ಒಟ್ಟು 23 ಕಡೆಗಳಲ್ಲಿ , 5 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿರದುದಾರದು ಗೋವಿಂದ ಅರಿತು ನೋಡಯ್ಯ ಶ್ರೀ ಹರಿ ಮುಕುಂದ ಧ್ರುವ ಪತಿಯ ಕಣ್ಣಿನ ಮುಂದೆಳಿಯಲು ಸತಿಯ ಗತಿಗೊತ್ತಿಹ್ಯದು ದಾರಿಗೆ ಕೊರತಿಯ (ತೆಯು?) 1 ಒಡಿಯನ ಮುಂದೆ ಬಂಟಗಾಗಿರೆ ಕುಂದು ಒಡನೆ ಬೀಳುದು ತೊಡಕಾರಿಗೆ ಬಂದು 2 ನಿನ್ನವನೆನಿಸಿ ಮಹಿಪತಿಗೆ ಪೂರ್ಣ ಇನ್ನರಹುವರೆ ಎನ್ನವಗುಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೆಳಗುವ ಬನ್ನಿ ಮಂಗಳಾರತಿಯ ಹೊಳೆಯುವ ಶ್ರೀ ಗುರುಮೂರುತಿಯ ಧ್ರುವ ಮಂಗಳಸ್ವರದಲಾರತಿ ಮಾಡುವ ಕಂಗಳಲಿ ಕಂಡು ಸ್ವಾಮಿ ನಲಿದಾಡುವ ಸಂಗಸುಖದ ಸವಿ ಸೂರ್ಯಾಡುವ ಮಂಗಳೋಚ್ಚ್ರಾಯವ ಕೊಂಡಾಡುವ 1 ಪಾಡುವ ಬನ್ನಿ ನಾಮಗಾಯನ ಬೇಡುವದಿದೇ ಸುಖಸಾಧನವ ನೀಡುತಲಿಹ ನಿಜನಿಧಾನವ ಪಡೆವದಿದೊಂದು ಮುಖ್ಯ ಕಾರಣ 2 ಬಿಡದೆ ಕೊಂಡಾಡುವ ಕೀರುತಿಯ ಪೊಡವಿಯೊಳು ಪಾಂಡವ ಸಾರಥಿಯ ಮಾಡುವ ಬನ್ನಿ ಸೇವೆ ಶ್ರೀಪತಿಯ ಒಡಿಯನಹುದೆಂದು ನೀ ಮಹಿಪತಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೇಸು ಲೇಸಾಯಿತು ಭಾಸ್ಕರ ಗುರು ಕೃಪೆ ಲೇಸು ಲೇಸಾಯಿತು ಮಾ ಧ್ರುವ ಹಸ್ತವಿಡಲು ಎನ್ನ ಮಸ್ತಕದ ಮೇಲೆ ಸ್ವಸ್ತಹೊಂದಿತು ಮನ ನಿಶ್ಚಯಲಿ ವಿಸ್ತಾರದೋರುವ ವಸ್ತು ಇದೆಯೆಂದು ವಿಸ್ತರಿಸೆನಗಿನ್ನು ದೋರಿತು ಮಾ 1 ಸೋಂಕಲು ಶ್ರೀಗುರುಪಾದ ಎನಗಿನ್ನು ಬೇಕಾದ ಸವಿ ಸುಖಗೊಟ್ಟಿತು ಮಾ ಸಕಲೋತ್ತಮನಾದ ಏಕಾಕ್ಷರ ಬ್ರಹ್ಮ ಏಕೋಮಯವಾಗಿದೋರಿತು ಮಾ 2 ನೀಡಲು ನಿಜ ಸುಙÁ್ಞನದ ಭಿಕ್ಷೆಯು ಭವ ದುಷ್ಕಾಳವು ಮಾ ಕೂಡಿತು ಸಮರಸವಾಗಿ ಮಹಿಪತಿ ಜೀವ ಒಡಿಯನ ಚರಣದಂಗುಷ್ಠದಲಿ ಮಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1 ಸಂಚಿತ ಧನವು ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2 ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು ಮಾಡಿ ಸಾಧಿಸೊಕೊಂಬುವದು 3 ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4 ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸು ಮನವೆ ಸ್ಮರಿಸು ಮನವೆ ಹರಿಯ ಚರಣ ಕಮಲವ ಪೂರ್ಣ ಶರಣ ಜನರನಾ ಹೊರೆದು ರಕ್ಷಿಸುವ ಉರಗಶಯನನಾ 1 ಇರುಳ ಹಗಲ ಸೆರಗವಿಡಿದು ಅರಿತು ಸ್ಮರಿಸು ಬೆರಿಸಿ ಚಿತ್ತವ ಕರೆವ ಕಾಮಧೇನುವಾಗಿ ಹೊರೆವ ಕಪ್ಪುತರುವಿನ 2 ಬಿಡದೆ ಸ್ಮರಿಸು ಗೂಡಿನೊಳಗೆ ಪಾದ ಪೂರ್ಣ ಕುಡುವ ಭಕ್ತಿ ಮುಕ್ತಿದಾತ ಮಹಿಪತಿಯ ಒಡಿಯನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸೋ ಎಲೆ ಮನವೇ | ಜಗದಯ್ಯನಾ | ಸ್ಮರಿಸೋ ಶಿವಸುಖ ಬೆರಿಸೊ ಭವದಿಂದ | ತರಿಸೊ ಗಿರಿಜಾ ರಮಣನ ಪ ಫಣಿಯಾಗಣ್ಣಿ ನೋರಣಿಯಾ | ಸದಮಲ | ಫಣಿಯಾ ಭರಣ ಭೂಷಣಿಯಾ | ಮುಕುತಿಯಾ | ಹೋಣೆಯಾ ಕೊಡಲಿಕ್ಕೆ ದಣಿಯಾನೆಂದು ಬೇಡುವರಾ 1 ಒಡಿಯನೆನ್ನದೆ ನಡಿಯಾ | ಅಂಗಜನಾ | ಹುಡಿಯಾ ಮಾಡಿದ ನಡಿಯಾ ಶರಣೆಂದು | ಪಿಡಿಯಾಲವರಿಗೆ ಪಡಿಯಾ | ನಿತ್ತು ಹೊರೆವನಾ 2 ಯತಿಯಾ ಆನಂದ ಸ್ಥಿತಿಯಾ | ಪುಣ್ಯ | ಮೂರುತಿಯಾ ವಿಮಲ ಕೀರುತಿಯಾ | ಗುರುಮಹೀ | ಪತಿಯಾ ನಂದನ ಸಾರಥಿಯಾನಾದಿ ಮಹಿಮನಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು