃಂಗಾರಋಗ್ವೇದಾಖ್ಯ ಉತ್ತಮದಾರುಣೀಸುರರಿಂದನವರತ ಮಂಗ-ಲಾರತಿಗೊಂಬ ಲಕ್ಷ್ಮೀನಾರಾಯಣಹರಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಆವಪರಿಯಲಿ ನಿನ್ನನೊಲಿಸಿ ಮೆಚ್ಚಿಪ ವಿಧವು |ಸುರುಚಿರೋಜ್ವಲ ಪೀತವಾಸನಿಗೆ ಉಡುಗೊರೆಯವನಜಜಾಂಡದ ಕೋಟಿಯುದರಂಗೆ ಆವುದನುಮಿಗೆ ಫಣಿಯ ಫಣದಾತಪತ್ರ ವಿರುವವಗೆಒಲಿಸುವುದನರಿಯೆ ಮೆಚ್ಚಿಸುವ ಬಗೆಯನರಿಯೆ
--------------
ಪುರಂದರದಾಸರು
ಕಳವು ಕಲಿಸಿದೆಯಮ್ಮಗೋಪಿಕಮಲನಾಭಗೆ |ಉಳಿಸಿಕೊಂಡೆಯ ನಿಮ್ಮ ಮನೆಯ ಪಾಲು ಬೆಣ್ಣೆಯ ಪಆರೂ ಏಳದ ಮುನ್ನ ಎಬ್ಬಿಸಿ ಶೃಂಗಾರ ಮಾಡಿ |ಗೀರುಗಂಧವಹಚ್ಚಿಹಾರವ ಹಾಕಿ ||ಕೇರಿಕೇರಿ ಪಾಲು-ಬೆಣ್ಣೆ ಸೂರೆ ಮಾಡಿ ಬಾರೆನ್ನುತ |ವಾರಿಜನಾಭನ ಕಳುಹಿದೆ ವನಜನಯನನ 1ಚಿತ್ತಜನಯ್ಯನ ಕೈಗೆ ಚಿನ್ನದ ಚೆಂಡನೆ ಕೊಟ್ಟು |ಅರ್ತಿಯಿಂದ ಸಿಂಗರಿಸಿ ಆಡಿ ಬಾರೆಂದು ||ಕತ್ತಲೆ ಬೀದಿಯ ಸುತ್ತೆ ಕಸ್ತುರಿ ತಿಲಕವನಿಟ್ಟು |ನಿತ್ಯಾನಂದಗೆ ನಿಲುವುಗನ್ನಡಿಯ ತೋರಿ 2ಸಣ್ಣಮಲ್ಲಿಗೆ ಮುಡಿಸಿ ಬಣ್ಣದ ವಲ್ಲಿಯ ಹೊದಿಸಿ |ಹೆಣ್ಣುಗಳ ಒಲಿಸುವಂತೆ ಹೇಳಿ ಬುದ್ಧಿಯ ||ಹುಣ್ಣಿವೆ ವಿೂಸಲ ಹಾಲು ಉಣ್ಣು ಉಣ್ಣು ಮೆಲ್ಲೆನುತ್ತ |ಚಿಣ್ಣನ ಕಳುಹಿದೆಯಮ್ಮ ಉಣ್ಣಲಿಕ್ಕದೆ 3ವಾರಿಜಾಕ್ಷ ಮಾಡಿದಂಥ ದೂರು ಹೇಳಿದರೆ ನಿಮಗೆ |ದೂರುಬಡಕರೆಂದುಗೋಪಿಬಯ್ವೆ ನಮ್ಮನು ||ಊರು ಮಾಡಿದ ಕೊಳಗ, ತಾಯಿ ಮಾಡಿದ ಹೊಟ್ಟೆ |ವಾರಿಜನಾಭನ ಕರೆದು ಬುದ್ಧಿಯ ಹೇಳೆ 4ಹೊಟ್ಟೆಬಾಕನಿವ ಬೆಟ್ಟದೊಡೆಯಗೆ ಪ್ರಿಯ |ಇಟ್ಟುಕೊಂಡೀರೇಳುಭುವನಉದರದಲ್ಲಿಯೆ ||ಎಷ್ಟು ಹೇಳಿದರೂ ಕೇಳ ಏನು ಮಾಡಲಮ್ಮ ನಾನು |ಕಟ್ಟು ಮಾಡಿಸಲುಬೇಕು ಪುರಂದರವಿಠಲಗೆ 5
--------------
ಪುರಂದರದಾಸರು
ಶ್ರೀ ಪ್ರಾಣೇಶ ದಾಸರ ತಾತ್ವಿಕಹಿನ್ನೆಲೆಯ ರಚನೆಗಳು219ಶ್ರೀಪೂರ್ಣಬೋಧಮತವಾ ನಂಬಿ |ಶ್ರೀ ಪತಿಯ ಒಲಿಸುವವರು ಕೇಳೀ ಪಆದಿಯಲಿಯಾದ ಚರಿತೆಯನ್ನುಪರ|ಮಾದರದಿಕೇಳಿಸುಜನಾ ||ರಾದವರು ಭಕುತಿಯಿಂದಾ ಮಹ ಪ್ರಳಯ |ವಾದ ತರುವಾಯ ಸೃಷ್ಟಿಯಾಗೇ 1ಸುರರೆಲ್ಲ ತಮ್ಮ ತಮ್ಮಾ ಸ್ಥಾನದಲಿ |ಸ್ಥಿರರಾಗಿ ಯುವರಾಜ್ಯಕೇ ||ಅರುಹನಾರೆನಲು ಅದಕೇ ಪೇಳಿದನು |ಹರಿಯು ಇಂತುಪಾಯವ ಕೇಳೀ 2ಒಂದು ದೇಹದಿ ಸರ್ವರೂ ಕ್ರಮನುಸಾರ- |ದಿಂದ ತೆರಳಿರಿ ಚೇತನಾ ||ಕುಂದುವದು ಆವನಿಂದಾ ಅವ ಶ್ರೇಷ್ಠ |ನೆಂದರಿವದೆಂದು ಸರಿದಾ ಕೇಳೀ 3ಹರಿಆಜÕದಂತೆ ತ್ಯಜಿಸೇ | ಕುಂಟನೂ |ಕುರುಡ ಮೂಕನು ಯನಿಸಿತೂ ||ಹಿರಿಯ ಪವಮಾನ ಬಿಡಲೂ ಎಲ್ಲರೂ |ಅರಿತರೂ ಕುಣುಪವೆಂದೂ ಕೇಳೀ 4ಮತ್ತೆ ಮೊದಲಂತೆಲ್ಲರೂ ವ್ಯಾಪಿಸಲು |ಬಿತ್ತು ಏಳಲಿಲ್ಲವದೂ ||ಸತ್ಯ ಸಂಕಲ್ಪ ಮರುತಾ ಸೇರಲದು |ತತ್ತಲಿಲ್ಲದೆ ಚಲಿಸಿತೂ ಕೇಳೀ 5ಅಂದಿನಾರಭ್ಯವಾಗೀ ತಿಳಿಸಿದನು |ಇಂದಿರೇಶನು ಈತನಾ ||ವಂದಿಪರಿಗೊಲಿವೆನೆಂದೂ ಇನ್ನಿದಕೆ |ಸಂದೇಹಉಂಟೆ ಬಂದೂ ಕೇಳಿ 6ಸ್ವಾಮಿ ಶ್ರೀ ರಾಮನಾಗೇ ಅವತಾರ |ವಾ ಮಾಡಿದನು ಮಾರುತಾ ||ಭೂಮಿಜೆಯದನುಜಒಯ್ಯಲೂ ಆ ಪುರಕೆ |ಪ್ರೇಮದಿಂದಲಿ ಚಿಗಿದನು ಕೇಳೀ 7ರಾಘವನ ಉಂಗುರವನೂ ವನದೊಳಗೆ |ಬ್ಯಾಗೆ ಇಂದಿರಿಗೆ ಕೊಟ್ಟೂ ||ಆಗಾ ಪೊಳಲನೇ ಸುಟ್ಟೂ ಹಾರಿತ್ವರ|ರಾಗಟಿಯ ಒಡಿಯಗಿತ್ತಾ ಕೇಳೀ 8ಇಂದ್ರಜಿತು ಮೋಹನಾಸ್ತ್ರಾ ಬಿಡಲಾಗಿ |ಅಂದಗೆಟ್ಟಿತು ಕಪಿ ಕುಲಾ ||ಇಂದಿರೇಶನ ಆಜÕದಿಂ ಆಗ ತ್ವರ- |ತಂದ ಸಂಜೀವನವನೂ ಕೇಳೀ 9ಅನಿಮಿಷರುಕಪಿಗಳಾಗೀ ನಿರುತ ರಾ- |ಮನ ಭಜಿಪರೀ ಕೆಲಸಕೇ ||ಅನುಕೂಲರೊಬ್ಬರಲ್ಲಾ ಒಬ್ಬ ಅಂ- |ಜನಿ ಸುತನೆ ಸೇವಿ ಮಾಡ್ದಾ ಕೇಳಿ 10ಉಪಕಾರ ಒಂದಕೆನ್ನಾ ಕೊಟ್ಟ ಮ್ಯಾ- |ಲೆ ಪರಿಮಿತ ಸೇವಿಗುಚಿತಾ ||ಸು ಪರೀಕ್ಷಿಸಿದರು ಕಾಣೇ ಭಳಿರೆ ಯಂ- |ದ ಪರಾಜಿತನು ಮೊಗಳಿದಾ ಕೇಳೀ 11ಈ ವಾಯು ಒಲಿದನೆಂದೂ ಒಲಿದ ಸು- |ಗ್ರೀವ ವಿಭೀಷಣಗೆ ರಘುಜಾ ||ಶ್ರೀವರನೆ ಕೃಷ್ಣನಾಗೀ ಅವತರಿಸೆ |ಐವರೊಳು ಭೀಮನಾದಾ ಕೇಳೀ 12ತರಣಿಮೊಮ್ಮಗನ ಸೇವೀ ಈ ವೃಕೋ- |ದರಮಾಳ್ಪನೆಂದುಶೌರಿ||ನರನ ರಥವನು ನಡಿಸಿದಾ ಇಲ್ಲದಿರೆ |ಥರವೆ ಇದು ಪಾಂಡವರಿಗೇ ಕೇಳೀ 13ಜೀವೇಶರೊಂದೆ ಎಂದೂ ವಾದಿಗಳು |ಭಾವಿಸಿರೆ ಮಧ್ವಮುನಿಯೂ ||ತಾ ವಿರಚಿಸಿ ಸುಗ್ರಂಥವಾ ನಿರ್ದೋಷ |ಗೋವಿಂದನೆಂದರುಹಿದಾ ಕೇಳೀ 14ಈತ ಮಾಡಿದ ಚರಿತೆಯಾ ಕಡೆಯಾಗಿ |ನಾ ತುತಿಸಲಾರೆ ಸ್ವಲ್ಪಾ ||ವಾತಸ್ಮರಣಿಯ ಮಾಡಲೂ ವೈಕುಂಠ |ಆತು ಇಪ್ಪದು ತಪ್ಪದೂ ಕೇಳೀ15ದೇಶದೊಳುತುಂಬಿಇಹ್ಯದೂ ಶ್ರೀ ಭಾರ- |ತೀಶ ಮಾಡಿದ ಮಹಿಮಿಯೂ ||ಲೇಶವಾತನ ಚರಿತ್ರೇ ಸ್ಮರಿಸೆ ಪ್ರಾ- |ಣೇಶ ವಿಠ್ಠಲ ಒಲಿವನೂ ಕೇಳೀ 16ಪ್ರಾಣದೇವರ ಕಥಿಯನು ಕೇಳಿದರೆ |ತಾನೆ ಇಹಪರದಿ ಬಿಡದೇ ||ಪ್ರಾಣೇಶ ವಿಠಲ ಕಾಯ್ವಾ ಇದಕೆ ಅನು- |ಮಾನಲೇಸಿನಿತವಿಲ್ಲವೂ ಕೇಳೀ13
--------------
ಪ್ರಾಣೇಶದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು