ಜ್ಞಾನಿಯ ಕಾಣಲು ಧಗದಲ್ಯನಾಗುವ ಶಾಸ್ತ್ರಿಜ್ಞಾನಿಗಳು ಶಾಸ್ತ್ರಿಗೇನ ಮಾಡಿದರೋಏನಾದರೂ ಪೂರ್ವದ್ವೇಷವಿತ್ತಾದರೂತಾನು ನಿಂದಿಸಿ ಕುಲಸಹ ಕೆಡಿಸುವನು ಶಾಸ್ತ್ರಿ ಪ
ದನವ ಕಾಣುವ ವದನವರಿಹುತಲಿಹದನವ ಕಾಯ್ದವಗಿಂತ ಅತ್ತಿತ್ತ ಕಡೆ ಶಾಸ್ತ್ರಿಘನ ವೇದಾಂತವನೋದಿ ಜ್ಞಾನಿಗಳ ನರರೆಂಬಎನಿತುಗರ್ವ ಅಹಮ್ಮಲಿ ತನ್ನ ತಿಳಿಯ ಶಾಸ್ತ್ರಿ 1
ಓದೋದು ವೇದಾಂತ ಓದುವನಾರೆಂದು ಅರಿಯಓದಿಹೆನೆಂಬ ಗರ್ವವು ತಲೆಗೆ ಹತ್ತಿಓದಿಯೇ ಅಲ್ಲಿ ಗೆದ್ದೆ, ಇಲ್ಲಿ ಗೆದ್ದೆ ನೆಂಬಅದನೊಬ್ಬನೆಲ್ಲೋ ಇರೆ ಆರಗೆದ್ದನು ಶಾಸ್ತ್ರಿ 2
ಸಾಧುಗಳಿಗೆ ವಂದಿಸಲಿಲ್ಲ ಸಾಧುಗಳ ಮನೆ ಹೋಗಲಿಲ್ಲಸಾಧುವು ಮುಂದೆ ಹಾಯಲು ಕುಳಿತು ಏಳದಲಿಹನುಸಾಧುವ ಕಂಡು ನಡೆಯೇನು ನುಡಿಯೇನು ಎಂಬಸಾಧುವ ಭಜಿಪಗೆ ಬಹಿಷ್ಕಾರೆಂದನು ಶಾಸ್ತ್ರಿ 3
ನಾನು ಅರಿಯೆ ನಿನಗೆ ಗತಿಯೇನು ಮತಿಯೇನುನಾನು ಎಲ್ಲಿಂದ ಬಂದೆ ಎಲ್ಲಿಗೆ ಹೋಗುವೆನಾನು ನನ್ಹೆಸರೇನು ಆರು ತಿಳಿಸುವರೆಂಬಜ್ಞಾನವಿಲ್ಲದೆ ಘಟಪದಿ ಮೆರೆದಿಹ ಶಾಸ್ತ್ರಿ 4
ನಾನೇ ಶ್ರೇಷ್ಠನೆಂದೂ ನಾನೇ ದೊಡ್ಡವನೆಂದೂನಾನು ಆರಿಹೆನೆಂಬ ಎಚ್ಚರವದು ಹೋಗಿತಾನಾದ ಚಿದಾನಂದರಾದ ಸತ್ಪುರುಷಏನೇನೋ ನಿಂದೆಯ ಮಾಡಿ ನರಕಕ್ಕಿಳಿಸುವ ಶಾಸ್ತ್ರಿ 5