ಒಟ್ಟು 25 ಕಡೆಗಳಲ್ಲಿ , 18 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಭದ್ರಾಮೂರುತಿ ನಿರ್ವಾತಾಂಹ್ವ ಪ ಹೃದ್ರೋಗ ಕಳೆದು ಜ್ಞಾನಾದ್ರ್ರ ಸ್ವಾಂತನ ಮಾಡು ಪದ್ರಾ ಸಾಮಗಾಘ ಸಮುದ್ರ ದಾಟಿಸಿ ಬೇಗ ಅ ಏಸೇಸು ಕಲ್ಪಗಳಲ್ಲಿ ನಿನ್ನಾ ದಾಸನೆಂದು ಎನ್ನ ಬಲ್ಲೀ ಈಶ ನೀನೆಂಬುದು ಲೇಶವರಿಯೆ ಕ್ಲೇಶನಾಶನ ಪ್ರಭುವೆ ವಾರಾಶಿಜೆ ವಲ್ಲಭ ವಾಸವಾನುಜ ವನಧಿಶಯನ ಮ ಹೇಶವಂದಿತ ವರದ ಹೇ ಕರು ಣಾ ಸಮುದ್ರ ಕರಾಳವದನನೆ ನೀ ಸಲಹದಿರೆ ಕಾಣೆ ಕಾಯ್ವರ 1 ಹೇಮ ಕಶ್ಯಪು ತನ್ನ ಸುತನಾ ನೋಯಿಸೆ ಶ್ರೀ ಮನೋಹರನೇ ಆನತನಾ ವ್ಯೋಮ ಪರ್ವತಾಂಬುಧಿ ಧಾಮದೊಳುಳುಹಿದ ಭೂಮ ಸನ್ಮುನಿ ಗಣಸ್ತೋಮ ವಂದಿತ ಪಾದ ಸಾಮಜೇಂದ್ರನನರಸಿಯೊಳು ಸು ತ್ರಾಮನಂದನನಾ ರಣದಿ ಕುರು ಭೂಮಿಪತಿ ಸಭೆಯೊಳಗೆ ದ್ರೌಪದಿ ಯಾ ಮಹಾತ್ಮರ ಕಾಯ್ದ ಕರುಣಿ 2 ವೇದಗಮ್ಯನೆ ವೇದ ವ್ಯಾಸ ಕಪಿಲ ಯಾದವೇಶ ಮಹಿದಾಸ ಶ್ರೀದ ಶ್ರೀಶ ಅ ನ್ನಾದಾ ಕಲ್ಕಿ ಧನ್ವಂತ್ರಿ ಮೇಧಾವಿ ಪತಿಯ ಏವ ಷಾದರೋಗಂಗಳನಳಿದು ಮಹ ದಾದಿದೇವ ಜಗನ್ನಾಥ ವಿಠ್ಠಲ ಆದರದಿ ಪ್ರಹ್ಲಾದವರ 3
--------------
ಜಗನ್ನಾಥದಾಸರು
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ರುದ್ರದೇವರು ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1 ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2 ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3 ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
--------------
ಗುರುತಂದೆವರದಗೋಪಾಲವಿಠಲರು
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು
ವಾಸುದೇವನ ದಾಸ ವಾಸುಕೀಭರಣನೇ ಭೂಷಾ ಪ ಭಾರತೀಶ ಅ.ಪ. ಬಯಸಬಾರದ ಬಯಕೆಗಳಿಂದ ಬಾಧೆಗೊಳಗಾದೆನೊ ಬಾಧೆಗಳ ಬಿಡಿಸಿ ಭವದಿ ಭಕ್ತರೊಳು ಕೂಡಿಸೋ 1 ಕೊಟ್ಟವರ ಸಾಲವನು ಕೊಟ್ಟು ಮುಟ್ಟಿಸದೆ ದಿಟ್ಟತನದಿ ಬೆಂಬಿಟ್ಟು ಅಗಲದಲಿಟ್ಟು ಕೊಟ್ಟು ತೀರಿಸುವಂತೆಮಾಡೋ ಪ್ರೇಷ್ಯಾ 2 ಏಸೇಸು ಕಲ್ಪಕ್ಕೂ ದಾಸನೆಂಬುದು ಬಲ್ಯಲ್ಲಾ ಈಶ ನೀ ಗತಿಯೆಂಬುದು ಚೆನ್ನಾಗಿ ಬಲ್ಲೆ ಕಾರಣದಿ ಮೊರೆ ಪೊಕ್ಕ ತಂದೆವರದಗೋಪಾಲವಿಠ್ಠಲನಶರಣಾಗ್ರೇಸರಾ3
--------------
ತಂದೆವರದಗೋಪಾಲವಿಠಲರು
ಶೂಲವನು ಪರಿಹರಿಸೊ ತ್ರಿಶೂಲಧಾರಿ ಪ ಬಹುವಿಧದಿಂದ ಬಾಧೆಬಡುತಿಹ ಅಂಗನೆಯಳ ಶಿರ ಅ.ಪ. ಎರಡು ವಾಶ್ಯ ವತ್ಸರದಿ ಬಹುಕ್ಲೇಶಪಡುತಿರುವಳೋ 1 ಏಸೇಸು ದಿನವಾದರೂ ಪರರಿಗೊಶವಾಗದಯ್ಯ ನಿನ್ಹೊರತು 2 ಇದು ಮಾತ್ರ ಪರಿಹರಿಸೊ ನಿನ್ನುಪಕಾರ ಮರಿಯೆತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಹರಿಕೃಷ್ಣ ವಿಠಲಾ | ಕರುಣಿಸಿವಳೀಗೆ ಪ ಕರುಣಾನಿಧಿ ಎಂದೆನುತ | ಮರೆಹೊಕ್ಕೆ ದೇವಾ ಅ.ಪ. ಜ್ಞಾನವರ್ಜಿತಳಾಗಿ | ಆಜ್ಞೆಳೆಂದೆನಿಸಿಹಳುಮಾನನಿಧಿ ನೀನಾಗಿ | ಜ್ಞಾನ ಸಾಧನವಾಸಾನುಕೂಲಿಸೆ ಕಾಯೊ | ಮೌನಿಜನ ಸದ್ವಂದ್ವನೀನೆಗತಿ ಎಂದೆನುತಾ | ತನುವನರ್ಪಿಪಳೊ 1 ಕತೃ ನೀನೆಂಬಂಥಾಉತ್ತಮದ ಮತಿಯಿತ್ತು | ಬೃತ್ಯಳನು ಪೊರೆಯೋ 2 ಕ್ಲೇಶಮೋದಗಳು ಸಮ | ಭಾಸವಾಗಲಿ ದೇವವಾಸವಾದ್ಯಮರನುತ | ವಾಸುದೇವಾ ಖ್ಯಏಸೇಸು ಜನ್ಮಗಳ | ರಾಶಿ ಪುಣ್ಯದ ಫಲದಿದಾಸ ದೀಕ್ಷೆಗೆ ಮನವ | ಆಶಿಸಿಹಳಯ್ಯಾ 3 ರಾಜೀವ ನಯನ ಹರಿಓಜಸ್ಸುಗಳ ಕೊಟ್ಟು ಕಾಪಾಡೊ ಇವಳಾ 4 ಸರ್ವಜ್ಞ ಸರ್ವೇಶ | ಸರ್ವಕಾರಣ ಮೂರ್ತಿಊರ್ವಿಯಾಳಿವಳೊಬ್ಬ | ದರ್ವಿಯಂತಿಹಳೋಸರ್ವದಾ ತವಸ್ಮರಣೆ | ಕೃಪೆಗೈದು ಪೊರೆ ಇವಳಾಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಎಲ್ಲೆಲ್ಲಿ ಭಾಗವತಾಂಶ ಮತ್ತೆಲ್ಲೆಲ್ಲಿ ಹರಿಸನ್ನಿವಾಸಎಲ್ಲೆಲ್ಲಿ ಕರೆದರೆ ದಾಸರಲ್ಲಲ್ಲಿಗೆಬಾಹರಮೇಶಪ.ಆವೆಡೆ ಲಕ್ಷವಂದನೆಯು ಆವಾವೆಡೆಗೆ ಭಕ್ತ ನರ್ತನೆಯುಆವೆಡೆ ಸುಪ್ರದಕ್ಷಿಣೆಯು ಆವಾವೆಡೆ ರಂಗನಾರಾಧನೆಯು 1ಎಂತು ದಂಡಿಗೆ ತಾಳ ಘೋಷ ಎಂತೆಂತು ಕಥಾಮೃತ ವರುಷಎಂತು ತತ್ವಾರ್ಥ ಜಿಜ್ಞಾಸ ಅಂತಂತೆ ಶ್ರೀಕಾಂತನ ಹರುಷ 2ಎಷ್ಟು ತಂತ್ರಸಾರಾರ್ಚನೆಯು ಎಷ್ಟೆಷ್ಟುಶ್ರುತಿಸೂತ್ರಗಳ ಧ್ವನಿಯುಎಷ್ಟು ತಾತ್ಪರ್ಯ ವರ್ಣನೆಯು ಅಷ್ಟಷ್ಟು ಕೃಷ್ಣನಕಂಠ ಮಣಿಯು 3ಏಸುಶ್ರೀಹರಿವ್ರತ ಮೌನ ಏಸೇಸು ಶ್ರೀ ಹರಿರೂಪಧ್ಯಾನಏಸುಸದ್ವ್ಯಾಖ್ಯಾನ ದಾನ ಆಸನ್ನ ಕೈವಲ್ಯನಿದಾನ4ಎನಿತು ಗುರುಪಾದಗಳ ಸ್ಮರಣೆ ಎನಿತೆನಿತು ಮಧ್ವಯತಿಗಳ ಸ್ಮರಣೆಎನಿತೇಕಾದಶಿಯ ಜಾಗರಣೆ ಅನಿತನಿತು ಸುಲಭ ಹರಿಸ್ಮರಣೆ 5ಆರು ಆರೂರು ಮೆಟ್ಟಿಹರು ಮತ್ತಾರೂರರಸರ ಕಟ್ಟಿಹರುಆರೀರ್ವರ ಪೊರಮಟ್ಟಿಹರು ಆರಾರಾಗಲಿ ಕೃಷ್ಣನವರು 6ಹೇಗೆ ಸಜ್ಜನರ ಉಲ್ಲಾಸ ಹಾಗ್ಹಾಗೆ ಮಹಾಮಹಿಮರಭಿಲಾಷಹೇಗೆ ಬುಧರ ಪರಿತೋಷ ಹಾಗಾಗುವುದು ಪ್ರಸನ್ವೆಂಕಟೇಶ 7
--------------
ಪ್ರಸನ್ನವೆಂಕಟದಾಸರು